ತೂಕ ಕಳೆದುಕೊಂಡ ಫಿಟ್ ಉದ್ಯೋಗಿಗೆ 10 ಲಕ್ಷ ರೂ ಬಹುಮಾನ, ಬಾಸ್ ಚಾಲೆಂಜ್‌ಗೆ ಹತ್ತಿರದ ಜಿಮ್ ಫುಲ್!
ಕಂಪನಿ ಬಾಸ್ ತನ್ನ ಉದ್ಯೋಗಿಗಳಿಗೆ ಫಿಟ್ನೆಸ್ ಚಾಲೆಂಜ್ ನೀಡಿದ್ದಾರೆ. ಇದು ಕೇವಲ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಅಭಿಯಾನ ಅಲ್ಲ. ಯಾರೂ ತೂಕ ಕಳೆದುಕೊಂಡು ಫಿಟ್ ಆಗ್ತಾರೋ ಅವರಿಗೆ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಈ ಘೋಷಣೆ ಬೆನ್ನಲ್ಲೇ ಇದೀಗ ಕಂಪನಿ ಉದ್ಯೋಗಿಗಳು ಬಹುಮಾನ ಪಡೆಯಲು ಹರಸಾಹಸ ಮಾಡುತ್ತಿದ್ದಾರೆ.
ಬೆಂಗಳೂರು(ಸೆ.25): ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕೆಲ ಅಭಿಯಾನಗಳನ್ನು ನೀವೆಲ್ಲಾ ನೋಡಿರುತ್ತೀರಿ. ಫಿಟ್ನೆಸ್ ಚಾಲೆಂಜ್, ಬಾಟಲ್ ಚಾಲೆಂಜ್, ಒನ್ ವರ್ಡ್ ಚಾಲೆಂಜ್, ಐಸ್ ಬಕೆಟ್ ಚಾಲೆಂಜ್ ಸೇರಿದಂತೆ ಹಲವು ಚಾಲೆಂಜ್ ಭಾರಿ ವೈರಲ್ ಆಗಿದೆ. ಆದರೆ ಇದೀಗ ಬೆಂಗಳೂರು ಕಂಪನಿಯ ಬಾಸ್ ನೀಡಿದ ಹೊಸ ಚಾಲೆಂಜ್ ಭಾರತದಲ್ಲೇ ಸದ್ದು ಮಾಡುತ್ತಿದೆ. ತೂಕ ಹೆಚ್ಚಿಸಿಕೊಂಡಿರುವ ಕಂಪನಿಯ ಉದ್ಯೋಗಿಗಳು ಫಿಟ್ನೆಸ್ ಕಾಪಾಡಿಕೊಳ್ಳಬೇಕು. ನಿಗದಿತ ಸಮಯದಲ್ಲಿ ಫಿಟ್ ಅಂಡ್ ಫೈನ್ ಆದರೆ ಆ ಉದ್ಯೋಗಿಗೆ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ. ಕಂಪನಿ ಈ ಚಾಲೆಂಜ್ ಘೋಷಣೆ ಮಾಡಿದ ಬೆನ್ನಲ್ಲೇ ಇದೀಗ ಕಂಪನಿ ಉದ್ಯೋಗಿಗಳು ತಮ್ಮ ಹತ್ತಿರದ ಜಿಮ್, ಯೋಗಾ ಸೆಂಟರ್ ಸೇರಿಕೊಂಡಿದ್ದಾರೆ. ಮತ್ತೆ ಕೆಲವರು ಮನೆಯನ್ನೇ ಜೀಮ್ ಮಾಡಿಕೊಂಡಿದ್ದಾರೆ.
ಬೆಂಗಳೂರಿನ(Bengaluru) ಝೆರೋಧಾ ಕಂಪನಿ ಈ ಹೊಸ ಚಾಲೆಂಜ್(Fitness Challenge) ನೀಡಿದೆ. ಕೊರೋನಾ ಸಮಯದಿಂದ ಕಂಪನಿ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್(WFH) ಆಯ್ಕೆ ನೀಡಿದೆ. ಇದರ ಪರಿಣಾಮ ಉದ್ಯೋಗಿಗಳು(Employee) ಹೆಚ್ಚಿನ ವ್ಯಾಯಾಮ, ಇತರ ಚಟುವಟಿಕೆಗಳು ಇಲ್ಲದೆ ತೂಕ ಹೆಚ್ಚಿಸಿಕೊಂಡಿದ್ದಾರೆ. ಸರಳವಾಗಿ ಹೇಳಬೇಕೆಂದರ್ ಕಂಪನಿಯ ವಿಡಿಯೋ ಕಾಲ್ ಮೀಟಿಂಗ್‌ನ ಫ್ರೇಮ್‌ನಿಂದ ಬಹುತೇಕರು ಔಟ್ ಆಗುತ್ತಿದ್ದಾರೆ. ಕಂಪನಿಯ ಉದ್ಯೋಗಿಗಳು ಫಿಟ್ ಅಂಡ್ ಫೈನ್ ಆಗಬೇಕು ಎಂದು ಕಂಪನಿ ಸಿಇಒ ನಿತಿನ್ ಕಾಮತ್ ಹೊಸ ಚಾಲೆಂಜ್ ನೀಡಿದ್ದಾರೆ.
ಯೋಗ ಮತ್ತು ಪಿಲೆಟ್ಸ್ ಯಾವುದು ಒಳ್ಳೆಯ ರಿಸಲ್ಟ್ ಕೊಡುತ್ತೆ?
ಫಿಟ್ ಆಗುವ ಉದ್ಯೋಗಿಗೆ ಇನ್ಸೆಂಟೀವ್ ಸಿಗಲಿದೆ. ಇನ್ನು ಲಕ್ಕಿ ವಿಜೇತನಿಗೆ 10 ಲಕ್ಷ ರೂಪಾಯಿ(Cash reward) ಬಹುಮಾನ ಸಿಗಲಿದೆ. ಆದರೆ ಈ ಫಿಟ್ನೆಸ್ ಚಾಲೆಂಜ್‌ನಲ್ಲಿ ಕೆಲ ಕಂಡೀಷನ್ ಕೂಡ ಇದೆ. ಪ್ರತಿ ದಿನ 350 ಕ್ಯಾಲೋರಿ ಬರ್ನ್ ಮಾಡಬೇಕು. ಈ ಮೂಲಕ ಮುಂದಿನ ವರ್ಷದ ಆರಂಭಕ್ಕೆ ಅಂದರೆ 2023ರ ಜನವರಿಗೆ ಉದ್ಯೋಗಿಗಳು ಫಿಟ್ ಆಗಬೇಕು. ಕಂಪನಿ ಮಾನದಂಡಗಳನ್ನು ಶೇಕಡಾ 90 ರಷ್ಟು ಪೂರೈಸುವ ಉದ್ಯೋಗಿಗೆ ಈ ಚಾಲೆಂಜ್‌ಗೆ ಅರ್ಹತೆ ಪಡೆಯುತ್ತಾನೆ. ಇಷ್ಟೇ ಅಲ್ಲ ಸ್ಯಾಲರಿ ಜೊತೆಗೆ ಇನ್ಸೆಂಟೀವ್ ಪಡೆಯುತ್ತಾನೆ. ಹೀಗೆ ಅರ್ಹತೆ ಪಡೆಯುವ ಉದ್ಯೋಗಿಗಳ ಪೈಕಿ ಲಕ್ಕಿ ವಿನ್ನರ್ 10 ಲಕ್ಷ ರೂಪಾಯಿ ಬಹುಮಾನ ಪಡೆಯಲಿದ್ದಾರೆ.
ಮನೆಯಿಂದ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಸಕ್ರಿಯವಾಗಿ, ಚುರುಕಾಗಿ ಕೆಲಸ ಮಾಡಲು ಈ ಪ್ಲಾನ್ ಜಾರಿಗೆ ತರಲಾಗಿದೆ. ಮನೆಯಿಂದ ಕೆಲಸದ ಆಯ್ಕೆ ನೀಡಿರುವ ಕಾರಣ ಹಲವು ಉದ್ಯೋಗಿಗಳು ಆಸಲಿಗಳಾಗಿದ್ದಾರೆ. ತೂಕ ಹೆಚ್ಚಿಸಿಕೊಂಡಿದ್ದಾರೆ. ಚುರುಕಾಗಿ ಯೋಚನೆ ಮಾಡುತ್ತಿಲ್ಲ ಆರೋಪಗಳು ಕೇಳಿಬಂದಿತ್ತು. ಇದನ್ನು ಹೋಗಲಾಡಿಸಲು ಈ ಚಾಲೆಂಜ್ ನೀಡಿದ್ದಾರೆ.
Kiccha Sudeep: ಸುದೀಪ್ ಯಂಗ್ ಅಂಡ್ ಎನರ್ಜಿಟಿಕ್ ಲುಕ್ ಹಿಂದಿನ ಸೂಪರ್ ಸಿಕ್ರೇಟ್
ಇದೀಗ ಉದ್ಯೋಗಿಗಳು ಹತ್ತಿರ ಜಿಮ್, ಯೋಗಾ ಸೆಂಟರ್‌ಗೆ ಸೇರಿಕೊಂಡು ವರ್ಕೌಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಮನೆಯನ್ನೇ ಜಿಮ್ ಮಾಡಿಕೊಂಡಿದ್ದಾರೆ. ಬೆಳಗ್ಗೆ ಜಾಗಿಂಗ್, ಸಂಜೆ ವಾಂಕಿಂಗ್ ಆರಂಭಗೊಂಡಿದೆ. ಪ್ರತಿ ಬಾರಿ ಸ್ಕೂಟರ್, ಕಾರು ಹತ್ತಿ ಹೋಗುತ್ತಿದ್ದ ಹಲವರು ಇದೀಗ ನಡೆದುಕೊಂಡೇ ತಮ್ಮ ಅಗತ್ಯ ವಸ್ತುಗಳ ಖರೀದಿಗೆ ತೆರಳುತ್ತಿದ್ದಾರೆ. ಡೈಯೆಟ್ ಫುಡ್ ಆರಂಭಿಸಿದ್ದಾರೆ. ಮತ್ತೊಂದು ವಿಶೇಷ ಅಂದರೆ ಇದೀಗ ಈ ಕಂಪನಿಯಲ್ಲಿ ಕೆಲಸಕ್ಕೆ ಸೇರಲು ಹಲವರು ಆಸಕ್ತಿ ತೋರಿಸಿರುವ ಮಾತುಗಳು ಕೇಳಿಬರುತ್ತಿದೆ.