ಈಗಷ್ಟೇ ಊಟ ಮಾಡಿದ್ದೀರಾ? ಆರೋಗ್ಯ ಸಮಸ್ಯೆ ತಡೆಯಲು ಈ 5 ಕೆಲಸ ಇಂದಿನಿಂದಲೇ ಬಿಟ್ಟುಬಿಡಿ!
ಊಟಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಮಾತು ಇದೆ. ಆದರೆ ಆರೋಗ್ಯಕರ ಜೀವನಕ್ಕೆ ಅದಷ್ಟೇ ಸಾಲದು, ಊಟದ ನಂತರ ಏನು ಮಾಡಬೇಕು, ಯಾವುದನ್ನು ಮಾಡಬಾರದು ಎಂಬುದರ ಬಗ್ಗೆ ನೀವು ತಿಳಿದುಕೊಂಡಿದ್ದರೆ ಖಂಡಿತ ಅನಾರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
ಊಟಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಮಾತು ಇದೆ. ಆದರೆ ಆರೋಗ್ಯಕರ ಜೀವನಕ್ಕೆ ಅದಷ್ಟೇ ಸಾಲದು, ಊಟದ ನಂತರ ಏನು ಮಾಡಬೇಕು, ಯಾವುದನ್ನು ಮಾಡಬಾರದು ಎಂಬುದರ ಬಗ್ಗೆ ನೀವು ತಿಳಿದುಕೊಂಡಿದ್ದರೆ ಖಂಡಿತ ಅನಾರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
ರಾತ್ರಿ ಊಟದ ನಂತರ ನೀವು ಈ ಐದು ಕೆಲಸ ಮಾಡುವ ಅಭ್ಯಾಸವಿದ್ದರೆ ಇಂದಿನಿಂದಲೇ ಬಿಟ್ಟುಬಿಡಿ. ಸಾಮಾನ್ಯವಾಗಿ ಜನರು ರಾತ್ರಿ ಊಟದ ಬಳಿಕ ಹಾಸಿಗೆಗೆ ಬಂದು ಮಲಗುವುದು, ಚಹ ಕುಡಿಯುವುದು ಇನ್ನಿತರ ಕೆಲವು ಕೆಟ್ಟ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ ಅಂಥ ಅನಾರೋಗ್ಯಕರ ಅಭ್ಯಾಸಗಳನ್ನು ಇಲ್ಲಿ ತಿಳಿಸಲಾಗಿದೆ. ನಿಮಗೂ ಇಂಥ ಅಭ್ಯಾಸಗಳಿದ್ದಲ್ಲಿ ಇಂದಿನಿಂದಲೇ ಬಿಡುವುದಕ್ಕೆ ಪ್ರಯತ್ನಿಸಿ ಆರೋಗ್ಯಕ ಜೀವನಶೈಲಿ ಬೆಳೆಸಿಕೊಳ್ಳೋಣ ಏನಂತೀರಾ?
ರಾತ್ರಿ ಊಟದ ತಕ್ಷಣ ಮಲಗುವುದು ಬೇಡ:
ರಾತ್ರಿ ಊಟವಾದ ಬಳಿಕ ಬಹಳಷ್ಟು ಜನರು ಮಲಗುತ್ತಾರೆ. ಇದು ಒಳ್ಳೆಯ ಅಭ್ಯಾಸವಲ್ಲ. ನೀವು ತಿಂದ ನಂತರ ನೇರವಾಗಿ ಮಲಗಿದರೆ, ಬಹುಶಃ ಅಜೀರ್ಣ, ಎದೆಯುರಿ ಮತ್ತು ರಾತ್ರಿಯ ನಿದ್ರೆಯನ್ನು ಅಡ್ಡಿಪಡಿಸುವ ಇತರ ಜೀರ್ಣಕಾರಿ ಸಮಸ್ಯೆಗಳನ್ನು ಎದುರಿಸಬಹುದು. ಅಷ್ಟೇ ಅಲ್ಲದೆ ಅನಾರೋಗ್ಯಕರ ತೂಕ ಹೆಚ್ಚಳ, ಸ್ಥೂಲಕಾಯತೆ ಮತ್ತು ಕಾಲಾನಂತರದಲ್ಲಿ ಇನ್ನಿತರ ಆರೋಗ್ಯ ಸಮಸ್ಯೆಗಳು ಹೆಚ್ಚಳಕ್ಕೆ ಕಾರಣರಾಗುತ್ತಿರಿ
ಹಾಗಾದರೆ ಊಟದ ನಂತರ ಮಲಗುವುದು ಕೆಟ್ಟದ್ದೇ?
ಹೌದು ಊಟದ ನಂತರ ಮಲಗುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ. ಏಕೆಂದರೆ ತಿಂದ ನಂತರ ನೀವು ಮಲಗುವುದರಿಂದ ನಿಮ್ಮ ದೇಹಕ್ಕೆ ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಕಷ್ಟು ಸಮಯವನ್ನು ನೀಡುವುದಿಲ್ಲ, ಇದರಿಂದ ಎದೆಯುರಿ ಮತ್ತು ಆಸಿಡ್ ರಿಫ್ಲಕ್ಸ್‌ನಂತಹ ಜೀರ್ಣಕಾರಿ ಸಮಸ್ಯೆಗಳು ಉಂಟಾಗುತ್ತವೆ. ಊಟದ ನಂತರ ಮಲಗುವ ಮುನ್ನ ಕನಿಷ್ಠ ಎರಡು ಮೂರು ಗಂಟೆಗಳ ಕಾಲ ಕಾಯಬೇಕು. ಇಂದಿನ ಅಧುನಿಕ ಯುಗದಲ್ಲಿ ತಡರಾತ್ರಿ ಊಟ ಮಾಡುವುದು, ವಾರಂತ್ಯದಲ್ಲಿ ಯಥೇಚ್ಛ ತಿಂದು ಮಲಗುವುದು ಸಾಮಾನ್ಯವಾಗಿದೆ. ನಮ್ಮ ಪೂರ್ವಜನರು ಸಂಜೆ ಸೂರ್ಯ ಮುಳುಗುತ್ತಲೇ ಊಟ ಮಾಡಿ ಎರಡು ಮೂರು ಗಂಟೆ ಬಳಿಕ ಮಲಗುತ್ತಿದ್ದರು.
ಧೂಮಪಾನ ಅಪಾಯಕಾರಿ:
ಸಿಗರೇಟು ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ ಊಟದ ನಂತರ ಸಿಗರೇಟ್ ಸೇದುವುದು 10 ಸಿಗರೇಟ್ ಸೇದುವುದಕ್ಕೆ ಸಮ ಎಂದು ಹೇಳಲಾಗುತ್ತದೆ. ಇದು ಎಷ್ಟು ಸತ್ಯ, ಸುಳ್ಳೋ ತಿಳಿದಿಲ್ಲ. ಆದರೆ ಧೂಮಪಾನ ನಿಮ್ಮ ದೇಹಕ್ಕೆ ಹಾನಿಕಾರಕವಾಗಿದೆ. ನೀವು ಯಾವ ಕಾರಣಕ್ಕೂ ಧೂಮಪಾನ ಮಾಡಲೇಬಾರದು ಇಂದಿನಿಂದಲೇ ತ್ಯಜಿಸಿಬಿಡಿ.
ಊಟದ ನಂತರ ಸ್ನಾನ ಮಾಡುವ ಅಭ್ಯಾಸ:
ಕೆಲವರಿಗೆ ಈ ಅಭ್ಯಾಸ ಇರುತ್ತದೆ. ಊಟದ ಬಳಿಕ ಸ್ನಾನ ಮಾಡುವುದು. ಇದರಿಂದ ಜೀರ್ಣಕ್ರಿಯೆ ತಡವಾಗುತ್ತದೆ. ಸ್ನಾನದ ಸಮಯದಲ್ಲಿ ಹೊಟ್ಟೆಯ ಸುತ್ತಲಿನ ರಕ್ತವು ಜೀರ್ಣಕ್ರಿಯೆಗೆ ಸಹಾಯ ಮಾಡುವ ಬದಲು ದೇಹದ ಇತರ ಭಾಗಗಳಿಗೆ ಹರಿಯುತ್ತದೆ. ಹೀಗಾಗಿ ಸ್ನಾನ ಮಾಡಿದ ಬಳಿಕವೇ ಊಟ ಮಾಡುವುದು ಒಳ್ಳೆಯದು.
ಆಹಾರದ ಜೊತೆ ಜೊತೆಗೆ ಹಣ್ಣುಗಳನ್ನು ತಿನ್ನುವುದು ಸರಿಯಾದ ಕ್ರಮವಲ್ಲ. ಸುಲಭವಾಗಿ ಜೀರ್ಣವಾಗುವ ಹಣ್ಣುಗಳನ್ನು ಮೊದಲು ತಿನ್ನಿರಿ. ಅಂದರೆ ನೀವು ಹಣ್ಣುಗಳನ್ನು ತಿನ್ನಬೇಕೆಂದರೆ ಊಟಕ್ಕೆ ಒಂದು ಗಂಟೆ ಮೊದಲು ಅಥವಾ ಊಟವಾದ ಎರಡು ಗಂಟೆಗಳ ನಂತರ ತಿನ್ನಬೇಕು. ಊಟವಾದ ನಂತರ ನೇರವಾಗಿ ತಿಂದರೆ ಹಣ್ಣುಗಳು ಸರಿಯಾಗಿ ಜೀರ್ಣವಾಗುವುದಿಲ್ಲ.
ಊಟದ ನಂತರ ಚಹ ಬೇಡವೇ ಬೇಡ:
ಈ ಅಭ್ಯಾಸ ಬಹಳಷ್ಟು ಜನರಿಗೆ ರೂಢಿಯಾಗಿದೆ ಊಟದ ಬಳಿಕ ಚಹ ಕಡ್ಡಾಯ ಎಂಬಂತೆ ಕುಡಿಯುತ್ತಾರೆ. ಊಟದ ನಂತರ ಚಹ ಕುಡಿಯುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ. ಚಹಾ ಎಲೆಗಳು ಆಮ್ಲೀಯವಾಗಿದ್ದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ನೀವು ಊಟದಲ್ಲಿ ಪ್ರೋಟೀನ್ ಸೇವಿಸಿದರೆ, ಚಹಾದ ಆಮ್ಲವು ಪ್ರೋಟೀನ್ ಅಂಶವನ್ನು ಗಟ್ಟಿಗೊಳಿಸುತ್ತದೆ, ಇದು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಊಟವಾದ ತಕ್ಷಣ ಟೀ ಕುಡಿಯುವುದರಿಂದ ದೇಹದಿಂದ ಕಬ್ಬಿಣಂಶ ಹೀರಿಕೊಳ್ಳುವಿಕೆಗೆ ಅಡ್ಡಿಯಾಗುತ್ತದೆ. ಊಟಕ್ಕೆ ಒಂದು ಗಂಟೆ ಮೊದಲು ಮತ್ತು ನಂತರ ಚಹಾವನ್ನು ತಪ್ಪಿಸಿ.