ನಂಬಿ, ನಿಮ್ಮ ಕಾಲುಗಳನ್ನು ನೀವು ಬಲಪಡಿಸಿದರೆ, ವಯಸ್ಸಾಗುವುದನ್ನೂ ತಡೆಗಟ್ಟಬಹುದು! ಅದು ಹೇಗೆ ಅಂತೀರಾ? ಇಲ್ಲಿದೆ ನೋಡಿ.
ನೀವು ನೋಡಿರಬಹುದು, ಹಿರಿಯ ನಾಗರಿಕರ (Senior citizens) ಕಾಲುಗಳು (Legs) ತೆಳ್ಳಗಾಗಿರುವುದು, ರಕ್ತ ಇಲ್ಲದಂತೆ ಬಿಳಿಚಿಕೊಂಡಿರುವುದು ಇತ್ಯಾದಿ. ಕಾಲುಗಳು ಕಡ್ಡಿಯಂತೆ ಆಗಿರುವುದಂತೂ ಸಾಮಾನ್ಯ. ವೃದ್ಧಾಪ್ಯದಲ್ಲಿ ಕಾಲುಗಳು ಬಲವಾಗಿ ಇಲ್ಲದಿದ್ದರೆ ವಾಕಿಂಗ್ (Walking) ಮುಂತಾದ ಅವಶ್ಯಕ ವ್ಯಾಯಾಮಗಳನ್ನು (Excersice) ಮಾಡುವುದು ಸಾಧ್ಯವಿಲ್ಲ. ವಯಸ್ಸಾದಂತೆ ವ್ಯಕ್ತಿಯ ಕೂದಲು (Hair) ಬಿಳಿಯಾಗುವುದು, ಚರ್ಮವು (Skin) ಹೊಳಪು ಕಳೆದುಕೊಳ್ಳುವುದು ಮತ್ತು ಸುಕ್ಕುಗಟ್ಟುವುದು ಸಾಮಾನ್ಯ. ಅದರ ಜೊತೆಗೇ ಕಾಲುಗಳು ಶಕ್ತಿಹೀನವಾಗುತ್ತವೆ. ನಿಮಗೆ ಗೊತ್ತಿದೆಯಾ? ಕಾಲುಗಳಿಂದಲೇ ನಿಮ್ಮ ವಯಸ್ಸಾಗುವಿಕೆ (Aging) ಆರಂಭವಾಗುತ್ತದೆ! ಅಂದರೆ ನಿಮ್ಮ ವಯಸ್ಸಾಗುವಿಕೆಯ ಸೂಚನೆ ಮೊದಲು ಸಿಗುವುದೇ ನಿಮ್ಮ ಕಾಲುಗಳಿಂದ. ಹೊರತು ತಲೆಕೂದಲಿನಿಂದಲೋ ಚರ್ಮದಿಂದಲೋ ಅಲ್ಲ!
ವಿಜ್ಞಾನಿಗಳು ಹೇಳುವಂತೆ ದೀರ್ಘಾಯುಷ್ಯದ ಚಿಹ್ನೆಗಳೆಂದರೆ ರೋಗಪ್ರತಿರೋಧ ಶಕ್ತಿ (Immunity) ಹಾಗೂ ಬಲವಾದ ಲೆಗ್ ಸ್ನಾಯುಗಳು (Musceles). ಉದಾಹರಣೆಗೆ, ಮನುಷ್ಯರು ಎರಡು ವಾರಗಳ ಕಾಲ ಓಡಾಡದೇ ಸುಮ್ಮನಿದ್ದರೆ, ಅವರ ಕಾಲಿನ ಬಲವು ಸುಮಾರು 40 ವರ್ಷಗಳಾಗುವಷ್ಟರಲ್ಲಿ ತುಂಬ ಕಡಿಮೆಯಾಗುತ್ತದೆ. ಇದು ತಮಾಷೆಯಲ್ಲ. ಎರಡು ವಾರಗಳ ಕಾಲ ನೀವು ನಿಮ್ಮ ಕಾಲುಗಳನ್ನು ಚಲಿಸದೇ, ವಾಕಿಂಗ್ ಮಾಡದೇ ನಿಷ್ಕ್ರಿಯರಾಗಿ ಇದ್ದರೆ, ಕಾಳಿನ ಸ್ನಾಯುಗಳ ಬಲವು ಮೂರನೇ ಒಂದು ಭಾಗದಷ್ಟು ದುರ್ಬಲಗೊಳ್ಳುತ್ತದೆ ಎಂದು ಡೆನ್ಮಾರ್ಕ್‌ನ ಕೋಪನ್‌ಹೇಗನ್ ವಿಶ್ವವಿದ್ಯಾನಿಲಯದ ಒಂದು ಅಧ್ಯಯನ ಕಂಡುಹಿಡಿದಿದೆ.
Dementia: ಮರೆವಿನ ಸಮಸ್ಯೆಯಿಂದ ದೂರವಿರಲು ಈ ಬದಲಾವಣೆ ಅಗತ್ಯ
ಕಾಲಿನ ಸ್ನಾಯುಗಳು ಒಮ್ಮೆ ದುರ್ಬಲಗೊಂಡರೆ, ನೀವು ನಂತರ ಪುನಃ ಅದಕ್ಕೆ ಬಲ ತುಂಬಲು ಯತ್ನಿಸಿದರೂ ಸಹ ಚೇತರಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಸದಾ ಟಿವಿ ನೋಡುತ್ತಾ ಜಂಕ್ ಫುಡ್ ತಿನ್ನುತ್ತಾ ಕುಳಿತಿರುವ ಮಕ್ಕಳಲ್ಲಿ ಬಲುಬೇಗ ವಯಸ್ಸಾಗಿಬಿಡಲು ಇದೇ ಕಾರಣ. ಆದ್ದರಿಂದ, ನಿಯಮಿತ ವ್ಯಾಯಾಮ ಬಹಳ ಮುಖ್ಯ. ಇಡೀ ದೇಹದ ಒತ್ತಡವು ಕಾಲುಗಳ ಮೇಲೆ ಇರುತ್ತದೆ. ಪಾದವು ಮಾನವ ದೇಹದ ಭಾರವನ್ನು ಹೊರುವ ಸ್ತಂಭವಾಗಿದೆ. ವ್ಯಕ್ತಿಯ 50% ಮೂಳೆಗಳು ಮತ್ತು 50% ಸ್ನಾಯುಗಳು ಎರಡು ಕಾಲುಗಳಲ್ಲಿವೆ. ಮಾನವ ದೇಹದ ಅತಿದೊಡ್ಡ ಮತ್ತು ಬಲವಾದ ಕೀಲುಗಳು ಮತ್ತು ಮೂಳೆಗಳು ಸಹ ಅದರಲ್ಲಿವೆ. 'ಬಲವಾದ ಮೂಳೆಗಳು, ಬಲವಾದ ಸ್ನಾಯುಗಳು ಮತ್ತು ಹೊಂದಿಕೊಳ್ಳುವ ಕೀಲುಗಳು 'ಕಬ್ಬಿಣದ ತ್ರಿಕೋನ'ವನ್ನು ರೂಪಿಸುತ್ತವೆ, ಅದು ಮಾನವ ದೇಹದ ಅತ್ಯಂತ ಪ್ರಮುಖವಾದ ಭಾಗವೂ ಹೌದು. ಜೀವನದ 70% ಚಟುವಟಿಕೆ ಮತ್ತು ಶಕ್ತಿಯ ವೆಚ್ಚ ಎರಡು ಪಾದಗಳಿಂದಲೇ ಆಗುತ್ತದೆ. ಒಬ್ಬ ವ್ಯಕ್ತಿಯ ಯವ್ವನದಲ್ಲಿ ಅವನ ಕಾಲುಗಳಿಗೆ ಎಷ್ಟು ಶಕ್ತಿ ಇರುತ್ತದೆ ಎಂದರೆ, ಅವನ ತೊಡೆಗಳು ಒಂದು ಕಾರನ್ನೇ ಆಧರಿಸಿ ಹಿಡಿಯಬಲ್ಲವು ಎಂದು ನಿಮಗೆ ತಿಳಿದಿದೆಯೆ?
Manage Anxiety: ಮೂರು ನಿಯಮ ಪಾಲನೆ ಮಾಡಿ ಆತಂಕ ಓಡಿಸಿ
ಕಾಲು ದೇಹದ ಚಲನೆಯ ಕೇಂದ್ರ. ಎರಡೂ ಕಾಲುಗಳು ಮಾನವ ದೇಹದ ನರಗಳ 50%, ರಕ್ತನಾಳಗಳ 50% ಮತ್ತು ಅವುಗಳ ಮೂಲಕ ಹರಿಯುವ 50% ರಕ್ತವನ್ನು ಹೊಂದಿರುತ್ತವೆ. ಇದು ದೇಹವನ್ನು ಸಂಪರ್ಕಿಸುವ ಅತಿ ದೊಡ್ಡ ರಕ್ತಪರಿಚಲನಾ ಜಾಲ. ಪಾದಗಳು ಆರೋಗ್ಯಕರವಾಗಿದ್ದಾಗ ಮಾತ್ರ ಚಲನೆ ಸರಾಗವಾಗಿ ಆಗುತ್ತದೆ. ಹೀಗಾಗಿ ಬಲವಾದ ಕಾಲಿನ ಸ್ನಾಯುಗಳನ್ನು ಹೊಂದಿರುವ ಜನರು ಖಂಡಿತವಾಗಿಯೂ ಬಲವಾದ ಹೃದಯವನ್ನು ಹೊಂದಿರುತ್ತಾರೆ. ವಯಸ್ಸಾಗುವಿಕೆಯು ಪಾದಗಳಿಂದ ಪ್ರಾರಂಭವಾಗುತ್ತದೆ. ಒಬ್ಬ ವ್ಯಕ್ತಿ ವಯಸ್ಸಾದಂತೆ, ಕಾಲುಗಳು ಮತ್ತು ಮೆದುಳಿನ ನಡುವಿನ ಸೂಚನೆ ಪ್ರಸರಣದ ನಿಖರತೆ ಮತ್ತು ವೇಗ ಕಡಿಮೆಯಾಗುತ್ತದೆ. ಇದರ ಜೊತೆಯಲ್ಲಿ, ಮೂಳೆಗಳಲ್ಲಿ ಬೋನ್ ಫರ್ಟಿಲೈಸಿಂಗ್ ಎಂದು ಕರೆಯಲ್ಪಡುವ ಪ್ರಕ್ರಿಯೆ ನಡೆಯುತ್ತದೆ. ಇದು ಕಾಲಿನ ಮೂಳೆಗಳಲ್ಲಿರುವ ಕ್ಯಾಲ್ಸಿಯಂನ ಕಡಿಮೆಯಾಗುವಿಕೆ. ಹೀಗಾಗಿ ವಯಸ್ಸಾದವರು ಬಲುಬೇಗ ಕಾಲಿನ ಮೂಳೆಯ ಮುರಿತಗಳಿಗೆ ಹೆಚ್ಚು ಒಳಗಾಗುತ್ತಾರೆ. ಮುರಿತಗಳು ಸುಲಭವಾಗಿ ಇತರ ರೋಗಗಳ ಸರಣಿಯನ್ನು ಪ್ರಚೋದಿಸುತ್ತವೆ. ವಿಶೇಷವಾಗಿ ಮೆದುಳಿನ ಥ್ರಾಂಬೋಸಿಸ್‌ನಂತಹ ಮಾರಣಾಂತಿಕ ಕಾಯಿಲೆಗಳು.
ಕಾಲುಗಳಿಗೆ ವ್ಯಾಯಾಮ
ಕಾಳುಗಳಿಗೆ ವ್ಯಾಯಾಮ ಮಾಡಿಸಲು 70 ವರ್ಷ ವಯಸ್ಸಿನ ನಂತರವೂ ತಡವೇನಲ್ಲ. ಕಾಲಾನಂತರದಲ್ಲಿ ನಮ್ಮ ಪಾದಗಳಿಗೆ ಕ್ರಮೇಣ ವಯಸ್ಸಾಗುತ್ತದಾದರೂ, ನಮ್ಮ ಪಾದಗಳಿಗೆ ವ್ಯಾಯಾಮ ಮಾಡುವುದು ಜೀವಮಾನದ ಕೆಲಸ. ಕಾಲುಗಳನ್ನು ಬಲಪಡಿಸುವ ಮೂಲಕ ಮಾತ್ರ ವಯಸ್ಸಾಗುವಿಕೆಯನ್ನು ತಡೆಯಬಹುದು. ಆದ್ದರಿಂದ ಕಾಲುಗಳ ಕಾಳಜಿ ವಹಿಸಿ ಮತ್ತು ಸುರಕ್ಷಿತವಾಗಿರಿ.
