Asianet Suvarna News Asianet Suvarna News

ಎಡ ಮಗ್ಗುಲಿಗೆ ತಿರುಗಿ ಮಲಗಿ, ಆಗೋ ಪ್ರಯೋಜನ ಒಂದೆರಡಲ್ಲ

ಉತ್ತಮ ಆರೋಗ್ಯ ಹೊಂದಲು ನಿದ್ರೆಯು ಬಹಳ ಮುಖ್ಯ. ಇದರ ಜೊತೆ ಮಲಗುವ ಭಂಗಿ ಕೂಡ ಅತಿ ಮುಖ್ಯ. ಎಡ ಮಗ್ಗುಲಲ್ಲಿ ತಿರುಗಿ ಮಲಗಿದರೆ, ಆರೋಗ್ಯಕ್ಕೆ ಬಹಳಷ್ಟು ಲಾಭಗಳಿವೆ. ಅವುಗಳ ಮಾಹಿತಿ ಇಲ್ಲಿದೆ.

Amazing health benefits of sleeping on left side that makes you keep fit
Author
First Published Oct 2, 2022, 1:11 PM IST

ಇಂದಿನ ಒತ್ತಡದ ಬದುಕಿನಲ್ಲಿ ಎಲ್ಲರೂ ಬ್ಯೂಸಿ ಇರ್ತಾರೆ. ಇದರಿಂದ ಬಹುತೇಕ ಜನರ ಜೀವನಶೈಲಿ ಹದಗೆಡುತ್ತಿದೆ. ಊಟ, ನಿದ್ರೆ ಎಲ್ಲವೂ ಏರುಪೇರಾಗುತ್ತಿದೆ. ಅದರಲ್ಲಿ ಮುಖ್ಯವಾಗಿ ಸರಿಯಾಗಿ ನಿದ್ರೆ ಮಾಡದಿರುವುದರಿಂದ ಹಲವಾರು ಸಮಸ್ಯೆಗಳು ಎದುರಾಗುತ್ತಿವೆ. ನಿದ್ರೆಯು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಪ್ರತಿದಿನ ಕನಿಷ್ಠ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡುವುದು ಬಹಳ ಮುಖ್ಯ. ಇನ್ನು ಸರಿಯಾದ ಭಾಗಕ್ಕೆ ತಿರುಗಿ ನಿದ್ರೆ ಮಾಡುವುದು ಕೂಡ ಇಲ್ಲಿ ಅತಿ ಮುಖ್ಯ. ಇಲ್ಲದಿದ್ದರೆ ಕೈ ಕಾಲುಗಳ ಮೇಲೆ ಮಾತ್ರವಲ್ಲ, ಮೆದುಳಿನ ಮೇಲೂ ಪರಿಣಾಮ ಉಂಟಾಗುತ್ತದೆ. ಇನ್ನು ಎಡ ಮಗ್ಗುಲಿಗೆ ತಿರುಗಿ ಮಲಗುವುದು ಉತ್ತಮ ಎನ್ನತ್ತಾರೆ ವೈದ್ಯರು. ಇದರಿಂದ ಅನೇಕ ಪ್ರಯೋಜನಗಳಿದ್ದು, ಇಲ್ಲಿದೆ ಡಿಟೇಲ್ಸ್ .

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ
ನಮ್ಮ ದೇಹದಲ್ಲಿ ಮೇದೋಜೀರಕ ಗ್ರಂಥಿಯು (pancreas) ಎಡಭಾಗದಲ್ಲಿ ಇದೆ. ಹಾಗಾಗಿ ಅದು ಉತ್ತಮವಾಗಿ ಕಾರ್ಯನಿರ್ವಹಿಸಲು ಎಡಭಾಗದ ನಿದ್ರೆಯು ಅನುವು ಮಾಡಿಕೊಡುತ್ತದೆ. ಗುರುತ್ವಾಕರ್ಷಣೆಯ ಎಳೆತದಿಂದ ಆಹಾರವು (Food) ಹೊಟ್ಟೆಯ ಮೂಲಕ ಸುಲಭವಾಗಿ ಹಾದು ಹೋಗುತ್ತದೆ ಮತ್ತು ಆಹಾರ ತ್ಯಾಜ್ಯವನ್ನು ಹೊರ ಹಾಕುವುದು ಸಹ ಸುಲಭವಾಗುತ್ತದೆ. ಜೀರ್ಣವಾಗದ ಆಹಾರ ಸಣ್ಣ ಕರುಳಿನಿಂದ ದೊಡ್ಡ ಕರುಳಿಗೆ ಮತ್ತು ಅಂತಿಮವಾಗಿ ಕೊಲೊನ್‌ಗೆ (Colon)ಚಲಿಸುತ್ತದೆ. ರಾತ್ರಿಯಿಡೀ ಎಡಭಾಗದಲ್ಲಿ ಮಲಗುವುದರಿಂದ ಈ ಕ್ರಿಯೆಗೆ ಸಹಾಯವಾಗುತ್ತದೆ. ಆದ್ದರಿಂದ ವೈದ್ಯರು ಉತ್ತಮ ಜೀರ್ಣಕ್ರಿಯೆಗಾಗಿ ಮತ್ತು ಶಕ್ತಿಯನ್ನು ಹೆಚ್ಚಿಸಲು ಎಡಭಾಗದಲ್ಲಿ ಮಲಗಬೇಕು ಎಂದು ಸಲಹೆ ನೀಡುತ್ತಾರೆ.

ಸಿಸೇರಿಯನ್ ಬೇಡ, ನಾರ್ಮಲ್ ಡೆಲಿವರಿ ಆಗಲಿ; ಈ ಟಿಪ್ಸ್ ಫಾಲೋ ಮಾಡಿ, ಸುಲಭ ಹೆರಿಗೆ ಮಾಡಿಕೊಳ್ಳಿ.

ಉತ್ತಮ ಹೃದಯದ ಆರೋಗ್ಯ
ನಮ್ಮ ಹೃದಯವು (Heart) ಎಡ ಭಾಗದಲ್ಲಿದೆ. ಆದ್ದರಿಂದ ಎಡಭಾಗದಲ್ಲಿ ಮಲಗುವುದರಿಂದ (Sleeping on the Left Side) ಹೃದಯದ ಮೇಲೆ ಕಡಿಮೆ ಒತ್ತಡ ಉಂಟಾಗುತ್ತದೆ. ಇದರಿಂದ ಹೃದಯದ ಕಡೆಗೆ ರಕ್ತದ ಸುಗಮ ಹರಿವಿಗೆ ಅನುಕೂಲವಾಗುತ್ತದೆ. ಹಾಗೂ ಹೃದಯದಿಂದ ಸ್ವಲ್ಪ ಭಾರವನ್ನು ತೆಗೆದುಹಾಕಿ, ದೇಹಕ್ಕೆ ವಿಶ್ರಾಂತಿ ನೀಡುತ್ತದೆ. ಏಕೆಂದರೆ ಆ ಸಮಯದಲ್ಲಿ ಹೃದಯಕ್ಕೆ ರಕ್ತ ಸರಬರಾಜು ಆಗುತ್ತದೆ. ಹೃದಯ ಆರೋಗ್ಯಕರವಾಗಿದ್ದರೆ, ರಕ್ತ (Blood) ಮತ್ತು ಆಮ್ಲಜನಕದ ಪೂರೈಕೆ ಇಡೀ ದೇಹ ಮತ್ತು ಮನಸ್ಸನ್ನು ತಲುಪಲು ಸಾಧ್ಯವಾಗುತ್ತದೆ. ನೀವು ಎಡಭಾಗದಲ್ಲಿ ಮಲಗುವ ಮೂಲಕ ನಿಮ್ಮ ಹೃದಯದ ಕಠಿಣ ಶ್ರಮವನ್ನು ಕಡಿಮೆ ಮಾಡಬಹುದು.

ಗರ್ಭಿಣಿಯರಿಗೆ ಒಳ್ಳೆಯದು
ಗರ್ಭಿಣಿಯರು ಸಾಧ್ಯವಾದಷ್ಟು ಸಮಯವನ್ನು ಎಡಭಾಗದಲ್ಲಿ ಮಲಗಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಏಕೆಂದರೆ ಇದು ಅವರ ಬೆನ್ನಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಗರ್ಭಾಶಯ (Uterus) ಮತ್ತು ಭ್ರೂಣಕ್ಕೆ (embryo) ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಹಾಗೂ ಬೆನ್ನುಮೂಳೆಯ ಮೇಲಿನ ಒತ್ತಡವನ್ನು ನಿವಾರಿಸುತ್ತದೆ. ಜೊತೆಗೆ ಇದರಿಂದ ಹೆಚ್ಚು ಆರಾಮದಾಯಕ ಮತ್ತು ಉತ್ತಮ ನಿದ್ರೆ ಮಾಡುವ ಸಾಧ್ಯತೆಗಳಿವೆ. ಇದಲ್ಲದೆ, ಮಗುವನ್ನು ಆರೋಗ್ಯವಾಗಿಡಲು ಜರಾಯುಗಳಿಗೆ (Placenta)ಪೋಷಕಾಂಶಗಳ ಸುಗಮ ಹರಿವಿಗೆ ಇದು ಸಹಾಯ ಮಾಡುತ್ತದೆ.

ವೈಟ್ ಚಾಕೋಲೇಟ್ ತಿನ್ನಿ, ಇದರಿಂದ ಎಷ್ಟು ಲಾಭಗಳಿವೆ ನೋಡಬನ್ನಿ..!

ಗೊರಕೆಯನ್ನು ತಡೆಯುತ್ತದೆ
ನಿಮಗೆ ಆಶ್ಚರ್ಯ (Surprise) ಆಗಬಹುದು, ಇದನ್ನು ನಂಬಿ ಅಥವಾ ಬಿಡಿ, ಎಡಭಾಗದಲ್ಲಿ ಮಲಗುವುದರಿಂದ ಗೊರಕೆಯನ್ನು (snoring) ನಿಲ್ಲಿಸಬಹುದು. ಅದು ನಾಲಿಗೆ ಮತ್ತು ಗಂಟಲನ್ನು ತಟಸ್ಥ ಸ್ಥಾನದಲ್ಲಿರಿಸುತ್ತದೆ ಮತ್ತು ಸರಿಯಾಗಿ ಉಸಿರಾಡಲು ಸಾಧ್ಯವಾಗುವಂತೆ ವಾಯು ಮಾರ್ಗಗಳನ್ನು ತೆರವುಗೊಳಿಸುತ್ತದೆ. ಇದರಿಂದ ಗೊರಕೆ ಹೊಡೆಯುವುದು ಕಡಿಮೆಯಾಗುತ್ತದೆ. ಇನ್ನು ಬೆನ್ನು ಕೆಳಗೆ ಮಾಡಿ ನೇರವಾಗಿ ಮಲಗಿದರೆ ಜೋರಾಗಿ ಗೊರಕೆ ಹೊಡೆಯುದು ಸಾಮಾನ್ಯ. ಏಕೆಂದರೆ ಈ ವೇಳೆ ನಾಲಿಗೆ (tongue), ಬಾಯಿ ಮತ್ತು ದವಡೆ ಸಂಪೂರ್ಣವಾಗಿ ಆರಾಮವಾಗಿರುತ್ತವೆ. ಆದ್ದರಿಂದ ಬೆನ್ನಿನ ಮೇಲೆ ಮಲಗುವುದು ಗೊರಕೆಗೆ ಕಾರಣವಾಗುತ್ತದೆ. ಗೊರಕೆ ಸಮಸ್ಯೆ ಇದ್ದವರು ಎಡಭಾಗದಲ್ಲಿ ಮಲಗುವುದು ಸೂಕ್ತ.

ಒಟ್ಟಾರೆ ಹೇಳುವುದಾದರೆ ಎಡಭಾಗದಲ್ಲಿ ಮಲಗುವುದರಿಂದ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಆದರೆ ಮಲಗುವ ವಿಧಾನವನ್ನು ಇದ್ದಕ್ಕಿದ್ದಂತೆ ಬದಲಾಯಿಸುವುದರಿಂದ ಸ್ವಲ್ಪ ಅನಾನುಕೂಲವಾಗಬಹುದು. ಆದ್ದರಿಂದ ನಿಧಾನವಾಗಿ ಈ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ.

Follow Us:
Download App:
  • android
  • ios