ಮಹಿಳೆಯರಿಗಾಗಿ ಕ್ಯಾನ್ಸರ್ ಲಸಿಕೆ, 6 ತಿಂಗಳೊಳಗೆ ಭಾರತಕ್ಕೆ, ಮೊದಲು ನೀಡೋದು ಯಾರಿಗೆ?

ಕೇಂದ್ರ ಸಚಿವರು ಈ ಲಸಿಕೆ ಸ್ತನ, ಬಾಯಿ ಮತ್ತು ಗರ್ಭಕೋಶದ ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ಈಗಾಗಲೇ 12,500 ಆಯುಷ್ ಆರೋಗ್ಯ ಕೇಂದ್ರಗಳಿವೆ ಮತ್ತು ಸರ್ಕಾರವು ಈ ಸಂಖ್ಯೆಯನ್ನು ಹೆಚ್ಚಿಸಲು ಯೋಜಿಸಿದೆ ಎಂದು ಸಚಿವರು ಹೇಳಿದ್ದಾರೆ.

 

Cancer Vaccine for Women Arriving in India Within Six Months gow

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಭಾರತ ಮಹತ್ವದ ಹೆಜ್ಜೆ ಇಡಲಿದೆ. ಮಹಿಳೆಯರಲ್ಲಿ ಕಾಣಬರುವ ಕ್ಯಾನ್ಸರ್ ತಡೆಗಟ್ಟಲು ಲಸಿಕೆ ಬರುತ್ತಿದೆ. ಈ ಲಸಿಕೆ ಕೆಲವೇ ತಿಂಗಳುಗಳಲ್ಲಿ ಭಾರತೀಯ ಮಾರುಕಟ್ಟೆಗೆ ಬರಲಿದೆ. ಈ ಲಸಿಕೆಯನ್ನು ಯಾರು ಪಡೆಯುತ್ತಾರೆ? ಕೇಂದ್ರ ಸರ್ಕಾರ ಏನು ಹೇಳಿದೆ ಎಂದು ತಿಳಿಯಿರಿ. 

ಮಂಗಳವಾರ ಕೇಂದ್ರ ಸಚಿವ ಪ್ರತಾಪ್ ರಾವ್ ಯಾದವ್ ಕ್ಯಾನ್ಸರ್ ಲಸಿಕೀಕರಣದ ಬಗ್ಗೆ ಮಾತನಾಡಿ, ಕ್ಯಾನ್ಸರ್ ತಡೆಗಟ್ಟಲು ಸರ್ಕಾರ ಲಸಿಕೆ ತರಲಿದೆ ಎಂದು ಹೇಳಿದರು. ಈ ಲಸಿಕೆ ಮುಂದಿನ ಐದು-ಆರು ತಿಂಗಳಲ್ಲಿ ಸಿದ್ಧವಾಗುವ ನಿರೀಕ್ಷೆಯಿದೆ. ಆರಂಭದಲ್ಲಿ 9-16 ವರ್ಷದ ಹುಡುಗಿಯರಿಗೆ ಈ ಲಸಿಕೆ ನೀಡಲಾಗುವುದು.  ಪ್ರಸ್ತುತ ಪ್ರಯೋಗಗಳು ನಡೆಯುತ್ತಿವೆ ಮತ್ತು ಲಸಿಕೆ ಸಂಶೋಧನೆ ಬಹುತೇಕ ಪೂರ್ಣಗೊಂಡಿದೆ  ಎಂದುಕೇಂದ್ರ ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ಆಯುಷ್ (ಸ್ವತಂತ್ರ ಉಸ್ತುವಾರಿ) ರಾಜ್ಯ ಸಚಿವರು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.

ಕ್ಯಾನ್ಸರ್ ಲಸಿಕೆ ಅಭಿವೃದ್ಧಿಪಡಿಸಿದ ರಷ್ಯಾ, ಉಚಿತವಾಗಿ ವಿತರಿಸಲು ನಿರ್ಧಾರ!

ದೇಶದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಹೇಳಿದ ಸಚಿವರು ,  ಈ ಸಮಸ್ಯೆಯನ್ನು ಪರಿಹರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈಗ 30 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಆಸ್ಪತ್ರೆಯಲ್ಲಿ ತಪಾಸಣೆ ಮಾಡಲಾಗುವುದು. ನಂತರ ಡೇ-ಕೇರ್ ಕ್ಯಾನ್ಸರ್ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ಯೋಜಿಸಿದೆ. ಈಗಾಗಲೇ ಕೇಂದ್ರವು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಔಷಧಿಗಳ ಮೇಲಿನ ಸುಂಕವನ್ನು ಕಡಿಮೆ ಮಾಡಿದೆ.

ಈ ಲಸಿಕೆ ಸ್ತನ, ಬಾಯಿ ಮತ್ತು ಗರ್ಭಕೋಶದ ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ . ಈಗಾಗಲೇ 12,500 ಆಯುಷ್ ಆರೋಗ್ಯ ಕೇಂದ್ರಗಳಿವೆ ಮತ್ತು ಸರ್ಕಾರವು ಈ ಸಂಖ್ಯೆಯನ್ನು ಹೆಚ್ಚಿಸಲು ಯೋಜಿಸಿದೆ ಎಂದು ಸಚಿವರು ಹೇಳಿದ್ದಾರೆ. ಕ್ಯಾನ್ಸರ್ ಲಸಿಕೆಯ ಉದ್ದೇಶವು ದೇಹದ ನೈಸರ್ಗಿಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಕ್ಯಾನ್ಸರ್ ಅನ್ನು ತಡೆಯುತ್ತದೆ ಎಂದು ಸಂಶೋದನೆಯಲ್ಲಿ ತಿಳಿದುಬಂದಿದೆ.

ಕ್ಯಾನ್ಸರ್‌ಗೆ ಮದ್ದು ಕಂಡುಹಿಡಿದ ಮಾಡರ್ನಾ: ಚಿಕಿತ್ಸೆಯಲ್ಲಿ ಹೊಸ ಮೈಲಿಗಲ್ಲು?

ಕ್ಯಾನ್ಸರ್‌ನ ಆರಂಭವನ್ನು  ತಡೆಗಟ್ಟುವ ಲಸಿಕೆಗಳನ್ನು ವಿನ್ಯಾಸಗೊಳಿಸಲಾಗಿದೆ, ಆದರೆ ಚಿಕಿತ್ಸಕ ಲಸಿಕೆಗಳನ್ನು ಕ್ಯಾನ್ಸರ್ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಇದು ಮುಖ್ಯವಾಗಿ ಗೆಡ್ಡೆಯ ಗಾತ್ರವನ್ನು ಕಡಿಮೆ ಮಾಡುತ್ತದೆ ಮತ್ತು ಅದು ಬೇರೆಡೆ ಹರಡುವುದನ್ನು ತಡೆಯುತ್ತದೆ. ಈ ಕ್ಯಾನ್ಸರ್ ಲಸಿಕೆಗಳು ಇನ್ನೂ ಅಭಿವೃದ್ಧಿ ಹಂತದಲ್ಲಿವೆ ಎಂದು ತಿಳಿದುಬಂದಿದೆ. ಮಂಗಳವಾರ ಕೇಂದ್ರ ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ಆಯುಷ್ ರಾಜ್ಯ ಸಚಿವ ಪ್ರತಾಪ್ ರಾವ್ ಯಾದವ್, ಪರಿಣಾಮವನ್ನು ತಡೆಯಲು ಈ ಲಸಿಕೆ ಮುಂದಿನ ಐದು-ಆರು ತಿಂಗಳಲ್ಲಿ ಮಹಿಳೆಯರಿಗೆ ಲಭ್ಯವಿರುತ್ತದೆ ಎಂದು ಹೇಳಿದ್ದಾರೆ.

Latest Videos
Follow Us:
Download App:
  • android
  • ios