ಆಪಲ್ ವಿನೆಗರ್ ಆರೋಗ್ಯಕ್ಕೆ ಒಳ್ಳೆಯದು. ಇದು ಬಹುತೇಕರಿಗೆ ತಿಳಿದಿದೆ. ಹಾಗಂತ ಅದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಬಾರದು. ನಾವಿಂದು ಆಪಲ್ ವಿನೆಗರ್ ಸೇವನೆ ಹಾಗೂ ಅದ್ರ ಪ್ರಯೋಜನವೇನು ಎಂಬುದನ್ನು ಹೇಳ್ತೇವೆ. 

ಆಪಲ್ ಸೈಡರ್ ವಿನೆಗರ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ಸೇಬಿನಿಂದ ತಯಾರಿಸಿದ ಒಂದು ರೀತಿಯ ಮಿಶ್ರಣವಾಗಿದ್ದು ಅನೇಕ ದಿನಗಳವರೆಗೆ ಇದನ್ನು ಇಡಬಹುದು. ಆಪಲ್ ಸೈಡರ್ ವಿನೆಗರ್ ಪ್ರಯೋಜನಗಳನ್ನು ನೋಡಿದ ನಂತ್ರ ಪ್ರಪಂಚದಾದ್ಯಂತ ಜನರು ಇದನ್ನು ಆಹಾರದಲ್ಲಿ ಬಳಸುತ್ತಿದ್ದಾರೆ. ಆದ್ರೆ ಅದನ್ನು ನೇರವಾಗಿ ಸೇವನೆ ಮಾಡಲು ಸಾಧ್ಯವಿಲ್ಲ. ಆಪಲ್ ಸೈಡರ್ ವಿನೆಗರ್‌ನಿಂದ ಪೋಷಕಾಂಶಗಳು: ಆಪಲ್ ಸೈಡರ್ ವಿನೆಗರ್‌ನಲ್ಲಿ ಅಸಿಟಿಕ್ ಆಮ್ಲದ ಪ್ರಮಾಣವು ತುಂಬಾ ಹೆಚ್ಚಿರುತ್ತದೆ. ಅಸಿಟಿಕ್ ಆಮ್ಲವು ಹೃದಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದಲ್ಲದೆ, ಆಪಲ್ ಸೈಡರ್ ವಿನೆಗರ್‌ನಲ್ಲಿ ಅನೇಕ ವಿಟಮಿನ್‌ಗಳು, ಕಿಣ್ವಗಳು, ಪ್ರೋಟೀನ್‌ಗಳು ಮತ್ತು ಪ್ರಯೋಜನಕಾರಿ ಬ್ಯಾಕ್ಟೀರಿಯಾಗಳಿವೆ. ಚರ್ಮದ ಆರೋಗ್ಯ ಸುಧಾರಿಸುವುದರ ಜೊತೆಗೆ ತಲೆಹೊಟ್ಟು ಕಡಿಮೆ ಮಾಡುತ್ತದೆ. ಆಪಲ್ ಸೈಡರ್ ವಿನೆಗರ್ ಸ್ಥೂಲಕಾಯ ಸಮಸ್ಯೆ ಕಡಿಮೆ ಮಾಡಲು ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಈ ಕಾರಣಕ್ಕಾಗಿ ಬೊಜ್ಜು ಕಡಿಮೆ ಮಾಡಲು ಇದನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಸೇಬು ವಿನೆಗರ್‌ನ ಪ್ರಯೋಜನಗಳಿಗೆ ಸಂಬಂಧಿಸಿದ ವೈಜ್ಞಾನಿಕ ಸಂಶೋಧನೆ ಮತ್ತು ಪುರಾವೆಗಳು ತುಂಬಾ ಕಡಿಮೆಯಿದ್ದರೂ, ಅದರ ಔಷಧೀಯ ಗುಣಗಳಿಂದಾಗಿ, ಜನರು ಇದನ್ನು ಆರೋಗ್ಯ ಪೂರಕವಾಗಿ ಬಳಸುತ್ತಾರೆ.

ಆಪಲ್ ಸೈಡರ್ ವಿನೆಗರ್ (Apple Cider Vinegar )ಸೇವನೆ ವಿಧಾನ : ಆಪಲ್ ಸೈಡರ್ ವಿನೆಗರ್ ಅನ್ನು ಬೆಳಿಗ್ಗೆ ಖಾಲಿ ಹೊಟ್ಟೆ (Stomach) ಯಲ್ಲಿ ಕುಡಿಯಲು ಸಲಹೆ ನೀಡಲಾಗುತ್ತದೆ. ಆದರೆ ಆಪಲ್ ವಿನೆಗರ್ ಅನ್ನು ರಾತ್ರಿ ಮಲಗುವ ಮುನ್ನವೂ ಸೇವಿಸಬಹುದು ಎಂಬುದು ಅನೇಕರಿಗೆ ತಿಳಿದಿಲ್ಲ. ಆಪಲ್ ಸೈಡರ್ ವಿನೆಗರ್ ಅನ್ನು ಕುಡಿಯಬಹುದು. ಚರ್ಮಕ್ಕೆ ಅನ್ವಯಿಸಬಹುದು. ಆದ್ರೆ ಅದಕ್ಕೆ ನೀರು ಬೆರೆಸದೆ ಕುಡಿಯಲು ಸಾಧ್ಯವಿಲ್ಲ. ಹಾಗೆ ಕುಡಿದ್ರೆ ಆರೋಗ್ಯ ಹಾಳಾಗುವ ಸಾಧ್ಯತೆಯಿರುತ್ತದೆ. ಆಪಲ್ ಸೈಡರ್ ವಿನೆಗರ್ ಅನ್ನು ಕುಡಿಯಲು ಬಯಸಿದರೆ, ಒಂದು ಲೋಟ ನೀರಿನಲ್ಲಿ ಒಂದರಿಂದ ಎರಡು ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಬೆರೆಸಿ ಊಟದ ನಂತರ ಒಂದು ಗಂಟೆ ಅಥವಾ ಊಟಕ್ಕೆ ಅರ್ಧ ಗಂಟೆಯ ಮೊದಲು ಸೇವಿಸಬೇಕು.

ಬಾಹ್ಯ ಬಳಕೆ : ಚರ್ಮಕ್ಕೆ (Skin) ಬಳಸುವುದಾದ್ರೆ ಸೇಬು ಸೈಡರ್ ವಿನೆಗರ್ (Apple Sider Vinegar) ಮತ್ತು ನೀರಿನ ಅನುಪಾತವು 1: 3 ಆಗಿರಬೇಕು. ಅಂದರೆ, ಒಂದು ಭಾಗ ಸೇಬು ವಿನೆಗರ್‌ಗೆ ಮೂರರಷ್ಟು ನೀರನ್ನು ಬೆರೆಸಿ ಅದನ್ನು ದುರ್ಬಲಗೊಳಿಸಿ ಮತ್ತು ನಂತರ ಅದನ್ನು ಚರ್ಮ ಅಥವಾ ಕೂದಲಿಗೆ ಹಚ್ಚಬೇಕು. 

ಉದ್ದ ಕೂದಲು ಬೇಕೆಂದು ಹೇರ್‌ ಎಕ್ಸ್‌ಟೆನ್ಶನ್‌ ಮಾಡ್ಕೊಳ್ಳೋ ಮುನ್ನ ಇವಿಷ್ಟು ಗೊತ್ತಿರ್ಲಿ

ಆಪಲ್ ಸೈಡರ್ ವಿನೆಗರ್ ಅನ್ನು ಔಷಧಿಯಾಗಿ ಮಾತ್ರ ಬಳಸಬೇಕು . ಪ್ರತಿ ಬಾರಿ ಬಹಳ ಕಡಿಮೆ ಪ್ರಮಾಣದಲ್ಲಿ (5-10 ಮಿಲಿ) ಪ್ರಾರಂಭಿಸಬೇಕು. ರಾತ್ರಿ ಮಲಗುವ ಮೊದಲು, 10 ಮಿಲಿ ವಿನೆಗರ್ ಅನ್ನು ಎರಡು ಚಮಚ ನೀರಿನಲ್ಲಿ ಬೆರೆಸಿ ಕುಡಿಯಿರಿ. ಪ್ರತಿ ರಾತ್ರಿ ಮಲಗುವ ಮುನ್ನ ಸೇಬು ಸೈಡರ್ ವಿನೆಗರ್ ಕುಡಿಯುವ ಅಭ್ಯಾಸವು ತುಂಬಾ ಉಪಯುಕ್ತವಾಗಿದೆ.

ಮಕ್ಕಳು ಕಣ್ತುಂಬಾ ನಿದ್ದೆ ಮಾಡ್ಬೇಕಾದ್ರೆ ಈ ಟ್ರಿಕ್ಸ್ ಯೂಸ್ ಮಾಡಿ

ಆಪಲ್ ಸೈಡರ್ ವಿನೆಗರ್ ಕುಡಿಯುವುದರಿಂದ ಲೆಕ್ಕವಿಲ್ಲದಷ್ಟು ಪ್ರಯೋಜನಗಳಿವೆ. 
1. ಆಪಲ್ ಸೈಡರ್ ವಿನೆಗರ್ ಅನ್ನು ಕುಡಿಯುವುದರಿಂದ ಬಾಯಿಯ ದುರ್ವಾಸನೆ ಮತ್ತು ಎಲ್ಲಾ ರೀತಿಯ ಅಲರ್ಜಿಗಳಿಂದ ಪರಿಹಾರ ಸಿಗುತ್ತದೆ.
2. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಆಪಲ್ ಸೈಡರ್ ವಿನೆಗರ್ ಸೇವಿಸಬೇಕು.
3. ಆಪಲ್ ಸೈಡರ್ ವಿನೆಗರ್ ತೂಕ ಇಳಿಸಿಕೊಳ್ಳಲು ಸಹಕಾರಿಯಾಗಿದೆ.
4. ಗ್ಯಾಸ್, ಹೊಟ್ಟೆ ಉಬ್ಬುವುದು, ಉರಿ, ಅಸಿಡಿಟಿಯಂತಹ ಸಮಸ್ಯೆ ಇದ್ದರೆ ಅವಶ್ಯಕವಾಗಿ ಆಪಲ್ ಸೈಡರ್ ವಿನೆಗರ್ ಕುಡಿಯಿರಿ. 
5. ಹವಾಮಾನ ಬದಲಾವಣೆಯಿಂದ ಅಥವಾ ತಣ್ಣನೆಯ ಬಿಸಿ ಪದಾರ್ಥಗಳನ್ನು ಸೇವನೆ ಮಾಡಿದ ನಂತ್ರ ಗಂಟಲು ನೋವು ಕಾಣಿಸಿಕೊಂಡ್ರೆ ಅದಕ್ಕೆ ಆಪಲ್ ಸೈಡರ್ ವಿನೆಗರ್ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಗಂಟಲು ನೋವಿನಿಂದ ಶೀಘ್ರ ಉಪಶಮನ ನೀಡುತ್ತದೆ.