Unhealthy Diet: ತೂಕ ಇಳಿಸಿಕೊಳ್ಳುವ ಆತುರದಲ್ಲಿ ಪ್ರಾಣ ಕಳೆದುಕೊಂಡ್ಳು!

ತೂಕ ಇಳಿಸೋದು ಚಿಟಿಕೆ ಹೊಡೆದಷ್ಟು ಸುಲಭವಲ್ಲ. ಪ್ರತಿಯೊಬ್ಬ ವ್ಯಕ್ತಿ, ತಿಂಗಳಲ್ಲಿ ಎಷ್ಟು ತೂಕ ಇಳಿಸಿದ್ರೆ ಬೆಸ್ಟ್ ಎಂಬುದನ್ನು ತಿಳಿದಿರಬೇಕು. ಅತಿಯಾದ ತೂಕ ಇಳಿಕೆ ನಮ್ಮ ಪ್ರಾಣಕ್ಕೆ ಕುತ್ತು ತರುತ್ತೆ.
 

Chinese Fitness Influencer Died During Weight Loss Journey Due To This Unhealthy Ways roo

ತೂಕ ಇಳಿಸ್ಕೊಂಡು, ಫಿಗರ್ ಮೆಂಟೇನ್ ಮಾಡ್ಬೇಕು ಎಂಬುದು ಬಹುತೇಕರ ಕನಸು. ಈಗಿನ ದಿನಗಳಲ್ಲಿ ಬೊಜ್ಜಿನ ಸಮಸ್ಯೆ ಮಾಮೂಲಿ ಎನ್ನುವಂತಾಗಿದೆ. ಸಣ್ಣ ವಯಸ್ಸಿನಲ್ಲಿಯೇ ಜನರು ಅತಿ ಹೆಚ್ಚು ತೂಕದ ಸಮಸ್ಯೆ ಎದುರಿಸುತ್ತಾರೆ. ತೂಕ, ಸೌಂದರ್ಯ ಹಾಳು ಮಾಡುವುದು ಮಾತ್ರವಲ್ಲ, ಹೃದಯ ರೋಗ  ಸೇರಿದಂತೆ ಅನೇಕ ರೋಗಕ್ಕೆ ಆಹ್ವಾನ ನೀಡುತ್ತದೆ. ತಪ್ಪಾದ ಜೀವನ ಶೈಲಿ, ಆಹಾರ ಪದ್ಧತಿ, ಆನುವಂಶಿಕತೆ ಸೇರಿದಂತೆ ತೂಕ ಹೇಗೋ ಏರಿರುತ್ತೆ. ಅದನ್ನು ಒಂದೇ ತಿಂಗಳಲ್ಲಿ ಇಳಿಸ್ತೇವೆ ಅಂದ್ರೆ ಅದು ದುಸ್ಸಾಹಸ. ಅದನ್ನು ಮೂರ್ಖತನವೆಂದು ಕರೆಯಬೇಕು. ತೂಕವನ್ನು ತ್ವರಿತವಾಗಿ ಇಳಿಸೋದ್ರಿಂದ ಅನೇಕ ಸಮಸ್ಯೆ ನಮ್ಮನ್ನು ಕಾಡುತ್ತದೆ. ಆರೋಗ್ಯ ಹದಗೆಡುವುದು ಮಾತ್ರವಲ್ಲ ಅನೇಕ ಸಂದರ್ಭದಲ್ಲಿ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಚೀನಾದಲ್ಲಿ ಯುವತಿಯೊಬ್ಬಳು ತನ್ನ 90 ಕೆ.ಜಿ ತೂಕ ಕಳೆದುಕೊಳ್ಳುವ ಆತುರದಲ್ಲಿ ಪ್ರಾಣ ಬಿಟ್ಟಿದ್ದಾಳೆ. ಅಷ್ಟಕ್ಕೂ ನಡೆದದ್ದು ಏನು ಎಂಬುದನ್ನು ನಾವು ಹೇಳ್ತೇವೆ.

ತೂಕ (Weight) ಇಳಿಸಿಕೊಳ್ಳಲು ಹೋಗಿ ಪ್ರಾಣ ಬಿಟ್ಟ ಯುವತಿ : 21 ವರ್ಷದ ಕುಯಿಹುವಾ ಚೀನಾ (China) ಮೂಲದವಳು. ಆಕೆ 90 ಕೆ.ಜಿ ತೂಕ ಹೊಂದಿದ್ದಳು. ತೂಕ ಇಳಿಕೆಗೆ ಮುಂದಾದ ಕುಯಿಹುವಾ, ಕಠಿಣ ಪರಿಶ್ರಮಕ್ಕೆ ಇಳಿದಿದ್ದಳು. ಕಸರತ್ತು, ವ್ಯಾಯಾಮ (Exercise) ದ ಜೊತೆ ಉಪವಾಸವಿದ್ದು ತೂಕ ಇಳಿಸಲು ಮುಂದಾಗಿದ್ದಳು. ಅದ್ರಲ್ಲಿ ಯಶಸ್ಸು ಕೂಡ ಕಂಡಿದ್ದಳು. ಕೇವಲ 2 ತಿಂಗಳಲ್ಲಿ 25 ಕೆಜಿ ತೂಕ ಇಳಿಸಿಕೊಂಡಿದ್ದಳು. ಆದ್ರೆ ಆಕೆ ಈ ಪ್ರಯತ್ನವೇ ಮುಳುವಾಗಿದೆ. ಆಕೆ ಸಾವನ್ನಪ್ಪಿದ್ದಾಳೆ.

ಸದ್ಗುರು ಸಲಹೆ ಪಾಲಿಸಿದ್ರೆ 100% ತೂಕ ಕಡಿಮೆಯಾಗುತ್ತೆ

ಕುಟುಂಬಸ್ಥರು ಹೇಳೋದೇನು? : ಕುಯಿಹುವಾ ಸಾವಿ (Death) ಗೆ ಆಕೆಯ ವರ್ಕ್ ಔಟ್ ಕಾರಣವೆಂದು ಕುಟುಂಬಸ್ಥರು ಕೂಡ ಹೇಳಿದ್ದಾರೆ. ತ್ವರಿತವಾಗಿ ರಿಸಲ್ಟ್ (Result) ಬರಬೇಕು ಎನ್ನುವ ಕಾರಣಕ್ಕೆ ಕುಯಿಹುವಾ ಸತತ ಪ್ರಯತ್ನ ನಡೆಸುತ್ತಿದ್ದಳಂತೆ. ತೀವ್ರವಾದ ತರಬೇತಿ ಪಡೆಯುತ್ತಿದ್ದ ಕುಯಿಹುವಾ  ಅತಿ ಬಾರದ ವಸ್ತುಗಳನ್ನು ಎತ್ತುತ್ತಿದ್ದರು. ಡಯಟ್ ಮಾಡುವ ಕಾರಣ ಆಕೆಗೆ ತುಂಬಾ ಹಸಿವೆಯಾಗ್ತಿತ್ತು ಎಂದು ಕುಟುಂಬಸ್ಥರು ಹೇಳಿದ್ದಾರೆ. ಅತಿಯಾದ ವರ್ಕ್ ಔಟ್ ಹಾಗೂ ಹಸಿವೇ ಕುಯಿಹುವಾ ಸಾವಿಗೆ ಕಾರಣವಾಗಿದೆ ಎಂದು ಕುಟುಂಬಸ್ಥರು ಸ್ಪಷ್ಟಪಡಿಸಿದ್ದಾರೆ. 

ತಿಂಗಳಿಗೆ ಎಷ್ಟು ತೂಕ ಇಳಿಕೆ ಸರಿ : ತಿಂಗಳಲ್ಲಿ 10 ಕೆ.ಜಿ ತೂಕ ಇಳಿಕೆ, ಐದು ಕೆ.ಜಿ ತೂಕ ಇಳಿಕೆ ಅಂತೆಲ್ಲ ನೀವು ಜಾಹೀರಾತು ನೋಡಿ ಅದನ್ನು ಅನುಸರಿಸಲು ಮುಂದಾಗ್ತೀರಿ. ಆದ್ರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ತೂಕ ಇಳಿಸುವವರು ವರ್ಕ್ ಔಟ್ ಜೊತೆ ತಾಳ್ಮೆ ಹೊಂದಿರಬೇಕು. ತಿಂಗಳಲ್ಲಿ ಹತ್ತಾರು ಕೆಜಿ ತೂಕ ಇಳಿಸೋದು ಸೂಕ್ತವಲ್ಲ. ಒಂದು ತಿಂಗಳಲ್ಲಿ 2 ರಿಂದ 4 ಕೆಜಿ ಕಳೆದುಕೊಳ್ಳುವುದು ಆರೋಗ್ಯಕರ ವಿಧಾನ ಎನ್ನುತ್ತಾರೆ ತಜ್ಞರು. ಈ ತೂಕ ಇಳಿಕೆ ಕೂಡ ತಜ್ಞರ ಮೇಲ್ವಿಚಾರಣೆಯಲ್ಲಿ ನಡೆಯಬೇಕು. ತೂಕ ಇಳಿಕೆ ಭರದಲ್ಲಿ ಜನರು ದೇಹಕ್ಕೆ ಅಗತ್ಯವಿರುವ ಪ್ರೋಟೀನ್, ಕಾರ್ಬೋಹೈಡ್ರೇಡ್, ಕೊಬ್ಬನ್ನು ಸೇವನೆ ಮಾಡೋದಲ್ಲ. ಆದ್ರೆ ಇವೆಲ್ಲವನ್ನೂ ಸಮತೋಲನದಲ್ಲಿ ತೆಗೆದುಕೊಳ್ಳಬೇಕು. ಏಕೆಂದರೆ, ಅವರ ಕೊರತೆಯಿಂದಾಗಿ  ಅನೇಕ ಸಮಸ್ಯೆ ನಮ್ಮನ್ನು ಕಾಡುತ್ತದೆ. 

Weight Loss Tips: ತೂಕ ಇಳಿಸಿಕೊಳ್ಳಲು ಬೆವರು ಇಳಿಸಬೇಕಿಲ್ಲ, ಹೀಗೂ ಮಾಡಿದ್ರೂ ಸಾಕು!

ವ್ಯಾಯಾಮ ಹೀಗಿರಲಿ : ಅನೇಕ ವರ್ಷಗಳಿಂದ ಯಾವುದೇ ವ್ಯಾಯಾಮ ಇಲ್ಲದ ವ್ಯಕ್ತಿ ತೂಕ ಹೆಚ್ಚಾಗ್ತಿದ್ದಂತೆ ಏಕಾಏಕಿ ಅತಿ ಭಾರದ ವಕ್ ಔಟ್ ಮಾಡುವುದ ಸೂಕ್ತವಲ್ಲ. ನಮ್ಮ ದೇಹಕ್ಕೆ ಅಗತ್ಯವಿರುವ ವ್ಯಾಯಾಮ ಮಾಡಬೇಕಾಗುತ್ತದೆ. ತೂಕ ನಷ್ಟಕ್ಕೆ ಬಲ ತರಬೇತಿ, ಕಾರ್ಡಿಯೋ ಮತ್ತು ಯೋಗದ ಸರಿಯಾದ ಮಿಶ್ರಣದ ಅಗತ್ಯವಿರುತ್ತದೆ. ತರಬೇತುದಾರರನ್ನು ಸಂಪರ್ಕಿಸಿ, ಅವರ ಸೂಕ್ತ ಮಾರ್ಗದರ್ಶನದಲ್ಲಿ ನೀವು ವ್ಯಾಯಾಮವನ್ನು ಮಾಡಬೇಕಾಗುತ್ತದೆ. 

Latest Videos
Follow Us:
Download App:
  • android
  • ios