Asianet Suvarna News Asianet Suvarna News

Eye Health: ಉತ್ತಮ ಕಣ್ಣಿನ ದೃಷ್ಟಿಗೆ ಆಯುರ್ವೇದ ಚಿಕಿತ್ಸೆ ಮಾಡಿ ನೋಡಿ

ಮೊದಲೆಲ್ಲಾ ಕನ್ನಡಕ(Spect) ಹಾಕಿಕೊಳ್ಳುವುದು ಒಂದು ಫ್ಯಾಷನ್(Fashion) ಎನ್ನುವ ಜಗತ್ತಿತ್ತು. ಆದರೆ ಈಗಿನ ಜನರಿಗೆ ಅದು ಅಭ್ಯಾಸವಾಗಿದೆ. ಇದಕ್ಕೆ ಕಾರಣ ದೃಷ್ಟಿಯಲ್ಲಿ ದೋಷಗಳು. ಈ ದೃಷ್ಟಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆಯುರ್ವೇದದಲ್ಲಿ ಉತ್ತಮ ಮದ್ದುಗಳಿವೆ. ಏನು ಮಾಡಬೇಕು ಇಲ್ಲಿದೆ ಮಾಹಿತಿ.

Ayurvedic Remedies for better Eye Sight
Author
First Published Dec 17, 2022, 5:29 PM IST

ದೃಷ್ಟಿಹೀನತೆ ಇಂದಿನ ಜಗತ್ತಿನಲ್ಲಿನ ಸಾಮಾನ್ಯ ಸಮಸ್ಯೆಯಾಗಿದೆ. ಇದಕ್ಕಾ ಹೊಸ ಸ್ಟೆöÊಲ್(New Style), ವಿನ್ಯಾಸದಲ್ಲಿ ಕನ್ನಡಗಳೂ ಇದ್ದು ಅದಕ್ಕೂ ಒಂದು ಹೆಜ್ಜೆ ಮುಂದಾಗಿ ಕಾಂಟ್ಯಾಕ್ಟ್ ಲೆನ್ಸ್ಗಳೂ(Contact Lance) ಸಹ ಬಂದಿವೆ. ದೃಷ್ಟಿ ಸಮಸ್ಯೆಯಿಂದ ಬಳಲುತ್ತಿರುವ ಬಹುತೇಕ ಜನರಲ್ಲಿ ಕನ್ನಡಕ ಧರಿಸಲು ಇಷ್ಟಪಡುವುದಿಲ್ಲ. ದೃಷ್ಟಿ ಸುಧಾರಿಸಲು ಕೇವಲ ಮೆಡಿಸಿನ್, ಟ್ರೀಟ್ಮೆಂಟ್‌ನಿAದಷ್ಟೇ ಅಲ್ಲದೆ ನೈಸರ್ಗಿಕವಾಗಿಯೂ(Naturally) ಸುಧಾರಿಸಬಹುದು. ಹೌದು ಆಯುರ್ವೇದದಲ್ಲಿ(Ayurveda) ದೃಷ್ಟಿ ದೋಷವನ್ನು(Eye Sight Problem) ಹೋಗಲಾಡಿಸುವುದರ ಜೊತೆಗೆ ನರಗಳ ದುರ್ಬಲತೆ, ಕರುಳಿನ ಸಮಸ್ಯೆಗಳನ್ನು ದೂರ ಮಾಡುತ್ತದೆ. 

1. ಗಿಂಕೊ ಬಿಲೋಬಾ(Ginko Biloba): ಈ ಗಿಡಮೂಲಿಕೆಯು ದೃಷ್ಟಿಯನ್ನು ಸುಧಾರಿಸಲು ಆಯುರ್ವೇದ ಪರಿಹಾರವಾಗಿದೆ. ದೃಷ್ಟಿ ಸುಧಾರಿಸುವುದರ ಜೊತೆಗೆ ಗ್ಲುಕೋಮಾ(Glaucoma) ಮತ್ತು ಮ್ಯಾಕ್ಯುಲರ್ ಡಿಜೆನರೇಶನ್‌ನಿಂದ(Macular Degeneration) ರಕ್ಷಿಸುತ್ತದೆ. ರೆಟಿನೋಪತಿಗೂ(Retinopathy) ಪ್ರಯೋಜನಕಾರಿಯಾಗಿದೆ. ಹಾಗೂ ಮಧುಮೇಹಿಗಳಿಗೆ(Diabetes), ಮಕ್ಕಳಿಗೆ ನೀಡಬಾರದು ಎಂಬುದು ನೆನಪಿನಲ್ಲಿಡಬೇಕಾದ ಅಂಶ. 

ದೇಹಕ್ಕೆ ಮಾತ್ರವಲ್ಲ, ಕಣ್ಣಿನ ಆರೋಗ್ಯಕ್ಕೂ ಅತ್ಯಗತ್ಯ ವ್ಯಾಯಾಮ, ಏನು ಮಾಡಬೇಕು?

 2. ಬಾದಾಮಿ(Badam): Omega 3 ಕೊಬ್ಬಿನಾಮ್ಲಗಳು, ವಿಟಮಿನ್ ಇ(Vitamin E) ಮತ್ತು ಬಾದಾಮಿಯಲ್ಲಿರುವ(Badam) ಉತ್ಕರ್ಷಣ ನಿರೋಧಕಗಳು ನೈಸರ್ಗಿಕವಾಗಿ ದೃಷ್ಟಿಯನ್ನು ಸುಧಾರಿಸುತ್ತದೆ. ಜ್ಞಾಪಕ ಶಕ್ತಿ(Memory Power) ಮತ್ತು ಏಕಾಗ್ರತೆಯನ್ನು(Concentration) ಸುಧಾರಿಸಲು ಇವು ಸಹಾಯ ಮಾಡುತ್ತದೆ. ಇದಕ್ಕಾಗಿ ಪ್ರತೀ ದಿನ ಬಾದಾಮಿಯನ್ನು ಹಾಗೆಯೇ ಸೇವಿಸಬಹುದು ಅಥವಾ ನೆನೆಸಿದ ಬಾದಾಮಿಯ ಪೇಸ್ಟ್ ತಯಾರಿಸಿ ಒಂದು ಲೋಟ ಹಾಲಿನೊಂದಿಗೆ ಕುಡಿಯಬಹುದು. 

3. ಸೋಂಪು(Fennel Seeds): ಪ್ರಾಚೀನ ರೋಮನ್ನರು ಸೋಂಪನ್ನು ದೃಷ್ಟಿಯ ಮೂಲಿಕೆ ಎಂದು ಕರೆಯುತ್ತಿದ್ದರು. ಇದರಲ್ಲಿನ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳು ಕಣ್ಣಿನ ಪೊರೆಗಳ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ ಮತ್ತು ಆರೋಗ್ಯಕರ ಕಣ್ಣುಗಳನ್ನು ಉತ್ತೇಜಿಸುತ್ತದೆ. ಒಂದು ಕಪ್ ಬಾದಾಮಿ, ಸೋಂಪು, ಸಕ್ಕರೆ ಹಾಕಿ ರುಬ್ಬಿಕೊಂಡು ಪುಡಿ ಮಾಡಿಕೊಳ್ಳಿ. ಮಲಗುವ ಮುನ್ನ ಒಂದು ಲೋಟ ಹಾಲಿನೊಂದಿಗೆ(Milk) ಒಂದು ಚಮಚ ಈ ಪುಡಿಯನ್ನು ಸೇವಿಸಿದರೆ ದೃಷ್ಟಿ ಸಮಸ್ಯೆ ಸುಧಾರಿಸುತ್ತದೆ.

4. ನೆಲ್ಲಿಕಾಯಿ(Amla): ಆಯುರ್ವೇದದಲ್ಲಿ ಪ್ರಭಾವೀ ಔಷಧವಾಗಿರುವ ನೆಲ್ಲಿಕಾಯಿ ಹಲವು ಆರೋಗ್ಯ ಸಮಸ್ಯೆಗಳಿಗೆ ಉತ್ತಮ ಪರಿಹಾರವಾಗಿದೆ. ಇದರಲ್ಲಿ ವಿಟಮಿನ್ ಸಿ(Vitamin C)ಯ ಅಮೂಲ್ಯ ಮೂಲವಿದೆ. ಪ್ರತೀ ದಿನ ಸೇವಿಸುವುದರಿಂದ ಉತ್ಕರ್ಷಣ ನಿರೋಧಕಗಳು ಮತ್ತು ಇತರೆ ಶಕ್ತಿಯುತ ಪೋಷಕಾಂಶಗಳನ್ನು ಒದಗಿಸುತ್ತದೆ. ನೆಲ್ಲಿಕಾಯಿಯಲ್ಲಿನ ವಿಟಮಿನ್ ಸಿಯು ಕಣ್ಣಿನ ರೆಟಿನಾ(Retina) ಜೀವಕೋಶಗಳ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ ಮತ್ತು ಆರೋಗ್ಯಕರ ಕ್ಯಾಪಿಲ್ಲರಿಗಳನ್ನು(Capillaries) ಉತ್ತೇಜಿಸುತ್ತದೆ. ಇದಕ್ಕಾಗಿ ಅರ್ಧಕಪ್ ನೀರಿಗೆ ಕೆಲವು ಚಮಚ ನೆಲ್ಲಿಕಾಯಿ ರಸ ಅಥವಾ ಪುಡಿಯನ್ನು ಹಾಕಿ ಚೆನ್ನಾಗಿ ಕಲಸಿ ದಿನಕ್ಕೆರಡು ಬಾರಿ ಬೆಳಗ್ಗೆ ಮತ್ತು ಸಂಜೆ ಕುಡಿಯಿರಿ. ಜ್ಯೂಸ್ ಅನ್ನು ಜೇನುತುಪ್ಪದೊಂದಿಗೆ(Honey) ಸಹ ಸೇವಿಸಬಹುದು. 

5. ತ್ರಿಫಲ(Triphala): ದೃಷ್ಟಿ ಸುಧಾರಿಸಲು ಅತ್ಯಂತ ಪರಿಣಾಮಕಾರಿ ಆಯುರ್ವೇದ ಪರಿಹಾರವೆಂದರೆ ಅದು ತ್ರಿಫಲ. ಇದು ಮೂರು ಮರಗಳ ಹಣ್ಣುಗಳಿಂದ ತಯಾರಿಸಲಾಗುತ್ತದೆ. ಆಮ್ಲಾ(Amla), ಹರಿತಕಿ(Harithaki), ಬಿಭಿಟಕಿ(Bibhitaki) ಎಂಬ ಹಣ್ಣಗಳಿಂದ ತಯಾರಿಸಲಾಗುತ್ತದೆ. ಈ ಗಿಡಮೂಲಿಕೆಗಳ ಮಿಶ್ರಣಗಳನ್ನು ನಿಯಮಿತವಾಗಿ ಸೇವಿಸಬೇಕು. ತ್ರಿಫಲವು ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಇದು ಒಟ್ಟಾರೆ ಕಣ್ಣಿನ ಆರೋಗ್ಯವನ್ನು ಸುಧಾರಿಸಲು ಮತ್ತು ದೇಷ್ಟಿ ನಷ್ಟವನ್ನು ತಡೆಯಲು ಸಹಾಯ ಮಾಡುತ್ತದೆ. ಒಂದು ಚಮಚ ತ್ರಿಫಲ ಪುಡಿಯನ್ನು ಒಂದು ಲೋಟ ಬೆಚ್ಚಗಿನ ನೀರಿಗೆ ಬೆರೆಸಿ ಪೂರಕ ರೂಪದಲ್ಲಿ ಅಥವಾ ಚಹಾದ(Tea) ರೀತಿ ಸೇವಿಸಬೇಕು.

ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಎಂದರೇನು? ಅದರ ಲಕ್ಷಣ, ಕಾರಣಗಳ ಬಗ್ಗೆ ಇಲ್ಲಿದೆ ಮಾಹಿತಿ

6. ತುಪ್ಪ(Ghee): ತುಪ್ಪ ಬಹುತೇಕ ಆರೋಗ್ಯ ಸಮಸ್ಯೆಗೆ ಉತ್ತಮ ಮನೆಮದ್ದು. ಇದು ಒಂದು ರೀತಿಯ ಸೃಷ್ಟೀಕರಿಸಿದ ಬೆಣ್ಣೆಯ ಬಳಕೆಯಾಗಿದೆ. ತುಪ್ಪವು ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಎ, ಡಿ, ಇ(Vitamin A, D, E) ಸಮೃದ್ಧವಾಗಿದೆ. ಆರೋಗ್ಯಕರ ದೃಷ್ಟಿಯನ್ನು ಕಾಪಾಡಿಕೊಳ್ಳಲು ಅವಶ್ಯಕವಾಗಿದ್ದು, ರಾತ್ರಿ ಮಲಗುವ ಮೊದಲು ಸ್ವಲ್ಪ ಪ್ರಮಾಣದ ತುಪ್ಪವನ್ನು ಕಣ್ಣಿನ ಒಳಭಾಗಕ್ಕೆ ಹಚ್ಚಬೇಕು.

7. ಜೀವನಶೈಲಿ(Lifestyle): ಜೀವಸತ್ವಗಳು ಮತ್ತು ಖನಿಜಗಳಲ್ಲಿ(Minerals) ಸಮೃದ್ಧವಾಗಿರುವ ಆರೋಗ್ಯಕರ, ಸಮತೋಲಿತ ಆಹಾರವನ್ನು ಸೇವಿಸುವುದು ಬಹಳ ಅಗತ್ಯ. ಮೊಬೈಲ್(Mobile), ಲ್ಯಾಪ್‌ಟಾಪ್(Laptop) ನಂತಹ ಪರದೆಗಳ ಮುಂದೆ ಅತಿಯಾದ ಸಮಯವನ್ನು ಕಳೆಯುವುದು ತಪ್ಪಿಸಬೇಕು. ಏಕೆಂದರೆ ಇದರಿಂದ ಕಣ್ಣಿಗೆ ಒತ್ತಡ(Stress) ಬೀಳುವುದಲ್ಲದೆ ದೃಷ್ಟಿ ಹಾಳಾಗುವುದನ್ನು ತಪ್ಪಿಸಬಹುದು. ಉತ್ತಮ ಕಣ್ಣಿನ ನೈರ್ಮಲ್ಯವನ್ನು ಅಭ್ಯಾಸ ಮಾಡುವುದು. ಅಂದರೆ ನಿಯಮಿತವಾಗಿ ತಂಪಾದ ನೀರಿನಿಂದ ಕಣ್ಣುಗಳನ್ನು ತೊಳೆಯುವುದು.

Follow Us:
Download App:
  • android
  • ios