ಮುಖದ ಮೇಲೆ ಕಾಣಿಸಿಕೊಳ್ಳೋ ಕಪ್ಪು ಕಲೆಗೆ ಇಲ್ಲಿವೆ ಸಿಂಪಲ್ Home Remedies

ಹೊರಗಿನಿಂದ ಮನೆಗೆ ಬಂದ ಕೂಡಲೆ ಮುಖ ಕಪ್ಪಾಗಿರುತ್ತದೆ, ಫ್ರೆಶ್‌ನೆಸ್ ಇರುವುದಿಲ್ಲ, ಬಿಸಿಲಿಗೆ ಮುಖ ಟ್ಯಾನ್(Tan) ಆಗಿರುತ್ತೆ. ಹೀಗೆ ಅನೇಕ ಕಾರಣಗಳು ಒಂದೆಡೆ ಆದರೆ ಅದಗ್ಯೂ ಕಪ್ಪು ಕಲೆಗಳು ಚರ್ಮದ ಮೇಲೆ ಕಾಣಿಸಿಕೊಳ್ಳುತ್ತವೆ. ಇದಕ್ಕೆ ಚರ್ಮದ ಮೇಲಿನ ಮೆಲನಿನ್(Melanin) ಅಧಿಕವಾಗಿ ಉತ್ಪತ್ತಿಯಾಗುವುದರಿಂದ ಮುಖ ಮತ್ತು ಕತ್ತಿನ ಮೇಲೆ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತದೆ. ಈ ಕಲೆಗಳನ್ನು ಹೋಗಲಾಡಿಸಲು ಮನೆಯಲ್ಲೇ ಮಾಡಬಹುದಾದ ಔಷಧಗಳು ಹಾಗೂ ವಿಧಾನಗಳ ಬಗ್ಗೆ ಇಲ್ಲಿದೆ ಮಾಹಿತಿ.

Beauty Tips Home remedies for Dark Spot removal

ಕಪ್ಪು ಚುಕ್ಕೆ ಎಂದರೆ ಮಧ್ಯವಯಸ್ಕ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಚರ್ಮದ ಹೈಪರ್ ಪಿಗ್ಮೆಂಟೇಶನ್(Hipper Pigmentation) ಚರ್ಮದ ಮೇಲೆ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಉತ್ಪತ್ತಿಯಾದ ಮೆಲನಿನ್‌ನ ಸ್ಥಳೀಯ ಪ್ಯಾಚ್ ಸಂಗ್ರಹವಾದಾಗ ಕಪ್ಪು ಕಲೆಗಳು ಅಕಾ ಪಿಗ್ಮೆಂಟೇಶನ್‌ಗಳು ಸಂಭವಿಸುತ್ತವೆ. ಇದು ಹಣೆಯ, ಮುಖ ಅಥವಾ ಕೆನ್ನೆಯ ಮೂಳೆ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತವೆ. ಹಾರ್ಮೋನ್ ಅಸಮತೋಲನ, ಸೂರ್ಯನಿಗೆ ಅತಿಯಾಗಿ ಒಡ್ಡಿಕೊಳ್ಳುವುದು, ಕೆಲವು ಔಷಧಿಗಳು, ಗರ್ಭಧಾರಣೆ(Pregnancy), ನಿದ್ರೆಯ ಕೊರತೆ(Insomnia), ವಿಟಮಿನ್ ಕೊರತೆಗಳು ಮತ್ತು ಅತಿಯಾದ ಒತ್ತಡದಂತಹ(Stress) ಕೆಲವು ಅಂಶಗಳಿಗೂ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತವೆ.

ಕೆಲ ಜನರು ಮುಖದ ಮೇಲಿನ ಕಪ್ಪು ಕಲೆಗಳಿಂದ ಮುಜುಗರವನ್ನು ಅನುಭವಿಸುತ್ತಾರೆ. ಲೇಸರ್ ಶಸ್ತçಚಿಕಿತ್ಸೆಗಳು ಮತ್ತು ಆಸಿಡ್ ಸಿಪ್ಪೆಸುಲಿಯುವುದನ್ನು ಒಳಗೊಂಡAತಹ ಕಪ್ಪು ಕಲೆಗಳನ್ನು ಗುಣಪಡಿಸುವ ಚಿಕಿತ್ಸೆಗಳಿವೆ. ಅದಾಗ್ಯೂ ನಿಮ್ಮ ಚರ್ಮದ ಮೇಲಿನ ಕಲೆಗಳು ಮತ್ತು ಕಲೆಗಳನ್ನು ತೊಡೆದುಹಾಕಲು ಸಹಾಯ ಮಾಡುವ ಮುಖ ಮತ್ತು ಕತ್ತಿನ ಕಪ್ಪು ಕಲೆಗಳಿಗೆ ಮನೆಮದ್ದುಗಳನ್ನು ಬಳಸಬಹುದು. ಈ ಪರಿಹಾರಗಳು ಕಲೆಗಳನ್ನು ನಿವಾರಿಸುತ್ತದೆ ಮತ್ತು ನಿಮ್ಮ ಮುಖದ ಬಣ್ಣವನ್ನು ಹೊಳೆಯುವಂತೆ ಮಾಡಲು ಚರ್ಮವನ್ನು ಹಗುರಗೊಳಿಸುತ್ತದೆ.

ಕಪ್ಪು ಕಲೆಗಳಿಂದ ಬಳಲುತ್ತಿದ್ದರೆ ನೈಸರ್ಗಿಕ ಚಿಕಿತ್ಸೆಗಳು ಹಾಗೂ ಕಪ್ಪು ಕಲೆಗಳನ್ನು ತೆಗೆದುಹಾಕಲು ಮನೆಮದ್ದುಗಳು ಇಲ್ಲಿವೆ.

ನಯನತಾರಾ ತ್ವಚೆ ಮತ್ತು ಕೂದಲ ಆರೈಕೆಗೆ ಈ ಎಣ್ಣೆಯೇ ಬಳಸುವುದಂತೆ!

1.ಆಲೂಗೆಡ್ಡೆ (Potato)
ಆಲೂಗೆಡ್ಡೆಯು ಮುಖ(Face) ಮತ್ತು ಕುತ್ತಿಗೆಯ(Neck) ಮೇಲಿನ ಕಪ್ಪು ಕಲೆಗಳನ್ನು ತೆಗೆದುಹಾಕಲು ಉತ್ತಮ ಮನೆಮದ್ದಾಗಿದೆ. ನೈಸರ್ಗಿಕ ಬ್ಲೀಚಿಂಗ್(Bleaching) ಪರಿಣಾಮಗಳನ್ನು ಹೊಂದಿರುವ ಆಲೂಗಡ್ಡೆ ಚರ್ಮ(Skin), ಕಲೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಆಲೂಗೆಡ್ಡೆಯಲ್ಲಿರುವ ಪಿಷ್ಟವು ಪಿಗ್ಮೆಂಟೇಶನ್ ಅನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. ಆದರೆ ಆಲೂಗಡ್ಡೆಯಲ್ಲಿರುವ ಕಿಣ್ವಗಳು ಆರೋಗ್ಯಕರ ಚರ್ಮವನ್ನು ಉತ್ತೇಜಿಸುತ್ತದೆ.
ಬಳಸುವ ವಿಧಾನ: ಆಲೂಗಡ್ಡೆಯನ್ನು ಹೋಳಾಗಿ ಕತ್ತರಿಸಿಕೊಳ್ಳಿ. ಒಂದು ಆಲೂಗೆಡ್ಡೆಯ ಸ್ಲೆöÊಸ್ ಅನ್ನು ಕಪ್ಪು ಕಲೆಗಳ ಮೇಲೆ ನೇರವಾಗಿ ಉಜ್ಜಿಕೊಳ್ಳಿ, 15 ನಿಮಿಷ ಬಿಡಿ. ನಂತರ ಅರಿಶೀನ ಪುಡಿ ಮತ್ತು ಸ್ವಲ್ಪ ನಿಂಬೆ ರಸದೊಂದಿಗೆ ಆಲೂಗಡ್ಡೆ ರಸವನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕಪ್ಪು ಕಲೆ ಇರುವ ಪ್ರದೇಶಕ್ಕೆ ಹಚ್ಚಿ ಒಣಗಲು ಬಿಡಿ. 15 ನಿಮಿಷಗಳ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ವಿಧಾನ 2: ಒಂದು ಆಲೂಗಡ್ಡೆಯನ್ನು ಸಣ್ಣಗೆ ಹೆಚ್ಚಿ ರುಬ್ಬಿಕೊಂಡು ಅದರ ರಸವನ್ನು ತೆಗೆದುಕೊಳ್ಳಿ. ಈ ರಸಕ್ಕೆ ಅರಿಶಿನ ಪುಡಿ(Turmeric) ಮತ್ತು ಸ್ವಲ್ಪ ನಿಂಬೆ ರಸವನ್ನು ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕಲೆ ಇರುವ ಜಾಗಕ್ಕೆ ಹಚ್ಚಿ 15 ನಿಮಿಷ ಒಣಗಲು ಬಿಡಿ. ನಂತರ ಅದನ್ನು ನೀರಿನಲ್ಲಿ ತೊಳೆಯಿರಿ.

2. ನಿಂಬೆ ರಸ(Lemon Juice) 
ನಿಂಬೆ ರಸವು ವಿಟಮಿನ್ ಸಿ(Vitamin C) ಹೇರಳವಾಗಿದ್ದು, ಕಪ್ಪು ಕಲೆಗಳು ಮತ್ತು ಕಪ್ಪು ವರ್ಣದ್ರವ್ಯವನ್ನು ಬೆಳಗಿಸುತ್ತದೆ. ಆದ್ದರಿಂದ, ನಿಂಬೆ ರಸವು ಕಪ್ಪು ಕಲೆಗಳು ಮತ್ತು ಪಿಗ್ಮೆಂಟೇಶನ್‌ಗಳಿಗೆ(Pigmentation) ಅದ್ಭುತವಾದ ನೈಸರ್ಗಿಕ ಪರಿಹಾರಗಳಲ್ಲಿ ಒಂದಾಗಿದೆ. 

ವಿಧಾನ: ಸ್ವಲ್ಪ ತಾಜಾ ನಿಂಬೆ ರಸವನ್ನು ಹತ್ತಿ ಉಂಡೆಯಲ್ಲಿ(Cotton) ಅದ್ದಿ. ಕಪ್ಪು ಕಲೆಗಳಾಗಿರುವ ಕಡೆ ಅದನ್ನು ಹಚ್ಚಿ ಒಣಗಲು ಬಿಡಿ. 15 ನಿಮಿಷದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ನಿಮ್ಮ ಚರ್ಮ ಸೂಕ್ಷö್ಮವಾಗಿದ್ದರೆ ಕಪ್ಪು ಕಲೆಗಳಿಗೆ ಹಚ್ಚುವ ಮೊದಲು ನಿಂಬೆ ರಸಕ್ಕೆ(Lemon Juice) ಗುಲಾಬಿ ನೀರು(Rose Water), ಸರಳ ನೀರು(Water) ಅಥವಾ ಜೇನುತುಪ್ಪದೊಂದಿಗೆ(Honey) ದುರ್ಬಲಗೊಳಿಸಿ. ಚರ್ಮದ ಮೇಲೆ ಗಾಯಗಳಾಗಿದ್ದಲ್ಲಿ(Wound) ಅಥವಾ ಹುಣ್ಣುಗಳಾಗಿದ್ದರೆ(Acne) ನಿಂಬೆ ರಸವನ್ನು ಹಚ್ಚಬೇಡಿ. ನಿಂಬೆ ರಸ ಹಚ್ಚಿದ ನಂತರ ಕನಿಷ್ಠ ಕೆಲ ಗಂಟೆಗಳ ಕಾಲ ಹೊರಗೆ ಹೋಗಬಾರದು. ಏಕೆಂದರೆ  ನಿಂಬೆ ರಸವು ಚರ್ಮದ ಸೂಕ್ಷö್ಮತೆಯನ್ನು ಹೆಚ್ಚಿಸುತ್ತದೆ.

Beauty Tips: ಇದ್ದಿಲಿನ ಮಾಸ್ಕ್ನಲ್ಲಿ ಅಡಗಿದೆ ತ್ವಚೆಯ ಸೌಂದರ್ಯ

3. ಮಜ್ಜಿಗೆ (Butter Milk)
ಮಜ್ಜಿಗೆ ದೇಹಕ್ಕೆ ಮಾತ್ರವಲ್ಲದೆ ಚರ್ಮದಲ್ಲಿನ ಕಪ್ಪು ಕಲೆಗಳ ನಿವಾರಣೆಗೆ ಪ್ರಯೋಜನಕಾರಿಯಾಗಿದೆ. ಮಜ್ಜಿಗೆಯು ಸುಡದೆ(Burn) ಕಲೆಯನ್ನು ನಿವಾರಿಸುತ್ತದೆ. ಮಜ್ಜಿಗೆಯಲ್ಲಿನ ಲ್ಯಾಕ್ಟಿಕ್ ಆಮ್ಲವು(Lactic Acid) ನಿಧಾನವಾಗಿ ವರ್ಣದ್ರವ್ಯವನ್ನು ತೊಡೆದುಹಾಕುತ್ತದೆ. ಅಲ್ಲದೆ ಚರ್ಮದ ಬಣ್ಣವನ್ನು ಸುಧಾರಿಸುತ್ತದೆ.
ಬಳಸುವ ವಿಧಾನ: 2 ಚಮಚ ಟೊಮೆಟೊ(Tomato) ರಸವನ್ನು 4 ಚಮಚ ಮಜ್ಜಿಗೆಯೊಂದಿಗೆ(Butter Milk) ಬೆರೆಸಿ ಚೆನ್ನಾಗಿ ಕಲಸಿ. ಈ ಮಿಶ್ರಣವನ್ನು ಕಪ್ಪು ಕಲೆಗಳಾದ ಜಾಗಕ್ಕೆ ಹಚ್ಚಿ 15 ನಿಮಿಷಗಳ ಕಾಲ ಒಣಗಲು ಬಿಡಿ.  ನಂತರ ಇದನ್ನು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಈ ರೀತಿ ವಾರದಲ್ಲಿ ಎರಡು ಬಾರಿಯಾದರೂ ಮಾಡಿದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು ಹಾಗೂ ಸರ್ಮದ ಬಣ್ಣವನ್ನು ಸುಧಾರಿಸುತ್ತದೆ ಕೂಡ. 

4. ಶ್ರೀಗಂಧ(Sandal)
ಆಯುರ್ವೇದದಲ್ಲಿ(Ayurveda) ಹಲವು ಸಮಸ್ಯೆಗಳಿಗೆ, ತ್ವಚೆ ಹಾಗೂ ಚರ್ಮ ಸಂಬAಧಿತ ಸಮಸ್ಯೆಗಳಿಗೆ ಶ್ರೀಗಂಧ ಬಹಳ ಮಹತ್ವ ಪಡೆದಿದೆ. ಇದು ಕಪ್ಪು ಕಲೆಗಳನ್ನು ತೆಗೆದುಹಾಕಲು ಉತ್ತಮ ಮನೆಮದ್ದಾಗಿದೆ. ಶ್ರೀಗಂಧದಲ್ಲಿ ನೈಸರ್ಗಿಕ ತೈಲವಿದ್ದು, ಇದು ಕಪ್ಪು ಕಲೆಗಳನ್ನು ತೆಗೆದುಹಾಕುತ್ತದೆ. ಇದು ಚರ್ಮವನ್ನು ಹೊಳೆಯುವಂತೆ ಮಾಡುವ ಶಕ್ತಿಯನ್ನು ಹೊಂದಿದೆ.
ಮಾಡುವ ವಿಧಾನ: 1 ಚಮಚ ಗ್ಲಿಸರಿನ್(Glycerine), 1 ಚಮಚ ಶ್ರೀಗಂಧದ ಪುಡಿ, 3 ಚಮಚ ಗುಲಾಬಿ ನೀರನ್ನು(Rose Water) ಹಾಕಿ ಚೆನ್ನಾಗಿ ಕಲಸಿ. ಈ ಮಿಶ್ರಣವನ್ನು ಕಪ್ಪು ಕಲೆಯಾದ ಜಾಗಕ್ಕೆ ಹಚ್ಚಿ. 20 ನಿಮಿಷಗಳ ನಂತರ ಉಗುರುಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಈ ಕಲೆಗಳು ಸಂಪೂರ್ಣವಾಗಿ ಹೋಗುವವರೆಗೂ ಹಚ್ಚಿ.

Latest Videos
Follow Us:
Download App:
  • android
  • ios