Health Tips: ಮಲೆನಾಡಲ್ಲಿ ಬೆಳಗ್ಗೆ ತುಪ್ಪ, ಬೆಲ್ಲದ ಜೊತೆ ತಿಂಡಿ ತಿನ್ನೋದ್ಯಾಕೆ ಗೊತ್ತಾ?
ಬೆಳಗ್ಗೆ ಏಳುವ ಸಮಯದಲ್ಲಿ ಏನೋ ಒಂದು ರೀತಿಯ ಮಂಕುತನ, ಒತ್ತಡ ಉಂಟಾಗುವುದು ಸಹಜ. ಉತ್ತಮ ಕೊಬ್ಬು ಇವುಗಳನ್ನು ನಿಯಂತ್ರಿಸಿ, ಮನಸ್ಸನ್ನು ಸುಸ್ಥಿತಿಗೆ ತಂದು, ಕ್ಲಿಯರ್ ಆಗಿ ಯೋಚನೆ ಮಾಡುವ ಸಾಮರ್ಥ್ಯ ನೀಡುತ್ತದೆ. ಹೀಗಾಗಿ, ಬೆಳಗಿನ ತಿಂಡಿಯೊಂದಿಗೆ ತುಪ್ಪ, ತೆಂಗಿನೆಣ್ಣೆ, ಬೆಣ್ಣೆ, ಒಣಹಣ್ಣುಗಳು ಸೇರಿರುವಂತೆ ನೋಡಿಕೊಳ್ಳಿ.
ಮಲೆನಾಡಿನ ಹಲವು ಭಾಗಗಳಲ್ಲಿ ಬೆಳಗಿನ ತಿಂಡಿಗೆ ಕಡ್ಡಾಯವಾಗಿ ಬೆಲ್ಲ ಮತ್ತು ತುಪ್ಪ ಸೇವನೆ ಮಾಡುವ ಹಿರಿಯರಿದ್ದಾರೆ. ಯುವ ಪೀಳಿಗೆಗೆ ಹೋಲಿಕೆ ಮಾಡಿದರೆ ಅದರು ಹೆಚ್ಚು ಆರೋಗ್ಯವಂತರು. “ಹಳೆಯ ಮಷಿನ್, ಎಂದಿಗೂ ಕೈಕೊಡುವುದಿಲ್ಲ’ ಎಂದು ತಮಾಷೆಯಾಗಿ ಅವರನ್ನು ಆಡಿಕೊಳ್ಳುವುದು ಸಾಮಾನ್ಯವಾದರೂ ಅವರ ಆಹಾರವೂ ಗಟ್ಟಿತನಕ್ಕೆ ಕಾರಣ ಎನ್ನುವುದು ಇತ್ತೀಚೆಗೆ ಅರಿವಾಗಿದೆ. ಬೆಳಗಿನ ಖಾಲಿ ಹೊಟ್ಟೆಯಲ್ಲಿ ಬೆಲ್ಲ ಮತ್ತು ತುಪ್ಪವನ್ನು ಸೇವನೆ ಮಾಡುವುದರಿಂದ ಆಗುವ ಲಾಭದ ಬಗ್ಗೆ ಇತ್ತೀಚೆಗೆ ಎಲ್ಲರಲ್ಲೂ ಅರಿವು ಮೂಡುತ್ತಿದೆ. ಅದರಲ್ಲೂ ಮುಖ್ಯವಾಗಿ, ದಿನವೂ ಬೆಳಗಿನ ಸಮಯದಲ್ಲಿ ಆರೋಗ್ಯಕರ ಕೊಬ್ಬನ್ನು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಅತ್ಯುತ್ತಮ ಎನ್ನುವುದು ಇತ್ತೀಚೆಗೆ ಹೆಚ್ಚು ಜನಜನಿತವಾಗುತ್ತಿದೆ. ಇಲ್ಲಿ ಕೊಬ್ಬು ಎಂದರೆ ಉತ್ತಮ ಕೊಬ್ಬು ಮಾತ್ರ. ಇದು ದೇಹಕ್ಕೆ ಅತ್ಯಗತ್ಯ. ಬೆಳಗಿನ ಖಾಲಿ ಹೊಟ್ಟೆಯಲ್ಲಿ ಉತ್ತಮ ಕೊಬ್ಬು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಲಾಭವಾಗುತ್ತದೆ. ನಾವು ಬೆಳಗ್ಗೆ ಏಳುವ ಸಮಯದಲ್ಲಿ ದೇಹದಲ್ಲಿ ನೈಸರ್ಗಿಕವಾಗಿ ಕಾರ್ಟಿಸೋಲ್ ಉತ್ಪಾದನೆಯಾಗಿರುತ್ತದೆ. ಇದು ಒತ್ತಡದ ಹಾರ್ಮೋನ್. ಈ ಸಮಯದಲ್ಲಿ ಉತ್ತಮ ಕೊಬ್ಬನ್ನು ಸೇವಿಸಿದಾಗ ಈ ಒತ್ತಡವನ್ನು ಸೂಕ್ತವಾಗಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ತುಪ್ಪ (Ghee), ತೆಂಗಿನೆಣ್ಣೆ (Coconut Oil) ಅಥವಾ ಬೆಣ್ಣೆ (Butter) ಯಂತಹ ಉತ್ತಮ ಕೊಬ್ಬುಗಳನ್ನು (Good Fat) ಬೆಳಗಿನ ಸಮಯದಲ್ಲಿ ಸೇವನೆ ಮಾಡಲು ಹಲವರು ಹಿಂದೇಟು ಹಾಕಬಹುದು. ಆದರೆ, ಖಾಲಿ ಹೊಟ್ಟೆಯಲ್ಲಿ ನಿಯಮಿತವಾಗಿ ಇವುಗಳನ್ನು ಸೇವನೆ ಮಾಡುವುದರಿಂದ ಬೆಳಬೆಳಗ್ಗೆ ದೇಹದಲ್ಲಿ ಸೃಷ್ಟಿಯಾಗುವ ಒತ್ತಡದ ಹಾರ್ಮೋನ್ (Stress Hormone) ಪ್ರಮಾಣ ಇಳಿಕೆಯಾಗುತ್ತದೆ. ಆಗ ಮನಸ್ಸು ಸ್ಪಷ್ಟವಾಗುತ್ತದೆ. ಮಿದುಳಿಗೆ ಕವಿದಿರುವ ಮಂಕುತನ (Fog) ದೂರವಾಗುತ್ತದೆ ಎನ್ನುವುದು ಅಧ್ಯಯನಗಳಿಂದ ದೃಢಪಟ್ಟಿದೆ.
Breast Size: ಹೆಚ್ಚು ಕಡಿಮೆ ಇದ್ದರೆ ಸಹಜವೇ, ಅನಾರೋಗ್ಯದ ಲಕ್ಷಣವೇ?
ಟೆಕ್ಸಾಸ್ ನಲ್ಲಿರುವ ಎ ಮತ್ತು ಎಂ ವಿಶ್ವವಿದ್ಯಾಲಯದ ಅಧ್ಯಯನದ ಪ್ರಕಾರ, ಸ್ಯಾಚುರೇಟೆಡ್ ಕೊಬ್ಬಿನ (Saturated Fat) ಅಂಶ ಹೆಚ್ಚಾಗಿರುವ ದೇಸಿ ತುಪ್ಪ, ತೆಂಗಿನೆಣ್ಣೆ, ನಾಟಿ ಮೊಟ್ಟೆ, ರೆಡ್ ಮೀಟ್, ಚೀಸ್, ಬೆಣ್ಣೆ, ತೆಂಗಿನ ಹಾಲು ಇವುಗಳನ್ನು ಸೇವನೆ ಮಾಡುವುದು ಅತ್ಯುತ್ತಮ. ಸ್ಯಾಚುರೇಟೆಡ್ ಕೊಬ್ಬು ದೇಹದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.
ಆಹಾರ ತಜ್ಞೆ ರಾಶಿ ಚೌಧರಿ ಕೂಡ ಇತ್ತೀಚೆಗೆ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ “ಫ್ಯಾಟ್ ಫಸ್ಟ್’ ನಿಯಮ ಅಳವಡಿಸಿಕೊಳ್ಳುವ ಲಾಭದ ಬಗ್ಗೆ ಗಮನ ಸೆಳೆದಿದ್ದಾರೆ.
ಮಧುಮೇಹಿಗಳಿಗೆ (Diabetics) ಸಹಕಾರಿ
ಕಾರ್ಬೋಹೈಡ್ರೇಟ್ (Carbohydrate) ಬದಲಿಗೆ ಸ್ಯಾಚುರೇಟೆಡ್ ಕೊಬ್ಬಿನಂಶ ಹೆಚ್ಚಾಗಿರುವ ಈ ಮೇಲಿನ ಪದಾರ್ಥಗಳ ಸೇವನೆಗೆ ಆದ್ಯತೆ ನೀಡಿದರೆ ರಕ್ತದಲ್ಲಿನ ಸಕ್ಕರೆ (Blood Sugar) ಮಟ್ಟವನ್ನು ಸ್ಥಿರಗೊಳಿಸಲು ಸಹಾಯವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ದಿನವಿಡೀ ಉಂಟಾಗುವ ಆಹಾರದ ಬಯಕೆಯನ್ನು (Cravings) ನಿಯಂತ್ರಿಸಲು ಸಾಧ್ಯವಾಗುತ್ತದೆ. ಇದು ಅತ್ಯಂತ ಮಹತ್ವದ್ದು. ಏಕೆಂದರೆ, ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಿರುವ ಮಧುಮೇಹಿಗಳಿಗೆ ಹಸಿವಾಗುವುದು ಹೆಚ್ಚು. ಪದೇ ಪದೆ ತಿನ್ನುವುದರಿಂದ ಸಕ್ಕರೆ ಮಟ್ಟ ಮತ್ತಷ್ಟು ಏರುತ್ತದೆ. ಆದರೆ, ಉತ್ತಮ ಕೊಬ್ಬು ರಕ್ತದಲ್ಲಿ ಸಕ್ಕರೆ ಮಟ್ಟ ಏರಿಕೆಯಾಗಲು ಬಿಡುವುದಿಲ್ಲ. ಮಧುಮೇಹ ಉಂಟಾಗುವ ಅಪಾಯದಲ್ಲಿರುವ ಜನರಿಗೂ ಇದು ಅನುಕೂಲ.
Impressing Wome : ಬ್ರಿಟನ್ನಿನ ಸಾಲ್ವಾ ಹುಸೇನ್‌ಗೆ ಹೃದಯವೇ ಇಲ್ಲ, ಆದರೂ ನಗುವುದ ಮರೆತಿಲ್ಲ!
ಎಷ್ಟೆಲ್ಲ ಲಾಭ?
ಉತ್ತಮ ಕೊಬ್ಬು ಇನ್ಸುಲಿನ್ (Insulin) ಪ್ರತಿರೋಧವನ್ನು ಹೆಚ್ಚಿಸುವ ಜತೆಗೆ ವಿಟಮಿನ್ ಗಳ ಹೀರುವಿಕೆ (Absorb) ಪ್ರಮಾಣವನ್ನು ಉತ್ತಮಗೊಳಿಸುತ್ತದೆ. ಕರುಳಿನ ಪದರವನ್ನು (Gut Line) ಸ್ವಾಸ್ಥ್ಯವಾಗಿಡುವಲ್ಲಿ ಉತ್ತಮ ಕೊಬ್ಬಿನ ಪಾತ್ರ ಮಹತ್ವದ್ದು. ಕರುಳಿನ ಪದರ ಚೆನ್ನಾಗಿದ್ದರೆ ಪೌಷ್ಟಿಕಾಂಶಗಳ ಹೀರುವಿಕೆ ಚೆನ್ನಾಗಿರುತ್ತದೆ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಕರುಳಿನಲ್ಲಿರುವ ಲಕ್ಷಾಂತರ ಸಂಖ್ಯೆಯಲ್ಲಿರುವ ಮೈಕ್ರೋಬಯೋಮ್ ರಕ್ಷಣೆಗೂ ಉತ್ತಮ ಕೊಬ್ಬು ಸಹಕಾರಿ. ಬೆಣ್ಣೆ, ತುಪ್ಪಗಳಷ್ಟೇ ಅಲ್ಲ, ಬೆಣ್ಣೆ ಹಣ್ಣು ಅಥವಾ ಬಟರ್ ಫ್ರೂಟ್ (Avocado), ಒಣಹಣ್ಣುಗಳು, ಮೊಟ್ಟೆ, ಆಲಿವ್ ಎಣ್ಣೆ, ತೆಂಗಿನಕಾಯಿಗಳೂ ಉತ್ತಮ ಕೊಬ್ಬನ್ನು ಹೊಂದಿರುವ ಪದಾರ್ಥಗಳಾಗಿವೆ.