Health Tips: ಈ ರೋಗ ಶುರುವಾದ್ರೆ ನಾಲಿಗೆಯ ಮೇಲೆ ಕೂದಲು ಬೆಳೆಯುತ್ತೆ !

ಸಿಗರೇಟ್ ಪ್ಯಾಕ್ ಮೇಲೆ ಏನೇ ಬರೆದಿದ್ರೂ ಜನರು ಅದರ ಸೇವನೆ ಬಿಡೋದಿಲ್ಲ. ಇದ್ರಿಂದ ಭಯಾನಕ ಖಾಯಿಲೆಗಳು ಒಕ್ಕರಿಸುತ್ತಿವೆ. ಯುಎಸ್ ನಲ್ಲಿ ಈಗ ಆಘಾತಕಾರಿ ಖಾಯಿಲೆ ಬಗ್ಗೆ ಮಾಹಿತಿ ಹೊರ ಬಿದ್ದಿದೆ 
 

Cigarette Smokers Should Be Careful If You Get This Disease Your Tongue Will Turn Green roo

ಆಧುನಿಕ ಆಹಾರ ಪದ್ಧತಿ ಹಾಗೂ ಜೀವನ ಶೈಲಿಯಿಂದಾಗಿ ಅನೇಕ ಹೊಸ ಹೊಸ ಖಾಯಿಲೆಗಳು ಜನರನ್ನು ಬಾಧಿಸುತ್ತಿವೆ. ಚಿಕ್ಕ ಮಕ್ಕಳು, ದೊಡ್ಡವರೆನ್ನದೇ ಎಲ್ಲರನ್ನೂ ಕಂಡು ಕೇಳರಿಯದ ಖಾಯಿಲೆಗಳು ಆವರಿಸುತ್ತಿವೆ. ಕೆಲವರು ದುಶ್ಚಟಗಳ ದಾಸರಾಗಿ ಇಲ್ಲಸಲ್ಲದ ಖಾಯಿಲೆಗಳನ್ನು ಸ್ವತಃ ತಾವೇ ಬರಮಾಡಿಕೊಳ್ಳುತ್ತಾರೆ. ಅದರಿಂದಾಗಿ ಇಂದು ವೈದ್ಯಲೋಕವನ್ನೇ ನಿಬ್ಬೆರಗಾಗಿಸುವಂತಹ ಹೊಚ್ಚ ಹೊಸ ಖಾಯಿಲೆಗಳು ಸೃಷ್ಠಿಯಾಗಿವೆ.

ಮಾಡರ್ನ್ ಲೈಫ್ ಸ್ಟೈಲ್ ಗೆ ಮಾರುಹೋಗಿರುವ ಅನೇಕ ಮಂದಿ ಧೂಮಪಾನ (Smoking) ದ ದಾಸರಾಗಿದ್ದಾರೆ. ಇನ್ಕೆಲವು ಮಂದಿಗೆ ಬೀಡಿ, ಸಿಗರೇಟ್ ಸೇದುವ ಅಭ್ಯಾಸ (practice) ಹಲವು ವರ್ಷದಿಂದ ರೂಢಿಯಲ್ಲಿರುತ್ತದೆ. ಸಿಗರೇಟ್ ಪ್ಯಾಕೆಟ್ ಮೇಲೆ ಸಿಗರೇಟ್ ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ಬರೆದಿದ್ದರೂ ಕೂಡ ಅದನ್ನು ಕಡೆಗಣಿಸಿ ಅನೇಕರು ಈ ಚಟಕ್ಕೆ ಬಲಿಯಾಗಿದ್ದಾರೆ. ನ್ಯೂ ಇಂಗ್ಲೆಂಡ್ ನ ಜರ್ನಲ್ ಆಫ್ ಮೆಡಿಸಿನ್ ನಲ್ಲಿ ಪ್ರಕಟವಾದ ಒಂದು ವರದಿಯ ಪ್ರಕಾರ, ಸಿಗರೇಟ್ (Cigarette) ಅಥವಾ ತಂಬಾಕು ಸೇವನೆಯಿಂದ ನಾಲಗೆಯಲ್ಲಿ ಕೂದಲು ಬೆಳೆಯುವಂತಹ ಒಂದು ಭಯಾನಕ ರೋಗವುಂಟಾಗುತ್ತದೆ ಎನ್ನುವುದು ತಿಳಿದುಬಂದಿದೆ.

ಅಲರಾಂಗೆ ಅಂತ ದಿಂಬಿನ ಕೆಳಗೆ ಮೊಬೈಲ್ ಇಡ್ತೀರಾ? ತುಂಬಾ ಡೇಂಜರ್‌ ಇದು!

ಯಾವುದು ಇದು ಹೊಸ ಖಾಯಿಲೆ? : ಸಿಗರೇಟ್ ಹಾಗೂ ತಂಬಾಕು ಸೇವನೆಯಿಂದ ರಕ್ತದ ಕ್ಯಾನ್ಸರ್, ಮೂತ್ರಕೋಶ, ಗಂಟಲು, ಕರುಳು, ಶ್ವಾಸಕೋಶ, ಗರ್ಭಾಶಯಗಳ ಕ್ಯಾನ್ಸರ್ ಮುಂತಾದವು ಉಂಟಾಗುತ್ತದೆ ಎನ್ನುವುದು ನಮಗೆಲ್ಲ ತಿಳಿದ ವಿಷಯವೇ ಆಗಿದೆ. ಇಷ್ಟೆಲ್ಲ ಅನಾಹುತಮಾಡುವ ತಂಬಾಕಿನ ಬಗ್ಗೆ ತಿಳಿದಿದ್ದರೂ ಜನರು ಅದರ ಸೇವನೆ ಮಾಡುವುದನ್ನು ಬಿಟ್ಟಿಲ್ಲ. ಕ್ಯಾನ್ಸರ್ ನಿಂದಲೇ ಪ್ರತಿವರ್ಷ ಲಕ್ಷ ಲಕ್ಷ ಮಂದಿ ಸಾವನ್ನಪ್ಪುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಸಿಗರೇಟ್ ಸೇವನೆಯಿಂದ ಕ್ಯಾನ್ಸರ್ ಉಂಟಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಆದರೆ ಸಿಗರೇಟ್ ಸೇವನೆಯಿಂದ ನಾಲಿಗೆಯಲ್ಲಿ ಕೂದಲು ಏಳುತ್ತದೆ ಎನ್ನುವುದನ್ನು ನೀವು ಎಲ್ಲೂ ಕೇಳಿರಲಿಕ್ಕಿಲ್ಲ. ಇದೊಂದು ಹೊಸ ಹಾಗೂ ಭಯಾನಕ ರೋಗವಾಗಿದೆ. ಇದು ಸಿಗರೇಟ್ ಸೇವನೆ ಮಾಡುವವರಲ್ಲಿ ಉಂಟಾಗುವ ಒಂದು ಅಪರೂಪದ ರೋಗವಾಗಿದೆ. ಅಮೆರಿಕದ ಓಹಾಯೋದಲ್ಲಿನ ನಿವಾಸಿಯೊಬ್ಬರಲ್ಲಿ ಈ ಖಾಯಿಲೆ ಕಂಡುಬಂದಿದೆ.

ಈ ಖಾಯಿಲೆ ಪ್ರಾರಂಭಿಕ ಹಂತದಲ್ಲಿ ನಾಲಿಗೆಯಲ್ಲಿ ತುರಿಕೆ ಕಂಡುಬರುತ್ತದೆ. ನಂತರ ನಿಧಾನವಾಗಿ ನಾಲಿಗೆಯ ಮೇಲೆ ಕೂದಲು ಏಳಲು ಆರಂಭವಾಗುತ್ತದೆ. ಕೆಲವೇ ದಿನಗಳಲ್ಲಿ ನಾಲಿಗೆಯ ತುಂಬ ಕೂದಲು ಬೆಳೆಯುತ್ತದೆ ಮತ್ತು ಅದರ ಬಣ್ಣ ಹಸಿರಾಗಿರುತ್ತದೆ. ಈ ಖಾಯಿಲೆ ಸಿಗರೇಟ್ ಸೇವನೆ ಮಾಡುವವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಭಾರತದಲ್ಲಿ ಎಲ್ಲೂ ಈ ಖಾಯಿಲೆ ಇದುವರೆಗೆ ವರದಿಯಾಗಿಲ್ಲ. ಆದರೆ ಸಿಗರೇಟ್ ಚಟ ಹೊಂದಿರುವ ಯಾರಿಗಾದರೂ ಇದು ಉಂಟಾಗಬಹುದು ಎಂದು ಕೆಲವು ತಜ್ಞರು ಹೇಳಿದ್ದಾರೆ.

ಸಿಕ್ಕಾಪಟ್ಟೆ ಹೇರ್‌ಫಾಲ್ ಆಗ್ತಿದ್ರೆ ಈ ಹಣ್ಣು ತಿನ್ನಿ, ಬೆಸ್ಟ್ ರಿಸಲ್ಟ್ ಗ್ಯಾರಂಟ

ಎಂಟಿಬಯೋಟಿಕ್ ನಿಂದಲೂ ಹೀಗಾಗುತ್ತಾ? : ಕೆಲವು ತಜ್ಞರು ಸಿಗರೇಟ್ ಸೇವನೆಯಿಂದ ಹೀಗೆ ನಾಲಿಗೆಯ ಮೇಲೆ ಕೂದಲು ಬೆಳೆದಿದೆ ಎಂದು ಹೇಳಿದರೆ, ಮತ್ತೆ  ಕೆಲವು ವೈದ್ಯರು ಒಸಡಿನಲ್ಲಾದ ಇನ್ಫೆಕ್ಷನ್ ನಿಂದ ಹೀಗಾಗಿರಬಹುದೆಂದು ಹೇಳಿದ್ದಾರೆ. ಏಕೆಂದರೆ ಈ ರೋಗಕ್ಕೆ ಒಳಗಾದ ವ್ಯಕ್ತಿ ಕೆಲ ದಿನಗಳ ಹಿಂದೆ ವಸಡಿನ ಸಮಸ್ಯೆಗಾಗಿ ಎಂಟಿಬಯೋಟಿಕ್ ಕೋರ್ಸ್ ತೆಗೆದುಕೊಂಡಿದ್ದ. ಎಂಟಿಬಯೋಟಿಕ್ ರಿಯಾಕ್ಷನ್ ನಿಂದ ಆತನಿಗೆ ಹೀಗೆ ನಾಲಿಗೆಯ ಮೇಲೆ ಕೂದಲು ಬೆಳೆದಿರಬಹುದೆಂದು ವೈದ್ಯರು ಹೇಳಿದ್ದಾರೆ. ನಿಶ್ಚಿತವಾಗಿ ಇಂತಹುದೇ ಕಾರಣದಿಂದ ನಾಲಿಗೆಯ ಮೇಲೆ ಕೂದಲು ಬೆಳೆದಿದೆ ಎಂದು ಹೇಳಲು ಇನ್ನು ಯಾವುದೇ ನಿಖರ ಆಧಾರಗಳು ಸಿಕ್ಕಿಲ್ಲ ಎಂದು ಅವರು ಹೇಳಿದ್ದಾರೆ.
ವ್ಯಕ್ತಿಯ ಶರೀರ ಪ್ರಕೃತಿಯ ಮೇಲೆ ಆತನ ಆರೋಗ್ಯ ಅವಲಂಬಿತವಾಗಿರುತ್ತದೆ. ಎಲ್ಲರಿಗೂ ಎಲ್ಲ ತರಹದ ಔಷಧಿಗಳು ಆಗಿಬರೋದಿಲ್ಲ. ಕೆಲವೊಂದು ಔಷಧಗಳ ಸೇವನೆಯಿಂದ ಅಲರ್ಜಿ, ಇನ್ಫೆಕ್ಷನ್ ಮುಂತಾದವು ಉಂಟಾಗುತ್ತದೆ. ಇವುಗಳಿಂದಲೇ ಎಷ್ಟೋ ರೋಗಗಳು ಆರಂಭವಾಗುತ್ತದೆ. ಕೆಲವೊಮ್ಮೆ ಬೀಡಿ, ಸಿಗರೇಟ್, ಮದ್ಯಪಾನದಂದತಹ ದುಶ್ಚಟಗಳಿಂದಲೂ ಖಾಯಿಲೆಗಳು ಉಂಟಾಗುತ್ತದೆ. ಒಟ್ಟಿನಲ್ಲಿ ವೈದ್ಯಲೋಕಕ್ಕೇ ಸವಾಲೊಡ್ಡುವ ಅನೇಕ ರೋಗಗಳು ಸೃಷ್ಠಿಯಾಗಿರುವುದಂತೂ ನಿಜ.

Latest Videos
Follow Us:
Download App:
  • android
  • ios