Akshaya Tritiya: ಚಿನ್ನದಿಂದ ಸಂಪತ್ತಷ್ಟೇ ವೃದ್ಧಿಸುವುದಿಲ್ಲ, ಆರೋಗ್ಯವೂ ಆಗುತ್ತೆ ವೃದ್ಧಿ

ಅಕ್ಷಯ ತೃತೀಯ ಬಂದಿದೆ. ಇಂದು ಚಿನ್ನ ಖರೀದಿಗೆ ವಿಶೇಷ ಮಹತ್ವವಿದೆ. ಚಿನ್ನ ಕೇವಲ ನಮ್ಮ ಸೌಂದರ್ಯ ಹೆಚ್ಚಿಸುವುದಿಲ್ಲ, ಇದು ಹೂಡಿಕೆಯ ದೃಷ್ಟಿಯಿಂದ, ಆರೋಗ್ಯದ ದೃಷ್ಟಿಯಿಂದಲೂ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ. 

Akshaya Tritiya Gold jewelery benefits to health skr

ಅಕ್ಷಯ ತೃತೀಯವು ಚಿನ್ನ ಖರೀದಿಗೆ ಹೇಳಿ ಮಾಡಿಸಿದ ದಿನ. ಈ ದಿನ ಚಿನ್ನ ಕೊಂಡರೆ ಸಂಪತ್ತು ಸಮೃದ್ಧಿಯಾಗುತ್ತದೆ. ಚಿನ್ನ ಕೇವಲ ಸೌಂದರ್ಯ ವೃದ್ಧಿಸುವುದಷ್ಟೇ ಅಲ್ಲ, ಅದೊಂದು ನೈಸರ್ಗಿಕ ವಿಷಕಾರಿಯಲ್ಲದ ಖನಿಜವಾಗಿದೆ. ಧರಿಸುವುದರ ಹೊರತಾಗಿ, ಹೂಡಿಕೆಯ ದೃಷ್ಟಿಯಿಂದ ಚಿನ್ನವನ್ನು ಖರೀದಿಸುವುದು ಉತ್ತಮ ಆಯ್ಕೆಯಾಗಿದೆ.  ಅಷ್ಟೇ ಅಲ್ಲ, ಚಿನ್ನವು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾದ ಅನೇಕ ಗುಣಗಳನ್ನು ಹೊಂದಿದೆ. ಅವುಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ..
ಆಯುರ್ವೇದ ತಜ್ಞರು ಆ್ಯಂಟಿ ಇನ್‌ಫ್ಲಮೇಟರಿ ಗುಣಲಕ್ಷಣಗಳು ದೇಹದ ನೋವು ಮತ್ತು ಊತವನ್ನು ಕಡಿಮೆ ಮಾಡಲು ಮತ್ತು ತಾಪಮಾನವನ್ನು ಸಾಮಾನ್ಯಗೊಳಿಸಲು ಉತ್ತಮವೆಂದು ನಂಬುತ್ತಾರೆ. ಚಿನ್ನಾಭರಣಗಳಲ್ಲಿ ಈ ಆ್ಯಂಟಿ ಇನ್‌‌ಫ್ಲಮೇಟರಿ ಗುಣವಿದ್ದು, ಧರಿಸುವುದರಿಂದ ದೇಹದಲ್ಲಿ ಚಳಿ ಮತ್ತು ಹಠಾತ್ ಜ್ವರದಂತಹ ಸಮಸ್ಯೆಗಳು ವಿರಳವಾಗಿ ಕಾಣಿಸಿಕೊಳ್ಳುತ್ತವೆ.

ಋತುಬಂಧದಲ್ಲಿ ಪ್ರಯೋಜನಕಾರಿ
ಶುದ್ಧ ಚಿನ್ನವು ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ. ಹೀಗಾಗಿ, ಋತುಬಂಧಕ್ಕೆ ಒಳಗಾಗುವ ಮಹಿಳೆಯರು ಚಿನ್ನದ ಆಭರಣಗಳನ್ನು ಧರಿಸುವುದರಿಂದ ಸಾಕಷ್ಟು ಪ್ರಯೋಜನವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ.

ಕಾಲಿಗೆ ಕಟ್ಟಿದ್ರೆ ಕಪ್ಪು ದಾರ ಶನಿ, ರಾಹು, ಕೇತು ದೋಷ ನಿವಾರಣೆ; ಯಾವ ಕಾಲಿಗೆ ಕಟ್ಟಬೇಕು?

ಚಿನ್ನವು ಗಾಯಗಳನ್ನು ಗುಣಪಡಿಸುತ್ತದೆ..
ಗಾಯಗಳ ಚಿಕಿತ್ಸೆಯಲ್ಲಿ ಚಿನ್ನವನ್ನು ಸಹ ಬಳಸಲಾಗುತ್ತದೆ. ಆಯುರ್ವೇದದ ಪ್ರಕಾರ, ಗಾಯದ ಮೇಲೆ ಚಿನ್ನವನ್ನು ಲೇಪಿಸುವುದು ಸೋಂಕನ್ನು ತಡೆಯುತ್ತದೆ ಮತ್ತು ಗಾಯ ತ್ವರಿತವಾಗಿ ವಾಸಿಯಾಗುತ್ತದೆ. ಇದನ್ನು ಬೂದಿ ರೂಪದಲ್ಲಿ ಬಳಸಿಕೊಳ್ಳಬಹುದು.

ಚರ್ಮದ ಗುಣಮಟ್ಟದಲ್ಲಿ ಸುಧಾರಣೆ
24 ಕ್ಯಾರೆಟ್ ಚಿನ್ನವು ಚರ್ಮದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಚಿನ್ನವು ಚರ್ಮಕ್ಕೆ ಉಷ್ಣತೆಯನ್ನು ನೀಡುತ್ತದೆ. ಆದ್ದರಿಂದ ಇದು ದೇಹದ ಜೀವಕೋಶಗಳನ್ನು ಪುನರುತ್ಪಾದಿಸಲು ಸಹಾಯ ಮಾಡುತ್ತದೆ. ತುರಿಕೆ, ಶಿಲೀಂಧ್ರಗಳ ಸೋಂಕು, ಕೆಂಪು ದದ್ದುಗಳು, ಗಾಯಗಳು, ಸುಟ್ಟಗಾಯಗಳು ಮುಂತಾದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿಭಾಯಿಸಲು ಚಿನ್ನವನ್ನು ಬಳಸಬಹುದು.

ರೋಗನಿರೋಧಕ ಶಕ್ತಿ ವರ್ಧಕ
ಆಯುರ್ವೇದದ ಪ್ರಕಾರ, ಚಿನ್ನವು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶುದ್ಧ ಚಿನ್ನದ ಆಭರಣಗಳನ್ನು ಧರಿಸುವುದರಿಂದ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ. ಇದು ಅನೇಕ ರೀತಿಯ ಸೋಂಕುಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

Akshaya Tritiya 2023ಯು ನಿಮ್ಮ ರಾಶಿಗೆ ಏನೆಲ್ಲ ಫಲ ತರಲಿದೆ ನೋಡಿದ್ರಾ?

ಯಾವ ಆಭರಣಗಳಿಂದ ನೀವು ಯಾವ ಪ್ರಯೋಜನಗಳನ್ನು ಪಡೆಯುತ್ತೀರಿ?

  • ಉಂಗುರ: ಚಿನ್ನದ ಉಂಗುರಗಳು ನರಮಂಡಲದ ಮೇಲೆ ಪರಿಣಾಮ ಬೀರುತ್ತವೆ, ಇದರಿಂದಾಗಿ ದೇಹದಲ್ಲಿ ಸಂತೋಷದ ಹಾರ್ಮೋನುಗಳು ಹೆಚ್ಚಾಗುತ್ತವೆ.
  • ಮಾಂಗ್ ಟಿಕಾ: ಟಿಕಾ ಧರಿಸುವುದರಿಂದ ಏಕಾಗ್ರತೆ ಹೆಚ್ಚುತ್ತದೆ ಮತ್ತು ಭಾವನಾತ್ಮಕ ಬಾಂಧವ್ಯ ಹೆಚ್ಚುತ್ತದೆ.
  • ಕಿವಿಯೋಲೆಗಳು: ಚಿನ್ನದ ಕಿವಿಯೋಲೆಗಳನ್ನು ಧರಿಸುವುದರಿಂದ ದೃಷ್ಟಿ ಸುಧಾರಿಸಬಹುದು. ಏಕೆಂದರೆ ಕಿವಿಯ ನರಗಳು ಕಣ್ಣುಗಳಿಗೆ ಸಂಪರ್ಕಗೊಂಡಿವೆ, ಆದ್ದರಿಂದ ಇದು ದೃಷ್ಟಿ ಸುಧಾರಿಸುತ್ತದೆ.
  • ನೆಕ್ಲೇಸ್: ಚಿನ್ನದ ನೆಕ್ಲೇಸ್ ಧರಿಸುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಹೃದಯ ಸಂಬಂಧಿ ಸಮಸ್ಯೆಗಳು ಕಡಿಮೆಯಾಗುತ್ತವೆ.
  • ಮೂಗುತಿ: ಚಿನ್ನದ ಮೂಗುತಿ ಧರಿಸುವ ಮಹಿಳೆಯರಿಗೆ ಪಿರಿಯಡ್ಸ್ ನೋವು ಕಡಿಮೆ ಇರುತ್ತದೆ.
  • ಬಳೆಗಳು: ಚಿನ್ನದ ಬಳೆಗಳನ್ನು ಧರಿಸುವುದರಿಂದ ದೇಹದಲ್ಲಿ ಶಕ್ತಿಯ ಮಟ್ಟ ಹೆಚ್ಚಾಗುತ್ತದೆ ಮತ್ತು ಯಕೃತ್ತಿನ ಸಂಬಂಧಿತ ಸಮಸ್ಯೆಗಳು ಕಡಿಮೆಯಾಗುತ್ತವೆ.
  • ಸೊಂಟದ ಪಟ್ಟಿ: ಚಿನ್ನದ ಸೊಂಟದ ಪಟ್ಟಿಯನ್ನು ಧರಿಸಿದ ಮಹಿಳೆಯರು ಮುಟ್ಟಿನ ನೋವು ಮತ್ತು ಸೆಳೆತದಿಂದ ಪರಿಹಾರವನ್ನು ಪಡೆಯುತ್ತಾರೆ.

    ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.
Latest Videos
Follow Us:
Download App:
  • android
  • ios