Asianet Suvarna News Asianet Suvarna News

ಕಾರ್ಬೆವಾಕ್ಸ್​ ಬೂಸ್ಟರ್‌ ಡೋಸ್ ಹಾಕಿಸಿಕೊಳ್ಳೋ ಮೊದ್ಲು ಈ ವಿಷ್ಯ ಗೊತ್ತಿರ್ಲಿ

ಕಾರ್ಬೆವಾಕ್ಸ್‌ ಒಂದು ಬೂಸ್ಟರ್ ಶಾಟ್ ಆಗಿದೆ. ಕೋವಿಶೀಲ್ಡ್ ಅಥವಾ ಕೋವಾಕ್ಸಿನ್‌ನ್ನು ತಮ್ಮ ಮೊದಲ ಅಥವಾ ಎರಡನೇ ಡೋಸ್ ಆಗಿ ಹಾಕಿಸಿಕೊಂಡವರು ಬೂಸ್ಟರ್ ಡೋಸ್ ಹಾಕಿಸಿಕೊಳ್ಳಬಹುದು ಎಂದು ಸರ್ಕಾರ ಸೂಚಿಸಿದೆ. ಆದ್ರೆ ಇದನ್ನು ಹಾಕಿಸಿಕೊಳ್ಳೋ ಮುನ್ನ ನಿಮ್ಗೆ ಈ ಕೆಲ ವಿಚಾರಗಳು ಗೊತ್ತಿರಲಿ.

Corbevax Booster Shots, All Your Questions Answered Vin
Author
Bengaluru, First Published Aug 12, 2022, 12:12 PM IST

ಕೋವಿಶೀಲ್ಡ್ ಅಥವಾ ಕೋವಾಕ್ಸಿನ್‌ನಿಂದ ಸಂಪೂರ್ಣವಾಗಿ ಲಸಿಕೆಯನ್ನು ಪಡೆದ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕಾ ಡೋಸ್ ಆಗಿ ಬಯಲಾಜಿಕಲ್ ಇ ಸಂಸ್ಥೆಯ ಕಾರ್ಬೆವಾಕ್ಸ್ ಅನ್ನು ಬಳಕೆ ಮಾಡಲು ಸರ್ಕಾರ ಅನುಮೋದನೆ ನೀಡಿದೆ. ಕೋವಿಡ್ ವಿರುದ್ಧದ ಪ್ರಾಥಮಿಕ ವ್ಯಾಕ್ಸಿನೇಷನ್ಗೆ ಬಳಸುವ ಬೂಸ್ಟರ್ ಡೋಸ್​ಗಿಂತ ಭಿನ್ನವಾದ ಬೂಸ್ಟರ್ ಡೋಸ್ ಅನ್ನು ದೇಶದಲ್ಲಿ ಅನುಮತಿಸಿರುವುದು ಇದೇ ಮೊದಲು. ಲಸಿಕೆ ತಯಾರಕರಾದ ಬಯೋಲಾಜಿಕಲ್ ಇ, ಇದುವರೆಗೆ 10 ಕೋಟಿ ಡೋಸ್ ಲಸಿಕೆಯನ್ನು ಕೇಂದ್ರಕ್ಕೆ ತಲುಪಿಸಿದ್ದು, ಸಾರ್ವಜನಿಕ ಮತ್ತು ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಕೋವಿನ್ ಆ್ಯಪ್‌ನಲ್ಲಿ ಬೂಸ್ಟರ್ ಡೋಸ್ ಆಗಿ ಲಭ್ಯವಾಗುವ ನಿರೀಕ್ಷೆಯಿದೆ. ವ್ಯಾಕ್ಸಿನೇಷನ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ.

ಪ್ರಶ್ನೆ: ಕಾರ್ಬೆವಾಕ್ಸ್‌ಗೆ ಯಾರು ಅರ್ಹರು ?
ಉ: ಇದು ಬೂಸ್ಟರ್ ಶಾಟ್ ಆಗಿರುವುದರಿಂದ, ಕೋವಿಶೀಲ್ಡ್ ಅಥವಾ ಕೋವಾಕ್ಸಿನ್ ಅನ್ನು ಮೊದಲ ಅಥವಾ ಎರಡನೇ ಡೋಸ್ ಆಗಿ ಪಡೆದವರು ಇದನ್ನು ಹಾಕಿಕೊಳ್ಳಬಹುದಾಗಿದೆ. ಇದುವರೆಗಿನ ಪ್ರೋಟೋಕಾಲ್ ಪ್ರಕಾರ, ಮೂರನೇ ಡೋಸ್ ಮೊದಲ ಮತ್ತು ಎರಡನೇ ಡೋಸ್‌ಗಳಿಗೆ ಬಳಸಿದ ಅದೇ ಲಸಿಕೆ ಆಗಿರಬೇಕು ಎಂದು ಶಿಫಾರಸು ಮಾಡಲಾಗಿದೆ.

Covid-19: ಕೊವಾಕ್ಸಿನ್​, ಕೋವಿಶೀಲ್ಡ್​ ಬೂಸ್ಟರ್​ ಡೋಸ್​ ಜೊತೆಗೆ ಕಾರ್ಬೆವಾಕ್ಸ್​ಗೂ ಅನುಮತಿ

ಪ್ರಶ್ನೆ: Corbevax ಬೆಲೆ ಎಷ್ಟು?
ಉ: ಖಾಸಗಿ ಕೋವಿಡ್-19 ಲಸಿಕೆ ಕೇಂದ್ರಗಳಿಗೆ ಕಾರ್ಬೆವಾಕ್ಸ್ ಬೆಲೆ 250 ರೂಪಾಯಿಗಳು, ಜಿಎಸ್‌ಟಿ ಸೇರಿದಂತೆ. ಅಂತಿಮ ಬಳಕೆದಾರರಿಗೆ, ತೆರಿಗೆಗಳು ಮತ್ತು ಆಡಳಿತಾತ್ಮಕ ಶುಲ್ಕಗಳು ಸೇರಿದಂತೆ 400 ರೂಪಾಯಿಗಳಿಗೆ ಬೆಲೆಯನ್ನು ನಿಗದಿಪಡಿಸಲಾಗಿದೆ.

ಪ್ರಶ್ನೆ: Corbevax ಬೂಸ್ಟರ್‌ಗೆ ವಯಸ್ಸಿನ ಮಿತಿ ಏನು?
ಪ್ರಶ್ನೆ: ಕೋವಾಕ್ಸಿನ್ ಕೋವಿಶೀಲ್ಡ್ ಲಸಿಕೆಯನ್ನು ಪಡೆದ ವಯಸ್ಕರಿಗೆ ಕೋವಿಡ್ ಲಸಿಕೆ ಕಾರ್ಬೆವಾಕ್ಸ್ ಅನ್ನು ಮುನ್ನೆಚ್ಚರಿಕೆಯಾಗಿ ಅನುಮೋದಿಸಲಾಗಿದೆ
ಉ: Covaxin ಅಥವಾ Covishield ನ ಎರಡನೇ ಡೋಸ್‌ನಿಂದ 6 ತಿಂಗಳು ಅಥವಾ 26 ವಾರಗಳ ಪೂರ್ಣಗೊಂಡ ನಂತರ ಕಾರ್ಬೆವ್ಯಾಕ್ಸ್ ಅನ್ನು ಮುನ್ನೆಚ್ಚರಿಕೆಯ ಡೋಸ್‌ನಂತೆ ಅನುಮೋದಿಸಲಾಗಿದೆ: 18 ವರ್ಷ ಮೇಲ್ಪಟ್ಟ ಎಲ್ಲಾ ವಯಸ್ಕರು ಕಾರ್ಬೆವಾಕ್ಸ್ ಬೂಸ್ಟರ್ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ

ಪ್ರಶ್ನೆ: ಕಾರ್ಬೆವಾಕ್ಸ್ ಬೂಸ್ಟರ್‌ಗಾಗಿ ನೋಂದಣಿ ಪ್ರಕ್ರಿಯೆ ಏನು?
ಉ: ಕಾರ್ಬೆವಾಕ್ಸ್ ಬೂಸ್ಟರ್ ನೋಂದಣಿಯನ್ನು ಈ ಕೆಳಗಿನ ಹಂತಗಳ ಮೂಲಕ ಮಾಡಬಹುದು:
https://selfregistration.cowin.gov.in/ ಗೆ ಲಾಗಿನ್ ಮಾಡಿ
ಮೊಬೈಲ್ ಸಂಖ್ಯೆ ಮತ್ತು OTPಯನ್ನು ನಮೂದಿಸುವ ಮೂಲಕ ಪರಿಶೀಲನೆಗಾಗಿ ಸೈನ್ ಇನ್ ಮಾಡಿ ಅಥವಾ ನೋಂದಾಯಿಸಿ.
ಕೋವಿನ್‌ನಲ್ಲಿ ಅಸ್ತಿತ್ವದಲ್ಲಿರುವ ಖಾತೆಯ ಮೂಲಕ ಸ್ವಯಂ-ನೋಂದಣಿ ಮಾಡಿಕೊಳ್ಳಬಹುದು.
ನೋಂದಣಿಯ ನಂತರ, Cowin ಮುಖಪುಟದಲ್ಲಿ ಹೊಸ ವರ್ಗದ ಅಡಿಯಲ್ಲಿ ಗುರುತಿನ ಪುರಾವೆಯನ್ನು ನವೀಕರಿಸಿ
ನೀವು ಆಧಾರ್ ಕಾರ್ಡ್ ಅಥವಾ ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಸ್ಮಾರ್ಟ್ ಕಾರ್ಡ್ ಇತ್ಯಾದಿಗಳನ್ನು ಬಳಸಿ ನೋಂದಾಯಿಸಿಕೊಳ್ಳಬಹುದು.

Covid vaccine ಬೂಸ್ಟರ್‌ ಪಡೆದ 70% ಜನರಿಗೆ ಸೋಂಕಿಲ್ಲ!

ಪ್ರಶ್ನೆ: ಕಾರ್ಬೆವಾಕ್ಸ್ ಬೂಸ್ಟರ್ ಡೋಸ್ ಯಾವಾಗ ತೆಗೆದುಕೊಳ್ಳಬೇಕು?
ಉ: Covaxin ಅಥವಾ Covishield ಲಸಿಕೆಗಳ ಎರಡನೇ ಡೋಸ್‌ನ್ನು ಲಸಿಕೆ ಪಡೆದ 6 ತಿಂಗಳುಗಳು ಅಥವಾ 26 ವಾರಗಳ ಪೂರ್ಣಗೊಂಡ ನಂತರ ಕಾರ್ಬೆವಾಕ್ಸ್ ಬೂಸ್ಟರ್ ಡೋಸ್ ಹಾಕಿಸಿಕೊಳ್ಳಬಹುದು.

ಪ್ರಶ್ನೆ: ಕಾರ್ಬೆವಾಕ್ಸ್‌ನಿಂದ ಏನಾದರೂ ಅಡ್ಡ ಪರಿಣಾಮಗಳಿವೆಯೇ?
ಉ: Corbevax ಲಸಿಕೆ ಕೆಲವೊಂದು ಅಡ್ಡಪರಿಣಾಮಗಳನ್ನು ಸಹ ಒಳಗೊಂಡಿದೆ. ಲಸಿಕೆ ಹಾಕಿಸಿಕೊಂಡ ನಂತರ ಜ್ವರ, ತಲೆನೋವು, ಆಯಾಸ, ಅತಿಸಾರ, ಮೈಕೈ ನೋವು, ವಾಕರಿಕೆ ಮೊದಲಾದ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಕೆಲವು ಜನರು ಚುಚ್ಚುಮದ್ದಿನ ಸ್ಥಳದಲ್ಲಿ ನೋವು ಅನುಭವಿಸುತ್ತಾರೆ, ಅದು ಕೆಲವೇ ದಿನಗಳಲ್ಲಿ ಕಡಿಮೆಯಾಗುತ್ತದೆ.

ಪ್ರಶ್ನೆ: ಅಡ್ಡಪರಿಣಾಮಗಳು ಕಾಣಿಸಿಕೊಂಡರೆ ಏನು ಮಾಡಬಹುದು ?
ಉ: ನೀವು ತೀವ್ರವಾದ ಅಲರ್ಜಿಯ ಪ್ರತಿಕ್ರಿಯೆಯನ್ನು ಅನುಭವಿಸಿದರೆ ಹತ್ತಿರದ ಆಸ್ಪತ್ರೆಗೆ ಹೋಗಿ. ಹೆಚ್ಚುವರಿಯಾಗಿ, ವ್ಯಾಕ್ಸಿನೇಷನ್ ನಂತರದ ಅಡ್ಡಪರಿಣಾಮಗಳನ್ನು ನೀವು ತಯಾರಕರಾದ ಬಯೋಲಾಜಿಕಲ್ ಇ. ಲಿಮಿಟೆಡ್‌ಗೆ ವರದಿ ಮಾಡಬಹುದು.
24x7 ಟೋಲ್-ಫ್ರೀ ಸಂಖ್ಯೆ 1800 309 0150 ಅಥವಾ pharmacovigilance@biological.com

Follow Us:
Download App:
  • android
  • ios