Asianet Suvarna News Asianet Suvarna News

ಇನ್‌ಸ್ಟಂಟ್ ಫುಡ್ ಮಾದರಿಯಲ್ಲಿ ಬಂದಿದೆ ಬಿಯರ್; ಪೌಡರ್‌ಗೆ ನೀರು ಸೇರಿಸಿ ಕುಡಿಯಿರಿ ಎಂದ ಕಂಪನಿ

ಕಿಂಗ್‌ಫಿಶರ್ ತನ್ನ ಬಿಯರ್ ಅನ್ನು ಪೌಡರ್ ರೂಪದಲ್ಲಿ ಬಿಡುಗಡೆ ಮಾಡಿದೆ. ನೀರಿನಲ್ಲಿ ಬೆರೆಸಿ ಕುಡಿಯಬಹುದಾದ ಈ ಬಿಯರ್ ಪ್ರಯಾಣಿಕರಿಗೆ ಅನುಕೂಲಕರವಾಗಿದ್ದು, ಹೊಸ ಚರ್ಚೆಗೆ ಗ್ರಾಸವಾಗಿದೆ.

Kingfisher instant beer advertisement viral in social media mrq
Author
First Published Oct 17, 2024, 3:46 PM IST | Last Updated Oct 17, 2024, 3:46 PM IST

ಬೆಂಗಳೂರು: ಸರ್ಕಾರದ ಬೊಕ್ಕಸವನ್ನು ತುಂಬಿಸುವವರು ಮದ್ಯಪ್ರಿಯರು. ಇಡೀ ವಿಶ್ವದಲ್ಲಿಯೇ ಮದ್ಯದ ಮಾರುಕಟ್ಟೆ ತುಂಬಾ ದೊಡ್ದದಾಗಿದ್ದು, ಇವುಗಳ ಮೇಲೆ ಸರ್ಕಾರ ಎಷ್ಟೇ ತೆರಿಗೆ ವಿಧಿಸಿದರೂ ಬೇಡಿಕೆ ಮಾತ್ರ ಎಂದಿಗೂ ಕಡಿಮೆಯಾಗಲ್ಲ. ಮಾರುಕಟ್ಟೆಯಲ್ಲಿ  ಬಗೆಬಗೆಯ ಮದ್ಯದ ಉತ್ಪನ್ನಗಳು ನಿಮಗೆ ಸಿಗಬಹುದು. ಮದ್ಯದ ಬಾಟೆಲ್‌ಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸೋದು ಕಷ್ಟಕರ. ಅದರಲ್ಲಿಯೂ ರಾಜ್ಯದ ಗಡಿ ಭಾಗಗಳಲ್ಲಿ ಮದ್ಯ ಸಾಗಣೆ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿರುತ್ತಾರೆ. ಇದೀಗ ಕಿಂಗ್ ಪಿಶರ್ ತನ್ನ ಮದ್ಯವನ್ನು ಪೌಡರ್ ರೂಪದಲ್ಲಿ ಹೊರ ತಂದಿದೆ. ಒಂದು ರೀತಿ ಜ್ಯೂಸ್ ಪೌಡರ್ ರೀತಿ. ಅಂದ್ರೆ ನೀರಿನಲ್ಲಿ ಪೌಡರ್ ಸೇರಿಸಿದ್ರೆ ಜ್ಯೂಸ್ ಸಿದ್ಧವಾಗುತ್ತದೆ. 

ಇಂದು ಯಾರ ಬಳಿಯೂ ಸಮಯ ಇಲ್ಲ. ಹಾಗಾಗಿಯೇ ಮಾರುಕಟ್ಟೆಯಲ್ಲಿ ಇನ್‌ಸ್ಟಂಟ್ ಫುಡ್ ಪ್ಯಾಕೇಟ್‌ಗಳು ಬಂದಿವೆ. ನೂಡಲ್ಸ್, ಪೋಹಾ, ಉಪ್ಮಾ ಸೇರಿದಂತೆ ಹಲವು ಆಹಾರಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಇದೀಗ ಇದೇ ಮಾದರಿಯಲ್ಲಿ ಕಿಂಗ್ ಪಿಶರ್ ಬಿಯರ್ ಮದ್ಯವನ್ನು ಹೊರ ತಂದಿದೆ. ಈಗಾಗಲೇ ಇದರ ಜಾಹೀರಾತು ಸಹ ಹೊರಬಂದಿದ್ದು, ಮದ್ಯಪ್ರಿಯರನ್ನು ಆಕರ್ಷಿಸುತ್ತಿದೆ. ಜಾಹೀರಾತಿನಲ್ಲಿ ತೋರಿಸಿರುವಂತೆ ನೀಡಲಾಗಿರುವ ಎರಡು ಪೌಡರ್‌ಗಳನ್ನು ನೀರಿನಲ್ಲಿ ಬೆರೆಸಿದ್ರೆ ಬಿಯರ್ ರೆಡಿಯಾಗುತ್ತದೆ. ಇದರಿಂದ ಇನ್ಮುಂದೆ ಬಿಯರ್ ಕ್ಯಾರಿ ಮಾಡೋದು ಸುಲಭ ಆಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ.

800 ರೂ ಬೆಲೆಯ ಈ ವೊಡ್ಕಾ ಭಾರತದಲ್ಲಿ ನಂ.1, ಆದರೆ ಹೆಚ್ಚನವರಿಗೆ ಗೊತ್ತೇ ಇಲ್ಲ!

ಮದ್ಯ ಪ್ರಿಯ ಪ್ರವಾಸಿಗರಿಗೆ ಈ ಪಾಕೆಟ್‌ಗಳ ಹೆಚ್ಚು ಲಾಭವಾಗುವ ಸಾಧ್ಯತೆ ಇರುತ್ತದೆ. ಎರಡು ಪ್ಯಾಕೆಟ್ ಮತ್ತು ಒಂದು ಗ್ಲಾಸ್ ನೀರಿದ್ರೆ ಮದ್ಯವನ್ನು ನಾವೇ ಎಲ್ಲಿ ಬೇಕಾದ್ರೂ ತಯಾರಿಸಿಕೊಳ್ಳಬಹುದಾಗಿದೆ. ಆದರೆ ಈ ರೀತಿ ತಯಾರು ಮಾಡುವ ಬಿಯರ್ ಕಿಕ್ ಕೊಡುತ್ತಾ ಅನ್ನೋದನ್ನ ಕುಡಿದವರಿಂದಲೇ ತಿಳಿದುಕೊಳ್ಳಬೇಕು. ಈ ಬಗ್ಗೆ ವಿರೋಧ ಸಹ ವ್ಯಕ್ತವಾಗಿದೆ.  

ಈ ರೀತಿ ಪಾಕೆಟ್‌ಗಳಿದ್ರೆ ಜನರು ಎಲ್ಲೆಂದರಲ್ಲಿ ಬಿಯರ್ ಮಾಡಿಕೊಳ್ಳಲು ಮುಂದಾಗಬಹುದು. ಎರಡು ಚಿಕ್ಕ ಪ್ಯಾಕೆಟ್‌ಗಳು ಸುಲಭವಾಗಿ ತೆಗೆದುಕೊಂಡು ಹೋಗಬಹುದು. ವಿಶೇಷವಾಗಿ ಪ್ರಯಾಣದ ಸಂದರ್ಭದಲ್ಲಿ ಇದರ ಬಳಕೆ ಹೆಚ್ಚಾಗಬಹುದು. ಈ ಮೊದಲು ಪೊಲೀಸರು ವಾಹನಗಳಲ್ಲಿ ಮದ್ಯದ ಬಾಟೆಲ್ ಇದೆಯಾ ಎಂದು ಹುಡುಕುತ್ತಿದ್ದರು. ಇದೀಗ ಪಾಕೆಟ್‌ಗಳನ್ನು ಹುಡುಕುವ ಸಂದರ್ಭ ಬರಬಹುದು.  ಆದರೆ ಏನೇ ಆಗಲಿ ಮದ್ಯಪಾನ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂಬುದನ್ನು ಮಾತ್ರ ಮರೆಯಬಾರದು.

ವಿಸ್ಕಿ ವರ್ಲ್ಡ್‌ ಅವಾರ್ಡ್‌ನಲ್ಲಿ ಚಿನ್ನ ಗೆದ್ದ Indri Diwali Collector Edition 2024 ಭಾರತದಲ್ಲಿ ರಿಲೀಸ್‌, ಬೆಲೆ ಎಷ್ಟು?

Latest Videos
Follow Us:
Download App:
  • android
  • ios