ಡಾ. ಗಿರೀಶ್‌ ಎಸ್‌ವಿ

ನಿಯೋನಾಟೊಲೊಜಿಸ್ಟ್‌

ಈ ಸಮಸ್ಯೆ ವಯಸ್ಸು ಹೆಚ್ಚಿದಂತೆ ಕಡಿಮೆಯಾಗುತ್ತ ಬರುತ್ತದೆ. ಸುಮಾರು 14 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಲ್ಲಿ ಶೇ. 1-2 ರಷ್ಟುಮಾತ್ರ ಕಂಡುಬರುತ್ತದೆ. ಇದು ಗಂಭೀರವಾದ ವೈದ್ಯಕೀಯ ಅಸ್ವಸ್ಥತೆಯಲ್ಲದಿದ್ದರೂ, ಹಾಸಿಗೆ ಒದ್ದೆ ಮಾಡಿಕೊಳ್ಳುವುದು ಮಗುವಿನ ಮೇಲೆ ಮತ್ತು ಕುಟುಂಬದ ಮೇಲೆ ಬಹುದೊಡ್ಡ ಪರಿಣಾಮಗಳನ್ನು ಬೀರುತ್ತದೆ. ಮಗುವಿನ ಮೂತ್ರಕೋಶ ಚಿಕ್ಕದಿದ್ದರೆ, ಮೂತ್ರ ತುಂಬಿರುವುದನ್ನು ಅರಿಯುವಲ್ಲಿ ಅಸಾಮರ್ಥ್ಯವಿದ್ದರೆ, ಹಾರ್ಮೋನ್‌ ಅಸಮತೋಲನ, ಒತ್ತಡ, ಮೂತ್ರದ ಸೋಂಕು ಇದ್ದಲ್ಲಿ ಅಥವಾ ಕೆಲವು ಸಂದರ್ಭಗಳಲ್ಲಿ ಸ್ಲೀಪ್‌ ಅಪ್ನಿಯಾವನ್ನು ಗುರುತಿಸಲು ಅಸಮರ್ಥತೆಯನ್ನು ಹೊಂದಿದ್ದರೆ ಮಕ್ಕಳು ಹಾಸಿಗೆಯಲ್ಲಿ ಮೂತ್ರ ಮಾಡುವ ಸಾಧ್ಯತೆಯಿರುತ್ತದೆ.

ಸಂಕೀರ್ಣತೆಗಳು

ನಿದ್ದೆಯಲ್ಲಿ ಹಾಸಿಗೆ ಒದ್ದೆ ಮಾಡಿಕೊಳ್ಳುವುದರಿಂದ ಆರೋಗ್ಯಕ್ಕೆ ಹಾನಿಯಿಲ್ಲ. ಹಾಗೆಂದು ನಿರ್ಲಕ್ಷಿಸುವ ಹಾಗೂ ಇಲ್ಲ. ಏಕೆಂದರೆ ಇದರಿಂದ ಮಕ್ಕಳಲ್ಲಿ ಅಥವಾ ವಯಸ್ಕರಲ್ಲಿ ತಪ್ಪಿತಸ್ಥ ಭಾವ ಮತ್ತು ಮುಜುಗರ ಉಂಟಾಗಿ ಆತ್ಮವಿಶ್ವಾಸ ಕುಗ್ಗುವಂತೆ ಮಾಡಬಹುದು. ಒದ್ದೆಯಾದ ಒಳ ಉಡುಪಿನಲ್ಲೇ ಮಲಗಿದರೆ ದೇಹದ ಕೆಳ ಭಾಗ ಮತ್ತು ಜನನಾಂಗದಲ್ಲಿ ದದ್ದುಗಳು ಉಂಟಾಗಬಹುದು.

3 ವರ್ಷದ ಪಾಪು ಬ್ಯಾಟರಿ ನುಂಗಿಬಿಡ್ತು! ಆಮೇಲೆ..?

ಹೀಗೆ ಮಾಡಿದ್ರೆ ಸಮಸ್ಯೆ ಪರಿಹಾರವಾಗುತ್ತದೆ

ನಾಕ್ಟರ್ನಲ್‌ ಎನ್ಯುರೆಸಿಸ್‌ ಚಿಕಿತ್ಸೆ ಈ ಸಮಸ್ಯೆಯನ್ನು ಗುಣಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದಲ್ಲದೇ ಪೋಷಕರು ಮಕ್ಕಳಲ್ಲಿ ನಾಕ್ಟರ್ನಲ್‌ ಎನ್ಯೂರೆಸಿಸ್‌ಗೆ ಸಂಬಂಧಿಸಿದ ಒತ್ತಡವನ್ನು ಕಡಿಮೆ ಮಾಡಬೇಕು.

- ಹಾಸಿಗೆಯಲ್ಲಿ ಮೂತ್ರ ಮಾಡೋದು ಯಾರದ್ದೂ ತಪ್ಪಲ್ಲ ಎನ್ನುವುದನ್ನು ಮಕ್ಕಳಿಗೆ ತಿಳಿಸಿಕೊಡಿ.

- ನಿನ್ನ ಹಾಗೆ ಬಹಳ ಜನಕ್ಕೆ ಈ ಸಮಸ್ಯೆ ಇದೆ ಎಂದು ತಿಳಿಸಿ.

- ಈ ಸಮಸ್ಯೆಗಾಗಿ ಮಕ್ಕಳನ್ನು ಶಿಕ್ಷಿಸಬೇಡಿ ಅಥವಾ ಅವಮಾನಿಸಬೇಡಿ.ಇತರರೂ ತಮಾಷೆ ಮಾಡದಂತೆ ನೋಡಿಕೊಳ್ಳಿ.

- ಮಲಗುವ ಮುನ್ನ ಮೂತ್ರ ಮಾಡಲು ಹೇಳಿ.

- ಮೂತ್ರ ಬಂದಂತಾದಾಗ ಎಚ್ಚರಗೊಳ್ಳಲು ಮಗುವನ್ನು ಪ್ರೋತ್ಸಾಹಿಸಿ.

- ಮಕ್ಕಳು ಬೆಳಗ್ಗೆ, ಮಧ್ಯಾಹ್ನ ಹೆಚ್ಚು ದ್ರವ ಪದಾರ್ಥ ಸೇವಿಸಲಿ. ಸಂಜೆ ಈ ನೀರು ಕುಡಿಯೋದನ್ನು ಕಡಿಮೆ ಮಾಡಿ. ಸಂಜೆ ವೇಳೆ ಕೆಫಿನ್‌, ಸಕ್ಕರೆ ಇರುವ ಪಾನೀಯ ಕೊಡಬೇಡಿ.

ಈ ಟೆಕ್ನಿಕ್‌ ಪ್ರಯೋಗಿಸಿ

- ಮಗುವಿಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದರೆ ಅದನ್ನು ಪ್ರೋತ್ಸಾಹಿಸಲು ಗಿಫ್ಟ್‌ ನೀಡಿ. ಈ ಆಸೆಗಾದರೂ ಮುಂದೆ ಮಗು ಮೂತ್ರ ಬಂದಾಗ ಎಚ್ಚರಗೊಳ್ಳೋದನ್ನು ಅಭ್ಯಾಸ ಮಾಡುತ್ತದೆ.

- ನಿದ್ರೆಯ 2-3 ಗಂಟೆಗಳ ನಂತರ ಮಗುವನ್ನು ಎಚ್ಚರಿಸಲು ಅಲರಾಂ ಬಳಸಿ. ಮೂತ್ರ ಮಾಡಿಸಿ ವಾಪಾಸ್‌ ಮಲಗಿಸಿ.

ದೊಡ್ಡವನಾದ್ರೂ ಬಾತ್‌ರೂಂ ಓಪನ್‌ ಮಾಡ್ಕೊಂಡೇ ಸೂಸೂ ಮಾಡ್ತಾನೆ; ಏನಿದು ಪ್ರಾಬ್ಲಂ?

- ಬೆಡ್‌ ವೆಟ್ಟಿಂಗ್‌ ಅಲಾರಂಗಳು/ಸೆನ್ಸರ್‌ಗಳು: ಇವುಗಳು ವೈದ್ಯಕೀಯ ಸಾಧನಗಳು. ಇದು ಸೆನ್ಸರ್‌ ಬಳಸುವ ಮೂಲಕ ಕಾರ್ಯನಿರ್ವಹಿಸುತ್ತದೆ ಮತ್ತು ಮಗುವಿನ ಒಳ ಉಡುಪಿನಲ್ಲಿ ಮೂತ್ರದ ಮೊದಲ ಹನಿಗಳು ಪತ್ತೆಯಾದ ತಕ್ಷಣ ಎಚ್ಚರಿಕೆ ನೀಡುತ್ತದೆ. ಆದರೆ ಇವುಗಳ ಬಳಕೆ ವಿರಳ.