‘ಈ ಹುಡುಗಿ ನನ್ನ ಕಣ್ಣಲ್ಲಿ ನೀರು ತರಿಸಿದಳು!’ ಹೀಗಂದಿದ್ದು ಬಾಲಿವುಡ್‌ ನಿರ್ದೇಶಕ ಅನುರಾಗ್‌ ಕಶ್ಯಪ್‌. ಇವರ ಚೋಕ್ಡ್ ಸಿನಿಮಾದಲ್ಲಿ ಅದ್ಭುತವಾಗಿ ಅಭಿನಯಿಸಿದ ಸಯಾಮಿ ಖೇರ್‌ ಬಗ್ಗೆ ಈ ಪ್ರಶಂಸೆಯ ಮಾತುಗಳು. 

ವೆಬ್‌ ಸೀರೀಸ್‌ ‘ಸ್ಪೆಷಲ್‌ ಆಫ್ಸ್‌’ನಲ್ಲೂ ನಟನೆ ಮೂಲಕ ಗಮನ ಸೆಳೆದವರು ಸಯಾಮಿ. ಇವರೆಲ್ಲ ವರ್ಕೌಟ್‌ಗೆ ಸಾಕ್ಷಿಯಾಗೋ ಗೆಳೆಯ ರಾಜು. ಈ ರಾಜು ವ್ಯಕ್ತಿಯಲ್ಲ ಸುಂದರವಾದ ನವಿಲು, ಹಾಗಾಗಿ ಈಕೆ ಪಿಕಾಕ್‌ ಗರ್ಲ್.

62ನೇ ವಯಸ್ಸಿನಲ್ಲೂ ಫಿಟ್‌ ಆಗಿರುವ ನೀತು ಸಿಂಗ್ ಸಿಕ್ರೇಟ್‌ ಏನು?

ಇನ್‌ಸ್ಟಾದಲ್ಲಿ ಸಯಾಮಿ ತಮ್ಮ ವರ್ಕೌಟ್‌ ಡೀಟೈಲ್ಸ್‌ ಕೊಟ್ಟಿದ್ದಾರೆ. ಅದು ನಮ್ಮನ್ನೂ ಫಿಟ್‌ನೆಸ್‌ನತ್ತ ಪುಶ್‌ ಮಾಡುವಂತಿದೆ.

View post on Instagram

- ನಮ್ಮ ಮನೆಯ ಸುತ್ತ ಸುಮಾರು 300 ಮೀಟರ್‌ಗಳಷ್ಟುಖಾಲಿ ಜಾಗ ಇದೆ. ಲಾಕ್‌ಡೌನ್‌ ಟೈಮ್‌ನಲ್ಲಿ ಅಲ್ಲಿ ರನ್ನಿಂಗ್‌ ಮಾಡುತ್ತಿದ್ದೆ.

- ಹುಡುಗಿಗೆ ಪ್ರೊಪೋಸ್‌ ಮಾಡೋ ಭಂಗಿಯಲ್ಲಿ ನಿಲ್ಲೋದು ಮೇಲೆಳೋದನ್ನು ಟೈಮ್‌ ಇದ್ದಾಗ ಮಾಡಿ. ಸ್ನಾಯುಗಳ ಫಿಟ್‌ನೆಸ್‌ಗೆ ಇದು ಉತ್ತಮ.

- ಬಸ್ಕಿ ಹೊಡಿಯೋ ರೀತಿ ಕುಕ್ಕರಗಾಲಲ್ಲಿ ಕೂರೋದು, ಮೇಲೇಳೋದು ಮಾಡಿ. ದೇಹ ಸ್ಟ್ರಾಂಗ್‌ ಆಗುತ್ತೆ.

View post on Instagram

- ಪುಶ್‌ಅಪ್‌ಅನ್ನು ನಾನು ಮಿಸ್‌ ಮಾಡೋದೇ ಇಲ್ಲ. ಅಂಗೈ ನೆಲಕ್ಕೂರಿ ಕಾಲುಗಳನ್ನು ಹಿಂದಕ್ಕೆ ಚಾಚಿ ಕಾಲು ಬೆರಳು ಹಾಗೂ ಅಂಗೈಯಲ್ಲಿ ಇಡೀ ದೇಹದ ಭಾರ ಬಿಡೋದು ಮೇಲೇಳೋದು ಮಾಡ್ತಿದ್ದರೆ ಹೊಟ್ಟೆಕರುಗುತ್ತೆ.

- ಮಲಗಿ ಕಾಲುಗಳನ್ನು ಹಿಂದಕ್ಕೆಳೆದುಕೊಳ್ಳಿ. ಮಲಗಿ, ಮೇಲಕ್ಕೇಳಿ. ದೇಹದ ಸಮತೋಲಕ್ಕೆ ಇದು ಉತ್ತಮ.