Covid 4th Wave: ಕೋವಿಡ್ ಹೈರಿಸ್ಕ್ ದೇಶಗಳಿಂದ 2,867 ಪ್ರಯಾಣಿಕರ ಆಗಮನ: 12 ಮಂದಿಗೆ ಸೋಂಕು
ಡಿಸೆಂಬರ್ ತಿಂಗಳ 24ರವರೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಒಟ್ಟು 2,867 ಹೈರಿಸ್ಕ್ ದೇಶಗಳ ಪ್ರಯಾಣಿಕರು ಆಗಮಿಸಿದ್ದಾರೆ. ಈ ಪೈಕಿ, ದುಬೈ, ಥೈಲ್ಯಾಂಡ್, ಲಂಡನ್, ಸಿಡ್ನಿ, ಮಾಲ್ಡೀವ್ಸ್ ಸೇರಿ ಬರೋಬ್ಬರು 12 ಮಂದಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ
ಬೆಂಗಳೂರು (ಡಿ.26): ಡಿಸೆಂಬರ್ ತಿಂಗಳ 24ರವರೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಒಟ್ಟು 2,867 ಹೈರಿಸ್ಕ್ ದೇಶಗಳ ಪ್ರಯಾಣಿಕರು ಆಗಮಿಸಿದ್ದಾರೆ. ಈ ಪೈಕಿ, ದುಬೈ, ಥೈಲ್ಯಾಂಡ್, ಲಂಡನ್, ಸಿಡ್ನಿ, ಮಾಲ್ಡೀವ್ಸ್ ಸೇರಿ ಬರೋಬ್ಬರು 12 ಮಂದಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಚೀನಾದಲ್ಲಿ ಕೊರೋನಾ ಸೋಂಕಿನ ಬಿಎಫ್-7 ಹೊಸ ಹಾಗೂ ಅತ್ಯಂತ ಅಪಾಯಕಾರಿ ರೂಪಾಂತರಿ ತಳಿ ಪತ್ತೆಯಾಗಿ ಒಂದು ತಿಂಗಳಿಗಿಂತ ಹೆಚ್ಚಿನ ಸಮಯವಾಗಿದೆ. ಸಾವು-ನೋವುಗಳು ಹೆಚ್ಚಾದ ನಂತರ ನಮ್ಮ ದೇಶವೂ ಸೇರಿದಂತೆ ಜಾಗತಿಕವಾಗಿ ಹಲವು ದೇಶಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ, ಡಿ.24ರ ನಂತರ ಕೋವಿಡ್ ಮಾರ್ಗಸೂಚಿ ಸೇರಿ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ, ಇದಕ್ಕಿಂತಲೂ ಮುಂಚಿತವಾಗಿ ಅಂದರೆ ಡಿ.24ರ ಒಳಗಾಗಿ ವಿವಿಧ ದೇಶಗಳಿಂದ ಆಗಮಿಸಿರುವ 2,867 ಪ್ರಯಾಣಿಕರು ಆಗಮಿಸಿದ್ದಾರೆ. ಈ ಪೈಕಿ ಒಟ್ಟು 12 ಪ್ರಯಾಣಿಕರಿಗೆ ಕೊವಿಡ್ ಪಾಸಿಟಿವ್ ಪತ್ತೆಯಾಗಿದೆ. ಇವರ ಗಂಟಲು ದ್ರವದ ಮಾದರಿಗಳನ್ನು ಜೀನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಲಾಗಿದೆ.
Covid 4th Wave: ಬೆಂಗಳೂರಿಗೆ ಕಾಲಿಟ್ಟಿತೇ ಬಿಎಫ್-7 ಕರೊನಾ ಭೂತ: ಚೀನಾದಿಂದ ಬಂದ ವ್ಯಕ್ತಿಯಲ್ಲಿ ಸೋಂಕು
ರಾಜ್ಯದಲ್ಲಿ ಬಿಎಫ್-7 ವೈರಸ್ ಭೀತಿ: ಇನ್ನು ವಿದೇಶಗಳಿಂದ ಬೆಂಗಳೂರಿಗೆ ಆಗಮಿಸುತ್ತಿರುವ ಪ್ರಯಾಣಿಕರಿಗೆ ಪ್ರತ್ಯೇಕ ಆಸ್ಪತ್ರೆ ಮೀಸಲಿಗೆ ನಿರ್ಧಾರ ಮಾಡಲಾಗಿದೆ. ಅಂತರಾಷ್ಟ್ರೀಯ ಪ್ರಯಾಣಿಕರಲ್ಲಿ ಕೊರೊನಾ ದೃಢಪಟ್ಟರೆ ಬೌರಿಂಗ್ ಆಸ್ಪತ್ರೆಗೆ ಶಿಫ್ಟ್ ಮಾಡಿ ಅಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಕಳೆದ ಬಾರಿಯೂ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಬೌರಿಂಗ್ ಆಸ್ಪತ್ರೆಯನ್ನು ಮೀಸಲು ಇಡಲಾಗಿತ್ತು. ಇನ್ನು ಹೊಸ ಮಾದರಿಯ ರೂಪಾಂತರಿ ವೈರಸ್ ಹರಡುವಿಕೆ ಕಟ್ಟಿ ಹಾಕಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ಒಟ್ಟು 60 ಹಾಸಿಗೆಗಳ ವಾರ್ಡ್ ಸಿದ್ಧಪಡಿಸಲಾಗಿದೆ. ಈ ಪೈಕಿ 10 ಬೆಡ್ ಐಸಿಯು ರೋಗಿಗಳಿಗೆ ಮೀಸಲಿಡಲಾಗಿದೆ. ಉಳಿದಂತೆ ಕೋಮಾರ್ಬಿಡಿಟೀಸ್‌ಗೆ 8 ಆರೆಂಜ್ ಬೆಡ್ ಹಾಗೂ ಆರೋಗ್ಯವಾಗಿರುವ ಸೋಂಕಿತರಿಗೆ 42 ಗ್ರೀನ್ ಬೆಡ್‌ಗಳನ್ನು ಮೀಸಲು ಇಡಲಾಗಿದೆ.
ಬೆಂಗಳೂರಿಗೆ ಇಂದು ಪ್ರಮುಖ ದಿನ: ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ 13058 ಜನರ ಸ್ಯಾಂಪಲ್ಸ್ ಗಳನ್ನ ಕಲೆಕ್ಟ್ ಮಾಡಿದ್ದ ಆರೋಗ್ಯ ಇಲಾಖೆಯು ಅವರ ಪೈಕಿ 241 ಸೋಂಕಿತರ ಗಂಟಲು ದ್ರವ ಮಾದರಿಗಳನ್ನು ಜೀನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಅವರ ವದರಿಯು ಇಂದು ಬರಲಿದೆ. ಈ ಪೈಕಿ ಒಮಿಕ್ರಾನ್ ತಳಿಯ ಬಿಎಫ್ -೭ ತಳಿ ಏನಾದರೂ ಪತ್ತೆಯಾದಲ್ಲಿ ಅತ್ಯಂತ ಹೆಚ್ಚಿನ ರೀತಿಯಲ್ಲಿ ಕೋವಿಡ್ ಮಾರ್ಗಸೂಚಿಯನ್ನು ಪಾಲನೆ ಮಾಡಬೇಕಾಗುತ್ತದೆ. ಜೊತೆಗೆ, ಈ ಹಿಂದೆ ಪಾಲನೆ ಮಾಡಲಾಗಿದ್ದ ಟೆಸ್ಟಿಂಗ್, ಟ್ರೇಸಿಂಗ್ ಮತ್ತು ಟ್ಯಾಕಿಂಗ್ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಯೂ ಹೆಚ್ಚಾಗಿದೆ.
China Covid: ಹೊಸ ವೈರಸ್ ಭಯ ಹುಟ್ಟಿಸಿದ ಚೀನಾ: ಸುಳ್ಳಿನ ಕೋಟೆಯ ಅಸಲಿ ಕತೆ ಏನು?
ಸೋಂಕು ಪತ್ತೆಯಾದ ವಿದೇಶಿ ಪ್ರಯಾಣಿಕರು:
- ಸಿಡ್ನಿ-1
- ಹಾಂಕಾಂಗ್ -1
- ಫ್ರ್ಯಾಂಕ್ ಫರ್ಟ್ - 1
- ಲಂಡನ್ -1
- ದುಬೈ -3
- ಸಿಂಗಾಪುರ -2,
- ಥೈಲ್ಯಾಂಡ್ -1
- ಮಾಲ್ಡೀವ್ಸ್ - 1
- ಅಬುದಾಬಿ -1