ಒಣ ಪಪ್ಪಾಯ ತಿಂದ್ರೆ ಆಗೋ ಲಾಭ ಒಂದೆರಡಲ್ಲ!
ಆರೋಗ್ಯಕ್ಕೆ ಉತ್ತಮ ಹಾಗೂ ಡಯೆಟ್ ಫ್ರೆಂಡ್ಲಿ ಹಣ್ಣುಗಳು ಎಂದರೆ ಎಲ್ಲರಿಗೂ ಇಷ್ಟ. ಮಕ್ಕಳಳಿಗೂ ಇಷ್ಟವಾಗುವ ಪಪ್ಪಾಯವನ್ನು ಉಷ್ಣವಲಯದಲ್ಲಿ ಬೆಳೆಯಲಾಗುತ್ತದೆ. ನೋಡಲು ಕಿತ್ತಳೆ ಹಾಗೂ ಹಳದಿ ಬಣ್ಣದಲ್ಲಿ ಇರುವ ಈ ಹಣ್ಣು ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದರೆ ಒಣಗಿದ ಪಪ್ಪಾಯ ಸೇವನೆಯಿಂದ ಅದರ ಎರಡು ಪಟ್ಟು ಆರೋಗ್ಯದಲ್ಲಿ ಲಾಭ ಪಡೆಯಬಹುದು ಎಂಬುದು ನಿಮಗೆ ಗೊತ್ತೆ? ಈ ಬಗ್ಗೆ ಇಲ್ಲಿದೆ ಮಾಹಿತಿ.
ಕಟ್ ಮಾಡಿದ ಹಣ್ಣುಗಳನ್ನು ಒಂದು ಬೌಲ್‌ನಲ್ಲಿ ಕೊಟ್ಟರೆ ಸಾಕು ತಿನ್ನುತ್ತಲೇ ಇರಬೇಕು ಎನಿಸುತ್ತದೆ. ಈ ಬೌಲ್ ಹಣ್ಣಿನಲ್ಲಿ ಪಪ್ಪಾಯ ಇದ್ದರೆ ಇನ್ನೂ ಒಳ್ಳೆಯದು. ಎಷ್ಟೋ ಜನರು ಪಪ್ಪಾಯವನ್ನು ಡಯೆಟ್‌ನಲ್ಲಿ ಬಳಸುತ್ತಾರೆ. ಎಲ್ಲಾ ವರ್ಗದ ಜನರೂ ಇಷ್ಟಪಡುವ ಹಣ್ಣಾಗಿದ್ದು, ತಿಂದರೆ ಸಿಹಿ ಜೊತೆಗೆ ಹದವಾದ ಸಾಫ್ಟ್ ಟೆಕ್ಸಚರ ಸಹ ನೀಡುತ್ತದೆ. ಬಾಯಲ್ಲಿಟ್ಟರೆ ಬೆಣ್ಣೆಯಂತೆ ಹೇಗೆ ಕರಗಿಹೋಗುತ್ತದೋ ತಿಳಿಯುವುದಿಲ್ಲ.
ಶಾಂಪಿAಗ್‌ಗೆ ಹೋದಾಗ ಒಣಗಿದ ಪಪ್ಪಾಯ ಕಂಡಿದ್ದರೆ ಖಂಡಿತಾ ತೆಗೆದುಕೊಳ್ಳಿ. ಏಕೆಂದರೆ ಇದರಲ್ಲಿ ಆರೋಗ್ಯಕ್ಕೆ ಬೇಕಾದ ಬಹುತೇಕ ಅಂಶಗಳನ್ನು ಒಳಗೊಂಡಿರುತ್ತದದೆ. ಒಣಗಿದ ಪಪ್ಪಾಯ ತಿನ್ನುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಈ ಬಗ್ಗೆ ಇಲ್ಲಿದೆ ಮಾಹಿತಿ.
ಒಣಗಿಸಿದ ಪಪ್ಪಾಯ ಸೇವನೆಯು ಆರೋಗ್ಯಕ್ಕೆ ಬಹಳ ಒಳ್ಳೆಯದು. ಏಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನ್ಯೂಟ್ರೀಷನ್ ಇದೆ. ಏಕೆಂದರೆ ಪಪ್ಪಾಯಿ ಒಣಗಿಸಿದಾಗ ಇದರಲ್ಲಿನ ನೀರು ಡ್ರೆöÊ ಆಗುವುದರಿಂದ ಕೆಲ ನ್ಯೂಟ್ರೀಷನ್ ಪ್ರಮಾಣ ಹೆಚ್ಚಿರುತ್ತದೆ ಹಾಗೂ ತಿನ್ನಲೂ ರುಚಿಯಾಗಿರುತ್ತದೆ. ಸಾಮಾನ್ಯವಾಗಿ ಪಪ್ಪಾಯಿ ಹಣ್ಣು ಕಟ್ ಮಾಡಿದರೆ ಬೇಗ ಹಾಳಾಗುತ್ತದೆ. ದೀರ್ಘಕಾಲದಲ್ಲಿ ಇಡಲಾಗುವುದಿಲ್ಲ. ಆದರೆ ಇದನ್ನು ಒಣಗಿಸುವುದರಿಂದ ವರ್ಷಗಟ್ಟಲೆ ಶೇಖರಿಸಿಯೋ ಇಡಬಹುದು.
ಪಪ್ಪಾಯ ತೆಗೆದುಕೊಂಡು ಒಣಗಿಸುತ್ತಿದ್ದೀರಿ ಎಂದರೆ ಅದಕ್ಕೆ ಸಕ್ಕರೆ ಹಾಕದಿರುವುದು ಒಳ್ಳೆಯದು. ಏಕೆಂದರೆ ಇದರಲ್ಲೇ ಸಕ್ಕರೆ ಪ್ರಮಾಣ ಹೇರಳವಾಗಿದೆ. ಒಣಗಿದ ಒಂದು ಪೀಸ್ ಪಪ್ಪಾಯದಲ್ಲಿ 20 ಕ್ಯಾಲೋರಿ ಇರುತ್ತದೆ. ಇದರಲ್ಲಿ ಕಡಿಮೆ ಕ್ಯಾಲೋರಿ ಇರುವುದರಿಂದ ಎಷ್ಟು ಬೇಕಾದರೂ ತಿನ್ನಬಹುದು. ಪ್ರತೀ ದಿನ ನಮ್ಮ ದೇಹಕ್ಕೆ ಶೇ.೬ರಷ್ಟು ಕಾರ್ಬೋಹೈಡ್ರೇಟ್ ಒದಗಿಸುತ್ತದೆ. 14ಗ್ರಾಂ ಒಣಗಿದ ಪಪ್ಪಾಯದಲ್ಲಿ ಇದು ಸಿಗುತ್ತದೆ. ಫೈಬರ್, Vitamin C, B, A, E, K, ಕ್ಯಾಲ್ಶಿಯಂ, ಕಬ್ಬಿಣ, ಪೊಟ್ಯಾಶಿಯಂ, ಮೆಗ್ನೀಶಿಯಂ, ಜಿಂಕ್ ಹೇರಳವಾಗಿದೆ.
ಟೇಸ್ಟಿ ಆಗಿದ್ದರೂ, ಈ 5 ಸಮಸ್ಯೆ ಇರುವವರಿಗೆ ಪಪ್ಪಾಯಿ ವಿಷ!
ಒಣ ಪಪ್ಪಾಯ ತಿನ್ನುವುದರಿಂದ ಪ್ರಯೋಜನಗಳು
ಡಯೆಟ್‌ನಲ್ಲಿ ಈ ಒಣಗಿದ ಪಪ್ಪಾಯವನ್ನು ಸೇರಿಸಿಕೊಳ್ಳುವುದರಿಂದ ಆರೋಗ್ಯಕ್ಕೆ ಬಹಳ ಪ್ರಯೋಜನವಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ.
1. ದೇಹದಲ್ಲಿ ಸ್ವತಂತ್ರ ರ‍್ಯಾಡಿಕಲ್ಸ್ಗಳನ್ನು ಹೋಗಲಾಡಿಸಲು ಆಂಟಿ ಆಕ್ಸಿಡೆಂಟ್ ಬಹಳ ಅಗತ್ಯ. ಈ ಒಣಗಿದ ಪಪ್ಪಾಯದಲ್ಲಿ ಕ್ಯರೊಟನಾಯ್ಡ್ ಎಂಬ ನೈಸರ್ಗಿಕವಾದ ಆಂಟಿ ಆಕ್ಸಿಡೆಂಟ್ ಹೇರಳವಾಗಿದ್ದು, ಸ್ವತಂತ್ರ ರ‍್ಯಾಡಿಕಲ್ಸ್ಗಳನ್ನು(Free Radicles) ಹೊಡೆದು ಹಾಕಲು ಸಹಾಯವಾಗಿದೆ. ಇದನ್ನು ಪ್ರತೀ ದಿನ ಸೇವಿಸುವುದರಿಂದ ದೇಹಕ್ಕೆ ಬೇಕಾದ ಆಂಟಿ ಆಕ್ಸಿಡೆಂಟ್ ಸಿಗುತ್ತದೆ.
2. ಇಂದು ಬಹಳಷ್ಟು ಜನರಲ್ಲಿ ಜೀರ್ಣಕ್ರಿಯೆ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಪ್ರತೀ ದಿನ ಈ ಪಪ್ಪಾಯ ಸೇವಿಸುವುದರಿಂದ ಜೀರ್ಣ ಶಕ್ತಿ ಹೆಚ್ಚಿಸುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಇದ್ದು, ಉಬ್ಬುವುದು(Bloating) ಮತ್ತು ಮಲಬದ್ಧತೆ ನಿವಾರಣೆಗೂ ಸಹಾಯವಾಗುತ್ತದೆ.
3. ಹಲವು ಹಣ್ಣುಗಳು ಮತ್ತು ತರಕಾರಿಗಳಲ್ಲಿ ಡಯೇಟರಿ ಫೈಬರ್ ಇದ್ದು, ಪಪ್ಪಾಯದಲ್ಲಿ ಇದು ಹೆಚ್ಚಿನ ಪ್ರಮಾಣದಲ್ಲಿ ಕಾಣಬಹುದಾಗಿದೆ. ಒಂದು ಬೌಲ್ ಪಪ್ಪಾಯ ಸೇವಿಸಿದರೆ ಮೂರು ಗ್ರಾಂನಷ್ಟು ಫೈಬರ್(Fiber) ಸಿಗುತ್ತದೆ. ನೈಸರ್ಗಿಕವಾಗಿ ಫೈಬರ್ ಸಿಗಬೇಕೆಂದರೆ ಪಪ್ಪಾಯ ಬೆಸ್ಟ್ ಫುಡ್.
4. ಎಲ್ಲಾ ಹಣ್ಣು ತರಕಾರಿಗಳಲ್ಲಿ ನ್ಯೂಟ್ರೀಶನ್, ಐರನ್, ಮಿನರಲ್ಸ್ ಸಿಗುವವುದಿಲ್ಲ. ಆದರೆ ಪಪ್ಪಾಯದಲ್ಲಿ Vitamin A, E, K, ಕ್ಯಾಲ್ಶಿಯಂ, ಜಿಂಕ್, ಐರನ್ ಹೀಗೆ ನಾನಾ ರೀತಿಯ ಆರೋಗ್ಯಕಾರಿ ಗುಣಗಳಿವೆ.
5. ಪಪ್ಪಾಯದಲ್ಲಿ ಪ್ರಮುಖವಾಗಿ ಕಾರ್ಬೋಹೈಡ್ರೇಟ್(Carbohydrate) ಹೇರಳವಾಗಿ ಕಾಣಸಿಗುತ್ತದೆ. ಇದು ವಿಟಮಿನ್ ಮತ್ತು ಮಿನರಲ್ಸ್ಗಳ ಜೊತೆಗೆ ಬೆರೆತರೆ ದೇಹಕ್ಕೆ ನೈಸರ್ಗಿಕವಾಗಿ ಶಕ್ತಿಯನ್ನು ಒದಗಿಸುತ್ತದೆ.
6. ಒಣಗಿಸಿದ ಪಪ್ಪಾಯದಲ್ಲಿ ನೀರಿನಾಂಶ ಇರುವುದಿಲ್ಲ. ಇದರಲ್ಲಿ ನ್ಯೂಟ್ರೀಶನ್ ಹೆಚ್ಚಿರುವುದಲ್ಲದೆ, ವಿಟಮಿನ್ ಸಿ ಮತ್ತು ಲೈಕೋಪೇನ್(Lycopene) ಅಂಶವು ಹೆಚ್ಚಿನ ಪ್ರಮಾಣದಲ್ಲಿ ಕಾಣಸಿಗುತ್ತದೆ. ಈ ನ್ಯೂಟ್ರೀಶನ್‌ಗಳ ಚರ್ಮ ಮತ್ತು ವಯಸ್ಸಾಗುವುದನ್ನು ತಡೆಯುತ್ತದೆ.
7. ಒಣಗಿದ ಪಪ್ಪಾಯ ಸೇವಿಸುವುದರಿಂದ ಕೊಲೆಸ್ಟಾçಲ್ ಲೆವೆಲ್ ಕಾಯ್ದುಕೊಳ್ಳುತ್ತದೆ. ೧೪ ವಾರಗಳ ಈ ಪಪ್ಪಾಯ ಸೇವಿಸಿದರೆ ಉತ್ತಮ ಫಲಿತಾಂಶ ಪಡೆಯಬಹುದು. ಆಂಟಿಆಕ್ಸಿಡೆAಟ್ ಪ್ರಮಾಣ ಚೆನ್ನಾಗಿರುವುದರಿಂದ ಕೊಲೆಸ್ಟಾçಲ್ ಲೆವೆಲ್(Cholesterol) ಕಾಯ್ದುಕೊಳ್ಳಬಹುದು ಇದು ಹೃದಯಕ್ಕೆ ಒಳ್ಳೆಯದು.
8. ಕಣ್ಣಿನ ದೃಷ್ಟಿ(Eye Vision) ಹೆಚ್ಚಿಸುವಲ್ಲಿ ಪಪ್ಪಾಯ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ವಿಟಮಿನ್ ಎ ಹೇರಳವಾಗಿದೆ. ಒಂದು ಸಣ್ಣ ಪೀಸ್ ಪಪ್ಪಾಯ ಸೇವಿಸಿದರೆ ಶೇ.೩೩ ರಷ್ಟು ವಿಟಮಿನ್ ಎ ಸಿಗುತ್ತದೆ.
9. ವಿಟಮಿನ್ ಸಿ ಮತ್ತು ಜಿಂಕ್ ಅಂಶ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಪಪ್ಪಾಯದಲ್ಲಿ ಹೇರಳವಾಗಿ ಕಾಣಿಸಿಕೊಳ್ಳುತ್ತದೆ. ಅಲ್ಲದೆ ಶೀತ ಹಾಗೂ ಇತರೆ ಖಾಯಿಲೆಗಳ ವಿರುದ್ಧ ಹೋರಾಡುತ್ತದೆ ಕೂಡ.