ಮದ್ಯ ಸೇವಿಸುವಾಗ ಈ 5 ಆಹಾರ ಸೇವಿಸಿದರೆ ನಿಮ್ಮ ಪ್ರಾಣಕ್ಕೆ ಬರುತ್ತೆ ಕುತ್ತು

ಮದ್ಯ ಸೇವನೆಯೊಂದಿಗೆ ಕೆಲವು ಆಹಾರಗಳು ಆರೋಗ್ಯಕ್ಕೆ ಹಾನಿಕಾರಕ. ಈ ಲೇಖನದಲ್ಲಿ ತಿಳಿಸಲಾದ 5 ಆಹಾರಗಳನ್ನು ಮದ್ಯದೊಂದಿಗೆ ಸೇವಿಸಬಾರದು. ಮದ್ಯದೊಂದಿಗೆ ಸಲಾಡ್ ಮತ್ತು ಬಾದಾಮಿ ತಿನ್ನುವುದು ಉತ್ತಮ.

Avoid these 5 food eating while having alcohol mrq

ದ್ಯ ಸೇವನೆ ಆರೋಗ್ಯಕ್ಕೆ ಅಪಾಯಕಾರಿ ಅಂತ ಗೊತ್ತಿದ್ದರೂ ಜನರು ಇಷ್ಟಪಟ್ಟು ಕೆಲವೊಮ್ಮೆ ಸಾಲ ಮಾಡಿಯಾದರೂ ಕುಡಿದು ನಶೆಯಲ್ಲಿ ತೇಲಾಡುತ್ತಾರೆ. ಹೀಗೆ ನಶೆಯಲ್ಲಿ ತೇಲಾಡಿದಾಗಲೇ ಕೆಲಸದ ಒತ್ತಡ ಕಡಿಮೆಯಾಗಿ ಒಂದು ರೀತಿಯ ನಿರಾಳದ ಅನುಭವ ಉಂಟಾಗುತ್ತೆ ಎಂಬುವುದು ಎಣ್ಣೆ ಪ್ರಿಯರ ಮನದಾಳದ ಮಾತು. ಸಾಮಾನ್ಯವಾಗಿ ಮದ್ಯ ಸೇವನೆ ಮಾಡುವಾಗ ಸೈಡ್‌ ಡಿಶ್ ರೂಪದಲ್ಲಿ ಏನಾದ್ರೂ ಕಡ್ಡಾಯವಾಗಿ ಇರಲೇಬೇಕು. ಕನಿಷ್ಠ ಕಡಲೆಬೀಜವನ್ನಾದರೂ ಗುಂಡೈಕ್ಳು ಬಳಸುತ್ತಾರೆ. ಒಂದಿಷ್ಟು ಮಂದಿಗೆ ಕಬಾಬ್, ಫಿಶ್, ಎಗ್ ಸೇರಿದಂತೆ ಬಿಸಿಬಿಸಿಯಾದ ಫ್ರೈ ಐಟಂ ಬೇಕೇಬೇಕು. ಆದ್ರೆ ಮದ್ಯ ಸೇವನೆ ಮಾಡುವ ಸಂದರ್ಭದಲ್ಲಿ ಕೆಲವೊಂದು ಆಹಾರಗಳನ್ನು ಸೇವಿಸಬಾರದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಆ ಐದು ಆಹಾರ ಯಾವವು ಎಂಬುದರ ಮಾಹಿತಿ ಈ ಲೇಖನದಲ್ಲಿದೆ. 

1.ಅತಿ ಮಸಾಲೆಯುಕ್ತ ಖಾರವಾದ ಆಹಾರ: ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಮದ್ಯ ಸೇವನೆ ಸಂದರ್ಭದಲ್ಲಿ ಅತಿ ಮಸಾಲೆಯುಕ್ತ ಖಾರವಾದ ಆಹಾರ ಸೇವನೆ ಮಾಡಬಾರದು. ಆದ್ರೆ ಮದ್ಯ ಸೇವಿಸುವ ಜನರು ಹುಳಿ, ಉಪ್ಪು ಮತ್ತು ಖಾರವಾದ ಆಹಾರ ಸವಿಯಲು ಹೆಚ್ಚು ಇಷ್ಟಪಡ್ತಾರೆ. ಇಂತಹ ಆಹಾರ ಸೇವನೆ ಮಾಡೋದರಿಂದ ನಶೆಯ ಪ್ರಮಾಣ ಹೆಚ್ಚಾಗುತ್ತದೆ. ನಶೆ ಹೆಚ್ಚಾದ್ರೆ ನೀವು ಎಲ್ಲಿದ್ದೀರಿ ಎಂಬುದನ್ನೇ ಮರೆಯುವ ಸಾಧ್ಯತೆ ಇರುತ್ತದೆ. 

ಈ ರೀತಿಯ ಆಹಾರ ಸೇವನೆ ನೇರವಾಗಿ ಕರುಳಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಕರುಳಿನಲ್ಲಿ ರಂಧ್ರ ಉಂಟಾಗಿ ಸೂಕ್ಷ್ಮಾಣು ಜೀವಿಗಳಿಂದ ಆವೃತಗೊಂಡು ಆಹಾರ ಸೇವನೆ ಮಾಡದ ಪರಿಸ್ಥಿತಿ ತಲುಪಬೇಕಾಗುತ್ತದೆ.   ಆದ್ದರಿಂದ ಮದ್ಯ ಸೇವಿಸುವಾಗ ಈ ರೀತಿಯ ಆಹಾರದಿಂದ ದೂರವಿರೋದು ಒಳ್ಳೆಯದು. 

2.ಮದ್ಯದ ಜೊತೆ ಪಿಜ್ಜಾ: ಇಂದಿನ ಯಂಗ್‌ ಜನರೇಷನ್‌ಗೆ ಪಿಜ್ಜಾ ಅಂದ್ರೆ ಬಲು ಇಷ್ಟ. ಹಾಗಂತ ಮದ್ಯ ಸೇವನೆ ಮಾಡುವ ಸಂದರ್ಭದಲ್ಲಿಯೂ ಸೈಡ್ ಡಿಶ್ ರೂಪದಲ್ಲಿ ಪಿಜ್ಜಾ ತಿನ್ನಬಾರದು. ಪಿಜ್ಜಾ ಸೇವನೆಯಿಂದ ಅರ್ಜೀಣತೆ ಸಮಸ್ಯೆ ಅಧಿಕವಾಗಿ ಕಂಡು ಬರುತ್ತದೆ. ಅದರಲ್ಲಿಯೂ ಮದ್ಯದೊಂದಿಗೆ ಪಿಜ್ಜಾ ತಿಂದಾಗ ಹೊಟ್ಟೆಯಲ್ಲಿ ಆಸಿಡ್ ರಿಫ್ಲೆಕೇಷನ್ ಉಂಟಾಗಿ ಉದರಕ್ಕೆ ಸಂಬಂಧಿಸಿದ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಪಿಜ್ಜಾ ಜೊತೆಯಲ್ಲಿನ ಟೊಮೆಟೋ ಸಾಸ್‌ನಿಂದಲೂ ಅಂತರ ಕಾಯ್ದುಕೊಳ್ಳಬೇಕು. 

3.ರೆಡ್ ವೈನ್ ಜೊತೆ ಕಡಲೆ: ಮದ್ಯ ಸೇವಿಸುವಾಗ ರುಚಿಗಾಗಿ ಕಡಲೆ ಕಾಳುಗಳನ್ನು ನಿಧಾನಕ್ಕೆ ತಿನ್ನುತ್ತಿರುತ್ತಾರೆ. ಅದರಲ್ಲಿಯೂ ರೆಡ್ ವೈನ್ ಜೊತೆ ಕಡಲೆ ಸೇವಿಸೋದು ಒಳ್ಳೆಯದಲ್ಲ. ರೆಡ್ ವೈನ್ ಕುಡಿಯುತ್ತಾ ಕಡಲೆಕಾಳು ತಿನ್ನೋದರಿಂದ ಹೊಟ್ಟೆನೋವು ಕಾಣಿಸಿಕೊಳ್ಳುವ ಸಾಧ್ಯತೆ ಅಧಿಕವಾಗಿರುತ್ತದೆ. ಕೆಂಪು ವೈನ್ ಟ್ಯಾನಿನ್ ಅಂಶವನ್ನು ಒಳಗೊಂಡಿರುತ್ತದೆ. ಕಡಲೆಯಲ್ಲಿರುವ ಕಬ್ಬಿಣದ ಅಂಶ ಟ್ಯಾನಿನ್ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ.

4.ಬಿಯರ್ ಜೊತೆ ಬ್ರೆಡ್ ಪಕೋಡ: ಕೆಲವರಿಗೆ ಮದ್ಯದ ಜೊತೆ ಬಜ್ಜಿ ಬೋಂಡಾ ಸೇವಿಸುವ ಅಭ್ಯಾಸ ಇರುತ್ತದೆ. ಯಾವುದೇ ಕಾರಣಕ್ಕೂ ಬಿಯರ್ ಜೊತೆ ಬ್ರೆಡ್ ಪಕೋಡಾ ತಿನ್ನಬಾರದು. ಬ್ರೆಡ್ ಮತ್ತು ಬಿಯರ್ ಹೆಚ್ಚಿನ ಪ್ರಮಾಣದ ಯೀಸ್ಟ್ ಹೊಂದಿರುತ್ತದೆ. ಈ ಎರಡು ಒಟ್ಟಿಗೆ ದೇಹ ಪ್ರವೇಶಿಸಿದಾಗ ಜೀರ್ಣಕ್ರಿಯೆ ಸಮಸ್ಯೆಯುಂಟಾಗುತ್ತದೆ. ಈ ಕಾಂಬಿನೇಷನ್ ದೇಹದಲ್ಲಿ ಕ್ಯಾಂಡಿಡಾ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಹೆಚ್ಚಿಸಬಹುದು.

5.ಆಲ್ಕೋಹಾಲ್ ಮತ್ತು ಚಾಕೊಲೇಟ್: ಇತ್ತೀಚಿನ ಯಂಗ್ ಜನರೇಷನ್ ಮದ್ಯ ಸೇವಿಸುತ್ತಾ ಚಾಕೋಲೇಟ್ ತಿನ್ನುತ್ತಾರೆ. ಈ ಕಾಂಬಿನೇಷನ್ ನಶೆಯ ಪ್ರಮಾಣವನ್ನು ಅಧಿಕ ಮಾಡುತ್ತದೆ. ಅತಿಯಾದ ಸೇವನೆಯಿಂದ ಪ್ರಜ್ಞೆ ಕಳೆದುಕೊಳ್ಳುವ ಸಾಧ್ಯತೆ ಅಧಿಕವಾಗಿರುತ್ತದೆ. ಚಾಕೊಲೇಟ್‌ನಲ್ಲಿ ಕೆಫೀನ್ ಇದ್ದು ಇದು ಗ್ಯಾಸ್ಟ್ರೊ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.

800 ರೂ ಬೆಲೆಯ ಈ ವೊಡ್ಕಾ ಭಾರತದಲ್ಲಿ ನಂ.1, ಆದರೆ ಹೆಚ್ಚನವರಿಗೆ ಗೊತ್ತೇ ಇಲ್ಲ!

ಹಾಗಾದ್ರೆ ಏನು ತಿನ್ನಬೇಕು?
ಮದ್ಯ ಕುಡಿಯುತ್ತಾ ತಿಂಡಿ ತಿನ್ನುವಂತೆ ಅನ್ನಿಸಿದ್ರೆ ಮಸಾಲೆಯುಕ್ತ ಆಹಾರದ ಬದಲಾಗಿ ಸಲಾಡ್ ಮತ್ತು ಬಾದಾಮಿ ತಿನ್ನಬಹುದು. ಸಲಾಡ್ ಹೆಚ್ಚಿನ ಫೈಬರ್ ಅಂಶವನ್ನು ಹೇರಳವಾಗಿ ಹೊಂದಿದ್ದು, ಇದು ಮದ್ಯದ ಡೈಜಿಷೇಷನ್ಗೆ ಸಹಾಯ ಮಾಡುತ್ತದೆ. ಇವುಗಳ ಸೇವನೆಯಿಂದ ಪ್ರಜ್ಞೆ ಕಳೆದುಕೊಳ್ಳುವ ರೀತಿಯಲ್ಲಿ ನಶೆ ಹೆಚ್ಚಳವಾಗಲ್ಲ. ಮದ್ಯದೊಂದಿಗೆ ಹಣ್ಣಿನ ರಸವನ್ನು ಸಹ ಸೇವಿಸಬಹುದು. ಮದ್ಯದ ಜೊತೆ ಹೆಚ್ಚು ನೀರು ಕುಡಿಯಬೇಕು. ಅದೇನೇ ಇರಲಿ ಮದ್ಯ ಸೇವನೆಯೇ ಆರೋಗ್ಯಕ್ಕೆ ಹಾನಿಕಾರಕ. ಅಂತಹದರಲ್ಲಿ ಮದ್ಯದ ಜೊತೆ ಈ ರೀತಿಯ ಆಹಾರ ಸೇವಿಸಿ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ.

ಇನ್‌ಸ್ಟಂಟ್ ಫುಡ್ ಮಾದರಿಯಲ್ಲಿ ಬಂದಿದೆ ಬಿಯರ್; ಪೌಡರ್‌ಗೆ ನೀರು ಸೇರಿಸಿ ಕುಡಿಯಿರಿ ಎಂದ ಕಂಪನಿ

Latest Videos
Follow Us:
Download App:
  • android
  • ios