Asianet Suvarna News Asianet Suvarna News

ಆರು ತಿಂಗಳ ನಂತರ ಮಗುವಿಗೆ ಯಾವ ರೀತಿಯ ಆಹಾರ ಕೊಡಬೇಕು..?

ನವಜಾತ ಶಿಶುವಿನ ಆರೈಕೆ ತುಂಬಾ ಸೂಕ್ಷ್ಮವಾದ ವಿಷಯ. ಮಗು (Baby)ವಿಗೆ ಒಂದೊಂದು ತಿಂಗಳು ಕಳೆಯುವಾಗಲೂ ಅವರ ಆಹಾರದ ಬಗ್ಗೆ, ಆರೋಗ್ಯ (Health)ದ ಬಗ್ಗೆ ಎಚ್ಚರಿಕೆ ವಹಿಸಬೇಕಾದುದು ಅಗತ್ಯ. ಮಗುವಿನ ಆರೋಗ್ಯ ಕಾಪಾಡಿಕೊಳ್ಳಲು ಮಗುವಿನ ಆಹಾರ ಕ್ರಮಗಳು ಸಹ ಉತ್ತಮವಾಗಿರಬೇಕಾದುದು ಅಗತ್ಯವಾಗಿದೆ. ಹಾಗಿದ್ರೆ ಆರು ತಿಂಗಳ ನಂತರ ಮಗುವಿಗೆ ಯಾವ ರೀತಿಯ ಆಹಾರ ಕೊಡಬೇಕು ಎಂಬುದನ್ನು ತಿಳಿದುಕೊಳ್ಳೋಣ.

Baby Food For Your Six Month Old, Things To Keep In Mind Vin
Author
Bengaluru, First Published Apr 2, 2022, 11:51 AM IST

ಮಗು (Baby)ವಿಗೆ ಮುಖ್ಯವಾಗಿ ಆರಂಭದ ಮೊದಲ ಎರಡು ವರ್ಷದಲ್ಲಿ ಉತ್ತಮವಾದ ಪೋಷಕಾಂಶವಿರುವ ಆಹಾರ ದೊರೆತಲ್ಲಿ ಅದು ಮಗುವಿನ ದೇಹದಲ್ಲಿ ರೋಗ ನಿರೋಧಕ ಶಕ್ತಿ (Immunity Power)ಯನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ ದೀರ್ಘಕಾಲದ ವರೆಗೆ ಅನಾರೋಗ್ಯದಿಂದ ಬಳಲದಂತೆ ತಡೆಯುತ್ತದೆ. ಹೀಗಾಗಿ ಮಗು ಹುಟ್ಟಿದ ಬಳಿಕ ಎಷ್ಟು ತಿಂಗಳಿನಲ್ಲಿ ಯಾವ ಆಹಾರ ನೀಡುವುದು ಮುಖ್ಯ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. 6 ತಿಂಗಳ ಬಳಿಕದ ಅವಧಿಯಲ್ಲಿ ಮಗುವಿನ ಬೆಳವಣಿಗೆಯ ರೀತಿ ಸ್ಪಲ್ಪ ನಿಧಾನಗತಿಯಲ್ಲಿ ಸಾಗುತ್ತದೆ. ಈ ಸಂದರ್ಭದಲ್ಲಿ ಮಗುವಿನ ಆಹಾರದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಯಾಕೆಂದರೆ, ಮಗುವಿನ ಆರೋಗ್ಯ (Health)ವನ್ನು ಕಾಪಾಡುವಲ್ಲಿ ಪೋಷಕಾಂಶಗಳು ಪ್ರಮುಖ ಪಾತ್ರ ವಹಿಸುತ್ತದೆ.

ಮಗುವಿಗೆ ಆರು ತಿಂಗಳ ನಂತರವಷ್ಟೇ ಪೂರಕ ಆಹಾರ (Food) ನೀಡಲು ಆರಂಭಿಸಬೇಕು. 6 ತಿಂಗಳ ವರೆಗೆ ತಾಯಿಯ ಎದೆಹಾಲಷ್ಟೇ ಮಗುವಿನ ಆರೋಗ್ಯಕ್ಕೆ ಸಾಕಾಗುತ್ತದೆ. ಮಗುವಿಗೆ ಅಗತ್ಯವಾದ ರೋಗ ನಿರೋಧಕ ಶಕ್ತಿಯನ್ನು ತಾಯಿಯ ಎದೆಹಾಲು ಒದಗಿಸುತ್ತದೆ. ಆದರೆ ಆರು ತಿಂಗಳ ನಂತರ ಪೂರಕ ಆಹಾರವನ್ನು ನೀಡುವುದು ಅಗತ್ಯ.

ಪುಟ್ಟ ಮಕ್ಕಳ ಆರೋಗ್ಯಕ್ಕೆ ಎಷ್ಟು ಗಂಟೆ ನಿದ್ದೆಯ ಅಗತ್ಯವಿದೆ ?

ಮಗುವಿಗೆ 6 ತಿಂಗಳು ಆದ ಮೇಲೆ ಕೆಲವೊಂದು ಚೈತನ್ಯದಾಯಕ ಪ್ರೊಟೀನ್‍ಗಳು ಮಗುವಿಗೆ ಬೇಕಾಗುತ್ತದೆ. ಆರು ತಿಂಗಳಿನಿಂದ ಎಂಟು ತಿಂಗಳ ವರೆಗೂ ದಿನವೊಂದಕ್ಕೆ 200 ಕ್ಯಾಲರಿ ಮಗುವಿಗೆ ಎಕ್ಸ್ ಟ್ರಾ ಬೇಕಾಗುತ್ತದೆ. ಎಂಟು ತಿಂಗಳು ಆದ ಬಳಿಕ ಎದೆಹಾಲನ್ನು ಹೊರತುಪಡಿಸಿ ಮುನ್ನೂರು ಕ್ಯಾಲರಿ ಮಗುವಿನ ಆರೋಗ್ಯಕ್ಕೆ ಅವಶ್ಯಕವಾಗಿದೆ. ಈ ಎಕ್ಸ್ ಟ್ರಾ ಎನರ್ಜಿ ಮಗುವಿಗೆ ಪೂರಕ ಆಹಾರದಿಂದ ಲಭ್ಯವಾಗುತ್ತದೆ.

6 ತಿಂಗಳ ಬಳಿಕ ಮಗುವಿಗೆ ಪೂರಕ ಆಹಾರ, ಸಮತೋಲನ ಆಹಾರ ಕೊಡುವುದರಿಂದ ಮಗುವಿನ ಶಾರೀರಿಕ ಹಾಗೂ ಬೌದ್ಧಿಕ ವಿಕಾಸ ಉತ್ತಮವಾಗಿ ಆಗುತ್ತದೆ.  ಏಳನೇ ತಿಂಗಳು ಶುರುವಾಗುವಾಗ ಪೂರಕ ಆಹಾರವನ್ನು ನೀಡಲು ಆರಂಭಿಸಬೇಕು. ಈ ಪೂರಕ ಆಹಾರದ ಜತೆಗೆ ಎದೆಹಾಲನ್ನು ಸಹ ನೀಡುತ್ತಿರಬೇಕು. ಈ ರೀತಿ ಮಗುವಿಗೆ ಆಹಾರ ನೀಡುವಾಗ ಯಾವುದೆಲ್ಲಾ ವಿಚಾರವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದನ್ನು ತಿಳಿಯೋಣ.

Mother And Baby: ತಾಯಿ ತಣ್ಣೀರಿನಲ್ಲಿ ಸ್ನಾನ ಮಾಡಿದರೆ, ಮಗುವಿಗೆ ಶೀತವಾಗುತ್ತಾ?

ಆಹಾರ ನೀಡುವಾಗ ಮಗು ಸ್ಪಂದಿಸಬೇಕು. ಇದನ್ನು ಗಮನಿಸಿಯೇ ಆಹಾರ ನೀಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಮತ್ತು ಆರು ತಿಂಗಳ ಬಳಿಕ ಮಗುವಿಗೆ ಆಹಾರ ನೀಡುವಾಗ ನೀಡುವ ಆಹಾರದ ಪ್ರಮಾಣ, ಆಹಾರದ ರೀತಿಯನ್ನು ಗಮನಿಸಿಕೊಳ್ಳಬೇಕು. ಒಂದೇ ರೀತಿಯ ಆಹಾರವನ್ನು ಏಳು ತಿಂಗಳಿನಿಂದ 1 ವರ್ಷದ ವರೆಗೆ ಕೊಟ್ಟರೆ ಯಾವ ಮಗುವೂ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಆಹಾರ, ಅದನ್ನು ತಯಾರಿಸುವ ರೀತಿ, ರುಚಿಯ ಬದಲಾವಣೆಯನ್ನು ಮಾಡಿಕೊಳ್ಳಬೇಕು. 

ಮಕ್ಕಳಿಗೆ ಒಂದೇ ಸಾರಿ ಗಟ್ಟಿಯಾದ ಆಹಾರವನ್ನು ಕೊಡಲು ಹೋಗಬಾರದು. ಬದಲಾಗಿ ಹಂತ ಹಂತವಾಗಿ ದ್ರವ ರೂಪದ ಆಹಾರದಿಂದ ಗಟ್ಟಿ ರೂಪದ ಆಹಾರವನ್ನು ಕೊಡಲು ಹೋಗಬೇಕು. 7ನೇ ತಿಂಗಳಿನಿಂದ ಪೂರಕ ಆಹಾರ ನೀಡಲು ಆರಂಭಿಸಿದಾಗ ಆಹಾರ ತೆಳುವಾಗಿ ಇರಬೇಕು. ನಿಧಾನವಾಗಿ ತಿಂಗಳು ಕಳೆದಂತೆ ನೀರಿನ ಪ್ರಮಾಣ ಕಡಿಮೆ ಮಾಡಿ ಆಹಾರವನ್ನು ಸ್ಪಲ್ಪ ಸ್ಪಲ್ಪ ಗಟ್ಟಿಯಾಗಿ ಕೊಡಲು ಆರಂಭಿಸಬೇಕು. ಆಹಾರದಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿ ಬೇಯಿಸಿದ ತರಕಾರಿ ಹಾಗೂ ಧಾನ್ಯಗಳನ್ನು ನೀಡಬಹುದು. ಧಾನ್ಯಗಳನ್ನು ಬೇಯಿಸಿ ಚೆನ್ನಾಗಿ ಪುಡಿ ಮಾಡಿ ಮಣ್ಣಿಯಲ್ಲಿ ಸೇರಿಸಿ ತಿನ್ನಿಸಬಹುದು.

ಬೇಯಿಸಿದ ಆಲೂಗಡ್ಡೆ, ಕ್ಯಾರೆಟ್‍, ಬಾಳೆಹಣ್ಣು, ಪಪ್ಪಾಯ ಮೊದಲಾದ ಆಹಾರಗಳನ್ನು ಚೆನ್ನಾಗಿ ಬೇಯಿಸಿ 6 ತಿಂಗಳ ನಂತತ ಮಕ್ಕಳಿಗೆ ಕೊಡಬಹುದು. 6 ತಿಂಗಳ ನಂತರ 7 ತಿಂಗಳಿನಲ್ಲಿ ದಿನಕ್ಕೆ ಒಂದು ಸಾರಿ ಮಾತ್ರ ಮಗುವಿಗೆ ಆಹಾರ ನೀಡಿದರೆ ಸಾಕು. ಮಗುವಿಗೆ 9 ತಿಂಗಳು ಕಳೆದ ನಂತರ ದಿನವೊಂದಕ್ಕೆ 3 ಸಾರಿ ಇಂಥಹಾ ಆಹಾರವನ್ನು ಕೊಡಬಹುದು. 9ರಿಂದ 11 ತಿಂಗಳ ವರೆಗೆ ನಾಲ್ಕು ಬಾರಿ ಮತ್ತು 1ರಿಂದ 2 ವರ್ಷದ ವರೆಗೆ ಮಗುವಿಗೆ ದಿನಕ್ಕೆ 5 ಬಾರಿ ಆಹಾರವನ್ನು ನೀಡಬೇಕು. 

Follow Us:
Download App:
  • android
  • ios