ಚಿಕಿತ್ಸೆ ನೀಡುವಾಗ ತುಟಿಯನ್ನೇ ಕಟ್ ಮಾಡಿದ ಬೆಂಗಳೂರಿನ ವೈದ್ಯ, ಪರಿಹಾರ ನೀಡಲು ನ್ಯಾಯಾಲಯ ಆದೇಶ
ಆಸ್ಪತ್ರೆಯಲ್ಲಿ ಎಡಟಟ್ಟುಗಳಾಗೋದು ಹೊಸತೇನಲ್ಲ. ಸರ್ಜರಿ ಮಾಡುವಾಲಂತೂ ವೈದ್ಯರು ಕೆಲವೊಮ್ಮೆ ಏನೆಲ್ಲಾ ಅವಾಂತರ ಮಾಡಿಕೊಳ್ಳುತ್ತಾರೆ. ಆದ್ರೆ ಇಲ್ಲೊಂದೆಡೆ ವೈದ್ಯರು ಚಿಕಿತ್ಸೆ ನೀಡುವಾಗ ಮಹಿಳೆಯ ತುಟಿಯನ್ನೇ ಕತ್ತರಿಸಿದ್ದಾರೆ.
ಬೆಂಗಳೂರು: ಆರ್ಥೊಡಾಂಟಿಕ್ ಚಿಕಿತ್ಸೆ ನೀಡುವ ಪ್ರಕ್ರಿಯೆಯಲ್ಲಿ ದಂತ ವೈದ್ಯರೊಬ್ಬರು ಆಕಸ್ಮಿಕವಾಗಿ ಬೆಂಗಳೂರಿನ ಮಹಿಳೆಯ ತುಟಿಗಳನ್ನು ಕತ್ತರಿಸಿ ಎಡವಟ್ಟು ಮಾಡಿಕೊಂಡಿದ್ದಾರೆ. ಆ ನಂತರ ಇನ್ನೊಬ್ಬ ವೈದ್ಯರು ಮಹಿಳೆಗೆ ಐದು ಹೊಲಿಗೆಗಳು ಮತ್ತು ಪ್ಲಾಸ್ಟಿಕ್ ಸರ್ಜರಿ ಮಾಡಿದ್ದಾರೆ. ಘಟನೆಯಿಂದ ಆಘಾತಕ್ಕೊಳಗಾದ ಮಹಿಳೆ ಗ್ರಾಹಕ ನ್ಯಾಯಾಲಯದಲ್ಲಿ ದಂತ ವೈದ್ಯರ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಗ್ರಾಹಕ ನ್ಯಾಯಾಲಯ ರೋಗಿಯ ಬಗ್ಗೆ ಸಾಂದರ್ಭಿಕ ಮತ್ತು ವೃತ್ತಿಪರವಲ್ಲದ ವರ್ತನೆಗೆ ಅವರನ್ನು ಹೊಣೆಗಾರರನ್ನಾಗಿಸಿ 60,000 ರೂ, ಪರಿಹಾರ ನೀಡುವಂತೆ ಆದೇಶಿಸಿದೆ.
ಘಟನೆಯ ವಿವರ:
ರಾಮಮೂರ್ತಿನಗರದ 32 ವರ್ಷದ ಮಹಿಳೆ (Woman) 2020ರ ಜೂನ್ 13ರ ಸಂಜೆ ಹೊರಮಾವಿನಲ್ಲಿರುವ ಶ್ಯೂರ್ ಸ್ಮೈಲ್ ಡೆಂಟಲ್ ಕೇರ್‌ಗೆ ಹೋಗಿದ್ದಾರೆ. ಈ ಹಿಂದೆಯೇ ಪರಿಚಯವಿದ್ದ ಆರ್ಥೊಡಾಂಟಿಸ್ಟ್ ವಿನೋದ್ ಪಟ್ಟಾಭಿರಾಮನ್ ಬಳಿ ಚಿಕಿತ್ಸೆ (Treatment) ಪಡೆದಿದ್ದಾರೆ. ಮಹಿಳೆಯ ಮುಂಭಾದಲ್ಲಿರುವ ಹಲ್ಲಿನ ಮೇಲೆ ಆರ್ಥೊಡಾಂಟಿಕ್ಸ್ ಮಾಡುತ್ತಿದ್ದಾಗ ಡೆಂಟಲ್ ಬ್ಲೇಡ್ ಯಂತ್ರವನ್ನು ಬಳಸುವಾಗ ಆಕಸ್ಮಿಕವಾಗಿ ಆಕೆಯ ಮೇಲಿನ ತುಟಿಯನ್ನು (Lips) ಕತ್ತರಿಸಿದ್ದಾರೆ.
ನಾಲಿಗೆ ಸರ್ಜರಿಗೆ ತೆರಳಿದ್ದ ಬಾಲಕಗೆ ಸುನ್ನತ್, ಆಸ್ಪತ್ರೆ ಲೈಸೆನ್ಸ್ ಅಮಾನತು
ಕನ್ನಡಿಯಲ್ಲಿ ಮುಖ ನೋಡಲು ಬಿಡಲ್ಲಿಲ್ಲ
ತುಟಿಯ ಭಾಗದಲ್ಲಿ ದೊಡ್ಡ ಗಾಯವಾಗಿ ರಕ್ತ ಹರಿಯಲು ಆರಂಭವಾಗಿತ್ತು. ಗಾಬರಿಗೊಂಡ ಮಹಿಳೆ ತನ್ನ ಗಾಯವನ್ನು ನೋಡಲು ಕನ್ನಡಿ ಕೊಡುವಂತೆ ವೈದ್ಯರನ್ನು ಕೇಳಿದ್ದಾರೆ. ಆದರೆ ವೈದ್ಯರು ಕನ್ನಡಿ ಕೊಡಲು ನಿರಾಕರಿಸಿದ್ದಾರೆ. ಇದು ಕೇವಲ ಸಣ್ಣ ಗಾಯ (Injury) ಎಂದು ಹೇಳಿ ಬ್ಯಾಂಡೇಜ್ ಹಾಕಿ ಮನೆಗೆ ಕಳುಹಿಸಿದ್ದಾರೆ. ಚಿಕಿತ್ಸೆಗೆ (Treatment) ಶುಲ್ಕವಾಗಿ ಐದು ಸಾವಿರ ಪಡೆದರು ಎಂದು ತಿಳಿದುಬಂದಿದೆ.
ಮಹಿಳೆ ಮನೆಗೆ ಬಂದು ತುಟಿ ಕತ್ತರಿಸಿ ಹೋಗಿರುವುದನ್ನು ನೋಡಿ ಗಾಬರಿಯಾಗಿದ್ದಾರೆ. ಬ್ಲೀಡಿಂಗ್ ಸಹ ನಿಂತಿಲ್ಲವಾಗಿದ್ದ ಕಾರಣ ಬೇರೆ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಹೋಗಿದ್ದಾರೆ. ವೈದ್ಯರು ಪರಿಶೀಲಿಸಿ ತಕ್ಷಣವೇ ಐದು ಹೊಲಿಗೆಗಳನ್ನು ಹಾಕಬೇಕೆಂದು ತಿಳಿಸಿದ್ದಾರೆ. ನಂತರ ಮಹಿಳೆ ಚಿಕಿತ್ಸೆ ಪಡೆದುಕೊಂಡು ಮನೆಗೆ ವಾಪಾಸಾಗಿದ್ದಾರೆ. ಆ ನಂತರ ಪತಿ, ಆಕೆಯ ಹಳೆಯ ವೈದ್ಯರನ್ನು ಭೇಟಿ ಮಾಡಿ ಪರಿಸ್ಥಿತಿ ವಿವರಿಸಿದ್ದಾರೆ. ಆದರೂ ವೈದ್ಯರು (Doctor) ತಪ್ಪೊಪ್ಪಿಕೊಳ್ಳಲು ನಿರಾಕರಿಸಿದ್ದಾರೆ. ಮಹಿಳೆ ಎರಡು ದಿನಗಳ ನಂತರ ಬ್ಯಾಂಡೇಜ್ ತೆಗೆದರೂ ತುಟಿಯಿಂದ ಮೂಗಿನವರೆಗೆ ದೊಡ್ಡ ಗಾಯದ ಗುರುತು ಹಾಗೆಯೇ ಇತ್ತು.
ಅಯ್ಯೋ ದೇವ್ರೇ..ಎಡಗಾಲಿನಲ್ಲಿ ನೋವಿದ್ದ ಮಹಿಳೆಯ ಬಲಗಾಲಿಗೆ ಶಸ್ತ್ರಚಿಕಿತ್ಸೆ ಮಾಡಿದ ಡಾಕ್ಟರ್ಸ್!
ವೈದ್ಯರು 60,000 ರೂ, ಪರಿಹಾರ ನೀಡುವಂತೆ ಆದೇಶಿಸಿದ ನ್ಯಾಯಾಲಯ
ಹೀಗಾಗಿ, ಮಹಿಳೆ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದಾರೆ. 2020ರ ಜೂನ್ 26ರಂದು ದಂತ ವೈದ್ಯರಿಗೆ ಲೀಗಲ್ ನೋಟಿಸ್ ಕಳುಹಿಸಿದರು. ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವನ್ನು ಸಂಪರ್ಕಿಸಿ ಸುಮಾರು 30 ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿದರು. ಮಹಿಳೆ ದಾಖಲಿಸಿದ ಪ್ರಕರಣದ ವಿಚಾರಣೆ ಸೆಪ್ಟೆಂಬರ್ 2020ರಲ್ಲಿ ಆರಂಭವಾಯಿತು. ಈ ಸಂದರ್ಭದಲ್ಲಿ ದಂತ ವೈದ್ಯರ ಪರ ವಕೀಲರು 'ಇದು ಚಿಕಿತ್ಸೆ ನೀಡುವ ಸಂದರ್ಭ ಉಂಟಾದ ಗಾಯ, ವೈದ್ಯರು ಇದನ್ನು ನಿರ್ಲಕ್ಷ್ಯದಿಂದ ಅಥವಾ ಉದ್ದೇಶಪೂರ್ವಕವಾಗಿ ಮಾಡಿಲ್ಲ' ಎಂದು ವಾದಿಸಿದರು.
ಗ್ರಾಹಕ ನ್ಯಾಯಾಲಯ (Consumer court) ಈ ಬಗ್ಗೆ ಪರಿಶೀಲನೆ ನಡೆಸಿ, ರೋಗಿಯ ಬಗ್ಗೆ ಸಾಂದರ್ಭಿಕ ಮತ್ತು ವೃತ್ತಿಪರವಲ್ಲದ ವರ್ತನೆಗೆ ಅವರನ್ನು ಹೊಣೆಗಾರರನ್ನಾಗಿಸಿ 60,000 ರೂ, ಪರಿಹಾರ ನೀಡುವಂತೆ ಆದೇಶಿಸಿದೆ. ಆದರೆ ಪರಿಹಾರ ಸಿಕ್ರೂ ಮಹಿಳೆ ತುಟಿ ಸರಿಯಾಗಿಲ್ಲವೆಂಬ ಚಿಂತೆಯಲ್ಲಿದ್ದಾರೆ.