ಮಳೆಯಲ್ಲಿ ನೆನೆಯೋದು ಒಳ್ಳೇದಲ್ಲ, ಆದರೆ, ಮಳೆ ನೀರಲ್ಲಿ ಸ್ನಾನ ಮಾಡೋದು ಒಳಿತು!
ಮಳೆಯಲ್ಲಿ ಮಕ್ಕಳು ನೆನೆಯುತ್ತಿದ್ರೆ ಅವರನ್ನು ನಾನು ಎಳೆದು ತರ್ತೇವೆ. ಅವರಿಗೆ ಜ್ವರ ಬರಬಹುದು ಎಂಬ ಆತಂಕ ಪಾಲಕರನ್ನು ಕಾಡುತ್ತದೆ. ಆದ್ರೆ 15 – 20 ನಿಮಿಷ ಮಳೆಯಲ್ಲಿ ನೆನೆದ್ರೆ ಸಾಕಷ್ಟು ಪ್ರಯೋಜನವಿದೆ.
ಮಳೆಯಲ್ಲಿ ನೆನೆಯಲು ಯಾರಿಗೆ ಇಷ್ಟವಿಲ್ಲ ಹೇಳಿ. ಮೊದಲ ಮಳೆ ಭೂಮಿಗೆ ಬಿದ್ದಾಗ ಬಹುತೇಕರು ಆ ಮಳೆಯಲ್ಲಿ ಆಟವಾಡಲು ಬಯಸ್ತಾರೆ. ಅದ್ರಲ್ಲಿ ನೆನೆದು ಖುಷಿಪಡ್ತಾರೆ. ಈಗ ದೇಶದ ಅನೇಕ ಕಡೆ ಮಳೆಯಾಗ್ತಿದೆ. ಮಳೆಗಾಲದಲ್ಲಿ ಅನೇಕ ಖಾಯಿಲೆಗಳು ನಮ್ಮನ್ನು ಕಾಡುತ್ತವೆ. ಹೊಸ ಹೊಸ ಸೋಂಕುಗಳು ಬರುವ ಸಾಧ್ಯತೆಯಿರುತ್ತದೆ. ಮಳೆಗಾಲದ ಮಳೆಯಲ್ಲಿ ನೆನೆದ್ರೆ ನೆಗಡಿ, ಜ್ವರ ಸೇರಿದಂತೆ ಅನೇಕ ಸಮಸ್ಯೆ ನಿಶ್ಚಿತ. ಇದೇ ಕಾರಣಕ್ಕೆ ಮಕ್ಕಳನ್ನು ಮಳೆಯಲ್ಲಿ ನೆನೆಯಲು ಪಾಲಕರು ಬಿಡುವುದಿಲ್ಲ. ಆದ್ರೆ ಮಳೆ ನೀರಿನಲ್ಲಿ ಸ್ನಾನ ಮಾಡುವುದ್ರಿಂದಲೂ ಅನೇಕ ಲಾಭವಿದೆ. ಮಳೆ ನೀರು ದೇಹಕ್ಕೆ ಬಿದ್ದರೆ ಏನೆಲ್ಲ ಪ್ರಯೋಜನವಿದೆ ಎಂಬುದನ್ನು ನಾವಿಂದು ಹೇಳ್ತೇವೆ.
ಮಳೆ ನೀರಿನಲ್ಲಿ ನೆನೆಯುವುದ್ರಿಂದ ಇದೆ ಇದೆಲ್ಲ ಲಾಭ :
ಬಿ 12 ಮಟ್ಟ ಹೆಚ್ಚಳ (B12) : ಮಳೆ ನೀರು ಹಗುರವಾಗಿರುತ್ತದೆ. 15-20 ನಿಮಿಷಗಳ ಕಾಲ ಮಳೆಯಲ್ಲಿ ಸ್ನಾನ ಮಾಡುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಏಕೆಂದರೆ ಮಳೆ ನೀರಿನಲ್ಲಿ ಸೂಕ್ಷ್ಮಾಣು ಜೀವಿಗಳಿವೆ. ಇದು ನಿಮ್ಮ ದೇಹವು ವಿಟಮಿನ್ ಬಿ 12 ಅನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ.
ಮೂಡ್ ಫ್ರೆಶ್ (Mood Fresh) : ಮಳೆ ನೀರಿನ ಪಿಹೆಚ್ ಲೇಬಲ್ ಕ್ಷಾರೀಯವನ್ನು ಹೊಂದಿರುತ್ತದೆ. ಇದು ನಿಮ್ಮ ಮನಸ್ಸನ್ನು ತಕ್ಷಣವೇ ರಿಫ್ರೆಶ್ ಮಾಡುತ್ತದೆ. ಮಳೆಯಲ್ಲಿ ಸ್ನಾನ ಮಾಡುವುದರಿಂದ ನಿಮ್ಮ ಒತ್ತಡವೂ ದೂರವಾಗುತ್ತದೆ. ಮಳೆಯಲ್ಲಿ ಸ್ನಾನ ಮಾಡುವುದರಿಂದ ದೇಹದಿಂದ ಎಂಡಾರ್ಫಿನ್ ಮತ್ತು ಸಿರೊಟೋನಿನ್ ನಂತಹ ಸಂತೋಷದ ಹಾರ್ಮೋನ್ ಗಳು ಬಿಡುಗಡೆಯಾಗುತ್ತವೆ. ನಿಮ್ಮ ಆತಂಕ ಮತ್ತು ಒತ್ತಡವನ್ನು ತೆಗೆದುಹಾಕುವ ಮೂಲಕ ನಿಮ್ಮ ಮನಸ್ಥಿತಿಯನ್ನು ಸಂತೋಷಪಡಿಸುವ ಕೆಲಸವನ್ನು ಇದು ಮಾಡುತ್ತಾರೆ. ಆದರೆ, ಮಳೆಯಲ್ಲಿ ಸ್ನಾನ ಮಾಡಿದ ನಂತರ ಮೈಲ್ಡ್ ಶಾಂಪೂವಿನಿಂದ ಕೂದಲನ್ನು ತೊಳೆಯಬೇಕು.
ಆಗಾಗ ನಿದ್ದೆ ಮಾಡೋ ಅಭ್ಯಾಸದಿಂದ ಅಧಿಕ ರಕ್ತದೊತ್ತಡದ ಅಪಾಯ !
ಕೂದಲ ಸೌಂದರ್ಯ (Hair Care) : ಕೂದಲಿನ ಆರೋಗ್ಯದ ಬಗ್ಗೆ ಹೆಚ್ಚು ಚಿಂತೆಪಡುವವರು ಮಳೆಯಲ್ಲಿ ನೆನೆಯಬಹುದು. ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಸ್ವಚ್ಛಗೊಳಿಸಲು ಮಳೆ ನೀರು ಸಹಾಯ ಮಾಡುತ್ತದೆ. ಇದರಲ್ಲಿರುವ ಕ್ಷಾರೀಯವು ನಿಮ್ಮ ಕೂದಲಿನ ಬೇರುಗಳಲ್ಲಿರುವ ಕೊಳಕು ಮತ್ತು ಕೊಳೆಯನ್ನು ಸ್ವಚ್ಛಗೊಳಿಸುತ್ತದೆ. ಪ್ರತಿದಿನ ಮಳೆಯಲ್ಲಿ ಸ್ನಾನ ಮಾಡುವುದರಿಂದ ಕೂದಲು ಚೆನ್ನಾಗಿ ಕಾಣುತ್ತದೆ.
ದುದ್ದುಗಳಿಗೆ ಪರಿಹಾರ : ತಣ್ಣನೆಯ ಮಳೆ ನೀರಿನಲ್ಲಿ ಸ್ನಾನ ಮಾಡುವ ಮೂಲಕ ನೀವು ಈ ದದ್ದುಗಳಿಂದ ಪರಿಹಾರವನ್ನು ಪಡೆಯಬಹುದು. ಮಳೆ ಸ್ನಾನವು ನಿಮ್ಮ ದೇಹವನ್ನು ತಂಪಾಗಿಸುವುದಲ್ಲದೆ ದದ್ದುಗಳಿಗೆ ಚಿಕಿತ್ಸೆ ನೀಡುತ್ತದೆ.
ಮೂಲಂಗಿ ತಿಂದ್ರೆ ಒಂದೆರಡಲ್ಲ, ಸುಮಾರು ರೋಗಕ್ಕೆ ಮದ್ದಾಗುತ್ತೆ!
ಚಯಾಪಚಯ ಹೆಚ್ಚಾಗಬಹುದು : ನಿಹಾನ್ ಫುಕುಶಿ ವಿಶ್ವವಿದ್ಯಾಲಯದ 2013 ರ ಅಧ್ಯಯನವು ಮಳೆಯು ನಿಮ್ಮ ದೇಹವನ್ನು ತಂಪಾಗಿಸುತ್ತದೆ ಮತ್ತು ಶೀತ ಪರಿಸ್ಥಿತಿಗಳಲ್ಲಿ ನಿಮ್ಮ ದೇಹದ ಶಕ್ತಿಯ ಬೇಡಿಕೆಗಳನ್ನು ಹೆಚ್ಚಿಸುತ್ತದೆ ಎಂದು ಹೇಳಿದೆ. ಮಳೆಯಲ್ಲಿ ನೆನೆಯುವುದ್ರಿಂದ ಚಯಾಪಚಯ ಶಕ್ತಿಯೂ ಹೆಚ್ಚಾಗುತ್ತದೆ.
ಉತ್ತಮ ಹಾರ್ಮೋನ್ ಸಮತೋಲನ : ಮಳೆಯಲ್ಲಿ ಒದ್ದೆಯಾಗುವುದು ನಿಮ್ಮ ಹಾರ್ಮೋನುಗಳನ್ನು ಸಮತೋಲನಗೊಳಿಸಲು ಉತ್ತಮ ಮಾರ್ಗವಾಗಿದೆ. ಹಾರ್ಮೋನ್‌ಗಳನ್ನು ನಿಯಂತ್ರಿಸುವುದರ ಜೊತೆಗೆ, ಮಳೆ ನೀರು ಕಿವಿ ಸಮಸ್ಯೆಗಳಿಗೂ ಪರಿಣಾಮಕಾರಿಯಾಗಿದೆ. ಇದು ಯಾವುದೇ ಕಿವಿ ಸೋಂಕಿಗೆ ಚಿಕಿತ್ಸೆ ನೀಡುತ್ತದೆ. ಕಿವಿ ನೋವನ್ನು ದೂರವಿಡುತ್ತದೆ.
ಮಳೆಯಲ್ಲಿ ಯಾವಾಗ ಸ್ನಾನ ಮಾಡಬೇಕು ಮತ್ತು ಯಾವಾಗ ಮಾಡಬಾರದು?
ಸಾಮಾನ್ಯವಾಗಿ ಮೊದಲ ಮಳೆಯನ್ನು ಆನಂದಿಸಲು ಜನರು ಬಯಸುತ್ತಾರೆ. ಆದ್ರೆ ಅದು ಪ್ರಯೋಜನಕಾರಿಯಲ್ಲ. ನಾವು ಯಾವಾಗಲೂ ಮೊದಲ ಮಳೆಯಲ್ಲಿ ಸ್ನಾನ ಮಾಡುವುದನ್ನು ತಪ್ಪಿಸಬೇಕು. ಏಕೆಂದರೆ ಇದು ಆರೋಗ್ಯ ಸಮಸ್ಯೆಗಳ ಅಪಾಯವನ್ನು ಮಾತ್ರವಲ್ಲದೆ ಚರ್ಮ ರೋಗಗಳನ್ನೂ ಹೆಚ್ಚಿಸುತ್ತದೆ. ಮೊದಲ ಮಳೆಗೆ ಒದ್ದೆಯಾಗುವುದರಿಂದ ದದ್ದುಗಳು, ಮೊಡವೆಗಳಂತಹ ಸಮಸ್ಯೆಗಳು ಹೆಚ್ಚಾಗಿ ಉಲ್ಬಣಗೊಳ್ಳುತ್ತವೆ. ಇದರ ಹಿಂದಿರುವ ಒಂದು ಕಾರಣವೆಂದರೆ ಮಳೆಯ ಮೊದಲ ತುಂತುರು ಕಲುಷಿತ ಅಥವಾ ಆಮ್ಲದಿಂದ ಕೂಡಿರುತ್ತದೆ.