ಶಸ್ತ್ರಚಿಕಿತ್ಸೆ ನಂತ್ರ ಖಿನ್ನತೆ ಕಾಡೋದೇಕೆ? ದೈಹಿಕ ಬದಲಾವಣೆ ಇದಕ್ಕೆ ಕಾರಣವೇ?
ಕೆಲವೊಂದು ಅನಾರೋಗ್ಯಕ್ಕೆ ಶಸ್ತ್ರಚಿಕಿತ್ಸೆಯೇ ಅಂತಿಮ ಮದ್ದಾಗಿರುತ್ತದೆ. ಈ ಸಮಯದಲ್ಲಿ ವೈದ್ಯರ ಸಲಹೆಯಂತೆ ರೋಗಿ ನಡೆದುಕೊಳ್ಳಬೇಕು. ಆದ್ರೆ ಶಸ್ತ್ರಚಿಕಿತ್ಸೆ ನಂತ್ರ ಕಾಡುವ ಕೆಲ ಸಮಸ್ಯೆಗೆ ರೋಗಿಯೇ ಪರಿಹಾರ ಪಡೆಯಬೇಕು.
ದೇಹದಲ್ಲಿ ಸಂಭವಿಸುವ ಅನೇಕ ಸಮಸ್ಯೆಗಳಿಗೆ ಶಸ್ತ್ರಚಿಕಿತ್ಸೆಯಿಂದ ಪರಿಹಾರ ಇದೆ. ಶಸ್ತ್ರಚಿಕಿತ್ಸೆಯು ರೋಗ ಗುಣಪಡಿಸುವ ಒಂದು ವಿಧಾನವಾಗಿದೆ. ಶಸ್ತ್ರಚಿಕಿತ್ಸೆಯ ನಂತರ ವ್ಯಕ್ತಿಗೆ ದೈಹಿಕ ಮತ್ತು ಮಾನಸಿಕ ಬೆಂಬಲ ಅಗತ್ಯವಿರುತ್ತದೆ. ಕೆಲವು ಶಸ್ತ್ರಚಿಕಿತ್ಸೆಗಳ ನಂತರ ಒಬ್ಬ ವ್ಯಕ್ತಿ ದೈನಂದಿನ ಕಾರ್ಯಗಳನ್ನು ನಿರ್ವಹಿಸುವಲ್ಲಿ ತೊಂದರೆ ಅನುಭವಿಸುತ್ತಾನೆ. ಈ ಸಮಯದಲ್ಲಿ ಅವರಿಗೆ ಬೇರೆಯವರ ಸಹಾಯದ ಅಗತ್ಯವಿರುತ್ತದೆ.
ಕೆಲವರಿಗೆ ಅವರ ಆಪ್ತರು ಸಂಪೂರ್ಣ ಬೆಂಬಲ ನೀಡುವ ಕಾರಣ ಖಿನ್ನತೆ (Depression) ಮತ್ತು ಒತ್ತಡ (Pressure) ದಿಂದ ಅವರು ಸುಲಭವಾಗಿ ಹೊರಗೆ ಬರಬಹುದು. ಕೆಲವರಿಗೆ ಇದು ಸಿಗುವುದಿಲ್ಲ. ಮಾನಸಿಕ ಬೆಂಬಲ ಸಿಗದೆ ಇದ್ದಾಗ ಅವರು ಖಿನ್ನತೆಗೆ ಒಳಗಾಗಬಹುದು. ಇದರ ಹಿಂದೆ ಹಲವು ಕಾರಣಗಳಿದೆ. ಶಸ್ತ್ರಚಿಕಿತ್ಸೆಯ ನಂತರ ಕಾಡುವ ಖಿನ್ನತೆಗೆ ಕಾರಣವೇನು ಮತ್ತೆ ಪರಿಹಾರ ಏನು ಎಂಬುದರ ವಿವರ ಇಲ್ಲಿದೆ.
ಶಸ್ತ್ರಚಿಕಿತ್ಸೆ (Surgery) ಯ ನಂತರ ಕಾಡುವ ಖಿನ್ನತೆಗೆ ಕಾರಣ :
ಅವಲಂಬನೆ : ಶಸ್ತ್ರಚಿಕಿತ್ಸೆಯು ಸಾಮಾನ್ಯವಾಗಿ ರೋಗಿಯ ಜೀವನದಲ್ಲಿ ಅನೇಕ ಬದಲಾವಣೆ ತರುತ್ತದೆ. ಆತನಿಗೆ ಎದ್ದು ತನ್ನೆಲ್ಲ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಮೊದಲಿನಂತೆ ಓಡಾಡಲು, ಮಾತನಾಡಲು, ಆಹಾರ ಸೇವನೆ ಮಾಡಲು ಸಾಧ್ಯವಾಗೋದಿಲ್ಲ. ಹಾಗಾಗಿ ಆತ ದೈನಂದಿನ ಕಾರ್ಯಗಳಿಗಾಗಿ ಇತರರನ್ನು ಅವಲಂಬಿಸುತ್ತಾನೆ. ಈ ಸಮಯದಲ್ಲಿ ತನ್ನನ್ನು ಇತರರಿಗೆ ಹೊರೆ ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಇದರಿಂದ ಆತಂಕ, ಖಿನ್ನತೆ ಅವರನ್ನು ಕಾಡುತ್ತದೆ.
ದೇಹದ ತೂಕಕ್ಕೆ ತಕ್ಕಂತೆ ನೀರು ಕುಡಿದ್ರೆ, ವೈಟ್ ಲಾಸ್ ಮಾಡ್ಕೊಳ್ಳೋದು ತುಂಬಾ ಈಝಿ
ದೈಹಿಕ ಅಸ್ವಸ್ಥತೆ - ನೋವು : ಶಸ್ತ್ರಚಿಕಿತ್ಸೆಯ ನಂತರ ದೈಹಿಕ ಅಸ್ವಸ್ಥತೆ ಮತ್ತು ನೋವು ಕಾಡುವುದಿದೆ. ನಿರಂತರವಾದ ನೋವು ಹತಾಶೆ, ಅಸಹಾಯಕತೆ ಮತ್ತು ಹತಾಶತೆಯ ಭಾವನೆ ಖಿನ್ನತೆಗೆ ಕಾರಣವಾಗುವ ಅಪಾಯವಿದೆ.
ಭಯ : ಅನೇಕ ಬಾರಿ ಭಯ ಕೂಡ ಜನರನ್ನು ಖಿನ್ನತೆಗೆ ನೂಕುತ್ತದೆ. ಮುಂದೆನಾಗಬಹುದು ಎಂಬ ಭಯ ಶಸ್ತ್ರಚಿಕಿತ್ಸೆಯ ನಂತರ ಕಾಡಲು ಶುರುವಾಗುತ್ತದೆ. ಇದು ಮಾನಸಿಕ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಒಂದೇ ಕಡೆ ಕುಳಿತು ಸಮಯ ನೂಗುವ ಸಂದರ್ಭದಲ್ಲಿ ಹಳೆಯ ಘಟನೆ, ತಪ್ಪುಗಳ ಬಗ್ಗೆ ಆಲೋಚನೆ ಮಾಡುವ ರೋಗಿಗೆ ನಿರಂತರ ಭಯ ಆವರಿಸುತ್ತದೆ. ಇದು ಖಿನ್ನತೆಗೆ ದಾರಿಯಾಗುತ್ತದೆ.
ದೇಹದ ಬದಲಾವಣೆ : ಕೆಲ ಶಸ್ತ್ರಚಿಕಿತ್ಸೆ ನಂತ್ರ ಮುಖದಲ್ಲಿ ಹಾಗೂ ದೇಹದಲ್ಲಿ ಬದಲಾವಣೆ ಕಾಣಿಸಿಕೊಳ್ಳುತ್ತದೆ. ಮೊದಲಿದ್ದ ಉತ್ಸಾಹ, ನಗು, ಆತ್ಮವಿಶ್ವಾಸ ಮುಖದಿಂದ ಮಾಯವಾಗಿರುತ್ತದೆ. ಇದು ಕೂಡ ಅವರನ್ನು ಖಿನ್ನತೆಗೆ ನೂಕುವ ಸಾಧ್ಯತೆ ಹೆಚ್ಚಿರುತ್ತದೆ.
ಔಷಧಿಗಳ ಅಡ್ಡಪರಿಣಾಮ (Side Effects of Medicines) : ಶಸ್ತ್ರಚಿಕಿತ್ಸೆಯ ನಂತರ ಅನೇಕ ಮಾತ್ರೆ – ಔಷಧಿಗಳನ್ನು ಸೇವನೆ ಮಾಡಬೇಕು. ಕೆಲವು ಔಷಧಿಗಳು ಮನಸ್ಥಿತಿ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ನಿದ್ರೆಯ ಸಮಯದಲ್ಲಿ ಬದಲಾವಣೆ, ಹಸಿವು ಕೂಡ ಖಿನ್ನತೆಗೆ ದಾರಿಯಾಗುತ್ತದೆ.
ರಾತ್ರಿ ಹೊತ್ತು ಕಾಲುಗಳು ಹೀಗಾಗುತ್ತಿದ್ದರೆ, ದೇಹದಲ್ಲಿ ಕೊಲೆಸ್ಟೆರಾಲ್ ಹೆಚ್ಚಿದೆ ಎಂದರ್ಥ! ಪರೀಕ್ಷೆ ಮಾಡಿಸಿ
ಶಸ್ತ್ರಚಿಕಿತ್ಸೆ (Surgery) ನಂತ್ರ ಖಿನ್ನತೆ (Depression) ತಡೆಯಲು ಹೀಗೆ ಮಾಡಿ : ನಿಮ್ಮ ಪರಿಸ್ಥಿತಿ ಬಗ್ಗೆ ವೈದ್ಯರ ಜೊತೆ ಚರ್ಚೆ ನಡೆಸಬೇಕು. ಅವರು ನೀಡಿದ ಮಾತ್ರೆಗಳನ್ನು ಸರಿಯಾಗಿ ಸೇವನೆ ಮಾಡಿದಲ್ಲಿ ನೀವು ಬೇಗ ಮೊದಲಿನ ಸ್ಥಿತಿಗೆ ಮರಳುತ್ತೀರಿ. ಒಂಟಿಯಾಗಿ ಸಮಯ ಕಳೆಯುವ ಬದಲು ಆದಷ್ಟು ನಿಮ್ಮ ಸುತ್ತಮುತ್ತ ನಿಮ್ಮವರು ಇರುವಂತೆ ನೋಡಿಕೊಳ್ಳಿ. ಅವರ ಜೊತೆ ಮಾತನಾಡಿ. ಶಸ್ತ್ರಚಿಕಿತ್ಸೆ ನಂತ್ರ ನಿಮ್ಮ ದೇಹದಲ್ಲಾಗುವ ಬದಲಾವಣೆಯನ್ನು ಒಪ್ಪಿಕೊಳ್ಳಿ. ಸರಿಯಾಗಿ ಆಹಾರ ಸೇವನೆ ಮಾಡಿ. ಏಳರಿಂದ ಎಂಟು ಗಂಟೆ ಯಾವುದೇ ಟೆನ್ಷನ್ ಇಲ್ಲದೆ ನಿದ್ರೆ ಮಾಡಿ. ಶಸ್ತ್ರಚಿಕಿತ್ಸೆ ನಂತ್ರ ಖಿನ್ನತೆ ಸಾಮಾನ್ಯ ಸಮಸ್ಯೆಯಾಗಿದೆ. ಅದನ್ನು ಮತ್ತಷ್ಟು ಆಳವಾಗಲು ಬಿಡದೆ ಆರಂಭದಲ್ಲಿಯೆ ತೆಗೆದುಹಾಕೋದು ಉತ್ತಮ.