ಆಫೀಸ್, ಶಾಪಿಂಗ್‌ಗೆ ಬರಿಗಾಲಲ್ಲೇ ಬರ್ತಾರೆ ಜನ, ರೀಸನ್ ಏನಿರಬಹುದು?
ಬರಿಗಾಲಿನಲ್ಲಿ ಜನರು ಮನೆ ಮೆಟ್ಟಿಲಿಳಿಯೋದಿಲ್ಲ. ನೈರ್ಮಲ್ಯದ ಹೆಸರಿನಲ್ಲಿ ಜನರು ಚಪ್ಪಲಿ ಧರಿಸ್ತಾರೆ. ಶೂ, ಚಪ್ಪಲಿ ಸ್ಟೈಲ್ ಕೂಡ ಹೌದು. ಆದ್ರೆ ಈಗ ನಾವು ಹೇಳ್ತಿರೋ ದೇಶದ ಜನ, ಚಪ್ಪಲಿ, ಶೂ ಬದಿಗಿಟ್ಟು ಬರಿಗಾಲಿನಲ್ಲಿ ರಸ್ತೆಗಿಳಿತಿದ್ದಾರೆ.
40 ಸಾವಿರ ವರ್ಷಗಳ ಹಿಂದೆ ಮನುಷ್ಯ ಬರಿಗಾಲಿನಲ್ಲಿ ನಡೆಯುತ್ತಿದ್ದ. ಆಗ ಚಪ್ಪಲಿ, ಶೂಗಳ ಬಳಕೆಯಿರಲಿಲ್ಲ. ಜನರು ಆರಾಮದಾಯಕ ಮತ್ತು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಂಡಿದ್ದರು. ಆದ್ರೆ ಈಗ ಜನರು ಬದಲಾಗಿದ್ದಾರೆ. ಬರಿಗಾಲಿನಲ್ಲಿ ನಡೆಯುವ ವ್ಯಕ್ತಿಯನ್ನು ಬಡವ ಎಂದು ಪರಿಗಣಿಸ್ತಾರೆ. ಬರಿಗಾಲಿನಲ್ಲಿ ಬಂದವರನ್ನು ಕೆಳಗಿನಿಂದ ಮೇಲ್ವರೆಗೆ ನೋಡುವ ಜನರಿದ್ದಾರೆ. ಭಾರತದಲ್ಲಿ ಈಗ್ಲೂ ಅನೇಕರು ಬರಿಗಾಲಿನಲ್ಲಿ ನಡೆಯಲು ಆದ್ಯತೆ ನೀಡ್ತಾರೆ. ಹೊಲಗಳಿಗೆ ಹೋಗುವ ಜನರು ಚಪ್ಪಲಿ ಬಳಸೋದು ಅಪರೂಪ. ಇನ್ನು ವಾಕಿಂಗ್ ಮಾಡುವ ವೇಳೆ ಬರಿಗಾಲಿನಲ್ಲಿ ನಡೆಯುವವರನ್ನು ನೀವು ನೋಡ್ಬಹುದು. ಹುಲ್ಲು ಹಾಸಿನ ಮೇಲೆ ಬರಿಗಾಲಿನಲ್ಲಿ ನಡೆದ್ರೆ ಆರೋಗ್ಯಕ್ಕೆ ಒಳ್ಳೆಯದು. ನಮ್ಮ ದೇಶದಲ್ಲಿ ಬರಿಗಾಲಿನಲ್ಲಿ ನಡೆಯೋದು ಹೆಚ್ಚು ವಿಶೇಷವಲ್ಲ. ಆದ್ರೆ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ವಾಸಿಸುವ ಜನರು ಕೂಡ ಬದಲಾಗಿದ್ದಾರೆ.
ದುಬಾರಿ ಬೆಲೆ ಚಪ್ಪಲಿ (Slippers), ಶೂ ಹಾಕದೆ ಮನೆಯಿಂದ ಹೊರಗೆ ಇಳಿಯದೆ ಇದ್ದ ಜನ ಬರಿಗಾಲಿನಲ್ಲಿ ನಡೆಯಲು ಶುರು ಮಾಡಿದ್ದಾರೆ. ಇಲ್ಲಿನ ಜನರು ಪಬ್ ಅಥವಾ ಪಾರ್ಟಿಯಿಂದ ಹಿಡಿದು ಕಚೇರಿ (Office) ಅಥವಾ ಶಾಪಿಂಗ್ ಗೆ ಹೋಗುವ ವೇಳೆಯೂ ಬರಿಗಾಲಿ (Barefoot) ನಲ್ಲಿ ಓಡಾಡುತ್ತಿದ್ದಾರೆ. ಹಾಗಂತ ಎಲ್ಲರೂ ಬರಿಗಾಲಿನಲ್ಲಿ ಓಡಾಡ್ತಿದ್ದಾರೆ ಎಂದಲ್ಲ. ಕೆಲವರು ಶೂ, ಚಪ್ಪಲಿ ಹಾಕಿ ಓಡಾಡಿದ್ರೆ ಮತ್ತೆ ಬಹುತೇಕರು ಬರಿಗಾಲಿನಲ್ಲಿ ಹೋಗ್ತಿದ್ದಾರೆ.
ಕೋವಿಶೀಲ್ಡ್ ಲಸಿಕೆ ದೂಷಿಸಬೇಡಿ, ಕಂಡುಹಿಡಿದವರಿಗೊಂದು ಥ್ಯಾಂಕ್ಸ್ ಹೇಳಿ: ಡಾ. ಸಿ ಎನ್ ಮಂಜುನಾಥ್
ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಎಕ್ಸ್ @CensoredMen ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಆ ವಿಡಿಯೋದಲ್ಲಿ ಜನರು ಬರಿಗಾಲಿನಲ್ಲಿ ರಸ್ತೆಯಲ್ಲಿ ಓಡಾಡೋದನ್ನು ನೀವು ಕಾಣಬಹುದು. 19 ಸೆಕೆಂಡುಗಳ ವೀಡಿಯೊಕ್ಕೆ ಆಸ್ಟ್ರೇಲಿಯನ್ನರಿಗೆ ಏನಾಯಿತು? ಎಂದು ಶೀರ್ಷಿಕೆ ಹಾಕಲಾಗಿದೆ. ಬರಿಗಾಲಿನಲ್ಲಿ ನಡೆಯುವ ಡ್ರೆಂಟ್ ಈಗಿನದಲ್ಲ. ನ್ಯೂಯಾರ್ಕ್ ಟೈಮ್ಸ್ ಬರಹಗಾರ ಸೆಥ್ ಕುಗೆಲ್ ಅವರು 2012 ರಲ್ಲಿ ನ್ಯೂಜಿಲೆಂಡ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಬಗ್ಗೆ ಬರೆದಿದ್ದರು. ಜನರು ಬರಿಗಾಲಿನಲ್ಲಿ ನಡೆಯುತ್ತಾರೆ. ಬೀದಿಯಲ್ಲಿ, ಸೂಪರ್ಮಾರ್ಕೆಟ್ ನಲ್ಲಿ, ಎಲ್ಲೆಡೆ ಬರಿಗಾಲಿನಲ್ಲಿ ಓಡಾಡುವ ಜನರನ್ನು ನೀವು ನೋಡಬಹುದು. ಇದು ಗೊಂದಲದ ಹಾಗೂ ಅಚ್ಚರಿಯ ಸಂಗತಿಯಾಗಿದೆ. ನ್ಯೂಜಿಲೆಂಡ್ ನ ನಗರದ ಫುಟ್‌ಪಾತ್‌ಗಳು ಸ್ವಚ್ಛವಾಗಿರುವುದು ನಿಜ, ಆದರೆ ಅವು ಫುಟ್ ಪಾತ್ ಅಲ್ವಾ ಎಂದು ಪ್ರಶ್ನೆ ಮಾಡಿದ್ದರು.
ಇಲ್ಲಿನ ಇನ್ನೊಂದು ಅಚ್ಚರಿಯ ಸಂಗತಿ ಅಂದ್ರೆ ಇಲ್ಲಿನ ಯುವಕರು ಮಾತ್ರವಲ್ಲ ಮಕ್ಕಳು ಕೂಡ ಬರಿಗಾಲಿನಲ್ಲಿ ನಡೆಯುತ್ತಾರೆ. ಶಾಲೆಯಲ್ಲೂ ಬರಿಗಾಲಿನಲ್ಲಿ ನಡೆಯುವ ಮಹತ್ವದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಲಾಗುತ್ತದೆ. ಪರ್ತ್‌ನಲ್ಲಿರುವ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬೂಟುಗಳಿಲ್ಲದೆ ಶಾಲೆಗೆ ಬರಲು ಅವಕಾಶ ನೀಡಲಾಗಿದೆ.
ಎಕ್ಸ್ ನಲ್ಲಿ ಈ ವಿಡಿಯೋ ವೈರಲ್ ಆಗಿದೆ. 66 ಲಕ್ಷಕ್ಕೂ ಹೆಚ್ಚು ಜನರು ಈ ವೀಡಿಯೊವನ್ನು ವೀಕ್ಷಿಸಿದ್ದಾರೆ. ಬರಿಗಾಲಿನಲ್ಲಿ ನಡೆದ್ರೆ ಏನೆಲ್ಲ ಪ್ರಯೋಜನವಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಚಪ್ಪಲ್, ಶೂ ಇಲ್ಲದೆ ಇದ್ದಾಗ ನಿರಾಳತೆ ದೊರೆಯುತ್ತೆ ಎಂದು ಮತ್ತೆ ಕೆಲವರು ಹೇಳಿದ್ದಾರೆ. ಪ್ರಪಂಚದ ಕೆಲವೇ ಕೆಲವು ದೇಶಗಳ ಫುಟ್ ಪಾತ್ ನಲ್ಲಿ ಮಾತ್ರ ಬರಿಗಾಲಿನಲ್ಲಿ ನಡೆಯಬಹುದು ಎಂದೂ ಕೆಲವರು ಹೇಳಿದ್ದಾರೆ.
ಬೇಸಿಗೆ ರಜೆ ಕಳೆಯಲು ಫ್ಯಾಮಿಲಿ ಜೊತೆ ಉಡುಪಿಯ ಈ ಸುಂದರ ಜಾಗಗಳಿಗೆ ಹೋಗ್ಬನ್ನಿ
ಬರಿಗಾಲಿನಲ್ಲಿ ನಡೆಯುವುದರಿಂದ ಆಗುವ ಲಾಭ : ಬರಿಗಾಲಿನಲ್ಲಿ ನಡೆಯುವುದು ಹೆಚ್ಚು ಪ್ರಯೋಜನಕಾರಿ. ಇದಿಂದ ಪಾದದ ಸ್ನಾಯುಗಳಿಗೆ ವ್ಯಾಯಾಮವಾಗುತ್ತದೆ. ಮೆದುಳಿನ ಮೇಲೆ ಇದು ಪರಿಣಾಮ ಬೀರುತ್ತದೆ. ಇದ್ರಿಂದ ಒತ್ತಡ ಕಡಿಮೆ ಆಗುತ್ತದೆ. ಮಾನಸಿಕ ಆರೋಗ್ಯವನ್ನು ಸುಧಾರಿಸಲು ಇದು ಪ್ರಯೋಜನಕಾರಿ. ಬರಿಗಾಲಿನಲ್ಲಿ ನಡೆಯುವುದ್ರಿಂದ ನಿಮಗೆ ನಿದ್ರೆ ಸಮಸ್ಯೆ ಕಾಡುವುದಿಲ್ಲ. ರಾತ್ರಿ ಸುಖ ನಿದ್ರೆಗೆ ಇದು ಪ್ರಯೋಜನಕಾರಿ. ಇದಲ್ಲದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ಕಾರಣ.
🇦🇺 Is this a normal thing in Australia? pic.twitter.com/hxFVL0ufiP
— Censored Men (@CensoredMen) May 13, 2024