ಟೇಸ್ಟಿ ಆಗಿದ್ದರೂ, ಈ 5 ಸಮಸ್ಯೆ ಇರುವವರಿಗೆ ಪಪ್ಪಾಯಿ ವಿಷ!

First Published Apr 15, 2021, 5:34 PM IST

ಬೇಸಿಗೆಯಲ್ಲಿ, ಕೆಲವು ಹಣ್ಣುಗಳನ್ನು ದೊಡ್ಡ ಪ್ರಮಾಣದಲ್ಲಿ ತಿನ್ನಲಾಗುತ್ತದೆ, ಅದರಲ್ಲಿ ಒಂದು ಪಪ್ಪಾಯಿ. ವಾಸ್ತವವಾಗಿ, ಪಪ್ಪಾಯಿಯು ಉತ್ತಮ ಗುಣಗಳಿಂದ ಸಮೃದ್ಧವಾಗಿದೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿಡಲು ಸಹಾಯ ಮಾಡುತ್ತದೆ. ಇದರ ಒಂದು ವಿಶೇಷವೆಂದರೆ ಈ ಹಣ್ಣು ವರ್ಷಪೂರ್ತಿ ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿರುತ್ತದೆ ಮತ್ತು ಕಚ್ಚಾ ಪಪ್ಪಾಯಿ ಸಹ ಸಿಗುತ್ತದೆ. ಆದರೆ ಕೆಲ ಸಮಸ್ಯೆಗಳಿಗೆ ಪಪ್ಪಾಯಿ ತಿನ್ನಬಾರದು ಎಂದು ತಿಳಿದಿದೆಯೇ?