ಇತ್ತೀಚೆಗೆ ಚಿಕ್ಕ ಮಕ್ಕಳನ್ನು ಹಿಡಿದು ದೊಡ್ಡವರೂ ಕೂಡ ವಿಟಮಿನ್ ಕೊರತೆಯಿಂದ ಬಳಲುತ್ತಿದ್ದಾರೆ. ವಿಟಮಿನ್ ಗಳ ಕೊರತೆ ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಆದ್ರೆ ಪದ್ಮಶ್ರೀ ಪ್ರಶಸ್ತಿ ವಿಜೇತ ಮತ್ತು ಮಧುಮೇಹ ತಜ್ಞ ಡಾ ವಿ.ಮೋಹನ್, ಇತ್ತೀಚಿಗಿನ ಮಲ್ಟಿ ವಿಟಮಿನ್ ಜಾಹೀರಾತು ಅತಿ ದೊಡ್ಡ ಸುಳ್ಳು ಎಂದು ಹೇಳಿದ್ದಾರೆ.

ಬಹುತೇಕ ಮಂದಿಯ ಆಹಾರ ಪದ್ಧತಿಗಳು ಹಿಂದಿನ ಕಾಲಕ್ಕಿಂತ ಈಗ ಬದಲಾಗಿದೆ. ಪ್ರತಿ ದಿನ ಬೆಳಗಾದರೆ ಅವರು ಜಂಕ್ ಫುಡ್, ಬೇಕರಿ ಅಥವಾ ಕರಿದ ಪದಾರ್ಥಗಳನ್ನೇ ಹೆಚ್ಚು ಇಷ್ಟಪಡುತ್ತಿದ್ದಾರೆ. ಇದರಿಂದಾಗಿ ಸ್ವಾಭಾವಿಕವಾಗಿಯೇ ಪೌಷ್ಠಿಕಾಂಶದ ಕೊರತೆ ಜನರನ್ನು ಕಾಡುತ್ತಿದೆ. ಇತ್ತೀಚೆಗೆ ಚಿಕ್ಕ ಮಕ್ಕಳನ್ನು ಹಿಡಿದು ದೊಡ್ಡವರೂ ಕೂಡ ವಿಟಮಿನ್ ಕೊರತೆಯಿಂದ ಬಳಲುತ್ತಿದ್ದಾರೆ. ವಿಟಮಿನ್ ಗಳ ಕೊರತೆ ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಹಾಗೆಯೇ ಆರೋಗ್ಯದ ಸಮಸ್ಯೆಯಿದ್ದಾಗ ಶರೀರದಲ್ಲಿ ಪೌಷ್ಠಿಕಾಂಶದ ಕೊರತೆ ಉಂಟಾಗುವುದು ಕೂಡ ಸಾಮಾನ್ಯ ಸಂಗತಿ. 

ನಮ್ಮ ಆಹಾರ ಪದಾರ್ಥದಲ್ಲೇ ವಿಭಿನ್ನ ಜೀವಸತ್ವಗಳು ಇರುವುದರಿಂದ ನಾವು ಸರಿಯಾದ ಆಹಾರ ಪದ್ಧತಿಯನ್ನು ಅನುಸರಿಸಿದರೆ ಪೌಷ್ಠಿಕಾಂಶಗಳ ಕೊರತೆಯನ್ನು ನೀಗಿಸಬಹುದು. ಆದರೆ ಕೆಲವು ಮಂದಿ ದೇಹದಲ್ಲಿನ ಪೌಷ್ಠಿಕಾಂಶದ ಕೊರತೆಯನ್ನು ನೀಗಿಸಲು ವಿಟಮಿನ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಈ ಮಾತ್ರೆಗಳ ಮೂಲಕ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಪಡೆಯಬಹುದು ಎಂದು ಅಂದುಕೊಳ್ಳುತ್ತಾರೆ. ಆದ್ರೆ ಪದ್ಮಶ್ರೀ ಪ್ರಶಸ್ತಿ ವಿಜೇತ ಮತ್ತು ಮಧುಮೇಹ ತಜ್ಞ ಡಾ ವಿ.ಮೋಹನ್, ಇತ್ತೀಚಿಗಿನ ಮಲ್ಟಿ ವಿಟಮಿನ್ ಜಾಹೀರಾತು ಅತಿ ದೊಡ್ಡ ಸುಳ್ಳು ಎಂದು ಹೇಳಿದ್ದಾರೆ.

ಕಾಲುಗಳು ನಿಮಗೇ ಗೊತ್ತಿಲ್ಲದೇ ಅಲುಗುತ್ತಿರುತ್ತವಾ ? ಈ ವಿಟಮಿನ್ ಕೊರತೆ ಕಾರಣ

'ಮಲ್ಟಿ ವಿಟಮಿನ್ ಮಾತ್ರೆ ಎಲ್ಲರನ್ನೂ ತಪ್ಪುದಾರಿಗೆಳೆಯುತ್ತಿದೆ. ನಿಜವಾಗಿಯೂ ಮಲ್ಟಿವಿಟಮಿನ್ ಕೊರತೆ ಅನ್ನುವಂಥದ್ದು ಏನೂ ಇಲ್ಲ. ಮಲ್ಟಿ ವಿಟಮಿನ್‌ಗಳು ದೇಹಕ್ಕೆ ಸಾಕಷ್ಟು ಕೊರತೆಯಿರುವ ವಿಟಮಿನ್‌ನ್ನು ಒದಗಿಸುವುದಿಲ್ಲ' ಎಂದು ತಿಳಿಸಿದರು. '10 ಭಾರತೀಯರಲ್ಲಿ 8 ಜನರು ಮಲ್ಟಿವಿಟಮಿನ್ ಕೊರತೆಯನ್ನು ಹೊಂದಿರಬಹುದು. ನಿಮ್ಮ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಅವರ ದೈನಂದಿನ ಆಹಾರದ ಜೊತೆಗೆ ಸರಿಯಾದ ಪ್ರಮಾಣದ ಮಲ್ಟಿವಿಟಮಿನ್‌ಗಳ ಅಗತ್ಯವಿರುತ್ತದೆ. ಆದರೆ, ಅವರ ದೈನಂದಿನ ಆಹಾರವು ನಿಜವಾಗಿಯೂ ಸಮತೋಲಿತವಾಗಿದೆ ಎಂದು ನೀವು ಭಾವಿಸುತ್ತೀರಾ? ಅದಕ್ಕಾಗಿಯೇ ನಿಮ್ಮ ಕುಟುಂಬವು ಪ್ರತಿದಿನ ಮಲ್ಟಿವಿಟಮಿನ್‌ಗಳನ್ನು ತೆಗೆದುಕೊಳ್ಳಬೇಕು' ಎಂಬ ಜಾಹೀರಾತನ್ನು ನೀಡಲಾಗಿದೆ.

ಆದರೆ ಡಾ.ಮೋಹನ್‌, 'ಮಲ್ಟಿವಿಟಮಿನ್ ಕೊರತೆ ಅನ್ನುವಂಥಾ ಕಾನ್ಸೆಪ್ಟ್‌ ಇಲ್ಲ. ಬದಲಿಗೆ ಅಪೌಷ್ಟಿಕತೆ ಅನ್ನೋದು ನಿಜ. ನಮ್ಮಲ್ಲಿ ಹೆಚ್ಚಿನವರು ಪೌಷ್ಟಿಕಾಂಶದ ಕೊರತೆಯನ್ನು ಹೊಂದಿರುತ್ತಾರೆ. ಹೀಗಾಗಿ ಈ ಜಾಹೀರಾತು ಎಲ್ಲರನ್ನೂ ತಪ್ಪುದಾರಿಗೆಳೆಯುತ್ತಿದೆ. ಹೀಗಾಗಿ ಜಾಹೀರಾತು ಮಾಡುವವರು ಈ ಮಾರ್ಗಸೂಚಿಗಳನ್ನು ಸ್ಪಷ್ಟವಾಗಿ ಅನುಸರಿಸಬೇಕು' ಎಂದು ತಿಳಿಸಿದ್ದಾರೆ.

ವಿಟಮಿನ್ ಡಿ ಕೊರತೆಗೆ ಪರಿಹಾರ.. ಬರ್ತಿದೆ ನೀರಿನ ಇಂಜೆಕ್ಷನ್

'ವ್ಯಕ್ತಿಯ ದೇಹಕ್ಕೆ ಕೊರತೆಯಿರುವ ಹೆಚ್ಚಿನ ವಿಟಮಿನ್ ಅಗತ್ಯವಿರುತ್ತದೆ. ಆದರೆ ಮಲ್ಟಿವಿಟಮಿನ್ ಟ್ಯಾಬ್ಲೆಟ್ ಅಥವಾ ಕ್ಯಾಪ್ಸುಲ್‌ನಲ್ಲಿ ಇದು ಹೆಚ್ಚಿನ ಪ್ರಮಾಣವು ಲಭ್ಯವಿಲ್ಲದಿರಬಹುದು. ಅಲ್ಲದೆ, ಕೊರತೆಯಿರುವ ವಿಟಮಿನ್‌ನ ಮಾತ್ರೆಯಷ್ಟೇ ಸೇವಿಸಬೇಕು. ಯಾವುದೇ ಕೊರತೆಯಿಲ್ಲದಿದ್ದಾಗ ಎಲ್ಲಾ ಇತರ ಜೀವಸತ್ವಗಳು ಮತ್ತು ಖನಿಜಗಳನ್ನು ನಿಯಮಿತವಾಗಿ ಸೇವಿಸುವುದು ಹಾನಿಯನ್ನುಂಟು ಮಾಡುತ್ತದೆ' ಎಂದು ಡಾ.ಮೋಹನ್ ಮಾಹಿತಿ ನೀಡಿದ್ದಾರೆ

Scroll to load tweet…