Asianet Suvarna News Asianet Suvarna News

Tunisha Sharma Suicide: ಆತ್ಮಹತ್ಯೆ ಮಾಡಿಕೊಳ್ಬೇಕು ಅಂತ ಅನಿಸೋದ್ಯಾಕೆ ?

ಹಿಂದಿ ಕಿರುತೆರೆ ನಟಿ ತುನಿಶಾ ಶರ್ಮಾ ಮುಂಬೈನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬ್ರೇಕಪ್‌ನಿಂದ ಮನನೊಂದು ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಹೀಗಿರುವಾಗ ಆತ್ಮಹತ್ಯೆಗೆ ಕಾರಣವಾಗೋದೇನು ? ಮನಸ್ಥಿತಿ ಹೇಗಿರುತ್ತದೆ ಎಂಬುದನ್ನು ತಿಳಿಯೋಣ.

Actress Tunisha Sharma allegedly dies by suicide, know warning signs of sucide Vin
Author
First Published Dec 25, 2022, 3:23 PM IST

ನವದೆಹಲಿ: ಹಿಂದಿ ಕಿರುತೆರೆ ನಟಿ ತುನಿಶಾ ಶರ್ಮಾ ಮುಂಬೈನಲ್ಲಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. 'ಅಲಿ ಬಾಬಾ' ಎಂಬ ಹಿಟ್ ಶೋನಲ್ಲಿ ರಾಜಕುಮಾರಿ ಮೇರಿಯಮ್ ಪಾತ್ರದಲ್ಲಿ ಜನಪ್ರಿಯವಾಗಿರುವ 20 ವರ್ಷದ ನಟಿ, ಆಕೆಯ ವ್ಯಾನಿಟಿ ವಾಹನದಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಕಂಡುಬಂದಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ (Hospital) ಸಾಗಿಸಲಾಯಿತು. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ತುನಿಶ ಶರ್ಮಾ ಮೃತಪಟ್ಟಿದ್ದರು. ಪೊಲೀಸರು ಪ್ರಕರಣದ ತನಿಖೆ (Investigation)ಯನ್ನು ಪ್ರಾರಂಭಿಸಿದ್ದಾರೆ ಮತ್ತು ಆಕೆಯ ಸಹ ನಟರು ಮತ್ತು ಸ್ನೇಹಿತರನ್ನು ವಿಚಾರಣೆ ನಡೆಸುತ್ತಿದ್ದಾರೆ. ಹಾಗಿದ್ರೆ ಆತ್ಮಹತ್ಯಾ ನಡವಳಿಕೆಯನ್ನು ಗುರುತಿಸುವುದು ಹೇಗೆ ?

ಆತ್ಮಹತ್ಯಾ ನಡವಳಿಕೆಯನ್ನು ಗುರುತಿಸುವುದು ಹೇಗೆ ?
ಕ್ಲೀವ್ಲ್ಯಾಂಡ್ ಕ್ಲಿನಿಕ್‌ನ ಪ್ರಕಾರ, ಆತ್ಮಹತ್ಯೆಯನ್ನು ಆಲೋಚಿಸುವ ಜನರು ಹೆಚ್ಚಾಗಿ ಖಿನ್ನತೆ, ಆತಂಕ, ಸ್ವಯಂ-ಹಾನಿ ವರ್ತನೆ ಮತ್ತು ಜೀವನ ಬಿಕ್ಕಟ್ಟಿನಂತಹ ಮಾನಸಿಕ ಆರೋಗ್ಯ ಸಮಸ್ಯೆ (Health problem)ಗಳಿಂದ ಬಳಲುತ್ತಿರುತ್ತಾರೆ. ಮಾನಸಿಕ ಆರೋಗ್ಯ ತಜ್ಞರು ಹೇಳುವ ಪ್ರಕಾರ ಕುಟುಂಬದ ಸದಸ್ಯರು ಅಥವಾ ಸ್ನೇಹಿತರು ಆತ್ಮಹತ್ಯೆಯ ಬಗ್ಗೆ ಮಾತನಾಡಿದರೆ, ನೀವು ಅವರನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ವೃತ್ತಿಪರ ಸಹಾಯ ಪಡೆಯಲು ಪ್ರೋತ್ಸಾಹಿಸಬೇಕು. ಆತ್ಮಹತ್ಯೆ, ಅಂಕಿಅಂಶಗಳ ಪ್ರಕಾರ, USನಲ್ಲಿ ಸಾವಿನ ಹತ್ತನೇ ಪ್ರಮುಖ ಕಾರಣವಾಗಿದೆ. ಪ್ರತಿ 11 ನಿಮಿಷಕ್ಕೆ ಒಬ್ಬ ವ್ಯಕ್ತಿ ಆತ್ಮಹತ್ಯೆಯಿಂದ ಸಾಯುತ್ತಾನೆ. ಇದು 10 ರಿಂದ 34 ವರ್ಷ ವಯಸ್ಸಿನ ಜನರಲ್ಲಿ ಸಾವಿನ ಎರಡನೇ ಪ್ರಮುಖ ಕಾರಣವಾಗಿದೆ.

Tunisha Sharma 20 ವರ್ಷಕ್ಕೆ ಬದುಕು ಅಂತ್ಯಗೊಳಿಸಿದ ನಟಿ, ಕಾರಣ ನಿಗೂಢ!

ಆತ್ಮಹತ್ಯೆಗೆ ಕಾರಣವಾಗುವುದು ಏನು ?
ಸ್ನೇಹಿತ ಅಥವಾ ಪ್ರೀತಿಪಾತ್ರರು ಆತ್ಮಹತ್ಯೆಗೆ ಪ್ರಯತ್ನಿಸಲು ಏನು ಕಾರಣವಾಗಬಹುದು ಎಂದು ನಿಮಗೆ ತಿಳಿದಿಲ್ಲದಿದ್ದರೂ, ಕನಿಷ್ಠ ಕೆಲವು ಸಾಮಾನ್ಯ ಗುಣಲಕ್ಷಣಗಳ ಬಗ್ಗೆ ತಿಳಿದಿರಬೇಕು. ವ್ಯಕ್ತಿಯ ಆತ್ಮಹತ್ಯೆಯ ಅಪಾಯವನ್ನು ಹೆಚ್ಚಿಸುವ ಕೆಲವು ತಿಳಿದಿರುವ ಅಂಶಗಳು ಸೇರಿವೆ:

ಖಿನ್ನತೆ, ಮನಸ್ಥಿತಿ ಅಸ್ವಸ್ಥತೆಗಳು
ಆತಂಕದಂತಹ ಮಾನಸಿಕ ಆರೋಗ್ಯ ಪರಿಸ್ಥಿತಿಗಳು
ಹತಾಶತೆಯ ಭಾವನೆಗಳು.
ಚಟಗಳು
ವರ್ತನೆಯ ಸಮಸ್ಯೆಗಳು
ದೈಹಿಕ, ಭಾವನಾತ್ಮಕ ಅಥವಾ ಲೈಂಗಿಕ ನಿಂದನೆ

ವಿವಿಧ ಮಾನಸಿಕ ಆರೋಗ್ಯ ತಜ್ಞರು ಗಮನಿಸಿದಂತೆ ಕೆಲವು ಆತ್ಮಹತ್ಯೆ ಎಚ್ಚರಿಕೆ ಚಿಹ್ನೆಗಳು ಹೀಗಿವೆ

ದುಃಖ ಅಥವಾ ಚಿತ್ತಸ್ಥಿತಿ: ದೀರ್ಘಕಾಲದ ದುಃಖ ಮತ್ತು ಮನಸ್ಥಿತಿ ಬದಲಾವಣೆಗಳಿಂದ ಬಳಲುತ್ತಿರುವ ವ್ಯಕ್ತಿಯು ತನ್ನನ್ನು ತಾನೇ ಕೊಲ್ಲಲು ಪ್ರಯತ್ನಿಸಬಹುದು. ಖಿನ್ನತೆಯು ಆತ್ಮಹತ್ಯೆಗೆ ಪ್ರಮುಖ ಅಪಾಯಕಾರಿ ಅಂಶವಾಗಿದೆ.

ಹಠಾತ್ ಶಾಂತತೆ: ಖಿನ್ನತೆ ಅಥವಾ ಚಿತ್ತಸ್ಥಿತಿಯ ಅವಧಿಯ ನಂತರ ವ್ಯಕ್ತಿಯು ಇದ್ದಕ್ಕಿದ್ದಂತೆ ಶಾಂತವಾಗುತ್ತಾನೆ.

Mental Health: ಆತ್ಮಹತ್ಯೆ ಮನಸ್ಥಿತಿ ಹೊಂದಿರುವ ಜನರಿಗೆ ನೆರವಾಗೋದು ಹೇಗೆ ?

ಏಕಾಂಗಿಯಾಗಿರುವ ಅಭ್ಯಾಸ: ವ್ಯಕ್ತಿಯು ಏಕಾಂಗಿಯಾಗಿರಲು ಆಯ್ಕೆ ಮಾಡಿಕೊಳ್ಳುತ್ತಾನೆ ಮತ್ತು ಸ್ನೇಹಿತರು ಅಥವಾ ಸಾಮಾಜಿಕ ಚಟುವಟಿಕೆಗಳನ್ನು ತಪ್ಪಿಸುತ್ತಾನೆ. ಅವರು ಹಿಂದೆ ಆನಂದಿಸಿದ ಚಟುವಟಿಕೆಗಳಲ್ಲಿ ಆಸಕ್ತಿ ಅಥವಾ ಆನಂದವನ್ನು ಕಳೆದುಕೊಳ್ಳುತ್ತಾರೆ.

ವ್ಯಕ್ತಿತ್ವ ಬದಲಾವಣೆಗಳು: ವ್ಯಕ್ತಿಯ ವರ್ತನೆ ಅಥವಾ ನಡವಳಿಕೆ ಬದಲಾವಣೆಗಳು, ಅಸಾಮಾನ್ಯ ವೇಗ ಅಥವಾ ನಿಧಾನಗತಿಯೊಂದಿಗೆ ಮಾತನಾಡುವುದು. ಅಲ್ಲದೆ, ಅವರು ಇದ್ದಕ್ಕಿದ್ದಂತೆ ತಮ್ಮ ವ್ಯಕ್ತಿತ್ವದ ಬಗ್ಗೆ ಕಡಿಮೆ ಕಾಳಜಿ ವಹಿಸುತ್ತಾರೆ. 

ಆತ್ಮಹತ್ಯೆಯನ್ನು ತಡೆಯಲು ಏನೇ ಆದರೂ ನಾವು ಅವರೊಂದಿಗೆ ಇರುತ್ತೇವೆ ಎಂದು ವ್ಯಕ್ತಿಗೆ ಭರವಸೆ ನೀಡುವುದು ಅತ್ಯಗತ್ಯ. ಈ ಸೌಹಾರ್ದತೆ ಸದಾ ಪರಸ್ಪರ ಜೀವನದಲ್ಲಿ ಮುನ್ನಡೆಯಲು ಸಹಕಾರಿಯಾಗಬೇಕು. ನಾವು ನಮ್ಮ ಪ್ರೀತಿಪಾತ್ರರ ಬಗ್ಗೆ ನಮ್ಮ ಕಾಳಜಿ (Care)ಯನ್ನು ಈ ರೀತಿಯ ಮಾರ್ಗಗಳ ಮೂಲಕ ವ್ಯಕ್ತಪಡಿಸಬೇಕಾಗಿದೆ. ದುರಾಭಿಮಾನ, ಅವರೇ ಮೊದಲು ಕಾಲ್ ಮಾಡಲಿ ಎಂಬ ಭಾವನೆಯಿಂದ ಆಪ್ತರಿಂದ ದೂರವಿರುವ ತಪ್ಪು ಮಾಡಬೇಡಿ.

Follow Us:
Download App:
  • android
  • ios