Asianet Suvarna News Asianet Suvarna News

ಖರ್ಜೂರ ಹೇಗ್ಬೇಕೊ ಹಾಗೆ ತಿನ್ತೀರಾ? ಅದಕ್ಕೂ ಟೈಮ್, ರೂಲ್ಸ್ ಇದೆ!

ಆರೋಗ್ಯ ಚೆನ್ನಾಗಿಟ್ಟುಕೊಳ್ಳಬೇಕೆಂದು ಏನೆಲ್ಲಾ ಸರ್ಕಸ್ ಮಾಡ್ತೀವಿ. ಜಿಮ್, ಏರೋಬಿಕ್ಸ್, ವ್ಯಾಯಾಮ, ಡಯೆಟ್, ಆಹಾರದಲ್ಲಿ ಮಿತ ಮುಂತಾದ ಪ್ರಯತ್ನಗಳು ನಡಿಯುತ್ತಿರುತ್ತದೆ. ನಿಜ, ಆರೋಗ್ಯ ಕಾಯ್ದುಕೊಳ್ಳುವುದು ಸುಲಭದ ಮಾತಲ್ಲ.

Rule to have dates to have good health and to be fit
Author
First Published Oct 6, 2022, 5:14 PM IST

ಇಂದು ಬಹುತೇಕ ಜನರು ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅದು ಅಲ್ಪಾವಧಿ ಅಥವಾ ದೀರ್ಘಕಾಲದ ಕಾಯಿಲೆ ಇರಬಹುದು. ಒಂದೇ ರೀತಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸುಲಭವಲ್ಲ. ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತಾ ವಯಸ್ಸಿಗನುಗುಣವಾಗಿ ನೋಡಿಕೊಳ್ಳಬೇಕು. ಇಂದು ಮಧುಮೇಹ ಎಂಬುದು ಸಾಮಾನ್ಯವಾಗಿದೆ. ತೂಕ ಇಳಿಸಿಕೊಳ್ಳುವುದು, ಮಧುಮೇಹ, ದೀರ್ಘಕಾಲದ ಕಾಯಿಲೆಗಳನ್ನು ತಪ್ಪಿಸಲು ಸಕ್ಕರೆ ಸೇವಿಸುವುದನ್ನೇ ಕಡಿಮೆ ಮಾಡುತ್ತಾರೆ. ಫಿಟ್ನೆಸ್ ಬಗ್ಗೆ ಹೆಚ್ಚು ಗಮನಹರಿಸುತ್ತಾರೆ. ಇವರೆಲ್ಲಾ ಸಕ್ಕರೆ ಬದಲಿಯಾಗಿ ಖರ್ಜೂರ ಬಳಸುತ್ತಾರೆ. ಇದು ಇಂದು ಬಹಳ ಜನಪ್ರಿಯವಾಗಿದೆ ಕೂಡ. ಉಪವಾಸದ ಸಮಯದಲ್ಲಿ ಖರ್ಜೂರ ತಿನ್ನುವುದರಿಂದ ರೋಗ ನಿರೋಧಕ ಶಕ್ತಿ, ಸುಸ್ತಾಗದಂತೆ ನೋಡಿಕೊಳ್ಳುತ್ತದೆ. ಹಬ್ಬ ಹರಿದಿನಗಳ ಸಂದರ್ಭದಲ್ಲಿ ಸಿಹಿ ಇದ್ದೇ ಇರುತ್ತೆ. ಹಾಗಂತ ಕೈ ಬಾಯಿ ಕಟ್ಟಿ ಹಾಕಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಈ ಸಕ್ಕರೆ ಬದಲಿಗೆ ಇಂದು ಖರ್ಜೂರ ಹೆಚ್ಚು ಜನಪ್ರಿಯವಾಗಿತ್ತಿದೆ. ಆಹಾರದಲ್ಲಿ ಆಗಾಗ್ಗೆ ಸಕ್ಕರೆಬೇಕೆಂದು ಅನಿಸಿದರೆ ಖರ್ಜೂರ ಸೇವನೆಯು ಆ ಕಡುಬಯಕೆಗಳನ್ನು ಪೂರೈಸುತ್ತದೆ.

ಆಯುರ್ವೇದದ ಪ್ರಕಾರ, ಖರ್ಜೂರವು ತಂಪು ಮತ್ತು ಹಿತವಾದ ಸ್ವಭಾವವನ್ನು ಹೊಂದಿದ್ದು, ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಖರ್ಜೂರದಲ್ಲಿ ಹೆಚ್ಚಿನ ಫೈಬರ್ ಅಂಶವಿದೆ. ಇದು ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುವ ಕಬ್ಬಿಣದ ಸಮೃದ್ಧ ಮೂಲವಾಗಿದೆ ಮತ್ತು ತ್ವರಿತ ಶಕ್ತಿ ಬೂಸ್ಟರ್ ಆಗಿದೆ. ಖರ್ಜೂರ ತಿನ್ನುವುದರಿಂದ ಅಧಿಕ ಕೊಲೆಸ್ಟ್ರಾಲ್ ಮಟ್ಟ ಮತ್ತು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಖರ್ಜೂರದಲ್ಲಿ ಮೆಗ್ನೀಸಿಯಮ್ ಅಧಿಕವಾಗಿದೆ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ಸಂಧಿವಾತ ಇರುವವರಿಗೆ ಸೂಕ್ತವಾದ ಆಯ್ಕೆಯಾಗಿದೆ. ಸಾಕಷ್ಟು ವಿಟಮಿನ್, ಖನಿಜ, ಫೈಬರ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಫಾಸ್ಫರಸ್, ತಾಮ್ರದ ಅಂಶಗಳು ಹೊಂದಿದೆ.

ಪ್ರತೀ ದಿನ ಖರ್ಜೂರವನ್ನು ಸೇವಿಸಬೇಕು. ಆರೋಗ್ಯದ ಮೇಲೆ ಖರ್ಜೂರದ ಪ್ರಯೋಜನಗಳು ಹಲವಾರು ಇವೆ. ಅಲ್ಲದೆ ಇದನ್ನು ಹೇಗೆ ಹಾಗೂ ಯಾವ ಸಮಯದಲ್ಲಿ ಸೇವಿಸದರೆ ಉತ್ತಮ ಎಂಬುದರ ಬಗ್ಗೆ ಇಲ್ಲಿ ಹೇಳಲಾಗಿದೆ.

ದಿನಾ ಹಸಿ ಖರ್ಜೂರ ತಿಂದ್ರೆ ಹಾರ್ಟ್ ಅಟ್ಯಾಕ್ ಭಯ ಬೇಕಿಲ್ಲ

 ಪ್ರಯೋಜನಗಳು
1. ಮಲಬದ್ಧತೆ ತಡೆಯುತ್ತದೆ:
ಸೇವಿಸುವ ಆಹಾರ ಸರಿಯಾಗಿದ್ದರೆ ಕರುಳು ಸರಿಯಾಗಿ ಕೆಲಸ ಮಾಡುತ್ತದೆ. ಕೆಲವೊಮ್ಮೆ ಕರುಳಿನ ಚಲನೆಯು ನಿಧಾನವಾದಾಗ ಮಲಬದ್ಧತೆ ಕಾಣಿಸಿಕೊಳ್ಳುತ್ತದೆ.  ಮಲಬದ್ಧತೆ ತಡೆಗಟ್ಟಲು ಖರ್ಜೂರ ಅತ್ಯುತ್ತಮ ಆಯ್ಕೆಯಾಗಿದೆ. ಏಕೆಂದರೆ ಇದರಲ್ಲಿ ಕರಗುವ ಮತ್ತು ಕರಗದ ಫೈಬರ್‌ನ ಅಂಶ ಸಮೃದ್ಧವಾಗಿವೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ.
2. ಹೃದಯದ ಆರೋಗ್ಯ ಸುಧಾರಿಸುತ್ತದೆ: ಖರ್ಜೂರ ಸೇವನೆಯಿಂದ ಹೃದಯ ಆರೋಗ್ಯ ಕಾಯ್ದುಕೊಳ್ಳುಬಹುದು. ಚಳಿಗಾಲದಲ್ಲಿ ಹೃದಯಾಘಾತ ಹೆಚ್ಚು. ಈ ಸಮಯದಲ್ಲಿ ದಿನವೂ ಖರ್ಜೂರ ಸೇವಿಸುವುದರಿಂದ ಹೃದಯದ ಅಪಾಯವನ್ನು ತಡೆಯುತ್ತದೆ. 
3. ಆರೋಗ್ಯಕರ ಕೊಲೆಸ್ಟ್ರಾಲ್ ನಿಯಂತ್ರಣ: ಖರ್ಜೂರ ಸೇವಿಸುವುದರಿಂದ ದೇಹದಲ್ಲಿ ಸಂಗ್ರಹವಾಗುವ  ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 
4. ಮೂಳೆಯ ಆರೋಗ್ಯ ಸುಧಾರಣೆ: ಖರ್ಜೂರದಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ರಂಜಕ, ತಾಮ್ರ ಮತ್ತು ಮೆಗ್ನೀಸಿಯಮ್ ಹೇರಳವಾಗಿದೆ. ಇವು ದೇಹಕ್ಕೆ ಹಾಗೂ ಮೂಳೆಯ ಆರೋಗ್ಯಕ್ಕೆ ಒಳ್ಳೆಯದು.
5. ರಕ್ತದೊತ್ತಡ ನಿಯಂತ್ರಣ: ಖರ್ಜೂರವು ಬಿಪಿ ತೊಂದರೆಗಳನ್ನು ಸಹ ನಿರ್ವಹಿಸುತ್ತವೆ. 
6. ಲೈಂಗಿಕ ಶಕ್ತಿ ಹೆಚ್ಚಿಸುತ್ತದೆ: ದಾಂಪತ್ಯದಲ್ಲಿ ಲೈಂಗಿಕ ಸಂಬAಧ ಕಡಿಮೆ ಆಗಿದ್ದಲ್ಲಿ ಖರ್ಜೂರ ಸೇವಿಸುವುದರಿಂದ ಈ ಸಮಸ್ಯೆಯಿಂದ ದೂರ ಉಳಿಯಬಹುದು. ಏಕೆಂದರೆ ಇದು ಇಬ್ಬರ ನಡುವೆ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ.
7. ಮೆದುಳಿನ ಆರೋಗ್ಯ ಉತ್ತೇಜಿಸುತ್ತದೆ: ಉರಿಯೂತ ನಿವಾರಕ ಆಹಾರವಾಗಿರುವ ಖರ್ಜೂರವು, ಮೆದುಳಿನಲ್ಲಿನ ಉರಿಯೂತವನ್ನು ನಿಯಂತ್ರಿಸುತ್ತದೆ. ಇದರಿಂದ ಮಾನಸಿಕ ಆರೋಗ್ಯ ಮತ್ತು ಅಲ್‌ಝೈಮರ್‌ನಂತಹ ನ್ಯೂರೋ ಡಿಜೆನೆರೆಟಿವ್ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
8. ಆಯಾಸ (ದೌರ್ಬಲ್ಯ) ನಿವಾರಿಸುತ್ತದೆ: ಕೆಲಸ ಮಾಡಿಯೋ ಅಥವಾ ಇನ್ಯಾವುದೋ ಕಾರಣಕ್ಕೆ ಆಯಾಸ ಆಗುತ್ತಿದ್ದರೆ, ಅಥವಾ ವೀಕ್‌ನೆಸ್ ಇರುವವರು ಖರ್ಜೂರ ಸೇವಿಸದರೆ ಆಯಾಸ ಕಡಿಮೆ ಆಗಿ ದೇಹಕ್ಕೆ ಅಗತ್ಯ ಶಕ್ತಿಯನ್ನು ಒದಗಿಸುತ್ತದೆ. 
9. ರಕ್ತಹೀನತೆ ನಿಯಂತ್ರಣ: ಕಬ್ಬಿಣದ ಅಂಶದಿAದ ಸಮೃದ್ಧವಾಗಿರುವ ಖರ್ಜೂರವು ದೇಹದಲ್ಲಿನ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
10. ಆರೋಗ್ಯಕರ ತೂಕ ಹೆಚ್ಚಳ: ದಿನಕ್ಕೆ 4 ಖರ್ಜೂರವನ್ನು ಸೇವಿಸುವುದು ಆರೋಗ್ಯಕರ ತೂಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
11. ಮೂಲವ್ಯಾಧಿ (ಪೈಲ್ಸ್) ತಡೆಯಿರಿ: ಅಧಿಕ ನಾರಿನಂಶವಿರುವ ಖರ್ಜೂರವು ಪೈಲ್ಸ್ಗೆ ಸಹಾಯ ಮಾಡುತ್ತದೆ.
12. ಉರಿಯೂತ ತಡೆಯುತ್ತದೆ: ಖರ್ಜೂರವು ಅನೇಕ ರೋಗಗಳನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ. ಸಂಧಿವಾತದAತಹ ಸ್ವಯಂ ನಿರೋಧಕ ಅಸ್ವಸ್ಥತೆಗಳಿಗೆ ಸಹಾಯ ಮಾಡುತ್ತವೆ.
13. ಆರೋಗ್ಯಕರ ಗರ್ಭಧಾರಣೆ: ಕಬ್ಬಿಣದ ಅಂಶವು ಸಮೃದ್ಧವಾಗಿರುವುದರಿಂದ, ಖರ್ಜೂರ ಸೇವಿಸುವುದರಿಂದ ಗರ್ಭಾವಸ್ಥೆಯ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಏಕೆಂದರೆ ಇದು ಗರ್ಭದ ಚೀಲವನ್ನು ಬಲಗೊಳಿಸಿ, ಮಗುವಿನ ಬೆಳವಣಿಗೆಗೆ ಸಹಕರಿಸುತ್ತದೆ. ಅಲ್ಲದೆ ಚರ್ಮ ಹಾಗೂ ಆರೋಗ್ಯಕರ ಕೂದಲ ಬೆಳವಣಿಗೆಗೂ ಸಹಾಯ ಮಾಡುತ್ತದೆ. 

ರಕ್ತ ಕಡಿಮೆಯಾಗಿ ಸುಸ್ತಾ? ಆಹಾರದಲ್ಲಾಗಲಿ ಸ್ವಲ್ಪ ಬದಲಾವಣೆ!

ಖರ್ಜೂರ ತಿನ್ನುವ ಸೂಕ್ತ ಸಮಯ
ಖರ್ಜೂರ ಡಯೆಟ್ ಫ್ರೆಂಡ್ಲಿಯಾಗಿದ್ದು, ಯಾವಗ ಬೇಕೊ ಅವಾಗ ತಿನ್ನಬಾರದು. ಖರ್ಜೂರವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ಮಧ್ಯಾಹ್ನ ತಿಂಡಿಯಾಗಿ ಸೇವಿಸುವುದು ಒಳ್ಳೆಯ ಸಮಯ ಎಂದು ತಜ್ಞರು ಹೇಳುತ್ತಾರೆ. ಸಿಹಿ ಬೇಕೆನಿಸಿದಾಗ, ತೂಕ ಹೆಚ್ಚಿಸಿಕೊಳ್ಳಲು ಮಲಗುವ ಸಮಯದಲ್ಲಿ ತುಪ್ಪದೊಂದಿಗೆ ಖರ್ಜೂರವನ್ನು ಸೇವಿಸುವುದು ಒಳ್ಳೆಯದು. ಪ್ರಾರಂಭದಲ್ಲಿ ಎರಡು ಖರ್ಜೂರವನ್ನು ತುಪ್ಪದೊಂದಿಗೆ ಸೇವಿಸಿದರೆ, ತೂಕ ಹೆಚ್ಚಿಸಿಕೊಳ್ಳಲು ಹಾಗೂ ಜೀರ್ಣಕ್ರಿಯೆ ಉತ್ತಮವಾಗಿದ್ದರೆ ದಿನಕ್ಕೆ ೪ ತಿನ್ನಬಹುದು.

ಖರ್ಜೂರ ನೆನೆಸಿಡುವುದೇಕೆ?
ಖರ್ಜೂರವನ್ನು ನೀರಿನಲ್ಲಿ ನೆನೆಸಿಟ್ಟು ಸೇವಿಸುವುದು ಬಹಳ ಒಳ್ಳೆಯದು ಎನ್ನಲಾಗುತ್ತದೆ. ಏಕೆಂದರೆ ಅವುಗಳಲ್ಲಿರುವ ಟ್ಯಾನಿನ್‌ಗಳು/ ಫೈಟಿಕ್ ಆಮ್ಲವನ್ನು ತೆಗೆದುಹಾಕುತ್ತದೆ ಮತ್ತು ಪೋಷಕಾಂಶಗಳನ್ನು ಸುಲಭವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ನೀರಿನಲ್ಲಿ ನೆನೆಸುವುದರಿಂದ ಅವುಗಳನ್ನು ಲಘುವಾಗಿ ಅಥವಾ ಜೀರ್ಣಿಸಿಕೊಳ್ಳಲು ಸುಲಭ ಮಾಡುತ್ತದೆ. ಖರ್ಜೂರ ಸೇವಿಸುವ ಮೊದಲು ಸುಮಾರು 8-10 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ನೆನೆಸುವುದು ಒಳ್ಳೆಯದು. 

ಮಕ್ಕಳಿಗೆ ಖರ್ಜೂರ 
ಖಜೂರ್ ಮಕ್ಕಳ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಉತ್ತಮವಾಗಿದೆ. ಕಡಿಮೆ ದೇಹದ ತೂಕ, ಕಡಿಮೆ ಹಿಮೋಗ್ಲೋಬಿನ್ (ಕಬ್ಬಿಣ) ಮತ್ತು ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವ ಮಕ್ಕಳು ದಿನಕ್ಕೆ ಒಂದು ಸಿಹಿ ಖರ್ಜೂರದ ಹಣ್ಣನ್ನು ಸೇವಿಸಬೇಕು. ಹೀಗೆ 2-3 ತಿಂಗಳ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು.
ಖರ್ಜೂರ ಯಾವಾಗಲು ತಂಪಾಗಿರುತ್ತದೆ. ಪಿಷ್ಠಾ, ಅಸ್ವಸ್ಥತೆಗಳಿಗೆ ಉತ್ತಮವಾದ ಔಷಧವಾಗಿ ಕಾರ್ಯ ನಿರ್ವಹಿಸುತ್ತದೆ.

Follow Us:
Download App:
  • android
  • ios