ಬ್ರಿಟಿಷ್ ಮಹಿಳೆಯೊಬ್ಬರು ಕೆಚಪ್ ಭಯದಿಂದ ಬಳಲುತ್ತಿದ್ದು, ಕೆಚಪ್ ನೋಡಿದ ತಕ್ಷಣ ಪ್ರಜ್ಞೆ ತಪ್ಪುತ್ತಾರೆ. ಕೆಚಪ್ ವಾಸನೆ ಬಂದರೂ ಅಥವಾ ಪಾತ್ರೆಯಲ್ಲಿ ಕೆಚಪ್ ಅಂಟಿಕೊಂಡಿದ್ದರೂ ಅವರಿಗೆ ತೊಂದರೆಯಾಗುತ್ತದೆ.

ನಾವು ಹಲವು ರೀತಿಯ ಫೋಬಿಯಾಗಳ ಬಗ್ಗೆ ಕೇಳಿದ್ದೇವೆ, ಆದರೆ ಈ ಮೋರ್ಚುವಸ್ಕ್ವಸ್ಫೋಬಿಯಾ ಎಂದರೇನು? ತಲೆ ತಿರುಗುವ ಅಗತ್ಯವಿಲ್ಲ. ಕೆಚಪ್ ಭಯವನ್ನು ಮೋರ್ಚುವಸ್ಕ್ವಸ್ಫೋಬಿಯಾ ಎಂದು ಕರೆಯಲಾಗುತ್ತದೆ. ಇಂದು ಕೆಚಪ್ ಇಷ್ಟಪಡದ ಜನರು ಬಹಳ ಕಡಿಮೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಊಟದೊಂದಿಗೆ ಕೆಚಪ್ ಬೇಕು. ಆದರೆ ಇಲ್ಲಿ ಕೆಚಪ್‌ಗೆ ಹೆದರುವ ಮೋರ್ಚುವಸ್ಕ್ವಸ್ಫೋಬಿಯಾದಿಂದ (mortuusequusphobia) ಬಳಲುತ್ತಿರುವ ಬ್ರಿಟಿಷ್ ಮಹಿಳೆಯ ಅನುಭವದ ಕಥೆ ಇದೆ.

ಕೆಚಪ್ ನೋಡಿದ ತಕ್ಷಣ ಪ್ರಜ್ಞೆ ತಪ್ಪುತ್ತದೆ ಎಂದು ಬ್ರಿಟಿಷ್ ಯುವತಿ ಹೇಳುತ್ತಾರೆ. ತನಗೆ ಕೆಚಪ್ ಅಂದ್ರೆ ಭಯ ಅಂತ ಹೇಳಿದರೆ, ಜನರು ಯಾವಾಗಲೂ ನನ್ನನ್ನು ಗೇಲಿ ಮಾಡುತ್ತಾರೆ ಮತ್ತು ತಿರಸ್ಕರಿಸುತ್ತಾರೆ. ಯುವತಿಯ ಭಯದಿಂದ ಮನೆಯಲ್ಲಿ ಕೆಚಪ್ ಖರೀದಿಸಿ ಇಡುವುದಿಲ್ಲ ಎಂದು ಆಕೆಯ ಪತಿ ಲೇ ವುಡ್‌ಮನ್ ಹೇಳುತ್ತಾರೆ. 'ಕೆಚಪ್ ಬಾಟಲಿಯನ್ನು ನೋಡಲು ಸಹ ಅವಳಿಗೆ ಸಾಧ್ಯವಿಲ್ಲ, ಏಕೆಂದರೆ ಅದನ್ನು ನೋಡಿದರೆ ಅವಳಿಗೆ ಪ್ಯಾನಿಕ್ ಅಟ್ಯಾಕ್ ಆಗುತ್ತದೆ. ಕೆಚಪ್ ಅಂಶವಿರುವ ಯಾವುದೇ ಕರಿ ಅಥವಾ ಪಾತ್ರೆಗಳಿದ್ದರೆ, ಅದನ್ನು ತೆಗೆದುಹಾಕಲಾಗುವುದು ಎಂದು ವುಡ್‌ಮನ್ ಹೇಳಿದರು.

ಇದನ್ನೂ ಓದಿ: ವಿಶ್ವದಲ್ಲಿ ಅತಿ ಉದ್ದನೆಯ ಕಣ್ಣು ರೆಪ್ಪೆಯನ್ನು ಹೊಂದಿದ ಯುವತಿ ಇವಳೇ ನೋಡಿ..!

'ಇದು ರಕ್ತದ ಬಣ್ಣವನ್ನು ಹೋಲುತ್ತದೆ. ಆ ಭಯದ ಬಗ್ಗೆ ನಾನು ಹೇಗೆ ಹೇಳಬೇಕೆಂದು ನನಗೆ ತಿಳಿದಿಲ್ಲ. ಜನರ ಮುಂದೆ ನಾನು ಯಾವಾಗಲೂ ಮುಜುಗರಕ್ಕೊಳಗಾಗುತ್ತೇನೆ. ಯಾರಾದರೂ ನನ್ನನ್ನು ಬಂದೂಕಿನಿಂದ ಬೆದರಿಸಿದರೆ, ನಾನು ಹೆದರಿ ನಡುಗುತ್ತೇನೆ, ಅದೇ ರೀತಿ ಕೆಚಪ್ ನೋಡಿದಾಗಲೂ ನನಗೆ ಅನಿಸುತ್ತದೆ. ನಾನು ತೋರಿಸುವ ಭಯ ಇತರರಿಗೆ ನಟನೆಯಂತೆ ಕಾಣುತ್ತದೆ ಎಂದು ನನಗೆ ತಿಳಿದಿದೆ' ಎಂದು ವುಡ್‌ಮನ್ ಹೇಳಿದರು.

ತನ್ನ ಹೆಂಡತಿಗೆ ಕೆಚಪ್ ವಾಸನೆ ಬಂದರೂ ಹುಷಾರಿಲ್ಲದಂತಾಗುತ್ತದೆ. ಪಾತ್ರೆಯಲ್ಲಿ ಕೆಚಪ್ ಅಂಟಿಕೊಂಡಿರುವುದೇ ಅವಳ ದೊಡ್ಡ ಭಯ. ನಂತರ ಅವಳು ಅದನ್ನು ಎಂದಿಗೂ ಬಳಸುವುದಿಲ್ಲ ಎಂದು ವುಡ್‌ಮನ್ ಹೇಳುತ್ತಾರೆ. ಅದೇ ಸಮಯದಲ್ಲಿ, ಮೋರ್ಚುವಸ್ಕ್ವಸ್ಫೋಬಿಯಾ ಎಂಬ ಸ್ಥಿತಿ ಉಂಟಾಗಲು ಕಾರಣವೇನು ಎಂದು ಕೇಳಿದಾಗ, ಅದು ತನಗೆ ಹೇಗೆ ಬಂತು ಎಂದು ತಿಳಿದಿಲ್ಲ ಎಂದು ವುಡ್‌ಮನ್ ಉತ್ತರಿಸುತ್ತಾರೆ. 

ಇದನ್ನೂ ಓದಿ: ಹನಿಮೂನ್ ನಲ್ಲೇ ನವದಂಪತಿ ಕಿತ್ತಾಟ, ಗೋವಾದಲ್ಲೇ ಪತಿ ಬಿಟ್ಟು ಫ್ಲೈಟೇರಿದ ಪತ್ನಿ!