ಮಲಬದ್ಧತೆಯು ಕರುಳಿನ ಕ್ಯಾನ್ಸರ್ ಬರುವ ಅಪಾಯವನ್ನು ಹೆಚ್ಚಿಸಲಿದೆ ಎಂದು ಹಲವು ಸಂಶೋಧನೆಗಳು ರುಜುವಾತು ಮಾಡಿವೆ. ಮಲಬದ್ಧತೆಯು ಕೊಲೊನ್‌ನಲ್ಲಿ ಲಿಕ್ವಿಡ್‌ ರೀತಿಯ ವಿಷ ನಿರ್ಮಿಸಲು ಕಾರಣವಾಗಿ, ಇದು ಕೊಲೊನ್‌ನ ಒಳಪದರವನ್ನು ಹಾನಿಗೊಳಿಸುತ್ತದೆ, ಕಾಲಕ್ರಮೇಣ ಕೊಲೋನ್‌ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಮಲಬದ್ಧತೆಯನ್ನು ನಿರ್ಲಕ್ಷಿಸುವುದು ಒಳ್ಳೆಯದಲ್ಲ.

ಡಾ. ಸಂದೀಪ್ ನಾಯಕ್

ಫೋರ್ಟಿಸ್ ಆಸ್ಪತ್ರೆ ಶಸ್ತ್ರಚಿಕಿತ್ಸಾ ಆಂಕೊಲಾಜಿ ವಿಭಾಗದ ನಿರ್ದೇಶಕರು 

ಬೆಂಗಳೂರು(ಫೆ.04): ಇಂದಿನ ಆಹಾರ ಪದ್ದತಿಯು ನಮ್ಮ ಆರೋಗ್ಯದ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರುತ್ತಿದ್ದು, ಇದರಿಂದ ಮಲಬದ್ಧತೆಯೂ ಹೊರತಲ್ಲ. ಪ್ರತಿನಿತ್ಯ ಸರಾಗವಾಗಿ ಮಲ-ಮೂತ್ರ ವಿಸರ್ಜನೆಯಾಗುತ್ತಿದ್ದರೆ ಮಾತ್ರವೇ ನಾವು ಆರೋಗ್ಯವಾಗಿದ್ದೇವೆ ಎಂಬುದು ತಿಳಿಯುತ್ತದೆ. ಒಂದು ವೇಳೆ ಮಲವಿಸರ್ಜನೆಯಲ್ಲಿ ತೊಡಕಾಗುವುದು, ನಾಲ್ಕೈದು ದಿನಗಳ ಮಲವಿಸರ್ಜನೇ ಆಗದೇ ಇದ್ದರೆ ಅದು, ಮಲಬದ್ದತೆಯ ಲಕ್ಷಣವಾಗಿರುತ್ತದೆ. ಈ ಮಲಬದ್ದತೆಯನ್ನು ಹೀಗೆ ನಿರ್ಲಕ್ಷಿಸುತ್ತಿದ್ದರೆ ಇದು ಕರುಳಿನ ಕ್ಯಾನ್ಸರ್‌ಗೂ ದಾರಿ ಮಾಡಿಕೊಡಲಿದೆ ಎನ್ನುತ್ತಾರೆ ವೈದ್ಯರು. ಈ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

ಮಲಬದ್ಧತೆ ಎಂದರೇನು?

ಮಲಬದ್ಧತೆಯು ಜಠರ ಲರುಳಿನ ಕಾಯಿಲೆಯಾಗಿದೆ. ಗಟ್ಟಿಯಾದ ಅಥವಾ ಮುದ್ದೆ ಮುದ್ದೆಯಾಕಾದಲ್ಲಿ ಮಲವಿಸರ್ಜನೆ ಇದರ ಪ್ರಮುಖ ಲಕ್ಷಣ. ನಮ್ಮ ಆಹಾರದಲ್ಲಿ ಕಡಿಮೆ ಫೈಬರ್ ಆಹಾರ ಸೇವನೆ, ನಿರ್ಜಲೀಕರಣ, ಸೂಕ್ತ ವ್ಯಾಯಾಮ ಮಾಡದೇ ಇರುವುದು, ಜಂಕ್‌, ಅತಿಯಾದ ಮಸಾಲೆಯುಕ್ತ ಆಹಾರ ಸೇವಿಸುವುದು ಕ್ರಮೇಣವಾಗಿ ಮಲಬದ್ದತಗೆ ಕಾಣವಾಗಲಿದೆ. ಕೆಲವೊಮ್ಮೆ ನಾವು ಸೇವಿಸುವ ಅತಿಯಾದ ಔಷಧ, ಮಾತ್ರೆಗಳು ಸಹ ಮಲಬದ್ದತೆಗೆ ಹಾದಿ ಮಾಡಿಕೊಡಲಿದೆ. ಮಲಬದ್ದತೆಯು ಅತಿಯಾದ ನೋವಿನಿಂದ ಕೂಡಿದ್ದು, ಕೆಲವೊಮ್ಮೆ ಗುದದ್ವಾರದಿಂದ ರಕ್ತಸ್ತ್ರಾವವಾಗಲು ಕಾರಣವಾಗಬಹುದು. ಇದಕ್ಕೆ ಚಿಕಿತ್ಸೆ ಪಡೆಯದೇ ನಿರ್ಲಕ್ಷಿಸುತ್ತಾ ಹೋದರೆ, ಗುದದ್ವಾರದ ಒಳಗೆ ಅಥವಾ ಹೊರಗೆ ಮೊಳಕೆಯಾಕಾರದಲ್ಲಿ ಪೈಲ್ಸ್‌ ಉದ್ಭವಿಸಲಿದೆ. ಮತ್ತೊಂದೆಡೆ, ಕೊಲೊನ್‌ನಲ್ಲಿ ಬೆಳೆಯುತ್ತಿರುವ ಕ್ಯಾನ್ಸರ್ ಮಲಬದ್ಧತೆಯಂತೆ ಪ್ರಕಟವಾಗಬಹುದು, ಇದು ಗಂಭೀರ ಪರಿಣಾಮ ಬೀರಬಹುದು. 

ಜೀರ್ಣಕ್ರಿಯೆ ಹೆಚ್ಚಿಸಿ ಮಲಬದ್ಧತೆ ನಿವಾರಿಸುವ 5 ಸೂಪರ್‌ ಫ್ರೂಟ್ಸ್‌ಗಳು

ಮಲಬದ್ಧತೆ ಮತ್ತು ಕರುಳಿನ ಕ್ಯಾನ್ಸರ್ ನಡುವಿನ ಸಂಪರ್ಕ

ಮಲಬದ್ಧತೆಯು ಕರುಳಿನ ಕ್ಯಾನ್ಸರ್ ಬರುವ ಅಪಾಯವನ್ನು ಹೆಚ್ಚಿಸಲಿದೆ ಎಂದು ಹಲವು ಸಂಶೋಧನೆಗಳು ರುಜುವಾತು ಮಾಡಿವೆ. ಮಲಬದ್ಧತೆಯು ಕೊಲೊನ್‌ನಲ್ಲಿ ಲಿಕ್ವಿಡ್‌ ರೀತಿಯ ವಿಷ ನಿರ್ಮಿಸಲು ಕಾರಣವಾಗಿ, ಇದು ಕೊಲೊನ್‌ನ ಒಳಪದರವನ್ನು ಹಾನಿಗೊಳಿಸುತ್ತದೆ, ಕಾಲಕ್ರಮೇಣ ಕೊಲೋನ್‌ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಮಲಬದ್ಧತೆಯನ್ನು ನಿರ್ಲಕ್ಷಿಸುವುದು ಒಳ್ಳೆಯದಲ್ಲ.

ಕರುಳಿನ ಕ್ಯಾನ್ಸರ್ ತಡೆಗಟ್ಟುವಲ್ಲಿ ಫೈಬರ್ ಪಾತ್ರ

ಫೈಬರ್‌ಯುಕ್ತ ಆಹಾರ ಸೇವಿಸುವುದರಿಂದ ಆಹಾರವನ್ನು ಸರಾಗವಾಗಿ ಜೀರ್ಣಿಸಿ, ಹೊರಹಾಕಲು ಜೀರ್ಣಕ್ರಿಯೆ ಹೆಚ್ಚು ಸಹಕಾರಿ. ಜೊತೆಗೆ ಕೊಲೊನ್‌ನಲ್ಲಿ ಕ್ಯಾನ್ಸರ್‌ ಕೋಶಗಳನ್ನು ರಚಿಸುವುದನ್ನು ತಡೆಯುತ್ತದೆ. ಇದು ಕೊಲೊನ್‌ನನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ, ಅಷ್ಟೇ ಅಲ್ಲದೆ, ಹೊಟ್ಟೆಯಲ್ಲಿ ಉರಿಯೂತದ ಅಪಾಯವನ್ನು ಕಡಿಮೆ ಮಾಡುತ್ತದೆ. ಫೈಬರ್ ಅಧಿಕವಾಗಿರುವ ಆಹಾರಗಳೆಂದರೆ ಹಣ್ಣು, ತರಕಾರಿ, ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳು ಸೇರಿದ್ದು, ವಯಸ್ಕರು ದಿನಕ್ಕೆ ಕನಿಷ್ಠ 25-30 ಗ್ರಾಂ ಫೈಬರ್ ಸೇವಿಸಬೇಕೆಂದು ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ​​ಶಿಫಾರಸು ಮಾಡಿದೆ.

ಮಲಬದ್ಧತೆಯಿಂದ ಶೀಘ್ರ ಮುಕ್ತಿ ನೀಡುವ ಪಾನೀಯ

ಕರುಳಿನ ಕ್ಯಾನ್ಸರ್‌ಗೆ ಇತರೆ ಅಪಾಯಕಾರಿ ಅಂಶಗಳು

ಕರುಳಿನ ಕ್ಯಾನ್ಸರ್‌ಗೆ ಕೇವಲ ಆಹಾರ ಸೇವೆಯೊಂದೇ ಕಾರಣವಲ್ಲ, ಕರುಳಿನ ಕ್ಯಾನ್ಸರ್‌ನ ಕುಟುಂಬದ ಇತಿಹಾಸ, ಅತಿಯಾದ ಕೆಂಪು ಮಾಂಸ ಸೇವನೆ, ಕರುಳಿನ ಉರಿಯೂತ, ಅತಿಯಾದ ಮಾತ್ರೆ, ಔಷಧಿ ಸೇವನೆ, 50 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ಕರುಳಿನ ಕ್ಯಾನ್ಸರ್‌ ಸಾಧ್ಯತೆ ಹೆಚ್ಚಿರಲಿದೆ.

ನಿಯಂತ್ರಣ ಹೇಗೆ?:

* ಕರುಳಿನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಕೆಲವು ಅಂಶಗಳನ್ನು ಅನುಸರಿಬೇಕು.
* ಹೆಚ್ಚಿನ ಫೈಬರ್‌ ಇರುವ ಆಹಾರ ಸೇವನೆ 
* ನಿರ್ಜಲೀಕರಣ ತಪ್ಪಿಸಲು ಸೂಕ್ತ ನೀರು ಸೇವನೆ
* ನಿಯಮಿತ ವ್ಯಾಯಾಮ 
* ಕೆಂಪು ಮತ್ತು ಸಂಸ್ಕರಿಸಿದ ಮಾಂಸ ಸೇವನೆ ಕಡಿಮೆಗೊಳಿಸುವುದು 
* ಕರುಳಿನ ಕ್ಯಾನ್ಸರ್‌ ಸಂಬಂಧಿಸಿ ಕುಟುಂಬದ ಹಿನ್ನೆಲೆ ಇದ್ದಲ್ಲಿ, ಆಗಾಗ್ಗೇ ತಪಾಸಣೆಗೆ ಒಳಗಾಗುವುದು