Healthy Food: ಸೇಬು ಸೇವನೆಗೆ ಯಾವುದು ಬೆಸ್ಟ್ ಟೈಂ ?
ಹಣ್ಣು ಆರೋಗ್ಯಕ್ಕೆ ಒಳ್ಳೆಯದು, ಅದ್ರಲ್ಲೂ ಸೇಬು ದಿ ಬೆಸ್ಟ್. ಹಾಗಿರುವಾಗ ಎಲ್ಲರ ಮನೆಯಲ್ಲೂ ಸೇಬು ಇರುತ್ತೆ. ಊಟವಾದ್ಮೇಲೆ ಸೇಬು ತಿನ್ನೋರು ಬಹಳಷ್ಟು ಮಂದಿಯಿದ್ದಾರೆ. ಆದ್ರೆ ಸೇಬು ತಿನ್ನಲು ಇದು ಒಳ್ಳೆ ಸಮಯ ಅಲ್ವೇ ಅಲ್ಲ ಎಂಬುದು ಗೊತ್ತಾ?
ದಿನಕ್ಕೊಂದು ಸೇಬು ತಿನ್ನಿ, ವೈದ್ಯರಿಂದ ದೂರವಿರಿ ಎನ್ನುವ ಮಾತಿದೆ. ಸೇಬು ಆರೋಗ್ಯಕ್ಕೆ ಬಹಳ ಒಳ್ಳೆಯದು. ವ್ಯಕ್ತಿಯ ರೋಗನಿರೋಧಕ ಶಕ್ತಿ ಹೆಚ್ಚಾಗುವ ಜೊತೆಗೆ ಸದೃಢ ಆರೋಗ್ಯಕ್ಕೆ ಸೇಬು ಬಹಳ ಒಳ್ಳೆಯದು. ಆರೋಗ್ಯಕರ ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳು ಸೇಬು ಹಣ್ಣಿನಲ್ಲಿದೆ. ಸೇಬು ಹಣ್ಣಿನಲ್ಲಿ ಪ್ರೋಟೀನ್, ಫೈಬರ್, ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಕಾರ್ಬೋಹೈಡ್ರೇಟ್‌ಗಳು ಸಮೃದ್ಧವಾಗಿವೆ. ಹಾಗಾಗಿಯೇ ವೈದ್ಯರು ಸೇಬು ಹಣ್ಣು ತಿನ್ನುವಂತೆ ಸಲಹೆ ನೀಡುತ್ತಾರೆ. ಉತ್ತಮ ಆರೋಗ್ಯಕ್ಕಾಗಿ ಅನೇಕರು ಸೇಬು ಹಣ್ಣನ್ನು ತಿನ್ನುತ್ತಾರೆ. ಕೆಲವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುತ್ತಾರೆ. ಮತ್ತೆ ಕೆಲವರು ರಾತ್ರಿ ಮಲಗುವ ಮೊದಲು ಸೇಬು ಹಣ್ಣನ್ನು ತಿನ್ನುತ್ತಾರೆ. ಇನ್ನು ಕೆಲಸವರು ಮಧ್ಯಾಹ್ನ ಸೇಬು ಹಣ್ಣನ್ನು ತಿನ್ನುತ್ತಾರೆ.
ಊಟವಾದ್ಮೇಲೆ ಹಣ್ಣು ತಿನ್ಬೇಕು ಎಂಬ ಒಂದು ಅಲಿಖಿತ ನಿಯಮವಿದೆ. ಅದನ್ನು ಈಗ್ಲೂ ಅನೇಕರು ಪಾಲಿಸಿಕೊಂಡು ಬರ್ತಿದ್ದಾರೆ. ಊಟದ ನಂತ್ರ ಸೇಬು ಹಣ್ಣು ತಿನ್ನೋದು ಎಷ್ಟು ಸರಿ? ಸೇಬು ಹಣ್ಣಿನ ಪೌಷ್ಟಿಕಾಂಶ ಸಂಪೂರ್ಣವಾಗಿ ದೇಹ ಸೇರುತ್ತಾ ಎಂಬೆಲ್ಲ ಪ್ರಶ್ನೆ ಕಾಡೋದು ಸಹಜ. ನಾವಿಂದು ಸೇಬು ಹಣ್ಣನ್ನು ಯಾವಾಗ ಸೇವನೆ ಮಾಡ್ಬೇಕು ಹಾಗೆ ಊಟದ ನಂತ್ರ ಸೇಬು ಸೇವನೆ ಎಷ್ಟು ಪರಿಣಾಮಕಾರಿ ಎಂಬುದನ್ನು ಹೇಳ್ತೇವೆ.
SUGAR FREE ಮೋದಕ, ಸಕ್ಕರೆ ಕಾಯಿಲೆ ಇರೋರು ಭಯ ಪಡ್ದೆ ತಿನ್ಬೋದು
ಊಟ (Lunch) ದ ನಂತ್ರ ಸೇಬು (Apple) ತಿನ್ನೋದು ಎಷ್ಟು ಸರಿ ? : ಊಟವಾದ ತಕ್ಷಣ ಹಣ್ಣು ತಿನ್ಮೇಕು ಹಾಗಾಗಿ, ಅನೇಕರು ಊಟ ಮಾಡಿದ ನಂತ್ರ ಸೇಬು ಕತ್ತರಿಸಿ ತಿನ್ನುತ್ತಾರೆ. ಆದ್ರೆ ತಜ್ಞರ ಪ್ರಕಾರ ಇದು ತಪ್ಪು. ಊಟವಾದ ತಕ್ಷಣ ಸೇಬು ಹಣ್ಣು ತಿನ್ನುವುದು ಒಳ್ಳೆಯದಲ್ಲ. ಊಟವಾದ ಎರಡು ಗಂಟೆ ನಂತ್ರ ಸೇಬು ಹಣ್ಣನ್ನು ತಿನ್ನಬೇಕು. ಇಲ್ಲವೆಂದ್ರೆ ಸೇಬು ಹಣ್ಣನ ಸಂಪೂರ್ಣ ಪೋಷಕಾಂಶ ದೇಹ ಸೇರುವುದಿಲ್ಲ.
ಹಣ್ಣು (Fruit) ದೇಹದಲ್ಲಿ ಸುಲಭವಾಗಿ ಜೀರ್ಣವಾಗುತ್ತದೆ. ಆದ್ರೆ ಊಟವಾದ ತಕ್ಷಣ ಸೇಬು ಹಣ್ಣು ತಿಂದ್ರೆ ದೇಹಕ್ಕೆ ಹೊರೆಯಾಗುತ್ತದೆ. ದೇಹ, ಆಹಾರ ಮತ್ತು ಸೇಬು ಹಣ್ಣು ಎರಡನ್ನೂ ಜೀರ್ಣಿಸಿಕೊಳ್ಳಬೇಕಾಗುತ್ತದೆ. ಇದ್ರಿಂದ ಸೇಬು ಹಣ್ಣಿನ ಪೋಷಕಾಂಶ ನಮ್ಮ ದೇಹವನ್ನು ಸರಿಯಾಗಿ ಸೇರುವುದಿಲ್ಲ. ಹಾಗಾಗಿ ಸೇಬು ಹಣ್ಣಿನ ಸಂಪೂರ್ಣ ಪ್ರಯೋಜನ ನಮಗಾಗಬೇಕು ಅಂದ್ರೆ ನಾವು ಊಟವಾದ 2 ಗಂಟೆ ನಂತ್ರ ಸೇಬು ಹಣ್ಣನ್ನು ತಿನ್ನಬೇಕು.
Kitchen Hacks: ತರಕಾರಿಗಳ ರಾಜ ಆಲೂಗಡ್ಡೆ ಖರೀದಿ ಹೀಗಿರಲಿ
ಸೇಬು ಹಣ್ಣು ತಿನ್ನಲು ಸರಿಯಾದ ಸಮಯ ಯಾವುದು : ಬಹುತೇಕರಿಗೆ ಯಾವ ಯಾವ ಆಹಾರವನ್ನು ಯಾವಾಗ ಸೇವನೆ ಮಾಡಬೇಕು ಎಂಬುದು ತಿಳಿದಿಲ್ಲ. ಸೇಬು ಹಣ್ಣು ತಿನ್ಬೇಕು, ಹಾಗಾಗಿ ಯಾವಾಗ ಬೇಕಾದ್ರೂ ಹಣ್ಣನ್ನು ತಿನ್ನುತ್ತಾರೆ. ಆದ್ರೆ ಇದು ತಪ್ಪು. ಸೇಬು ಹಣ್ಣನ್ನು ಉಪಹಾರವಾಗಿ ಸೇವನೆ ಮಾಡುವವರಿದ್ದಾರೆ. ಉಪಹಾರದ ಜೊತೆ ಸೇಬು ಸೇವನೆ ಮಾಡುವ ಬದಲು ಉಪಹಾರದ ಬದಲಾಗಿ ಸೇಬು ಹಣ್ಣನ್ನು ತಿನ್ನಬಹುದು. ಸೇಬು ಹಣ್ಣನ್ನು ತಿನ್ನಲು ಉತ್ತಮ ಸಮಯವೆಂದರೆ ಊಟಕ್ಕೆ ಮೊದಲು. ಊಟಕ್ಕೆ 45 ನಿಮಿಷಗಳ ಮೊದಲು ಸೇಬು ಹಣ್ಣನ್ನು ತಿನ್ನಬೇಕು. ಈ ಸಮಯದಲ್ಲಿ ಸೇಬು ಸೇವನೆ ಮಾಡಿದ್ರೆ ಅದ್ರ ಎಲ್ಲ ಪೋಷಕಾಂಶ ನಿಮ್ಮ ದೇಹ ಸೇರುತ್ತದೆ.
ದೇಹವು ಸೇಬಿನಲ್ಲಿರುವ ಎಲ್ಲಾ ಜೀವಸತ್ವಗಳು ಮತ್ತು ಖನಿಜಗಳನ್ನು ಹೀರಿಕೊಳ್ಳುತ್ತದೆ. ನಿದ್ರೆ ಅಥವಾ ಒತ್ತಡಕ್ಕೆ ಸಂಬಂಧಿಸಿದ ಸಮಸ್ಯೆ ಇರುವವರು ಅವಶ್ಯಕವಾಗಿ ಸೇಬು ಹಣ್ಣನ್ನು ತಿನ್ನಬೇಕು. ಮಲಬದ್ಧತೆ ಸಮಸ್ಯೆಯಿರುವವರಿಗೂ ಸೇಬು ಹಣ್ಣು ಒಳ್ಳೆಯದು. ಸೇಬು ಹಣ್ಣು ಜೀರ್ಣಾಂಗ ಕ್ರಿಯೆಯನ್ನು ಸುಧಾರಿಸುತ್ತದೆ. ಸೇಬು ಹಣ್ಣನ್ನು ಸಿಪ್ಪೆ ಸಮೇತ ತಿನ್ನುವುದು ಕೂಡ ಹೆಚ್ಚು ಪ್ರಯೋಜನಕಾರಿ. ಸೇಬು ಹಣ್ಣನ್ನು ಸ್ವಚ್ಛಗೊಳಿಸಿ ನಂತ್ರ ಸೇವನೆ ಮಾಡ್ಬೇಕಾಗುತ್ತದೆ.