Kids Health : ಮಕ್ಕಳ ಬುದ್ಧಿ ಫಾಸ್ಟ್ ಆಗ್ಬೇಕೆಂದ್ರೆ ಇದನ್ನು ನೀಡಿ

ಈಗ ಓದಿದ್ದು ಅರೆ ಕ್ಷಣಕ್ಕೆ ಮರೆತು ಹೋಗುತ್ತೆ, ಪರೀಕ್ಷೆ ಬರೆಯೋದೇ ಕಷ್ಟವಾಗಿದೆ,ಜ್ಞಾಪಕ ಶಕ್ತಿ ತುಂಬಾ ಕಡಿಮೆ ಎನ್ನುವ ಮಕ್ಕಳ ಪಾಲಕರು ತಲೆಬಿಸಿ ಮಾಡಿಕೊಳ್ಳಬೇಕಾಗಿಲ್ಲ. ಗಿಡಮೂಲಿಕೆ ಮೂಲಕ ಮಕ್ಕಳ ಬುದ್ಧಿಶಕ್ತಿ ಹೆಚ್ಚಿಸಬಹುದು. ಕಂಪ್ಯೂಟರ್ ಗಿಂತ ಮಕ್ಕಳ ಬುದ್ಧಿ ಚುರುಕಾಗುವಂತೆ ಮಾಡ್ಬಹುದು. 
 

Brahmi Ghrita Uses For Kids To Boost Memory power

ಮಕ್ಕಳ ಬುದ್ಧಿ ಚುರುಕಾಗ್ಬೇಕು, ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ಎಲ್ಲವನ್ನು ತಿಳಿದಿರಬೇಕೆಂದು ಪಾಲಕರು ಬಯಸ್ತಾರೆ. ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಮಕ್ಕಳು ಮುಂದಿರಬೇಕು ಎಂಬುದು ಪಾಲಕರ ಆಸೆ. ಆದ್ರೆ ಎಲ್ಲ ಮಕ್ಕಳು ಒಂದೇ ರೀತಿ ಇರ್ಬೇಕೆಂದೇನಿಲ್ಲ.  ಪ್ರತಿ ಮಗುವಿನ ಸಾಮರ್ಥ್ಯ ವಿಭಿನ್ನವಾಗಿರುತ್ತದೆ. ಎಲ್ಲ ಮಗುವೂ ಬುದ್ಧಿವಂತರಾಗಿರಲು ಸಾಧ್ಯವಿಲ್ಲ. ಒಂದು ಮಗು ಆಟದಲ್ಲಿ ಚುರುಕಾಗಿದ್ರೆ ಮತ್ತೊಂದು ಮಗು ಪಾಠದಲ್ಲಿ ಚುರುಕಾಗಿರುತ್ತದೆ. ಕೆಲ ಮಕ್ಕಳಿಗೆ ವಿದ್ಯಾಭ್ಯಾಸ ಕಷ್ಟವಾಗುತ್ತದೆ. ನೆನಪಿನ ಶಕ್ತಿ ಕಡಿಮೆಯಿರುತ್ತದೆ. ಶಾಲೆಯ ಪಠ್ಯ ಮಾತ್ರವಲ್ಲ ಆಪ್ತರ ಹೆಸರು ಕೂಡ ಅವರಿಗೆ ನೆನಪಿರುವುದಿಲ್ಲ. ಅವರ  ಸ್ಮರಣ ಶಕ್ತಿ ದುರ್ಬಲವಾಗಿರುತ್ತದೆ.  ನಿಮ್ಮ ಮಗುವಿಗೆ ಕೂಡ ಓದಿದ್ದೆಲ್ಲ ಮರೆತು ಹೋಗುತ್ತೆ ಅಂದ್ರೆ ಚಿಂತೆ ಬೇಡ. ಮಗುವಿನ ಜ್ಞಾಪಕಶಕ್ತಿಯನ್ನು ಹೆಚ್ಚಿಸಲು ಕೆಲವೊಂದು ಸರಳ ಉಪಾಯಗಳಿವೆ. ಅವುಗಳನ್ನು ಪಾಲಿಸುವ ಮೂಲಕ ನೀವು ಮಕ್ಕಳ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಬಹುದು. ಮಗುವಿನ ಬುದ್ಧಿ ಕಂಪ್ಯೂಟರ್ ಗಿಂತ ಪಾಸ್ಟ್ ಆಗಿ ಓಡಬೇಕೆಂದ್ರೆ ಏನು ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ.

ಮಕ್ಕಳ (Children) ಬುದ್ಧಿ ಶಕ್ತಿ ಕಡಿಮೆಯಿದೆ ಎನ್ನುವ ಕಾರಣಕ್ಕೆ ಕೆಲ ಪಾಲಕರು ವೈದ್ಯರ ಬಳಿ ಹೋಗ್ತಾರೆ. ಮಕ್ಕಳಿಗೆ ಔಷಧಿಗಳನ್ನು ನೀಡ್ತಾರೆ. ಆದ್ರೆ ಮಕ್ಕಳ ಆಹಾರದಲ್ಲಿಯೇ ಔಷಧವಿದೆ. ಮಗುವು ಜೀರ್ಣಿಸಿಕೊಳ್ಳಲು ಸುಲಭವಾದ ಮತ್ತು ಹಸಿವನ್ನು ನೀಗಿಸುವ ಆಹಾರವನ್ನು ನೀಡಿದ್ರೆ ಮಕ್ಕಳಿಗೆ ಮತ್ತೆ  ಪೂರಕಗಳ ಅಗತ್ಯವಿಲ್ಲ. ಏಕೆಂದರೆ ದೇಹವು ಆಹಾರದಲ್ಲಿರುವ ಪೋಷಕಾಂಶಗಳನ್ನು ಹೀರಿಕೊಂಡು ಮಕ್ಕಳಿಗೆ ಶಕ್ತಿ ನೀಡುತ್ತದೆ.  

ಮಕ್ಕಳ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಬ್ರಾಹ್ಮಿ ಘೃತ (Brahmi Ghrita) ಬಹಳ ಒಳ್ಳೆಯ ಗಿಡಮದ್ದಾಗಿದೆ. ಮಕ್ಕಳಿಗೆ ಮಾತ್ರೆ, ಔಷಧಿಗಿಂತ ಬ್ರಾಹ್ಮಿ ಘೃತ ಬೆಸ್ಟ್ ಎನ್ನುತ್ತಾರೆ ಆಯುರ್ವೇದ ತಜ್ಞರು. 

ಬ್ರಾಹ್ಮೀ ಘೃತ ಎಂದರೇನು ? : ಬ್ರಾಹ್ಮಿ ಘೃತ  ತುಪ್ಪದ ರೂಪದಲ್ಲಿ ಇರುತ್ತದೆ. ಇದು ಅತ್ಯಂತ ಜನಪ್ರಿಯ ಆಯುರ್ವೇದ ಔಷಧವಾಗಿದೆ (Ayurveda Medicine). ಇದನ್ನು ಪಂಚಕರ್ಮ ಪ್ರಕ್ರಿಯೆಯಲ್ಲಿ ಬಳಸಲಾಗುತ್ತದೆ. ಬುದ್ಧಿಶಕ್ತಿ, ಜ್ಞಾಪಕಶಕ್ತಿ (Memory Power) ಮತ್ತು ಮಾತನಾಡುವ ಶಕ್ತಿಯನ್ನು ಹೆಚ್ಚಿಸಲು ಈ ಔಷಧಿಯನ್ನು ಬಳಸಲಾಗುತ್ತದೆ. ಇದ್ರಿಂದ ಯಾವುದೇ ಅಡ್ಡಪರಿಣಾಮವಿಲ್ಲ. 

ಮಗುವಿನ ಬೆಳವಣಿಗೆಗೆ ಬೇಕು ಡಾರ್ಕ್ ಚಾಕೊಲೇಟ್!

ಬ್ರಾಹ್ಮಿಯನ್ನು ಮಕ್ಕಳಿಗೆ ಹೇಗೆ ನೀಡುವುದು ? : ನಿಮಗೆ ಮಾರುಕಟ್ಟೆಯಲ್ಲಿಯೇ ಬ್ರಾಹ್ಮಿ ಘೃತ ಹೆಸರಿನ ಗಿಡಮೂಲಿಕೆ ಸಿಗುತ್ತದೆ. ಅದನ್ನು ನೀವು ಮಕ್ಕಳಿಗೆ ನೀಡಬಹುದು. ಬ್ರಾಹ್ಮಿ ಘೃತ ಸೇವನೆ ನಂತ್ರ ಮಕ್ಕಳಿಗೆ ಒಂದು ಲೋಟ ಹಾಲನ್ನು ನೀಡಬೇಕು. ಮಕ್ಕಳ ಮೆದುಳು ಮತ್ತು ಸ್ಮರಣೆಯನ್ನು ಹೆಚ್ಚಿಸಲು ಸುರಕ್ಷಿತ ಗಿಡಮೂಲಿಕೆ ಔಷಧಿ ಇದಾಗಿದೆ. ಎಡಿಎಚ್ ಡಿ ಸಮಸ್ಯೆ ಹೊಂದಿದ್ದ ಮಕ್ಕಳು ಈ ಔಷಧಿಯಿಂದ ಪರಿಹಾರ ಕಂಡಿದ್ದಾರೆಂದು ಅಧ್ಯಯನವೊಂದರಲ್ಲಿ ಹೇಳಲಾಗಿದೆ. ಮಾರುಕಟ್ಟೆಯಲ್ಲಿ ಸಾಕಷ್ಟು ಕಂಪನಿಗಳು ಬ್ರಾಹ್ಮಿ ಘೃತವನ್ನು ಮಾರಾಟ ಮಾಡ್ತಿವೆ. ಅದ್ರಲ್ಲಿ ವೈದ್ಯರತ್ನಂ, ಸೀತಾರಾಮ್ ಅಥವಾ ಕೇರಳ ಆಯುರ್ವೇದದ ಬ್ರಾಹ್ಮಿ ಘೃತವನ್ನು ಸೇವಿಸುವುದು ಸೂಕ್ತವೆಂದು ವೈದ್ಯರು ಹೇಳ್ತಾರೆ. 

HEALTHY LIFESTYLE: ತಿಂಡಿಗೆ ಬ್ರೆಡ್, ಬಿಸ್ಕತ್ ತಿಂತೀರಾ? ಬೇಡ, ಇವತ್ತೇ ಬಿಟ್ಬಿಡಿ

ಬ್ರಾಹ್ಮಿ ಘೃತದ ಲಾಭಗಳು : ಮೊದಲೇ ಹೇಳಿದಂತೆ ಬ್ರಾಹ್ಮಿ ಘೃತ ಮಕ್ಕಳಿಗೆ ಬಹಳ ಒಳ್ಳೆಯದು. ಇದು ಆಯುರ್ವೇದ ಔಷಧವಾಗಿದೆ. ಮಕ್ಕಳ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ. ಒತ್ತಡವನ್ನು ಕಡಿಮೆ ಮಾಡುವ ಕೆಲಸವನ್ನು ಬ್ರಾಹ್ಮಿ ಘೃತ ಮಾಡುತ್ತದೆ. ಬ್ರಾಹ್ಮಿ ಘೃತ ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ. ಈ ಆಯುರ್ವೇದ ಔಷಧವನ್ನು ಮನಸ್ಸಿನ ಆಯಾಸ, ಒತ್ತಡ (Stress), ಖಿನ್ನತೆ (Depression), ಆತಂಕ,ಅಪಸ್ಮಾರ, ನರಶೂಲೆ, ತೊದಲುವಿಕೆ, ಶಬ್ದಗಳನ್ನು ಉಚ್ಚರಿಸುವಲ್ಲಿ ತೊಂದರೆ, ಉಚ್ಚಾರಣೆಯಲ್ಲಿ ಸಮಸ್ಯೆ ಸೇರಿದಂತೆ ಅನೇಕ  ಚಿಕಿತ್ಸೆಗೆ ಇದನ್ನು ಬಳಸಲಾಗುತ್ತದೆ.ನಿಮ್ಮ ಮಗುವಿನ ಜ್ಞಾಪಕ ಶಕ್ತಿ ಕಡಿಮೆಯಿದ್ದರೆ ನೀವು ಮಗುವಿಗೆ ಇದನ್ನು ನೀಡಬಹುದು. ಮಗುವಿಗೆ ಬೇರೆ ಯಾವುದೇ ಸಮಸ್ಯೆಯಿದ್ದಲ್ಲಿ ವೈದ್ಯರ ಸಲಹೆ ಮೇರೆಗೆ ಇದನ್ನು ನೀಡುವುದು ಒಳ್ಳೆಯದು. 

 

Brahmi Ghrita Uses For Kids To Boost Memory power


 

Latest Videos
Follow Us:
Download App:
  • android
  • ios