ನಮ್ಮವರು ಅನಾದಿಕಾಲದಿಂದಲೂ ಕೆಲವು ಮನೆ ಔಷಧಿಗಳನ್ನು ಬಳಸುತ್ತಾರೆ. ಇದು ಕ್ಯಾನ್ಸರ್‌ನಂಥ ಮಹಾಮಾರಿಗೂ ಮದ್ದು. ಅದರಲ್ಲಿ ಬೆಳ್ಳುಳ್ಳಿ, ಈರುಳ್ಳಿಯೂ ಒಂದು...
ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತಾಜಾವಾಗಿ ತಿನ್ನುವುದರಿಂದ ದೊಡ್ಡ ಕರುಳಿನ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಸಂಶೋಧನೆಯೊಂದು ತಿಳಿಸಿದೆ. ಇವುಗಳನ್ನು ಬೇಯಿಸಿ, ಇತರ ವಸ್ತುಗಳೊಂದಿಗೆ ಮಿಕ್ಸ್ ಮಾಡಿ ಸೇವಿಸಿದರೆ ಅದರಲ್ಲಿರುವ ಪೋಷಕ ತತ್ವಗಳು ನಾಶವಾಗುತ್ತದೆ. ಆದುದರಿಂದ ಅವುಗಳನ್ನು ತಾಜಾವಾಗಿ ಸೇವಿಸುವುದು ಒಳ್ಳೆಯದು.
1600ಕ್ಕಿಂತ ಅಧಿಕ ಮಹಿಳೆಯರು ಮತ್ತು ಪುರುಷರ ಮೇಲೆ ನಡೆಸಿದ ಸಂಶೋಧನೆಯಿಂದ ಶೇ.79 ಜನರಿಗೆ ದೊಡ್ಡ ಕರುಳಿನ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಇರುವ ಬಗ್ಗೆ ವರದಿಯಾಗಿದೆ. ಆದುದರಿಂದ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಹಸಿಯಾಗಿ ತಿನ್ನಬೇಕು. ಇವುಗಳಲ್ಲಿರುವ ಬಯೋ ಆ್ಯಕ್ಟಿವ್ ಕಾಂಪೌಂಡ್ ಅಂದರೆ ಆ್ಯಂಟಿ ಇಂಪ್ಲಾಮೆಂಟ್ರಿ ಇರುತ್ತದೆ. ಈ ಬಯೋ ಆಕ್ಟಿವ್ ಕಾಂಪೌಂಡ್ಸ್ ಸ್ತನ ಮತ್ತು ಪ್ರೊಸ್ಟೇಟ್ ಕ್ಯಾನ್ಸರ್ ಸಮಸ್ಯೆ ನಿವಾರಿಸಬಲ್ಲದು.
ಕೊನೆಗೂ ಕ್ಯಾನ್ಸರ್ ಔಷಧಿ ಕಂಡು ಹಿಡಿದ ವಿಜ್ಞಾನಿಗಳು: ಯಾವಾಗಿಂದ ಲಭ್ಯ? ಇಲ್ಲಿದೆ ವಿವರ
ಡಯಟ್‌ನಲ್ಲಿ ಹೆಚ್ಚು ಬೆಳ್ಳುಳ್ಳಿ ಮತ್ತು ಈರುಳ್ಳಿ ಸೇವಿಸಿದರೆ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ. ವ್ಯಕ್ತಿಯೊಬ್ಬ ವರ್ಷಕ್ಕೆ ಸುಮಾರು 15 ಕೆಜಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇವಿಸಿದರೆ ಕ್ಯಾನ್ಸರ್ ಕಾರಕಗಳನ್ನು ನಿಯಂತ್ರಿಸಬಹುದು. ಆದುದರಿಂದ ಪ್ರತಿದಿನ ಸಾಧ್ಯವಾದಷ್ಟು ಒಂದು ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನಲು ಪ್ರಯತ್ನಿಸಿ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 5, 2019, 4:08 PM IST