ಡಾರ್ಕ್ ಚಾಕಲೇಟ್ ಎಂಬ ಮ್ಯಾಜಿಕಲ್ ಪವರ್ ಇರುವ ಸಿಹಿ ಔಷಧ
ಡಾರ್ಕ್ ಚಾಕಲೇಟ್ ಎಂದರೆ ಬೇಕು ಬೇಕು ಎಂದು ಆಸೆ ಪಟ್ಟು ತಿನ್ನುವ ಚಾಕಲೇಟ್ ಅಲ್ಲ. ಆದರೆ ಇದು ವಾಸ್ತವವಾಗಿ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ನಿಜವಾದ ಡಾರ್ಕ್ ಚಾಕಲೇಟ್ ಸಂಸ್ಕರಿಸಿರುವುದಿಲ್ಲ ಮತ್ತು ಡಾರ್ಕ್ ಚಾಕಲೇಟ್, ಸಿಹಿಯಾದ ಹಾಲಿನ ಚಾಕಲೇಟು ನಂಬಲಸಾಧ್ಯವಾದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ಡಾರ್ಕ್ ಚಾಕಲೇಟ್ ನಲ್ಲಿ ಕಂಡುಬರುವ ಒಂದು ಘಟಕವೆಂದರೆ ತೆಯೋಬ್ರೊಮೈನ್. ತೆಯೋಬ್ರೊಮೈನ್ ಕೆಫೀನ್ ನಂತೆಯೇ ಇದೆ. ಈ ಚಾಕಲೇಟ್ ಸೇವನೆ ಮಾಡುವುದರಿಂದ ಸ್ಟ್ರೆಸ್ ಕಡಿಮೆಯಾಗುತ್ತದೆ.
ನೆಗಡಿ ಇದ್ದರೆ ಚಾಕಲೇಟ್ ಆಧಾರಿತ ಔಷಧಿ ಸೇವನೆ ಮಾಡಿದರೆ, ಎರಡು ದಿನದಲ್ಲಿ ನೆಗಡಿ ಕಡಿಮೆಯಾಗುತ್ತದೆ.
ಡಾರ್ಕ್ ಚಾಕಲೇಟ್ ತಿನ್ನುವುದರಿಂದ ರಕ್ತದ ಒತ್ತಡ ಕಡಿಮೆಯಾಗುತ್ತದೆ. ಡಾರ್ಕ್ ಚಾಕೊಲೇಟ್ ರಕ್ತದ ಹರಿವನ್ನು ಸುಗಮಗೊಳಿಸುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ.
ಡಾರ್ಕ್ ಚಾಕಲೇಟ್ ನಲ್ಲಿ ಪ್ರಬಲ ಆಂಟಿ ಆಕ್ಸಿಡೆಂಟುಗಳು ಅಧಿಕ ಪ್ರಮಾಣದಲ್ಲಿವೆ. ಇವು ಕ್ಯಾನ್ಸರ್ ರೋಗಿಗಳ ಆರೋಗ್ಯ ಮಟ್ಟ ಸುಧಾರಿಸಲು ಸಹಾಯ ಮಾಡುತ್ತವೆ.
ಡಾರ್ಕ್ ಚಾಕಲೇಟ್ ಮೆದುಳಿಗೆ ಮತ್ತು ಹೃದಯಕ್ಕೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಇದರಿಂದ ಮೆದುಳು ಚುರುಕಾಗುತ್ತದೆ. ಜೊತೆಗೆ ಇದು ಪಾರ್ಶ್ವವಾಯು ಬರುವುದನ್ನು ತಡೆಯುವ ಗುಣವನ್ನು ಹೊಂದಿದೆ.
ಕೊಕೊದ ಅಂಶ ಡಾರ್ಕ್ ಚಾಕಲೇಟ್ ಗಳಲ್ಲಿ ಹೆಚ್ಚಾಗಿರುವುದರಿಂದ ಮನಸಿನ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.
ಕೊಕೊವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಯ ವಿರುದ್ಧ ಹೋರಾಡುವಲ್ಲಿ ಧನಾತ್ಮಕ ಪರಿಣಾಮ ಬೀರಬಹುದು ಎಂದು ಸಣ್ಣ ಪ್ರಮಾಣದ ಅಧ್ಯಯನಗಳು ಸೂಚಿಸುತ್ತವೆ.
ಸೂರ್ಯನ ಆಲ್ಟ್ರಾ ವಯಲೆಟ್ ಕಿರಣಗಳಿಂದ ಸ್ಕಿನ್ ಡ್ಯಾಮೇಜ್ ಆಗುವುದನ್ನು ರಕ್ಷಿಸಲು ಡಾರ್ಕ್ ಚಾಕಲೇಟ್ ಸಹಾಯ ಮಾಡುತ್ತದೆ.
ಚಾಕಲೇಟ್ ಭ್ರೂಣದ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಎಂದು ಇತ್ತೀಚಿನ ಅಧ್ಯಯನಗಳು ತೋರಿಸಿವೆ. ಕೆಲವು ತಾಯಂದಿರು ಭ್ರೂಣಕ್ಕೆ ರಕ್ತಪೂರೈಕೆಯನ್ನು ಕಡಿತಗೊಳಿಸಿದಾಗ ಅಥವಾ ನಿರ್ಬಂಧಿಸಿದಾಗ ಪ್ರಿಕ್ಲಾಂಪ್ಸಿಯ ಅಪಾಯದಲ್ಲಿರಬಹುದು. ಇದು ಅಧಿಕ ರಕ್ತದೊತ್ತಡದಿಂದ ಉಂಟಾಗುತ್ತದೆ, ಇದು ಗರ್ಭಾವಸ್ಥೆಯಲ್ಲಿ ನೈಸರ್ಗಿಕವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಡಾರ್ಕ್ ಚಾಕಲೇಟ್ ಉತ್ತಮವಾಗಿದೆ.
ಡಾರ್ಕ್ ಚಾಕಲೇಟ್ ರಕ್ತನಾಳಗಳನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಟೈಪ್ 2 ಮಧುಮೇಹದ ವಿರುದ್ಧ ಹೋರಾಡುತ್ತದೆ.
ಡಾರ್ಕ್ ಚಾಕಲೇಟ್ ನಲ್ಲಿ ಪೌಷ್ಟಿಕಾಂಶಗಳು ಹೆಚ್ಚಾಗಿದ್ದು, ಇದರಲ್ಲಿ ಮಿನರಲ್ಸ್ ಮತ್ತು ವಿಟಾಮಿನ್ಸ್ ಗಳಿವೆ. ಇವುಗಳು ಉತ್ತಮ ಆರೋಗ್ಯಕ್ಕೆ ಸಹಾಯ ಮಾಡುತ್ತವೆ.
ಕೆಂಪು ರಕ್ತಕಣಗಳ ಹೆಚ್ಚುವಿಕೆಗೆ ಡಾರ್ಕ್ ಚಾಕಲೇಟ್ ಸಹಾಯ ಮಾಡುತ್ತದೆ ಎಂದು ಈ ಅಧ್ಯಯನವು ತೋರಿಸಿದೆ. ಡಾರ್ಕ್ ಚಾಕಲೇಟ್ ಅನ್ನು ನಿಯಮಿತವಾಗಿ ಸೇವಿಸುವುದರಿಂದ ಕೆಂಪು ರಕ್ತಕಣಗಳ ವಿತರಣೆಯನ್ನು ಸುಧಾರಿಸಬಹುದು ಎಂದು ಸಾಬೀತಾಗಿದೆ.
ಡಾರ್ಕ್ ಚಾಕಲೇಟ್ ಸೇವಿಸುವುದರಿಂದ ಒತ್ತಡ, ಉರಿಯೂತಗಳು ಕಡಿಮೆಯಾಗಿ ನೆನಪುಶಕ್ತಿ ಹೆಚ್ಚಿಸುತ್ತದೆ.