ಕೆಲವರು ಫಿಟ್ ಆಗಿರ್ತಾರೆ. ಆದ್ರೆ ಮುಖದ ಆಕಾರ ಮಾತ್ರ ಸರಿಯಾಗಿರುವುದಿಲ್ಲ. ಊದಿಕೊಂಡಿರುವ ಮುಖ ಅವರ ಸೌಂದರ್ಯ ಹಾಳು ಮಾಡುತ್ತದೆ. ದೇಹದ ಬೇರೆ ಭಾಗಗಳ ಜೊತೆ ಮುಖಕ್ಕೆ ಸಂಬಂಧಿಸಿದ ವ್ಯಾಯಾಮ ಮಾಡಿದ್ರೆ ಮುಖದ ಕಾಂತಿ ಹೆಚ್ಚಾಗುತ್ತದೆ. ಇದು ನಿಮ್ಮ ವಯಸ್ಸನ್ನು ಮುಚ್ಚಿಡುವ ಕೆಲಸ ಮಾಡುತ್ತದೆ.
ದೇಹ (Body) ದ ತೂಕ (Weight) ಇಳಿಸಿಕೊಳ್ಳುವವರ ಮೊದಲ ಗುರಿ ಹೊಟ್ಟೆಯಾಗಿರುತ್ತದೆ. ಅನೇಕರು ದೊಡ್ಡದಾಗಿ ಬಂದ ಹೊಟ್ಟೆ (Stomach) ಬಗ್ಗೆ ಹೆಚ್ಚು ಚಿಂತಿತರಾಗಿರುತ್ತಾರೆ. ನಂತ್ರದ ಸ್ಥಾನ ಸೊಂಟಕ್ಕೆ. ಬಹುತೇಕರು ಮುಖದ ಬಗ್ಗೆ ಗಮನ ಹರಿಸುವುದಿಲ್ಲ. ಆದ್ರೆ ಕೊಬ್ಬಿ (Fat) ನ ಕಾರಣಕ್ಕೆ ನಿಮ್ಮ ಮುಖದ ಆಕಾರವೂ ಬದಲಾಗಿರುತ್ತದೆ. ನಿಮ್ಮ ತೂಕ ಕಡಿಮೆಯಿದ್ದರೂ ಅನೇಕ ಬಾರಿ ಮುಖದ ಮೇಲಿರುವ ಕೊಬ್ಬು ನಿಮ್ಮ ಸೌಂದರ್ಯವನ್ನು ಹಾಳು ಮಾಡುತ್ತದೆ. ಮುಖದ ಅಂದ ಹೆಚ್ಚಿಸಲು ನೀವು ಮುಖದ ಮೇಲಿರುವ ಕೊಬ್ಬನ್ನು ಕಡಿಮೆ ಮಾಡ್ಬೇಕು. ಅದಕ್ಕೆ ಮುಖದ ವ್ಯಾಯಾಮಗಳನ್ನು ಮಾಡಬೇಕು. ದೇಹದ ಉಳಿದ ಭಾಗಗಳಿಗೆ ವ್ಯಾಯಾಮ ನೀಡುವಂತೆ ಮುಖಕ್ಕೂ ನಿಯಮಿತವಾಗಿ ವ್ಯಾಯಾಮ ಮಾಡಿದರೆ ಮುಖದ ಕೊಬ್ಬು ಕರಗಿ ಆಕರ್ಷಕ ಮುಖವನ್ನು ನೀವು ಪಡೆಯಬಹುದು. ಇಂದು ಮುಖದ ವ್ಯಾಯಾಮಗಳು ಯಾವುವು ಎಂಬುದನ್ನು ನಾವು ಹೇಳ್ತೇವೆ.
ಮುಖಕ್ಕೆ ವ್ಯಾಯಾಮ :
ಬಲೂನ್ ಫೋಜ್ ವ್ಯಾಯಾಮ : ಬಾಲಿವುಡ್ ಡಾನ್ಸರ್, ಫಿಟ್ನೆಸ್ ಗೆ ಹೆಸರು ಮಾಡಿರುವ ನಟಿ ಮಲೈಕಾ ಅರೋರಾ ಕೂಡ ಈ ವ್ಯಾಯಾಮವನ್ನು ಮಾಡ್ತಾರಂತೆ. ಮುಖದ ಸ್ನಾಯುಗಳಿಗೆ ಇದು ಅಧ್ಬುತ ವ್ಯಾಯಾಮ ಎನ್ನುತ್ತಾರೆ ಅವರು. ರಕ್ತಪರಿಚಲನೆಯನ್ನು ಸುಗಮಗೊಳಿಸುತ್ತದೆ. ಮುಖದ ಆಕಾರವನ್ನು ಮಾರ್ಪಡಿಸುತ್ತದೆ. ಹುಬ್ಬು ಮತ್ತು ದವಡೆಗಳನ್ನು ಎತ್ತುತ್ತದೆ.
ಇದನ್ನು ಮಾಡುವ ವಿಧಾನ : ಮೊದಲು ನೇರವಾಗಿ ಕುಳಿತುಕೊಳ್ಳಬೇಕು. ಬೆನ್ನು ನೇರವಾಗಿರಬೇಕು. ಬಾಯಿಯೊಳಗೆ ಗಾಳಿಯನ್ನು ತುಂಬಬೇಕು. 10 ಸೆಕೆಂಡಿನ ಕಾಲ ಬಾಯೊಳಗೆ ಗಾಳಿಯನ್ನು ತುಂಬಿಟ್ಟುಕೊಳ್ಳಬೇಕು. ಉಸಿರನ್ನು ಹಿಡಿದುಕೊಳ್ಳಬೇಕು. ನಂತ್ರ ಉಸಿರನ್ನು ಬಿಟ್ಟು ಬಾಯಿಯೊಳಗಿನ ಗಾಳಿಯನ್ನು ಹೊರಗೆ ಹಾಕಬೇಕು. ಈ ವ್ಯಾಯಾಮವನ್ನು ನೀವು ಅನೇಕ ಬಾರಿ ಪುನರಾವರ್ತಿಸಬೇಕು.
ಬಲೂನ್ ಫೋಸ್ ವ್ಯಾಯಾಮದ ಲಾಭಗಳು : ಬಾಯಿಯೊಳಗೆ ಗಾಳಿ ತುಂಬುವುದ್ರಿಂದ ಬಾಯಿ ಬಲೂನಿನ ಆಕಾರಕ್ಕೆ ಬರುತ್ತದೆ. ಹೀಗೆ ಮಾಡುವುದ್ರಿಂದ ಮುಖಕ್ಕೆ ಉತ್ತಮ ವ್ಯಾಯಾಮ ಸಿಗುತ್ತದೆ. ಮುಖದ ಊದುವಿಕೆ ಕಡಿಮೆಯಾಗುತ್ತದೆ. ಬಾಯಿ ಮತ್ತು ದವಡೆಯ ಸುತ್ತಲಿನ ಪ್ರದೇಶ ಬಿಗಿಯಾಗುತ್ತದೆ.
ಹೊಳೆಯುವ ಚರ್ಮಕ್ಕಾಗಿ ಫೇಸ್ ಟ್ಯಾಪಿಂಗ್ : ಫೇಸ್ ಟ್ಯಾಪಿಂಗ್ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಇದು ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ. ಇದು ವಯಸ್ಸಾಗುವುದನ್ನು ಮತ್ತು ಸುಕ್ಕುಗಳನ್ನು ತಡೆಯುತ್ತದೆ. ಈ ಅಭ್ಯಾಸವು ಚರ್ಮದ ಉಸಿರಾಟದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಆಮ್ಲಜನಕದ ಹರಿವನ್ನು ಸುಧಾರಿಸುತ್ತದೆ.
ಸದಾ ಆರೋಗ್ಯವಾಗಿರಲು ನ್ಯಾಚುರೋಪತಿಯೆಂಬ ಪಾರಂಪರಿಕ ಚಿಕಿತ್ಸೆ
ಫೇಸ್ ಟ್ಯಾಪಿಂಗ್ ಮಾಡುವ ವಿಧಾನ : ಮುಖದ ಕೆಲ ಭಾಗಗಳಿಗೆ ನಿಧಾನವಾಗಿ ಟ್ಯಾಪ್ ಮಾಡುವುದನ್ನು ಫೇಸ್ ಟ್ಯಾಪಿಂಗ್ ಎನ್ನಲಾಗುತ್ತದೆ. ಮುಖದ ಹುಬ್ಬಿನ ಒಳ ಭಾಗ, ಮೂಗಿನ ಬದಿಯಲ್ಲಿ ಟ್ಯಾಪ್ ಮಾಡ್ಬೇಕು. ಕಣ್ಣುಗಳ ಕೆಳಗೆ ಕೆನ್ನೆಯ ಮೂಳೆಗಳನ್ನು ಟ್ಯಾಪ್ ಮಾಡಿ. ಮೂಗಿನ ಕೆಳಭಾಗ ಮತ್ತು ಮೇಲಿನ ತುಟಿಯ ನಡುವಿನ ಜಾಗವನ್ನು ಟ್ಯಾಪ್ ಮಾಡಿ. ಗಲ್ಲದ ಮಧ್ಯ ಭಾಗಕ್ಕೆ ಟ್ಯಾಪ್ ಮಾಡಿ.
ಫಿಶ್ ಫೋಸ್ : ಈ ಭಂಗಿಯು ಕುತ್ತಿಗೆಯ ಪ್ರದೇಶವನ್ನು ವಿಸ್ತರಿಸುತ್ತದೆ. ದವಡೆ ಮತ್ತು ಗಲ್ಲವನ್ನು ಟೋನ್ ಮಾಡಲು ಸಹಾಯ ಮಾಡುತ್ತದೆ. ಇದು ಕೆನ್ನೆಗಳಿಗೆ ಸುಲಭ ಮತ್ತು ಉತ್ತಮವಾದ ಮುಖದ ವ್ಯಾಯಾಮವಾಗಿದೆ. ನೀವು ಇದನ್ನು ಎಲ್ಲಿ ಬೇಕಾದರೂ ಮಾಡಬಹುದು. ಈ ವ್ಯಾಯಾಮವು ಕೆನ್ನೆಯ ಸ್ನಾಯುಗಳನ್ನು ಟೋನ್ ಮಾಡಲು ಮತ್ತು ಹಿಗ್ಗಿಸಲು ಸಹಾಯ ಮಾಡುತ್ತದೆ.
SUMMER HEALTH TIPS: ಸನ್ ಬರ್ನ್ ಅನ್ನು ತೊಡೆದುಹಾಕಲು ಇಲ್ಲಿವೆ ದೇಸಿ ಮಾರ್ಗಗಳು
ಫಿಶ್ ಫೋಸ್ ಮಾಡುವ ವಿಧಾನ : ಕೆನ್ನೆಗಳ ಒಳ ಭಾಗವನ್ನು ಹಲ್ಲಿನ ಮಧ್ಯೆ ಎಳೆದುಕೊಳ್ಳಬೇಕು. 10 ಸೆಕೆಂಡುಗಳ ಕಾಲ ಹಾಗೆಯೇ ಇರಿಸಬೇಕು. ನಂತರ ಬಿಡಬೇಕು. ಇದನ್ನು ಮಾಡುವುದ್ರಿಂದ ಸಾಕಷ್ಟು ಅನುಕೂಲವಿದೆ. ಇದು ಮುಖದ ಸಿಪ್ಪೆಸುಲಿಯುವುದನ್ನು ಕಡಿಮೆ ಮಾಡುತ್ತದೆ. ಚರ್ಮದ ಕೆಳಗಿರುವ ಸ್ನಾಯುಗಳನ್ನು ಎತ್ತುವ ಮತ್ತು ಬಲಪಡಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಸೂಕ್ಷ್ಮ ರೇಖೆಗಳು ಮತ್ತು ಸುಕ್ಕು ಕಡಿಮೆಯಾಗುತ್ತದೆ.
