Asianet Suvarna News Asianet Suvarna News

Health benefits: ಕಾಫಿ, ಟೀ ಕುಡಿಯೋದ್ರಿಂದ ಸ್ಟ್ರೋಕ್ ಅಪಾಯ ಕಡಿಮೆ

ಕಾಫಿ, ಟೀ ಕುಡಿಯುವುದರಿಂದ ಮನಸ್ಸಿಗೆ ಹಿತವೆನಿಸುತ್ತದೆ. ಬೆಳಗಿನ ಸಮಯ ಅಥವಾ ಸಂಜೆಯಲ್ಲಿ ಕಾಫಿ ಅಥವಾ ಟೀ ಕುಡಿಯದಿದ್ದರೆ ಅದೇನೋ ಕಳೆದುಕೊಂಡ ಭಾವ ಮನೆ ಮಾಡುತ್ತದೆ. ಅವುಗಳನ್ನು ಹಿತಮಿತವಾಗಿ ಕುಡಿಯುವುದು ಆರೋಗ್ಯಕ್ಕೂ ಉತ್ತಮ.
 

Coffee and tea lower risk of stroke and dimentia
Author
Bangalore, First Published Jan 25, 2022, 4:44 PM IST

ಚುಮುಚುಮು ಚಳಿಯ ಮುಂಜಾವು (Morning) ಹಾಗೂ ಸಂಜೆ(Evening)ಯ ಸಮಯವನ್ನು ಹೆಚ್ಚು ಆಹ್ಲಾದಗೊಳಿಸುವ ಸಾಮರ್ಥ್ಯ ಚಹಾ (Tea) ಹಾಗೂ ಕಾಫಿಗೆ ಇದೆ. ಪ್ರತಿದಿನ ಎರಡೂ ಹೊತ್ತು ಕಾಫಿ (Coffee) ಅಥವಾ ಟೀಯನ್ನು ಸವಿಯುವ ಅಭ್ಯಾಸ ಬಹುತೇಕ ಎಲ್ಲರಿಗೂ ಇದೆ. ಈ ನಡುವೆ ಕೆಲವರಿಗಾದರೂ ಒಮ್ಮೊಮ್ಮೆ, “ದಿನವೂ ಕಾಫಿ ಮತ್ತು ಟೀ ಸೇವನೆ ಒಳ್ಳೆಯದಲ್ಲʼ ಎನ್ನುವ ಭಾವನೆಯೊಂದು ಕುಟುಕುತ್ತಿರುತ್ತದೆ. ಏಕೆಂದರೆ, ಕಾಫಿ ಹಾಗೂ ಟೀ ಕುರಿತಾದ ಏನೇನೋ ಸುದ್ದಿಗಳನ್ನು ಕೇಳುತ್ತಿರುತ್ತೇವೆ. ಆದರೆ, ಇದೀಗ, ಕಾಫಿ ಮತ್ತು ಟೀ ಪ್ರಿಯರಿಗೆ ಖುಷಿಯಾಗುವ ಮಾಹಿತಿಯೊಂದು ಹೊರಬಿದ್ದಿದೆ. ಅದೆಂದರೆ, ಮಧ್ಯಮ (Moderate) ಪ್ರಮಾಣದಲ್ಲಿ ಕಾಫಿ ಮತ್ತು ಟೀ ಸೇವನೆ ಮಾಡುವವರಿಗೆ ಸುಲಭಕ್ಕೆ ಪಾರ್ಶ್ವವಾಯು (Stroke) ಉಂಟಾಗುವುದಿಲ್ಲ ಹಾಗೂ ಮರೆವಿನ ಕಾಯಿಲೆ(Dementia)ಯೂ ಕಂಡುಬರುವುದಿಲ್ಲ ಎಂದು.

ಯುಕೆ ಬಯೋಬ್ಯಾಂಕ್‌ (UK Biobank) ನಲ್ಲಿ ಈ ಕುರಿತು ಅಧ್ಯಯನ (Study) ನಡೆದಿದ್ದು, ಪ್ಲಾಸ್‌ ಮೆಡಿಸಿನ್‌ (Plos Medicine) ಎನ್ನುವ ಮ್ಯಾಗಝೀನ್‌ ನಲ್ಲಿ ಲೇಖನ ಪ್ರಕಟವಾಗಿದೆ. ಇದು ಬರೋಬ್ಬರಿ 3 ಲಕ್ಷಕ್ಕೂ ಅಧಿಕ ಮಂದಿಯನ್ನು ಒಳಗೊಂಡ ಅಧ್ಯಯನವಾಗಿತ್ತು ಎನ್ನುವುದು ವಿಶೇಷ. ಕಾಫಿ ಹಾಗೂ ಟೀ ಸೇವನೆ ಮಾಡುವ 50ರಿಂದ 74ರ ವಯೋಮಾನದ ವ್ಯಕ್ತಿಗಳು ಇದರಲ್ಲಿ ಪಾಲ್ಗೊಂಡಿದ್ದರು.

ಈ ಅಧ್ಯಯನದ ಪ್ರಕಾರ, ದಿನಕ್ಕೆ 2-3 ಕಪ್‌ ಕಾಫಿ ಹಾಗೂ 2-3 ಕಪ್‌ ಟೀ ಕುಡಿಯುವವರಿಗೆ ಪಾರ್ಶ್ವವಾಯು ಉಂಟಾಗುವ ಅಪಾಯ (Risk) ಶೇ.32ರಷ್ಟು ಕಡಿಮೆ. ಹಾಗೂ ವಯಸ್ಸಾದಂತೆ ಸಹಜವಾಗಿ ಉಂಟಾಗುವ ಮರೆವು ಸಮಸ್ಯೆ ಅಥವಾ ಮಿದುಳಿನ ಕಾರ್ಯಕ್ಷಮತೆ ಕುಗ್ಗುವಿಕೆಯ ಪ್ರಮಾಣ ಶೇ.28ರಷ್ಟು ಕಡಿಮೆ. ಕಾಫಿ ಅಥವಾ ಟೀ ಎರಡನ್ನೂ ಸೇವಿಸಿದರೂ ಅಥವಾ ಯಾವುದಾದರೂ ಒಂದನ್ನೇ ಸೇವಿಸಿದರೂ ಪ್ರಭಾವ ಇದ್ದೇ ಇದೆ. ಇನ್ನು, ಬಹುತೇಕರಲ್ಲಿ ಪಾರ್ಶ್ವವಾಯು ಉಂಟಾದ ಬಳಿಕ ಮರೆವಿನ ಸಮಸ್ಯೆ ಕಾಣುವುದು ಸಾಮಾನ್ಯ. ಆದರೆ, ಕಾಫಿ ಅಥವಾ ಟೀ ಸೇವನೆಯಿಂದ ಮರೆವಿನ ಸಂಭಾವ್ಯ ಅಪಾಯವೂ ಕಡಿಮೆಯಾಗುವುದು ಕಂಡುಬಂದಿದೆ.

ಚಳಿಗಾಲದ ಜೀವನಶೈಲಿ ಹೇಳಿ ಕೊಡುವ Ritucharya

ಈ ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಯಶ್‌ ವರ್ಧನ್‌ ಸ್ವಾಮಿ (Yash Vardhan Swamy) ಎನ್ನುವವರು ಎಚ್ಚರಿಸುವುದೇನೆಂದರೆ, ಕಾಫಿ ಮತ್ತು ಟೀ ಸೇವನೆ ಮಧ್ಯಮ ಪ್ರಮಾಣದಲ್ಲಿರಬೇಕು. ಕಾಫಿಯಲ್ಲಿ ಆಂಟಿಆಕ್ಸಿಡಂಟ್‌ (Antioxidants) ಗಳ ಪ್ರಮಾಣ ಅಧಿಕವಾಗಿದ್ದು, ಮರೆವಿನ ಕಾಯಿಲೆ ತಡೆಯುವಲ್ಲಿ ಪರಿಣಾಮಕಾರಿಯಾಗಿದೆ. ಆದರೆ, ಕಾಫಿ ಸೇವನೆ ಹೆಚ್ಚಾಗಬಾರದು. ಅಧಿಕ ಪ್ರಮಾಣದಲ್ಲಿ ಕಾಫಿ ಕುಡಿಯುವುದರಿಂದ ಅದರಲ್ಲಿರುವ ಕೆಫೀನ್‌ (Cafeeine) ನಿಂದಾಗಿ ಉದ್ವೇಗ (Anxiety), ಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳು (Digestion Problem) ತಲೆದೋರಬಹುದು. ಹಾಗೂ ನಿದ್ರಾಹೀನತೆಗೆ ಕಾರಣವಾಗಬಲ್ಲದು. ಹೀಗಾಗಿ, ಕಾಫಿಯನ್ನು ಮಲಗುವ ಮುನ್ನ ಹಾಗೂ ಸಂಜೆಯಾದ ನಂತರ ಹೆಚ್ಚು ಕುಡಿಯಬಾರದು ಎಂದು ಎಚ್ಚರಿಸುತ್ತಾರೆ.

Super Food For Kids: ಮಕ್ಕಳು ಕುಳ್ಳಗಿದ್ದಾರೆ ಅನ್ನೋ ಬೇಜಾರಾ..ಮೊಟ್ಟೆ, ಸಿಹಿ ಗೆಣಸು ಕೊಟ್ಟು ನೋಡಿ

ಕಾಫಿ ಹಾಗೂ ಟೀ ಕುಡಿಯುವುದರಿಂದ ಬುದ್ಧಿಶಕ್ತಿ ಚುರುಕಾಗುತ್ತದೆ. ಅರಿವಿನ ಶಕ್ತಿ (Cognitive) ಹೆಚ್ಚುತ್ತದೆ. ಏಕಾಗ್ರತೆ (Concentration) ಸಾಧ್ಯವಾಗುತ್ತದೆ. ನ್ಯೂರೋಟ್ರಾನ್ಸ್‌ ಮಿಟರ್‌ ಗಳ ಮೇಲಿನ ಪರಿಣಾಮದಿಂದಾಗಿ ಉತ್ಪಾದಕತೆ (Productivity) ಹೆಚ್ಚುತ್ತದೆ.

ಸಕ್ಕರೆ (Sugar) ಬಗ್ಗೆ ಇರಲಿ ಎಚ್ಚರ
ಇಲ್ಲಿ ಎಲ್ಲರೂ ತೆಗೆದುಕೊಳ್ಳಬೇಕಾದ ಎಚ್ಚರಿಕೆ ಏನೆಂದರೆ ಸಕ್ಕರೆಯದ್ದು. ಸಕ್ಕರೆ ಬೆರೆಸಿದ ಕಾಫಿ, ಟೀ ಸೇವನೆ ಒಳ್ಳೆಯದಲ್ಲ. ದಿನಕ್ಕೆ ಮೂರು ಕಪ್‌ ಕಾಫಿ ಕುಡಿಯುತ್ತೀರಿ ಎಂದಾದರೆ ಅದರೊಂದಿಗೆ ಮೂರು ಚಮಚ ಸಕ್ಕರೆ ಸೇವಿಸುವುದು ಯೋಗ್ಯವಲ್ಲ.

ಕ್ಯಾಲರಿ (Calorie) ರಹಿತ
ಕಾಫಿಯಲ್ಲಿರುವ ಕೆಫೀನ್‌ ಅತ್ಯುತ್ತಮ ಉತ್ಸಾಹವರ್ಧಕ ಎನ್ನುವುದು ನಮಗೆಲ್ಲರಿಗೂ ಗೊತ್ತು. ಬ್ಲಾಕ್‌ ಕಾಫಿ(Black Coffee), ಗ್ರೀನ್‌ ಟೀ(Green Tea), ಬ್ಲಾಕ್‌ ಟೀ (Black Tea)ಗಳಲ್ಲಿ ಕ್ಯಾಲರಿ ಇರುವುದಿಲ್ಲ. ಹೀಗಾಗಿ, ತೂಕ ಕಳೆದುಕೊಳ್ಳಬೇಕೆನ್ನುವವರಿಗೂ ಇವು ಉತ್ತಮ ಪಾನೀಯ.  

Follow Us:
Download App:
  • android
  • ios