ವೀಡಿಯೋ ವೈರಲ್ ಆಗ್ಬೇಕು ಅಂತ ಸೋಂಕಿರೋ ಮೀನು ತಿಂದವನ ಪಾಡು ಹೀಗಾಗಬೇಕಾ?
ಈಗಿನ ದಿನಗಳಲ್ಲಿ ಜನರ ಹುಚ್ಚಾಟ ಹೆಚ್ಚಾಗಿದೆ. ಸುದ್ದಿ ಮಾಡೋಕೆ ಸಾಹಸಕ್ಕೆ ಕೈ ಹಾಕಿ, ಅಪಾಯ ತಂದುಕೊಳ್ತಾರೆ. ಗೊತ್ತಿದ್ದೂ ಗೊತ್ತಿದ್ದೂ ತಪ್ಪು ಮಾಡಿದ ಈತ ಈಗ ಮಾತ್ರೆ ಸೇವನೆ ಮಾಡ್ತಿದ್ದಾನೆ.
ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿ ಪಡೆಯಲು ಜನರು ನಾನಾ ಕಸರತ್ತು ಮಾಡ್ತಾರೆ. ಕೆಲವರು ಅಪಾಯಕಾರಿ ಸ್ಟಂಟ್ ಮಾಡಿದ್ರೆ ಮತ್ತೆ ಕೆಲವರು ರಸ್ತೆ ಬೀದಿಯಲ್ಲಿ ಕುಣಿದು ಕುಪ್ಪಳಿಸ್ತಾರೆ. ಇನ್ನು ಕೆಲವರು ತಮಾಷೆ ವಿಡಿಯೋಗಳನ್ನು ಹಾಕ್ತಾರೆ. ಎಲ್ಲವೂ ಒಂದು ಮಿತಿಯಲ್ಲಿದ್ದರೆ ಒಳ್ಳೆಯದು. ಅದೇ ಅತಿಯಾದ್ರೆ ಅಪಾಯಕಾಡುತ್ತದೆ. ಈಗಾಗಲೇ ಕೆಲವರು ರೀಲ್ಸ್, ವಿಡಿಯೋ ಮಾಡಲು ಹೋಗಿ ಸಾವು ತಂದುಕೊಂಡಿದ್ದಾರೆ. ಈಗ ಇನ್ನೊಬ್ಬ ವ್ಯಕ್ತಿ ಕೂಡ ತನ್ನ ಜೀವವನ್ನು ಅಪಾಯಕ್ಕೆ ತಳ್ಳಿದ್ದಾನೆ. ತನ್ನನ್ನು ಆಹಾರ ಭಕ್ಷಕ ಎಂದೇ ಕರೆದುಕೊಂಡಿರುವ ವ್ಯಕ್ತಿ, ಯೋಗ್ಯವಲ್ಲದ ಆಹಾರ ಸೇವನೆ ಮಾಡಿ ಈಗ ನೆಟ್ಟಿಗರ ಛೀಮಾರಿಗೆ ಗುರಿಯಾಗಿದ್ದಾನೆ.
ಮೀನು (Fish) ತಿಂದ ಕೆಲವೇ ಕ್ಷಣದಲ್ಲಿ ಬಿಗಡಾಯಿಸಿದ ಪರಿಸ್ಥಿತಿ : ಯಾವುದೇ ಆಹಾರ (Food) ವನ್ನು ಸೇವನೆ ಮಾಡುವ ಮೊದಲು ಅದು ತಿನ್ನಲು ಯೋಗ್ಯವಾಗಿದ್ಯಾ ಎಂದು ಪರೀಕ್ಷೆ ಮಾಡಿಕೊಳ್ಳಬೇಕು. ಕೆಲವರು ಗೊತ್ತಿದ್ದೂ ತಪ್ಪು ಮಾಡ್ತಾರೆ. ಏನೋ ಮಾಡಲು ಹೋಗಿ, ಮತ್ತಿನ್ನೇನೋ ಸಮಸ್ಯೆ ತಂದುಕೊಳ್ತಾರೆ. ಅದಕ್ಕೆ ಈ ವ್ಯಕ್ತಿ ಉತ್ತಮ ನಿದರ್ಶನ.
ಈ ಎರಡು ಬ್ಲಡ್ ಗ್ರೂಪಿನವರಿಗೆ ಹೃದ್ರೋಗ ಸಮಸ್ಯೆ ಹೆಚ್ಚಂತೆ, ನಿಮ್ಮದು ಯಾವ ಗುಂಪು?
ಈ ಘಟನೆ ನಡೆದಿರೋದು ಫ್ಲೋರಿಡಾದಲ್ಲಿ. ಆತನ ಹೆಸರು ನಿಕೋಲಾ ಕ್ರಾಟ್ಕಾ. ಆತನಿಗೆ 23 ವರ್ಷ ವಯಸ್ಸು. ಇತ್ತೀಚೆಗೆ ಅವನು ಕೆರೆಯಿಂದ ಮೀನು ಹಿಡಿದಿದ್ದ. ಮೀನು ಪರಾವಲಂಬಿಗಳು ಮತ್ತು ಎರೆಹುಳುವನ್ನು ತಿಂದಿದೆ, ಈ ಮೀನು ಸೋಂಕಿಗೆ ಒಳಗಾಗಿದೆ ಎಂಬುದು ಗೊತ್ತಿದ್ರೂ ನಿಕೋಲ್ ಕ್ರಾಟ್ಕಾ ಈ ಮೀನನ್ನು ತಿಂದಿದ್ದಾನೆ.
ಎಸೆಯಬೇಕಾಗಿದ್ದ ಈ ಮೀನನ್ನು ನಿಕೋಲ್ ಕ್ರಾಟ್ಕಾ ಸೇವಿಸಿದ ಕೆಲವೇ ಕ್ಷಣಗಳಲ್ಲಿ ಅದರ ಪರಿಣಾಮ ಕಾಣಿಸಿಕೊಂಡಿದೆ. ಹೊಟ್ಟೆ ನೋವು, ಅತಿಸಾರ, ವಾಕರಿಕೆ ಮತ್ತು ದೌರ್ಬಲ್ಯದಂತಹ ಪ್ರತಿಕ್ರಿಯೆಗಳನ್ನು ಅನುಭವಿಸಲು ಪ್ರಾರಂಭಿಸಿದ್ದಾನೆ. ಸೋಂಕಿತ ಮೀನುಗಳನ್ನು ತಿನ್ನುವಾಗ ವೈರಲ್ ಆಗುವ ಭರವಸೆಯಲ್ಲಿ, ನಿಕೋಲ್ ಇದನ್ನು ಕ್ಯಾಮರಾದಲ್ಲಿ ಶೂಟ್ ಮಾಡಿದ್ದ. ಇದಾದ ಕೆಲವೇ ಕ್ಷಣಗಳಲ್ಲಿ ನಿಕೋಲ್ ಆಸ್ಪತ್ರೆಗೆ ಹೋಗ್ಬೇಕಾಯ್ತು. ಇಷ್ಟಾದ್ರೂ ತನಗೆ ಬೇಸರವಿಲ್ಲವೆಂದು ನಿಕೋಲ್ ಹೇಳಿದ್ದಾನೆ.
ನಿಕೋಲ್, ಫಾಲೋ ಅಪ್ ಟಿಕ್ ಟಾಕ್ ಖಾತೆಯಲ್ಲಿ ತನ್ನ ಅನುಭವವನ್ನು ಹಂಚಿಕೊಂಡಿದ್ದಾನೆ. ನಾನು ಮೂರ್ಖ, ನಾನು ಸುಳ್ಳು ಹೇಳುವುದಿಲ್ಲ, ಇದು ಸಂಪೂರ್ಣವಾಗಿ ನನ್ನ ತಪ್ಪು. ನಾನು ಆಸ್ಪತ್ರೆಗೆ ಹೋದಾಗ ವೈದ್ಯರು, ನನ್ನ ಹೊಟ್ಟೆಯನ್ನು ಪರಾವಲಂಬಿ ಅಥವಾ ಟೇಪ್ ವರ್ಮ್ ಸೇರಿರುವ ಸಾಧ್ಯತೆ ಇದೆ ಎಂದಿದ್ದಾರೆ. ನನ್ನ ಹೊಟ್ಟೆ ವಿಪರೀತ ನೋಯುತ್ತಿದೆ. ಅನೇಕ ಬಾರಿ ಬಾತ್ ರೂಮಿಗೆ ಹೋಗಿ ಬಂದಿದ್ದೇನೆ ಎಂದು ನಿಕೋಲ್ ಹೇಳಿದ್ದಾನೆ. ಅಷ್ಟೇ ಅಲ್ಲ, ನನಗೆ ಇದ್ರಿಂದ ಬೇಸರವಿಲ್ಲ. ನಾನು ಜೀವಂತ ಇರುವವರೆಗೂ ತಿನ್ನುವುದನ್ನು ಬಿಡುವುದಿಲ್ಲ ಎಂದಿದ್ದಾನೆ.
ವೈದ್ಯರು ತನಗೆ ಜಂತುಹುಳು ನಿವಾರಕ ಔಷಧಿಗಳನ್ನು ನೀಡಿದ್ದಾರೆ ಎಂದು ನಿಕೋಲ್ ಹೇಳಿದ್ದಾನೆ. ನನಗೆ ನಾನು ಯಾವ ಹುಳು ಸೇವನೆ ಮಾಡಿದ್ದೇನೆ ಎಂಬ ಬಗ್ಗೆ ಮಾಹಿತಿ ಇಲ್ಲ. ಹಾಗಾಗಿ ವೈದ್ಯರು ವಿವಿಧ ಔಷಧಿ ನೀಡಿದ್ದಾರೆ. ಕೆಲ ಹುಳುಗಳು ಹೊಟ್ಟೆಯನ್ನು ಕೆಡಿಸಿ ರೋಗಗ್ರಸ್ತಗೊಳಿಸುತ್ತವೆ ಮತ್ತೆ ಕೆಲ ಹುಳುಗಳಿಂದ ಸ್ನಾಯುಗಳು ಹಾನಿಗೊಳಗಾಗುತ್ತವೆ ಎಂದು ನಿಕೋಲ್ ಹೇಳಿದ್ದಾನೆ.
ತೆರಿಗೆ ಅಧಿಕಾರಿಯನ್ನೂ ಬಿಡಲಿಲ್ಲ ಹೆರಿಗೆ ನಂತ್ರದ ಖಿನ್ನತೆ, ಓಡಿಸಿ ಕೊಂಡಿದ್ಹೇಗೆ?
ಹುಳುಗಳು ರೋಗಿಯ ಕಣ್ಣು ಅಥವಾ ಅವರ ಮೆದುಳಿಗೆ ಸ್ಥಳಾಂತರಗೊಂಡು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವ ಸಂದರ್ಭಗಳಿವೆ. ನಿಕೋಲ್, ಪ್ರಸಿದ್ಧಿಗಾಗಿ ಈ ಕೆಲಸ ಮಾಡಿದ್ದ. ಆತನ ನಿರೀಕ್ಷೆಯಂತೆ ಆತ ಸುದ್ದಿಯಾಗಿದ್ದಾನೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಜನರು ಅವನ ಬಗ್ಗೆ ಮಾತನಾಡುತ್ತಿದ್ದಾರೆ. ಆದ್ರೆ ಆತನ ಕೆಲಸವನ್ನು ಹೊಗಳುವ ಬದಲು ಬಹುತೇಕ ಜನರು ತೆಗಳುತ್ತಿದ್ದಾರೆ. ಮೂರ್ಖತನದ ಕೆಲಸವನ್ನು ನಿಕೋಲ್ ಮಾಡಿದ್ದಾನೆಂದು ಜನರು ಹೇಳ್ತಿದ್ದಾರೆ.