ವೈಟ್ ಚಾಕೋಲೇಟ್ ತಿನ್ನಿ, ಇದರಿಂದ ಎಷ್ಟು ಲಾಭಗಳಿವೆ ನೋಡಬನ್ನಿ..!

ಚಾಕೋಲೇಟ್  ಯಾರಿಗೆ ಇಷ್ಟವಿಲ್ಲ ಹೇಳಿ?. ಇದನ್ನು ತುಂಬಾ ಇಷ್ಟಪಟ್ಟು ತಿನ್ನುವವರು ಅನೇಕರಿದ್ದಾರೆ. ಚಾಕೋಲೇಟ್ ಸೇವನೆಯಿಂದ ಅನೇಕ ಪ್ರಯೋಜನಗಳಿವೆ. ಅದರಲ್ಲಿಯೂ ವೈಟ್ ಚಾಕೋಲೇಟ್ ಸೇವನೆಯಿಂದ ತುಂಬಾ ಲಾಭಗಳಿವೆ.

Benefits of White Chocolate

ಚಾಕೋಲೇಟ್ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಇನ್ನು ಚಿಕ್ಕವಯಸ್ಸಿನಲ್ಲಿ ಎಲ್ಲರ ಬಹು ಮುಖ್ಯ ಬೇಡಿಕೆಯ ಸಿಹಿ ತಿಂಡಿ ಎಂದರೆ ಅದು ಚಾಕೋಲೇಟ್. ಚಾಕೋಲೇಟ್ ಸೇವನೆಯಿಂದ ಅನೇಕ ಬಗೆಯ ಆರೋಗ್ಯ ಪ್ರಯೋಜನಗಳಿವೆ. ಎಲ್ಲರಿಗೂ ಹೆಚ್ಚಾಗಿ ಡಾರ್ಕ್ ಚಾಕೋಲೇಟ್ ಬಗ್ಗೆ ಗೊತ್ತಿರುತ್ತೆ. ಅದು ರಕ್ತದ ಒತ್ತಡ ನಿಯಂತ್ರಣ, ದೇಹದಲ್ಲಿ ಹಾರ್ಮೋನ್ ಬದಲಾವಣೆಯ ಸಮತೋಲನ, ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣ ಇತ್ಯಾದಿ ಮಾಡುತ್ತದೆ. ಅದರಿಂದ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಕೆಲವು ನೈಸರ್ಗಿಕ ರೂಪದ ಖನಿಜಾಂಶಗಳು ಕೂಡ ಸಿಗುತ್ತವೆ. ಆದರೆ ಡಾರ್ಕ್‌ ಚಾಕೋಲೇಟ್‌ನಷ್ಟು ವೈಟ್ ಚಾಕೊಲೇಟ್ ಜನಪ್ರಿಯವಾಗಿಲ್ಲ. ಬಿಳಿ ಚಾಕೋಲೇಟ್‌ ಕೂಡಾ ತಿನ್ನುವುದರಿಂದ ಕೂಡ ಅನೇಕ ಪ್ರಯೋಜನಗಳಿವೆ ಎನ್ನುತ್ತಾರೆ ತಜ್ಞರು. ಅವುಗಳ ಡಿಟೇಲ್ಸ್ ಇಲ್ಲಿದೆ.

ಮೂಳೆಯ ಆರೋಗ್ಯಕ್ಕೆ ಪ್ರಯೋಜನವಾಗುತ್ತದೆ:

ವೈಟ್ ಚಾಕೋಲೇಟ್ (White Chocolates) ಹೆಚ್ಚಾಗಿ ಹಾಲನ್ನು ಕುದಿಸಿ ಅದನ್ನು ಘನರೂಪಕ್ಕೆ ತಂದು ಮಾಡಲಾಗುತ್ತದೆ. ಇದರಲ್ಲಿ ಕ್ಯಾಲ್ಸಿಯಂನ  ಪ್ರಮಾಣ ಅತ್ಯಧಿಕವಾಗಿದ್ದು, ಯೋಗ್ಯ ಪ್ರಮಾಣದ ರಂಜಕವನ್ನು ಸಹ ಹೊಂದಿರುತ್ತದೆ. ಹೀಗಾಗಿ ಮೂಳೆ, ಹೃದಯ (heart), ಸ್ನಾಯು ಮತ್ತು ನರಗಳ ಆರೋಗ್ಯವನ್ನು ಕಾಪಾಡುತ್ತದೆ.

ಹೃದಯದ ಆರೋಗ್ಯಕ್ಕೆ ಸಹಾಯಕಾರಿ:

ವೈಟ್ ಚಾಕೋಲೇಟ್ ಹೆಚ್ಚು ಕ್ಯಾಲ್ಸಿಯಂ (Calcium)ಅನ್ನು ಹೊಂದಿದ್ದು,  ಇದು ಹೃದಯದ ಆರೋಗ್ಯಕರ ಕಾರ್ಯನಿರ್ವಹಣೆಗೆ ಸಹಾಯಕವಾಗಿದೆ. ಇನ್ನು ಇದರಲ್ಲಿ ವಿಟಮಿನ್ ಬಿ 12 (Vitamin B 12) ಇದ್ದು, ಹೃದ್ರೋಗಕ್ಕೆ ಕಾರಣವಾಗುವ ಹೋಮೋಸಿಸ್ಟೈನ್ ಅನ್ನು ಕಡಿಮೆ ಮಾಡುತ್ತದೆ. ಅದಲ್ಲದೆ ಬಿಳಿ ಚಾಕೋಲೇಟ್ ಅನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ದೇಹದಲ್ಲಿನ ಕೊಬ್ಬನ್ನು ನಿಯಂತ್ರಿಸಲು ಸಹಾಯವಾಗುತ್ತದೆ. ಹಾಗೆ ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ, ಆರೋಗ್ಯಕರ ಹೃದಯವನ್ನು ಹೊಂದಲು ಕಾರಣವಾಗಬಹುದು. ಮತ್ತು ಪರಿಧಮನಿಯ ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:

ವೈಟ್ ಚಾಕೋಲೇಟ್’ನಲ್ಲಿ ಕೋಕೋ, ಬೆಣ್ಣೆ,(Butter), ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲವಿರುವುದರಿಂದ, ಇದು ನಮ್ಮ ದೇಹದಿಂದ ವಿಷಕಾರಿ ವಸ್ತುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಹಾಗೆ ನಿರಂತರವಾಗಿ ನಾವು ಗಾಳಿಯ ಮೂಲಕ ಸೇವಿಸುವ ಪರಿಸರದ ಜೀವಾಣುಗಳನ್ನು ತೊಡೆದು ಹಾಕಲು ಪ್ರಯತ್ನಿಸುತ್ತದೆ. ಅದಲ್ಲದೆ ಬಿಳಿ ರಕ್ತ ಕಣಗಳ (White blood cells) ಚಲನೆಯಲ್ಲಿ ನಮ್ಯತೆಯನ್ನು ಸುಧಾರಿಸುತ್ತದೆ. ಮತ್ತು ಇದರಿಂದಾಗಿ ಅಪಧಮನಿಯಲ್ಲಿ ಉಂಟಾಗುವ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬಿಳಿ ಚಾಕೋಲೇಟ್’ನಲ್ಲಿ ಉತ್ತಮ ಬ್ಯಾಕ್ಟೀರಿಯಾವು ಕೆಟ್ಟ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಯಾವಾಗಲೂ ಸುಸ್ತು ಅನ್ನೋರಿಗೆ ಈ ಟಿಪ್ಸ್ ಹೇಳಿ ನೋಡಿ

ಅಧಿಕ ರಕ್ತದೊತ್ತಡದ ಅಪಾಯ ಕಡಿಮೆ ಮಾಡುತ್ತದೆ:

ವೈಟ್ ಚಾಕೋಲೇಟ್ ಲಿನೋಲಿಕ್ ಆಮ್ಲವನ್ನು ಹೊಂದಿರುತ್ತದೆ. ಇದು ದೇಹದ ರಕ್ತನಾಳಗಳಿಗೆ ಬೇಕಾಗಿರುವಂತ ಒಳ್ಳೆಯ ಅಂಶವಾಗಿದೆ. ಅದಲ್ಲದೆ ಆರೋಗ್ಯಕರ ರಕ್ತನಾಳಗಳು ಹೃದಯ ಮತ್ತು ರಕ್ತದೊತ್ತಡಕ್ಕೆ (blood pressure)ಒಳ್ಳೆಯದಾಗಿದ್ದು, ಸಾಕಷ್ಟು ಸ್ಥಿತಿಸ್ಥಾಪಕತ್ವವನ್ನು ಹೊಂದಿರುವ ರಕ್ತನಾಳಗಳು ಹೃದಯದ ಒತ್ತಡವನ್ನು ಕಡಿಮೆ ಮಾಡುತ್ತದೆ. ಏಕೆಂದರೆ ರಕ್ತನಾಳಗಳು (Blood vessels ) ರಕ್ತವನ್ನು ಪಂಪ್ ಮಾಡುತ್ತದೆ. ಹೃದಯ ಬಡಿತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮತ್ತು ಹೃದಯ ಸ್ಥಿರವಾಗಿರಲು ಅನುವು ಮಾಡಿಕೊಡುತ್ತದೆ.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:

ವೈಟ್ ಚಾಕೋಲೇಟ್ ಲಾಲಾರಸ ನಾಳದಲ್ಲಿ ಲಾಲಾರಸದ ಉತ್ಪಾದನೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ಹೀಗಾಗಿ ಇದು ಆಹಾರವನ್ನು ಜೀರ್ಣಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಬಹಳ ಉಪಯುಕ್ತವಾಗಿದೆ. ಲಾಲಾರಸವು ಕಿಣ್ವಗಳನ್ನು ಹೊಂದಿದ್ದು ವೈಟ್ ಚಾಕೋಲೇಟ್ ಸೇವನೆಯ ಮೂಲಕ  ಜೀರ್ಣಿಕ್ರಿಯೆ(Digestion) ಸುಗಮವಾಗುತ್ತದೆ.

 ತಲೆನೋವು ಕಡಿಮೆ ಮಾಡುತ್ತದೆ:

ನಾವು ಹಲವಾರು ರೀತಿಯ ತಲೆನೋವುಗಳಾದ ಮೈಗ್ರೇನ್, ಕ್ಲಸ್ಟರ್-ಟೈಪ್ ಮತ್ತು ಟೆನ್ಶನ್-ಟೈಪ್  ಅನ್ನು ಸಾಮಾನ್ಯವಾಗಿ ಅನುಭವಿಸುತ್ತಿರುತ್ತೇವೆ. ಹೀಗಾಗಿ ಈ ತಲೆನೋವುಗಳನ್ನು(headaches) ಶಮನಮಾಡಲು ವೈಟ್ ಚಾಕೋಲೇಟ್ ಸೇವನೆ ಮಾಡಬೇಕು. ಇದರಿಂದ ಪ್ರತಿಫಲವನ್ನು ಪಡೆಯುತ್ತೇವೆ. ಇನ್ನು ಚಾಕೋಲೇಟ್ ತಿಂದ ನಂತರ ಬಿಡುಗಡೆಯಾಗುವ ಡೋಪಮೈನ್, ನರಮಂಡಲವನ್ನು ವಿಶ್ರಾಂತಿ ಮಾಡುತ್ತದೆ ಮತ್ತು ತಲೆನೋವು ಕಡಿಮೆಯಾಗಲು ಸಹಾಯ ಮಾಡುತ್ತದೆ.

ಅಬ್ಬಾ, ಈ ಕತ್ತು ನೋವು ಅದೆಲ್ಲಿಂದ ಬರುತ್ತೋ ಗೊತ್ತಿಲ್ಲ, ಇಲ್ಲಿದೆ ಮದ್ದು

ಯಕೃತ್ತಿನ ಆರೋಗ್ಯವನ್ನು ಸುಧಾರಿಸುತ್ತದೆ:

ನಮ್ಮ ದೇಹದಲ್ಲಿ ರಕ್ತದ ಹರಿವನ್ನು ಹೆಚ್ಚಿಸುವ ಮೂಲಕ ಯಕೃತ್ತಿನ (Liver) ಆರೋಗ್ಯವನ್ನು ಸುಧಾರಿಸುವ ಗುಣಗಳನ್ನು ವೈಟ್ ಚಾಕೋಲೇಟ್ ಹೊಂದಿದೆ. ಅದಲ್ಲದೆ ಗಾಯಗೊಂಡ ಅಂಗಾಂಶಗಳ ಚೇತರಿಕೆಯನ್ನು ಹೆಚ್ಚಿಸಲು ಸಹ ಇದು ಸಹಾಯ ಮಾಡುತ್ತದೆ.

ಮನಸ್ಥಿತಿ ಮತ್ತು ಚರ್ಮದ ಆರೋಗ್ಯ ಸುಧಾರಣೆ:

ವೈಟ್ ಚಾಕೋಲೇಟ್ ತಿನ್ನುವುದರಿಂದ ಹದಗೆಟ್ಟ ಮನಸ್ಥಿತಿಯನ್ನು ಸರಿದೂಗಿಸಬಹುದು. ಯಾಕೆಂದರೆ ಈ ಚಾಕೋಲೇಟ್ ಮನಸ್ಥಿತಿಯನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಅದಲ್ಲದೆ ವೈಟ್ ಚಾಕೋಲೇಟ್’ನಲ್ಲಿ (White Chocolates) ಕೋಕೋ ಬೆಣ್ಣೆಯ ಅಂಶಗಳಿರುವುದರಿಂದ ಚರ್ಮದ ಆರೋಗ್ಯವನ್ನು ಸುಧಾರಿಸುವ ಜೈವಿಕ ಅಂಶಗಳನ್ನು ಒದಗಿಸುತ್ತದೆ.

Latest Videos
Follow Us:
Download App:
  • android
  • ios