ಅಯ್ಯೋ ದೇವ್ರೇ..ಎಡಗಾಲಿನಲ್ಲಿ ನೋವಿದ್ದ ಮಹಿಳೆಯ ಬಲಗಾಲಿಗೆ ಶಸ್ತ್ರಚಿಕಿತ್ಸೆ ಮಾಡಿದ ಡಾಕ್ಟರ್ಸ್!
ಡಾಕ್ಟರ್ಸ್ ಎಡವಟ್ಟು ಮಾಡಿಕೊಳ್ಳೋದು ಹೊಸದೇನಲ್ಲ. ತಪ್ಪಾದ ಟ್ಯಾಬ್ಲೆಟ್ಸ್ ಬರೆದುಕೊಡೋದು, ತಪ್ಪಾದ ಜಾಗದಲ್ಲಿ ಆಪರೇಷನ್ ಮಾಡೋದು, ಸರ್ಜರಿಯಾದ ಬಳಿಕ ಕತ್ತರಿಯನ್ನು ಹೊಟ್ಟೆಯೊಳಗೇ ಬಿಡೋದು ಮುಂತಾದ ಎಡವಟ್ಟನ್ನು ಮಾಡಿಕೊಳ್ತಾರೆ. ಆದ್ರೆ ಈ ಡಾಕ್ಟರ್ ಇದೆಲ್ಲವನ್ನೂ ಮೀರಿ ಎಕ್ಸ್ಟ್ರಾಡಿನರಿ ಅನ್ನೋ ಮಟ್ಟಿಗೆ ಅವಾಂತರ ಮಾಡಿದ್ದಾರೆ.
ಕೋಝಿಕ್ಕೋಡ್: ವೈದ್ಯೋ ನಾರಾಯಣೋ ಹರಿ ಅನ್ನೋ ಮಾತೇ ಇದೆ. ಯಾಕೆಂದರೆ ವೈದ್ಯರು ರೋಗಿಗಳ ಜೀವವನ್ನು ಉಳಿಸುತ್ತಾರೆ. ಸಮಸ್ಯೆಯನ್ನು ಬಗೆಹರಿಸಿ ಆರೋಗ್ಯವಂತರನ್ನಾಗಿ ಮಾಡುತ್ತಾರೆ. ಆದರೆ ವೈದ್ಯರ ಕೈಯಿಂದಲೂ ಕೆಲವೊಮ್ಮೆ ಸಣ್ಣ ಪುಟ್ಟ ತಪ್ಪುಗಳಾಗುತ್ತವೆ. ಆದರೆ ಇಲ್ಲಾಗಿರುವುದು ಸಣ್ಣಪುಟ್ಟ ತಪ್ಪಲ್ಲ, ದೊಡ್ಡ ಎಡವಟ್ಟು. ವೈದ್ಯರು ಮಾಡಿರೋ ಎಡವಟ್ಟಿಗೆ ಮಹಿಳೆಯೇ ಕಂಗಾಲಾಗಿದ್ದಾರೆ. ಮುಂದೇನು ಮಾಡುವುದೆಂದು ಗಾಬರಿಯಾಗಿದ್ದರೆ. ಇಷ್ಟಕ್ಕೂ ಆಗಿರೋದೇನು ಎಂದರೆ ಡಾಕ್ಟರ್ಸ್ ಮಹಿಳೆಯ ತಪ್ಪಾದ ಕಾಲಿಗೆ ಆಪರೇಷನ್ ಮಾಡಿದ್ದಾರೆ. ಕೇರಳದ ಕೋಝಿಕ್ಕೋಡ್‌ನಲ್ಲಿ ನಡೆದಿದೆ.
ಎಡಗಾಲಿನ ಹಿಮ್ಮಡಿಯ ಶಸ್ತ್ರಚಿಕಿತ್ಸೆಗೆ ಆಗಮಿಸಿದ್ದ ಸಜಿನಾ ಸುಕುಮಾರನ್
ಕೇರಳದ ಕಕ್ಕೋಡಿಯ ಸಜಿನಾ ಸುಕುಮಾರನ್ (60) ಅವರು ತಮ್ಮ ಎಡಗಾಲಿನ ಹಿಮ್ಮಡಿಯ ನರಕ್ಕೆ ಗಾಯವಾಗಿತ್ತೆಂದು ಮಾವೂರು ರಸ್ತೆಯಲ್ಲಿರುವ ರಾಷ್ಟ್ರೀಯ ಆಸ್ಪತ್ರೆಯ ಡಾ.ಬೆಹಿರ್ಶನ್ ಅವರ ಬಳಿ ಚಿಕಿತ್ಸೆ (Treatment) ಪಡೆದುಕೊಂಡಿದ್ದರು. ಆ ನಂತರ ಶಸ್ತ್ರ ಚಿಕಿತ್ಸೆ ಮಾಡಿಕೊಂಡ ಸುಜಿನಾಗೆ ಆಘಾತವಾಗಿತ್ತು. ಯಾಕಂದ್ರೆ ರೋಗಿ (Patient) ಹೇಳಿದ್ದೇ ಒಂದು, ವೈದ್ಯ ಮಾಡಿದ್ದೇ ಇನ್ನೊಂದು ಎಂಬಂತಾಗಿತ್ತು ಪರಿಸ್ಥಿತಿ. ಕಕ್ಕೋಡಿಯ ಸಜಿನಾ ಸುಕುಮಾರನ್ ತಮ್ಮ ಎಡಗಾಲಿನ ಹಿಮ್ಮಡಿಯ ನರಕ್ಕೆ ಗಾಯವಾಗಿತ್ತೆಂದು ಮಾವೂರು ರಸ್ತೆಯಲ್ಲಿರುವ ರಾಷ್ಟ್ರೀಯ ಆಸ್ಪತ್ರೆಯ ಡಾ.ಬೆಹಿರ್ಶನ್ ಅವರ ಬಳಿ ಚಿಕಿತ್ಸೆ ಪಡೆಡಿದ್ದರು. ನಂತರ ಶಸ್ತ್ರ ಚಿಕಿತ್ಸೆ (Operation) ಮಾಡಿಸಿಕೊಳ್ಳಲು ಬಂದಿದ್ದರು. ಆದರೆ ಆಪರೇಷನ್ ಮುಗಿದ ನಂತರ ವೈದ್ಯರು (Doctors) ನೋಡಿದರೆ ಸುಜಿನಾ ಎಡಗಾಲಿನ ಬದಲು ಬಲಗಾಲಿಗೆ ಆಪರೇಷನ್ ಮಾಡಿರುವುದು ತಿಳಿದುಬಂದಿದೆ.
ಅಬ್ಬಬ್ಬಾ..ಆಕೆಗಿತ್ತು ಭರ್ತಿ 11 ಕೆಜಿ ಸ್ತನ, ಯಶಸ್ವೀ Breast reduction ಸರ್ಜರಿ ಮಾಡಿದ ವೈದ್ಯರು
ಬಲಗಾಲಿಗೆ ಸರ್ಜರಿ ಮಾಡಿದ ವೈದ್ಯರು
ಕೆಲವು ವರ್ಷದ ಹಿಂದೆ ಸಜಿನಾ ಅವರ ಎಡಕಾಲು (Left leg) ಬಾಗಿಲಿಗೆ ಸಿಕ್ಕಿ ಹಾಕಿಕೊಂಡ ಕಾರಣ ಗಾಯವಾಗಿತ್ತು. ನೋವು ಕಡಿಮೆಯಾಗದ ಕಾರಣ ವೈದ್ಯರ ಮೊರೆ ಹೋಗಿದ್ದರು. ಮೊದಲು ಖಾಸಗಿ ಕ್ಲಿನಿಕ್‌ನಲ್ಲಿ ಡಾ.ಬೆಹಿರ್ಶನ್ ಬಳಿ ಚಿಕಿತ್ಸೆ ಪಡೆದುಕೊಂಡಿದ್ದರು ನಂತರ ಫೆ.20 ರಂದು ಆಸ್ಪತ್ರೆಗೆ ದಾಖಲಾಗಿದ್ದು, ಮರುದಿನ ಡಾ.ಬೆಹಿರ್ಶನ್ ಅವರೇ ಸಜಿನಾ ಅವರ ಶಸ್ತ್ರಚಿಕಿತ್ಸೆ ಮಾಡಿದ್ದರು. ಆದರೆ ಆಪರೇಷನ್ ಮುಗಿದ ಬಳಿಕ ತಪ್ಪಾದ ಕಾಲಿಗೆ ಚಿಕಿತ್ಸೆ ಮಾಡಿರೋದು ಗೊತ್ತಾಗಿದೆ.
ಸಜಿನಾ ಈ ಬಗ್ಗೆ ತಮ್ಮ ಹೇಳಿಕೊಂಡಿದ್ದಾರೆ. 'ನಾನು ನನ್ನ ಎಡಗಾಲಿನ ನೋವಿಗೆ ಶಸ್ತ್ರ ಚಿಕಿತ್ಸೆ ಪಡೆದುಕೊಳ್ಳಲು ಒಪ್ಪಿಗೆ ನೀಡಿದ್ದೆ ಆದರೆ ನನಗೆ ಪ್ರಜ್ಞೆ ಬಂದಾಗ, ನನ್ನ ಬಲಗಾಲು ಭಾರವಾದಂತನಿಸಿತು. ಎದ್ದು ನೋಡಿದಾಗ ನನ್ನ ಬಲಗಾಲಿಗೆ ಸರ್ಜರಿ ಮಾಡಿದ್ದರು. ಎಚ್ಚರವಾದ ತಕ್ಷಣ ನಾನು ಆಘಾತಕ್ಕೊಳಗಾಗಿದ್ದೆ. ತಕ್ಷಣ ನರ್ಸ್‌ಗೆ ಕರೆ ಮಾಡಿ ವೈದ್ಯರನ್ನು ಕರೆಯುವಂತೆ ಕೇಳಿಕೊಂಡೆ. ಆದರೆ ನಾನು ವಿಷಯ ಹೇಳಿದಾಗಲಷ್ಟೇ ಅವರಿಗೆ ತಪ್ಪಾಗಿದೆ ಎಂಬುದು ಗೊತ್ತಾಯಿತು' ಎಂದಿದ್ದಾರೆ.
ಮಗನ ಮಗುವಿಗೆ ಜನ್ಮ ನೀಡಿದ ತಾಯಿ, ಈಕೆ ಅಜ್ಜಿಯೂ ಹೌದು, ತಾಯಿಯೂ ಹೌದು!
ಘಟನೆಯ ಬಗ್ಗೆ ಆರೋಗ್ಯ ಸಚಿವರಿಗೆ ದೂರು ಸಲ್ಲಿಕೆ
ಸುಜಿನಾ ಮಗಳು ಈ ಬಗ್ಗೆ ಮಾತನಾಡಿದ್ದು, 'ನನ್ನ ತಾಯಿಯ ಬಲಗಾಲಿನಲ್ಲಿಯೂ ಬ್ಲಾಕ್ ಆಗಿದೆ ಎಂಬುದು ವೈದ್ಯರ ಮೊದಲ ಪ್ರತಿಕ್ರಿಯೆಯಾಗಿತ್ತು. ಆದರೆ ಅವರು ಆ ಕಾಲಿನ ಬ್ಲಾಕ್ ಅನ್ನು ಪತ್ತೆಹಚ್ಚಲು ಯಾವುದೇ ರೀತಿಯ ಎಕ್ಸ್-ರೇ ಅಥವಾ ಸ್ಕ್ಯಾನ್ ತೆಗೆದುಕೊಂಡಿರಲಿಲ್ಲ' ಎಂದಿದ್ದಾರೆ. ಸದ್ಯ ಈ ಕುರಿತು ಡಿಎಂಒ ಹಾಗೂ ಆರೋಗ್ಯ ಸಚಿವರಿಗೆ ದೂರು ಸಲ್ಲಿಸಲಾಗಿದೆ. ಆದರೆ ಮಹಿಳೆಗೆ ಎರಡೂ ಕಾಲುಗಳಲ್ಲಿ ಸಮಸ್ಯೆ ಇತ್ತು ಶಸ್ತ್ರಚಿಕಿತ್ಸೆಗೂ ಮುನ್ನ ಈ ಬಗ್ಗೆ ಸಜಿನಾ ಮತ್ತು ಅವರ ಪತಿಗೆ ತಿಳಿಸಿದ್ದೇವೆ ಎಂದು ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ.
ಆಸ್ಪತ್ರೆಯ ಎಂಡಿ ಡಾ.ಕೆ.ಎಂ.ಆಶಿಕ್ ಮಾತನಾಡಿ, 'ಸಜಿನಾ, , ಕೆಲ ದಿನಗಳಿಂದ ಡಾ.ಬೆಹಿರ್ಶನ್ ಅವರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು. ನಾವು ಸುಜಿನಾ ಅವರ ಬಲಗಾಲನ್ನು ಪರೀಕ್ಷಿಸಿದ ನಂತರ ಆ ಕಾಲಿನಲ್ಲಿನ ಗಾಯವನ್ನು ಕಂಡುಕೊಂಡಿದ್ದೇವೆ ಮತ್ತು ಅದನ್ನು ಸುಜಿನಾ ಮತ್ತು ಅವರ ಪತಿಗೆ ತಿಳಿಸಿದ್ದೆವು. ವಿಷಯ ತಿಳಿದ ಬಳಿಕ ಸುಜಿನಾ ಅವರೇ ಶಸ್ತ್ರ ಚಿಕಿತ್ಸೆಗೆ ಒಪ್ಪಿಗೆ ನೀಡಿದ್ದರು' ಎಂದು ಸ್ಪಷ್ಟನೆ ನೀಡಿದ್ದಾರೆ.