Ayurvedic Lifestyle: ಆಯುರ್ವೇದದ ಪ್ರಕಾರ ದಿನಚರಿ, ಎಣ್ಣೆ ಮಸಾಜ್, ಉಬ್ಟನ್ ಮತ್ತು ಋತುಮಾನಕ್ಕೆ ತಕ್ಕ ಆಹಾರ ಪದ್ಧತಿಯನ್ನು ಅನುಸರಿಸುವುದರಿಂದ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ತ್ವಚೆಯ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಅದು ಹೇಗೆ ಅನ್ನೋದನ್ನು ತಿಳಿಯೋಣ.
ಉತ್ತಮ ಆರೋಗ್ಯಕ್ಕೆ ಆಯುರ್ವೇದ
ಆಯುರ್ವೇದವು ಕೇವಲ ರೋಗಗಳಿಗೆ ಚಿಕಿತ್ಸೆ ನೀಡುವ ಪದ್ಧತಿಯಲ್ಲ; ಇದು ಜೀವನವನ್ನು ಆರೋಗ್ಯಕರವಾಗಿ ನಡೆಸಲು ಮಾರ್ಗದರ್ಶನ ನೀಡುವ ಸಮಗ್ರ ವಿಜ್ಞಾನವಾಗಿದೆ. ಆಯುರ್ವೇದ ತಜ್ಞರ ಪ್ರಕಾರ, ವ್ಯಕ್ತಿಯು ತನ್ನ ದೈನಂದಿನ ಅಭ್ಯಾಸಗಳನ್ನು ಸರಿಪಡಿಸಿಕೊಂಡು, ಋತುಮಾನಕ್ಕೆ ಅನುಗುಣವಾಗಿ ಜೀವನಶೈಲಿಯನ್ನು ಬದಲಾಯಿಸಿಕೊಂಡರೆ ಆರೋಗ್ಯ ಮತ್ತು ಚೈತನ್ಯವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ಈ ನಿಯಮಗಳು ದೇಹದ ಆರೋಗ್ಯ ಹಾಗೂ ತ್ವಚೆಯ ಸೌಂದರ್ಯಕ್ಕೆ ಹೇಗೆ ಪೂರಕವಾಗುತ್ತವೆ ಎಂಬುದನ್ನು ತಿಳಿಯೋಣ.
1. ಆಯುರ್ವೇದ ದಿನಚರಿಯ ಮಹತ್ವ
ಆಯುರ್ವೇದದ ದಿನಚರ್ಯೆ ಮತ್ತು ಋತುಚರ್ಯೆ ಆರೋಗ್ಯಕರ ಜೀವನಶೈಲಿಗೆ ಸಹಕಾರಿ. ದೈನಂದಿನ ಅಭ್ಯಾಸ ಹಾಗೂ ಋತುಮಾನಕ್ಕೆ ತಕ್ಕ ಆಹಾರ ಪದ್ಧತಿಯನ್ನು ಅನುಸರಿಸುವುದು ಮುಖ್ಯ.
2. ಎಣ್ಣೆ ಮಸಾಜ್ನ ಪ್ರಯೋಜನಗಳು
ತೆಂಗಿನೆಣ್ಣೆ ಮತ್ತು ಎಳ್ಳೆಣ್ಣೆಯಿಂದ ಮಸಾಜ್ ಮಾಡುವುದರಿಂದ ತ್ವಚೆಯ ತೇವಾಂಶ ಕಾಪಾಡಲು, ಆಯಾಸ ಕಡಿಮೆ ಮಾಡಲು ಮತ್ತು ವಿಶ್ರಾಂತಿ ಪಡೆಯಲು ಸಹಾಯವಾಗಬಹುದು.
3. ಉದ್ವರ್ತನದಿಂದ ತ್ವಚೆಯ ಆರೈಕೆ
ತ್ರಿಫಲ ಮತ್ತು ಕುಲತ್ಥದಂತಹ ಪದಾರ್ಥಗಳಿಂದ ತಯಾರಿಸಿದ ಉಬ್ಟನ್ ಅನ್ನು ಆಯುರ್ವೇದದಲ್ಲಿ ದೇಹದ ಆರೈಕೆಗಾಗಿ ಬಳಸಲಾಗುತ್ತದೆ. ಇದು ದೇಹದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು, ರಕ್ತ ಪರಿಚಲನೆಯನ್ನು ಸುಧಾರಿಸಲು ಮತ್ತು ಚರ್ಮದ ಬಣ್ಣ ಹಾಗೂ ಅಂದವನ್ನು ಹೆಚ್ಚಿಸಲು ಸಹಾಯಕವಾಗಿದೆ.
4. ಋತುಚರ್ಯೆಯ ಮಹತ್ವ
ಋತುಮಾನಕ್ಕೆ ಅನುಗುಣವಾಗಿ ಆಹಾರ ಮತ್ತು ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವುದು ಋತುಚರ್ಯೆಯ ಉದ್ದೇಶವಾಗಿದೆ. ಹೊರಗಿನ ಹವಾಮಾನದಲ್ಲಿ ಎಂತಹ ಬದಲಾವಣೆಗಳೇ ಆದರೂ, ನಮ್ಮ ದೇಹದ ಆಂತರಿಕ ಚಯಾಪಚಯ ಕ್ರಿಯೆಯು ಸಮತೋಲನದಲ್ಲಿರುವುದನ್ನು ಖಚಿತಪಡಿಸಿಕೊಳ್ಳುವುದೇ ಇದರ ಮುಖ್ಯ ಉದ್ದೇಶವಾಗಿದೆ.
5. ಹೇಮಂತ ಋತುವಿನಲ್ಲಿ ಆಹಾರ
ಚಳಿಗಾಲದ ಆರಂಭದಲ್ಲಿ ನಮ್ಮ ಜೀರ್ಣ ಶಕ್ತಿ ಉತ್ತಮವಾಗಿರುತ್ತದೆ. ಹಾಗಾಗಿ ಗೋಧಿ, ಕಪ್ಪು ಕಡಲೆ, ಹಾಲಿನ ಪದಾರ್ಥಗಳು ಮತ್ತು ಪೌಷ್ಟಿಕ ಆಹಾರಕ್ಕೆ ಆದ್ಯತೆ ನೀಡಬಹುದು. ಉಗುರುಬೆಚ್ಚಗಿನ ನೀರು ಕುಡಿಯುವುದೂ ಉತ್ತಮ ಅಭ್ಯಾಸ.
6. ಶಿಶಿರ ಋತುವಿನಲ್ಲಿ ಆರೋಗ್ಯ
ತೀವ್ರ ಚಳಿಯ ಸಮಯದಲ್ಲಿ ದೇಹವನ್ನು ಬೆಚ್ಚಗಿರಿಸಿಕೊಳ್ಳಿ. ಸಮತೋಲಿತ ಆಹಾರ ಸೇವಿಸಿ, ನಿಯಮಿತ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ಬೆಚ್ಚಗಿನ ಆಹಾರ ಸೇವಿಸುವುದು, ಎಣ್ಣೆಸ್ನಾನ ಮಾಡುವುದು ಉತ್ತಮ. ದೀಪಾವಳಿಯಂತಹ ಹಬ್ಬಗಳಲ್ಲಿ ಎಣ್ಣೆ ಹಚ್ಚಿ ಸ್ನಾನ ಮಾಡುವ ಸಂಪ್ರದಾಯವಿದೆ. ಇಂತಹ ಕೆಲವು ಆಚರಣೆಗಳು ದೇಹದ ಆರೈಕೆ ಮತ್ತು ವೈಯಕ್ತಿಕ ಸ್ವಚ್ಛತೆಗೆ ಪೂರಕವಾಗಿರಬಹುದು.
7. ತ್ವಚೆ ಮತ್ತು ಆಂತರಿಕ ಆರೋಗ್ಯ
ಸಮತೋಲಿತ ಆಹಾರ, ಉತ್ತಮ ನಿದ್ರೆ, ಸರಿಯಾದ ಜೀರ್ಣಕ್ರಿಯೆ ಮತ್ತು ಮಾನಸಿಕ ನೆಮ್ಮದಿ ಆರೋಗ್ಯಕರ ತ್ವಚೆಗೆ ಸಹಕಾರಿಯಾಗುತ್ತವೆ. ಜೀರ್ಣಕ್ರಿಯೆ ಚೆನ್ನಾಗಿದ್ದರೆ ನಿಮ್ಮ ತ್ವಚೆ ಕೂಡ ಹೊಳೆಯಲು ಶುರು ಮಾಡುತ್ತದೆ.






