ಅಬ್ಬಬ್ಬಾ..2 ಇಂಚು ಉದ್ದದ ಬಾಲದೊಂದಿಗೆ ಜನಿಸಿದ ಹೆಣ್ಣು ಮಗು
ಹುಟ್ಟುತ್ತಲೇ ಮಕ್ಕಳು ಉದ್ದ ಮೂಗು, ಕಾಲು, ಕೈಗಳೊಂದಿಗೆ ಜನಿಸಿದ ಪ್ರಕರಣಗಳು ಹಲವೆಡೆ ಬೆಳಕಿಗೆ ಬಂದಿದೆ. ಆದರೆ ಇದೆಲ್ಲಕ್ಕಿಂತ ವಿಚಿತ್ರವಾಗಿ ಮೆಕ್ಸಿಕೋದಲ್ಲಿ ಮಗುವೊಂದು 2 ಇಂಚು ಉದ್ದದ ಬಾಲದೊಂದಿಗೆ ಜನಿಸಿದೆ. ಮಗುವಿಗೆ ಬಾಲನಾ ಅಂತ ಅಚ್ಚರಿಪಡ್ಬೇಡಿ. ನಂಬೋಕೆ ಕಷ್ಟವಾದರೂ ಇದು ನಿಜಾನೇ.
ಮೆಕ್ಸಿಕೋ: ಸಾಮಾನ್ಯವಾಗಿ ಎಲ್ಲಾ ರೀತಿಯ ಪ್ರಾಣಿಗಳಿಗೆ ಬಾಲ ಇರೋದನ್ನು ನಾವೆಲ್ಲರೂ ನೋಡಿದ್ದೇವೆ. ಆದ್ರೆ ಮನುಷ್ಯನಿಗೆ ಮಾತ್ರ ಅಂಗಾಂಗಗಳಲ್ಲಿ ವೈವಿಧ್ಯತೆ ಇರುತ್ತೆ ಹೊರತು ಬಾಲ ಇರೋದಿಲ್ಲ. ಆದ್ರೆ ಇಲ್ಲೊಂದು ಮಗುವಿಗೆ (Baby) ಹುಟ್ಟಿನಿಂದಲೇ ಬಾಲ ಇದೆ. ಅದೂ ಸಣ್ಣ ಪುಟ್ಟ ಬಾಲವಲ್ಲ. ಬರೋಬ್ಬರಿ 2 ಇಂಚು ಉದ್ದದ ಬಾಲ. (Tail) ಮೆಕ್ಸಿಕೋದಲ್ಲಿ ಬಾಲವನ್ನು ಹೊಂದಿರುವಂಥಾ ಮಗು ಜನಿಸಿದೆ. ನಂತರ ಶಸ್ತ್ರಚಿಕಿತ್ಸೆ (Operaton) ಮಾಡಿ ಬಾಲವನ್ನು ತೆಗೆಯಲಾಗಿದೆ. ಎರಡು ತಿಂಗಳ ಹಿಂದೆ ನ್ಯೂವೊ ಲಿಯಾನ್‌ನಲ್ಲಿರುವ ಆಸ್ಪತ್ರೆಯಲ್ಲಿ ಸಿ-ಸೆಕ್ಷನ್ ಮೂಲಕ ಹೆಣ್ಣು ಮಗು ಜನಿಸಿದ್ದು, ವೈದ್ಯರು, ನರ್ಸ್‌ಗಳಲ್ಲಿ ಅಚ್ಚರಿ ಮೂಡಿಸಿದೆ.
2 ಇಂಚು ಉದ್ದದ ಬಾಲದೊಂದಿಗೆ ಜನಿಸಿದ ಬಾಲಕಿ
ಈಶಾನ್ಯ ಮೆಕ್ಸಿಕೋದಲ್ಲಿ ಹೆಣ್ಣು ಮಗು 2 ಇಂಚು ಉದ್ದದ ನಿಜವಾದ ಬಾಲದೊಂದಿಗೆ ಜನಿಸಿರುವುದನ್ನು ನೋಡಿ ವೈದ್ಯರು, ನರ್ಸ್‌ಗಳು ಮತ್ತು ಪೋಷಕರು ಆಘಾತಕ್ಕೊಳಗಾಗಿದ್ದಾರೆ. ಬಾಲವನ್ನು ಹೊರತುಪಡಿಸಿ, ಶಿಶು ಸಂಪೂರ್ಣವಾಗಿ ಪರಿಪೂರ್ಣ ಮತ್ತು ಆರೋಗ್ಯಕರವಾಗಿತ್ತು. ತಾಯಿ ಕೂಡಾ ಆರೋಗ್ಯವಾಗಿದ್ದರು. ಗರ್ಭಾವಸ್ಥೆಯಲ್ಲಿಯೂ ಯಾವುದೇ ತೊಂದರೆಗಳಿರಲ್ಲಿಲ್ಲ ಮತ್ತು ಮಗು ಪೂರ್ಣಾವಧಿಯಲ್ಲಿ ಜನಿಸಿತು.
ವೈದ್ಯಲೋಕದ ಅಚ್ಚರಿ: 30 ವರ್ಷದ ಹಿಂದಿನ ಭ್ರೂಣದಿಂದ ಜನಿಸಿದ ಅವಳಿ ಮಕ್ಕಳು
ಬಾಲದ ಗಾತ್ರ ಸುಮಾರು 2 ಇಂಚು ಅಂದರೆ 5.7 ಸೆಂ.ಮೀ ಎಂದು ವೈದ್ಯರು ತಿಳಿಸಿದ್ದಾರೆ. ಬಾಲವು ಸುಮಾರು 3 ರಿಂದ 5 ಮಿಮೀ ದಪ್ಪವಾಗಿತ್ತು. ಬಾಲವು ಮೃದುವಾಗಿತ್ತು ಮತ್ತು ಅದರ ಮೇಲೆ ಕೂದಲು (Hair)ಗಳಿದ್ದವು. ಹೆಣ್ಣು ಮಗುವಿನ ಇತರ ಎಲ್ಲಾ ವೈದ್ಯಕೀಯ ವರದಿಗಳು ಸರಿಯಾಗಿದ್ದು. ಹುಡುಗಿಗೆ ಯಾವುದೇ ರೀತಿಯ ಸಮಸ್ಯೆ (Problem) ಇರಲಿಲ್ಲ.
ಆಪರೇಷನ್ ಮೂಲಕ ಬಾಲವನ್ನು ತೆಗೆದ ವೈದ್ಯರು
ಮಗುವಿಗೆ ಎರಡು ತಿಂಗಳ ವಯಸ್ಸಾದಾಗ, ಆಕೆಯ ತೂಕ ಹೆಚ್ಚಾಗುವುದು (Weight gain) ಮತ್ತು ಬೆಳವಣಿಗೆಯು ಅವಳ ವಯಸ್ಸಿಗೆ ಸಾಮಾನ್ಯವಾಗಿದೆ ಎಂದು ಮರು-ಮೌಲ್ಯಮಾಪನ ಮಾಡಿದೆ. ಇದರ ಬೆನ್ನಲ್ಲೇ ಚಿಕ್ಕ ಆಪರೇಷನ್ ಮೂಲಕ ಬಾಲವನ್ನು ತೆಗೆಯಲಾಗಿದ್ದು, ಅದೇ ದಿನ ಯಾವುದೇ ತೊಂದರೆಯಿಲ್ಲದೆ ಹೆಣ್ಣು ಮಗುವನ್ನು ಡಿಸ್ಚಾರ್ಜ್ ಮಾಡಲಾಗಿದೆ. ಶಸ್ತ್ರಚಿಕಿತ್ಸೆಗೆ ಮುನ್ನ ವೈದ್ಯರು ಈ ಬಾಲಕಿಯ ಎಂಆರ್‌ಐ ಸ್ಕ್ಯಾನ್ ಮತ್ತು ಇತರ ಹಲವು ಪರೀಕ್ಷೆಗಳನ್ನು ನಡೆಸಿದ್ದಾರೆ ಎನ್ನಲಾಗಿದೆ. ವೈದ್ಯಕೀಯ ವರದಿಗಳ ಪ್ರಕಾರ, ಈ ಹೆಣ್ಣು ಮಗುವಿಗೆ ಯಾವುದೇ ವೈದ್ಯಕೀಯ ಸಮಸ್ಯೆ ಇರಲಿಲ್ಲ. ಅದರ ಎಲ್ಲಾ ವರದಿಗಳು ಸಾಮಾನ್ಯವಾಗಿದ್ದವು. ಗರ್ಭಾವಸ್ಥೆಯಲ್ಲಿಯೂ ಮಗುವಿನ ತಾಯಿಗೆ ಯಾವುದೇ ಸಮಸ್ಯೆ ಇರಲಿಲ್ಲ, ತಾಯಿಗೆ ಸಂಪೂರ್ಣ ಆರೋಗ್ಯವಂತವಾಗಿರುವ ಒಬ್ಬ ಮಗನೂ ಇದ್ದಾನೆ ಎಂದು ತಿಳಿದುಬಂದಿದೆ.
ತಾಯ್ತನದ ಸುಖ ಅನುಭವಿಸಲಿಲ್ಲ, ಹೆರಿಗೆ ನೋವಿಲ್ಲ, ಕೋಮಾದಲ್ಲೇ ಅಮ್ಮನಾದ ಮಹಿಳೆ!
2017ರ ವೇಳೆಗೆ ಹೀಗೆ ಬಾಲವಿರುವ ಮಕ್ಕಳು ಜನಿಸಿದ ಕೇವಲ 195 ಪ್ರಕರಣಗಳನ್ನು ಗುರುತಿಸಲಾಗಿತ್ತು. 2021ರಲ್ಲಿ, ಬ್ರೆಜಿಲಿಯನ್ ಮಗುವೊಂದಕ್ಕೆ ಬಾಲ (Childhood) ಮತ್ತು ಬಾಲದ ಕೊನೆಯಲ್ಲಿ ಚೆಂಡಿನ ಆಕಾರವಿತ್ತು. ಶಸ್ತ್ರಚಿಕಿತ್ಸೆಯ ಸಹಾಯದಿಂದ ವೈದ್ಯರು ಬಾಲವನ್ನು ಬೇರ್ಪಡಿಸಿದ್ದರು.
ಕೂದಲುಳ್ಳ ಬಾಲ ಹೊಂದಿರುವ ನೇಪಾಳದ ಹುಡುಗ,
ಈ ಹಿಂದೆ ನೇಪಾಳದಲ್ಲಿ (Nepal) ಒಬ್ಬ ಹದಿಹರೆಯದವನು 70 ಸೆಂಟಿಮೀಟರ್ ಉದ್ದದ ಕೂದಲುಳ್ಳ ಬಾಲವನ್ನು (hairy tail) ಹೊಂದಿದ್ದನು. 16 ವರ್ಷದ ದೇಶಾಂತ್ ಅಧಿಕಾರಿ (Deshant Adhikari) ತಮ್ಮ ಸೊಂಟದ ಹಿಂಭಾಗದಲ್ಲಿದ್ದ ಉದ್ದ ಕೂದಲುಗಳ ಬಗ್ಗೆ ಮೊದಲು ನಾಚಿಕೆ ಪಡುತ್ತಿದ್ದನು. ಆದರೆ, ಒಬ್ಬ ಅರ್ಚಕ, ದೇಶಾಂತ್ ಅಧಿಕಾರಿ ಹನುಮಂತನ ಪುನರ್ಜನ್ಮ ಎಂದು ಹೇಳಿದ ಬಳಿಕ ತಾವು ಈ ಉದ್ದ ಕೂದಲುಗಳ ಬಗ್ಗೆ ಹೆಮ್ಮೆ ಪಡುವುದಾಗಿ ದೇಶಾಂತ್ ಹೇಳಿದ್ದನು. ತಮ್ಮ ಮಗನ ಸೊಂಟದ ಹಿಂಭಾಗದಲ್ಲಿ ಬೆಳೆಯುತ್ತಿರುವ ಕೂದಲುಗಳ ಬಗ್ಗೆ ದೇಶಾಂತ್ ಅಧಿಕಾರಿಯ ಪೋಷಕರು ಅವರನ್ನು ಸಾಕಷ್ಟು ಆಸ್ಪತ್ರೆಗಳಿಗೆ ಚಿಕಿತ್ಸೆ ಕೊಡಿಸಿದ್ದರು. ಅದಲ್ಲದೆ, ವಿದೇಶದ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆ ನೀಡಿದ್ದಾರೆ. ಆದರೆ, ಯಾವ ಚಿಕಿತ್ಸೆಯೂ ಈತನ ಸಮಸ್ಯೆಗೆ ಪರಿಹಾರ ನೀಡಿಲ್ಲ.