ಇಂತಹ ಸಮಯದಲ್ಲಿ ಸಂಗಾತಿಯ ಗಡ್ಡ ನಿಜವಾಗಿಯೂ ನಂಬಿಕೆ ಮತ್ತು ಪ್ರೀತಿಯ ಸಂಕೇತವಾಗಬಹುದೇ?. 

ಕೆಲವು ಹುಡುಗಿಯರು ಕ್ಲೀನ್ ಶೇವ್ ಮಾಡಿದ ಹುಡುಗರನ್ನು ಇಷ್ಟಪಡುತ್ತಾರೆ. ಮತ್ತೆ ಕೆಲವರು ಗಡ್ಡ ಬಿಟ್ಟವರನ್ನು ಇಷ್ಟಪಡುತ್ತಾರೆ. ಆದರೆ ಅವರ ವ್ಯಕ್ತಿತ್ವವನ್ನು ಕೇವಲ ಲುಕ್‌ನಿಂದ ನಿರ್ಧರಿಸಬಹುದೇ?. ಏಕೆಂದರೆ ಸಂಬಂಧವು ಸೂಕ್ಷ್ಮವಾದ ದಾರದಂತೆ. ಇದರಲ್ಲಿ ಪ್ರಾಮಾಣಿಕತೆ ಮತ್ತು ಸಂಗಾತಿಯ ಬಗ್ಗೆ ನಿಜವಾದ ಪ್ರೀತಿ ಇದ್ದರೆ, ಆ ಸಂಬಂಧವು ಲೈಫ್ ಲಾಂಗ್ ಇರುತ್ತದೆ. ಕೆಲವೊಮ್ಮೆ ಸಂಗಾತಿಯು ಪ್ರಾಮಾಣಿಕವಾಗಿರಲಿ ಅಥವಾ ಇಲ್ಲದಿರಲಿ ಅನೇಕ ವಿಷಯಗಳು ಮನಸ್ಸಿನಲ್ಲಿ ಸುತ್ತುತ್ತಲೇ ಇರುತ್ತವೆ. ಇಂದಿನ ಯುಗದಲ್ಲಿ ಹೆಚ್ಚಿನ ಯುವಕರು ಸಂಬಂಧಗಳ ಬಗ್ಗೆ ಗಂಭೀರವಾಗಿರುವುದಿಲ್ಲ. ಬೇಗನೆ ದೂರವಾಗುತ್ತಾರೆ. ಇಂತಹ ಸಮಯದಲ್ಲಿ ಸಂಗಾತಿಯ ಗಡ್ಡ ನಿಜವಾಗಿಯೂ ನಂಬಿಕೆ ಮತ್ತು ಪ್ರೀತಿಯ ಸಂಕೇತವಾಗಬಹುದೇ?.

ಮೋಸ ಮಾಡಲ್ಲ
ಆರ್ಚಿವ್ಸ್ ಆಫ್ ಸೆಕ್ಷುಯಲ್ ಬಿಹೇವಿಯರ್ ಅಂಡ್ ಎವಲ್ಯೂಷನರಿ ಸೈಕಾಲಜಿ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಗಡ್ಡವಿರುವ ಪುರುಷರು ಹೆಚ್ಚು ಪ್ರಾಮಾಣಿಕರು ಮತ್ತು ರೋಮ್ಯಾಂಟಿಕ್ ಆಗಿರುತ್ತಾರೆ. ಇಂತಹ ಪುರುಷರು ತಮ್ಮ ಜೀವನದುದ್ದಕ್ಕೂ ಬೇರೆ ಮಹಿಳೆಯೊಂದಿಗೆ ಸಂಬಂಧ ಬೆಳೆಸುವುದಿಲ್ಲ. ಯಾವಾಗಲೂ ತನ್ನ ಸಂಗಾತಿಯನ್ನು ಸಂತೋಷವಾಗಿಡಲು ಪ್ರಯತ್ನಿಸುತ್ತಾರೆ ಎಂದು ಈ ಅಧ್ಯಯನವು ಹೇಳಿದೆ. ಅಂತಹ ಜನರು ಇನ್ನೊಬ್ಬ ಸಂಗಾತಿಯನ್ನು ಎಂದಿಗೂ ಹುಡುಕುವುದಿಲ್ಲ ಅಥವಾ ಅವರಿಗೆ ಮೋಸ ಮಾಡುವ ಬಗ್ಗೆ ಯೋಚಿಸುವುದಿಲ್ಲ.

ಏನು ಬೇಕಾದ್ರೂ ಮಾಡಲು ರೆಡಿ
ಸಂಶೋಧನೆಯ ಪ್ರಕಾರ, ಗಡ್ಡ ಬಿಡುವ ಪುರುಷರು ಶಿಸ್ತಿನಿಂದ ಇರಲು ಇಷ್ಟಪಡುತ್ತಾರೆ. ಏಕೆಂದರೆ ಗಡ್ಡ ಬೆಳೆಸಲು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಅವರು ತಾಳ್ಮೆಯಿಂದಿರಬೇಕಾಗುತ್ತದೆ. ಅದನ್ನು ಶೇಪ್‌ನಲ್ಲಿಡುವುದು ಕಷ್ಟ, ಕೇರ್ ಕೂಡ ಮಾಡಬೇಕಾಗುತ್ತೆ. ಹಾಗಾಗಿ ಅವರು ತಾಳ್ಮೆಯಿಂದಿರುತ್ತಾರೆ. ಜೊತೆಗೆ ತಮ್ಮ ಸಂಗಾತಿಯ ಬಗ್ಗೆಯೂ ಕಾಳಜಿ ವಹಿಸುತ್ತಾರೆ. ಪುರುಷನಿಗೆ ಹೆಚ್ಚು ಗಡ್ಡ ಇದ್ದಷ್ಟೂ, ಅವನು ಹೆಚ್ಚು ಶಿಸ್ತನ್ನು ಇಷ್ಟಪಡುತ್ತಾನೆ. ಅಂತಹ ಜನರಿಗೆ, ಅವರ ಕುಟುಂಬವು ಎಲ್ಲಕ್ಕಿಂತ ಹೆಚ್ಚಾಗಿರುತ್ತದೆ. ಅವರು ತಮ್ಮ ಸಂಗಾತಿಗಾಗಿ ಏನು ಬೇಕಾದರೂ ಮಾಡಬಹುದು.

ಪ್ರಬುದ್ಧರಾಗಿ ಕಾಣ್ತಾರೆ
ಸೈಕಲಾಜಿಕಲ್ ಟುಡೇ ಪ್ರಕಾರ, ಮಹಿಳೆಯರು ಗಡ್ಡವಿರುವ ಪುರುಷರನ್ನು ಹೆಚ್ಚು ಪ್ರಬುದ್ಧರನ್ನಾಗಿ ಕಾಣುತ್ತಾರೆ. ಅವರ ಗಡ್ಡ ಆಕರ್ಷಕವಾಗಿ ಕಾಣುವುದರಿಂದ ಕ್ಲೀನ್ ಕ್ಷೌರ ಮಾಡಿದ ಹುಡುಗರಿಗಿಂತ ಹೆಚ್ಚಾಗಿ ಅವರೊಂದಿಗೆ ಡೇಟಿಂಗ್ ಮಾಡಲು ಬಯಸುತ್ತಾರೆ. ಸ್ಥಿರತೆ ಇರುವ, ಕಾಪಾಡುವ ಪುರುಷರನ್ನು ಮಾತ್ರ ಮಹಿಳೆಯರು ಬೇಗನೆ ಇಷ್ಟಪಡುತ್ತಾರೆ. ಗಡ್ಡವು ಪುರುಷರಿಗೆ ಮೇಲ್‌ ಲುಕ್ ನೀಡುತ್ತದೆ, ಇದು ಅವರ ಆತ್ಮವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಹುಡುಗಿಯರು ಸಹ ಅವರಿಂದ ಪ್ರಭಾವಿತರಾಗುತ್ತಾರೆ. ಮತ್ತೊಂದೆಡೆ, ಕ್ಲೀನ್ ಕ್ಷೌರ ಮಾಡಿದ ಹುಡುಗರು ಅವರಿಗೆ ಪ್ರಬುದ್ಧರಾಗಿ ಕಾಣುವುದಿಲ್ಲ.

ಬ್ಯಾಡ್ ಬಾಯ್ ಲುಕ್
ಕ್ಲೀನ್ ಶೇವ್ ಮಾಡಿದ ಹುಡುಗರನ್ನು ಚಾಕೊಲೇಟ್ ಬಾಯ್‌ನಂತೆ ನೋಡುತ್ತಾರೆ. ಆದರೆ ಹುಡುಗಿಯರು ಹೆಚ್ಚಾಗಿ ಬ್ಯಾಡ್ ಬಾಯ್ ಲುಕ್ ಹೊಂದಿರುವ ಹುಡುಗರನ್ನು ಇಷ್ಟಪಡುತ್ತಾರೆ. ಗಡ್ಡ ಅವರಿಗೆ ಒರಟು ಮತ್ತು ಹಾರ್ಡ್ ಲುಕ್ ಕೊಡುತ್ತದೆ. ಆದರೆ ಅಂತಹ ಜನರು ಭಾವನಾತ್ಮಕವಾಗಿರುತ್ತಾರೆ. ಅವರು ತಮ್ಮ ಸಂಗಾತಿಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಅಂತಹ ಪುರುಷರು ತಮ್ಮನ್ನು ತಾವು ಇರುವಂತೆಯೇ ತೋರಿಸಿಕೊಳ್ಳುತ್ತಾರೆ. ಹುಡುಗಿಯರು ಸಹ ಅಂತಹ ಹುಡುಗರನ್ನು ಸ್ಟೈಲಿಶ್ ಎಂದು ಪರಿಗಣಿಸುತ್ತಾರೆ.

ಈ ವಿಷಯಗಳಿಗೆ ಗಮನ ಕೊಡಿ
ರಿಲೇಶನ್‌ಶಿಪ್ ಎಕ್ಸಪರ್ಟ್ ಮೀನಾಕ್ಷಿ ಗುಪ್ತಾ ಹೇಳುವಂತೆ, ಗಡ್ಡವು ವ್ಯಕ್ತಿಯ ಪ್ರಾಮಾಣಿಕತೆ ಅಥವಾ ರೋಮ್ಯಾನ್ಸ್ ಸ್ವಭಾವದೊಂದಿಗೆ ನೇರ ಸಂಬಂಧ ಹೊಂದಿಲ್ಲ. ಆದರೆ ಗಡ್ಡವು ಖಂಡಿತವಾಗಿಯೂ ಪುರುಷನ ಆತ್ಮವಿಶ್ವಾಸವನ್ನು ತೋರಿಸುತ್ತದೆ. ಕೆಲವು ಹುಡುಗಿಯರು ಗಡ್ಡಧಾರಿ ಪುರುಷರನ್ನು ಇಷ್ಟಪಡಬಹುದು. ಮತ್ತೆ ಕೆಲವರು ಕ್ಲೀನ್ ಶೇವ್ ಮಾಡಿದ ಪುರುಷರನ್ನು ಇಷ್ಟಪಡಬಹುದು. ಇದು ಅವರ ವೈಯಕ್ತಿಕ ಆಯ್ಕೆಯಾಗಿರಬಹುದು. ಸಂಬಂಧದಲ್ಲಿರುವ ಸಂಗಾತಿ ಪ್ರಾಮಾಣಿಕರೋ ಅಥವಾ ಪ್ರಣಯಪೂರ್ಣರೋ ಎಂಬುದು ಅವರ ವ್ಯಕ್ತಿತ್ವ ಮತ್ತು ಆಲೋಚನೆಯನ್ನು ಅವಲಂಬಿಸಿರುತ್ತದೆ. ಲುಕ್ ಮೇಲೆ ಅಲ್ಲ. ಆದ್ದರಿಂದ, ಸಂಗಾತಿಯನ್ನು ಆಯ್ಕೆಮಾಡುವಾಗ ನೋಟಕ್ಕಿಂತ ಹೆಚ್ಚಾಗಿ ನಡವಳಿಕೆಯತ್ತ ಗಮನ ಕೊಡಿ. ಅವರು ನಿಮ್ಮನ್ನು ಗೌರವಿಸಿದರೆ, ನಿಮ್ಮ ಮಾತನ್ನು ಕೇಳಿದರೆ, ಭಾವನೆಗಳನ್ನು ಗೌರವಿಸಿದರೆ, ನಂತರ ಸಂಬಂಧದಲ್ಲಿ ಮುಂದುವರಿಯಿರಿ.