Health Tips : Knee ಸರ್ಜಿರಿ ಆಗಿದ್ಯಾ? ಇಂತ ಕೆಲ್ಸವೆಲ್ಲಾ ಮಾಡೋದು ಬೇಡ ಬಿಡಿ
ಈಗಿನ ದಿನಗಳಲ್ಲಿ ಮೊಣಕಾಲು ಸರ್ಜರಿ ಸರ್ವೆಸಾಮಾನ್ಯ ಎನ್ನುವಂತಾಗಿದೆ. ಬಹುತೇಕರು ಮೊಣಕಾಲು ನೋವಿನಿಂದ ಬಳಲುತ್ತಿದ್ದಾರೆ. ಚಿಕಿತ್ಸೆ ನಂತ್ರವೂ ಗುಣವಾಗದ ನೋವಿಗೆ ಆಪರೇಷನ್ ಅನಿವಾರ್ಯವಾಗಿದೆ. ಆಪರೇಷನ್ ನಂತ್ರ ಏನು ಮಾಡ್ಬೇಕು ಎಂಬುದು ಜನರಿಗೆ ತಿಳಿದಿರಬೇಕು.
ಕಳಪೆ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಆರೋಗ್ಯ ಹದಗೆಡುತ್ತಿರೋದು ಎಲ್ಲರಿಗೂ ತಿಳಿದಿರುವ ವಿಷ್ಯ. ಇದ್ರಿಂದ ಹೃದಯ ಸಂಬಂಧಿ ಖಾಯಿಲೆ, ತೂಕ ಏರಿಕೆ ಮಾತ್ರವಲ್ಲ ಮೂಳೆಗಳಿಗೆ ಸಂಬಂಧಿಸಿದ ಕಾಯಿಲೆ ಕೂಡ ಹೆಚ್ಚಾಗ್ತಿದೆ. ಇತ್ತೀಚಿನ ದಿನಗಳಲ್ಲಿ ಅನೇಕರು ಮೊಣಕಾಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನೆಲದ ಮೇಲೆ ಕುಳಿತುಕೊಳ್ಳೋದು, ನಡೆಯೋದು, ಕುಳಿತಲ್ಲಿಂದ ಏಳೋದು ಎಲ್ಲವೂ ಕಷ್ಟವಾಗುತ್ತದೆ. ಮೊಣಕಾಲು ನೋವು ವಿಪರೀತವಾದಾಗ, ಔಷಧಿ, ಮಾತ್ರೆಗಳಿಂದ ನೋವು ಕಡಿಮೆಯಾಗ್ತಿಲ್ಲ ಎಂದಾಗ ಮೊಣಕಾಲು ಶಸ್ತ್ರ ಚಿಕಿತ್ಸೆಗೆ ಒಳಗಾಗ್ತಾರೆ.
ಮೊಣಕಾಲಿ (Knee) ನ ಶಸ್ತ್ರಚಿಕಿತ್ಸೆ (Surgery) ನಂತ್ರ ಜನರು ಗುಣವಾಯ್ತು ಎನ್ನುವ ಭ್ರಮೆಯಲ್ಲಿ ತಮ್ಮಿಷ್ಟದ ಕೆಲಸ ಮಾಡಲು ಶುರು ಮಾಡ್ತಾರೆ. ಇದ್ರಿಂದ ಯಡವಟ್ಟಾಗುತ್ತದೆ. ನೋವು ಉಲ್ಬಣಗೊಳ್ಳುತ್ತದೆ. ಸಮಸ್ಯೆ ಹೆಚ್ಚಾಗುತ್ತದೆ. ನಾವಿಂದು ಮೊಣಕಾಲಿನ ಶಸ್ತ್ರಚಿಕಿತ್ಸೆ ನಂತ್ರ ಯಾವ ಕೆಲಸ (Work) ವನ್ನು ಮಾಡ್ಬಾರದು ಎಂದು ನಿಮಗೆ ಹೇಳ್ತೇವೆ.
Breathing Tips : ಉಸಿರಾಡೋದೊಂದು ಕಲೆ, ಸರಿಯಾಗಿ ಉಸಿರಾಡುತ್ತಿದ್ದೀರಾ?
ಮೊಣಕಾಲಿನ ಶಸ್ತ್ರಚಿಕಿತ್ಸೆ ನಂತ್ರ ಈ ಕೆಲಸ ಮಾಡ್ಬೇಡಿ :
ಭಾರವಾದ ವಸ್ತುಗಳನ್ನು ಎತ್ತಬೇಡಿ : ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ನೀವು ಒಳಗಾಗಿದ್ದರೆ ಭಾರವಾದ ವಸ್ತುಗಳನ್ನು ಎತ್ತುವ ಸಹವಾಸಕ್ಕೆ ಹೋಗ್ಬೇಡಿ. ಭಾರವಾದ ವಸ್ತುವನ್ನು ಎತ್ತುವಾಗ ನಿಮ್ಮ ದೇಹದ ತೂಕ ನಿಮ್ಮ ಮೊಣಕಾಲಿನ ಮೇಲೆ ಬೀಳುತ್ತದೆ. ಇದ್ರಿಂದ ನೋವು ಉಲ್ಬಣಿಸುತ್ತದೆ. ತೂಕ ನಿಮ್ಮ ಮೊಣಕಾಲಿನ ಮೇಲೆ ಬೀಳದಂತೆ ನೀವು ನೋಡಿಕೊಳ್ಳುವುದು ಮುಖ್ಯವಾಗುತ್ತದೆ. ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿ ಯಾವುದೇ ಕಾರಣಕ್ಕೂ ಅಪಾಯದ ಕೆಲಸವನ್ನು ಮಾಡಬಾರದು. ಬೀಳುವ ಸಾಧ್ಯತೆಯಿದೆ ಎನ್ನುವ ಕೆಲಸವನ್ನು ಮಾಡುವ ಸಹವಾಸಕ್ಕೆ ಹೋಗ್ಬಾರದು.
ಓಟ, ವೇಗದ ನಡಿಗೆ ಬೇಡ : ವೇಗವಾಗಿ ನೀವು ನಡೆಯಬೇಡಿ. ಓಡುವ ಪ್ರಯತ್ನವನ್ನೂ ನೀವು ಮಾಡಬಾರದು. ಮೊಣಕಾಲನ್ನು ಹಿಗ್ಗಿಸುವ ಮತ್ತು ಬಗ್ಗಿಸುವ ಕೆಲಸ ಮಾಡಬಾರದು. ಕಾಲುಗಳನ್ನು ಮಡಿಸಿ, ನೆಲದ ಮೇಲೆ ಕುಳಿತುಕೊಳ್ಳುವುದನ್ನು ತಪ್ಪಿಸಿ. ಆದಷ್ಟು ಕುರ್ಚಿ ಮೇಲಿಯೇ ಕುಳಿತು ನೀವು ಕೆಲಸ ಮಾಡಲು ಪ್ರಯತ್ನಿಸಿ.
Health Tips: ಜಪಾನ್ ಮಂದಿ ಫಿಟ್ ಆ್ಯಂಡ್ ಫೈನ್ ಆಗಿರೋಕೆ ಕಾರಣವೇನು ಗೊತ್ತಾ?
ತುಂಬಾ ಸಮಯ ಒಂದೇ ಕಡೆ ಕುಳಿತುಕೊಳ್ಳಬೇಡಿ : ಒಂದೇ ಕಡೆ ದೀರ್ಘಕಾಲ ಕುಳಿತುಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದ್ರಲ್ಲೂ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾದ ಜನರು ತುಂಬಾ ಹೊತ್ತು ಒಂದೇ ಕಡೆ ಕುಳಿತುಕೊಳ್ಳುವುದನ್ನು ತಪ್ಪಿಸಬೇಕು. ಇದ್ರಿಂದ ರಕ್ತ ಹೆಪ್ಪುಗಟ್ಟುತ್ತದೆ. ದೀರ್ಘಕಾಲ ಕುಳಿತುಕೊಳ್ಳುವುದು ಕಾಲಿನ ಕೆಳಭಾಗದಲ್ಲಿರುವ ದ್ರವದ ಮೇಲೆ ಪರಿಣಾಮ ಬೀರುತ್ತದೆ. ಇದು ಪಾದಗಳ ಊತಕ್ಕೆ ಕಾರಣವಾಗುತ್ತದೆ. ಮೊಣಕಾಲಿನ ಶಸ್ತ್ರಚಿಕಿತ್ಸೆಯ ನಂತ್ರ ರೆಸ್ಟ್ ಮಾಡುವಂತೆ ವೈದ್ಯರು ಸಲಹೆ ನೀಡ್ತಾರೆ. ಒಂದು ತಿಂಗಳ ಕಾಲ ವಿಶ್ರಾಂತಿ ಅಗತ್ಯವಿರುತ್ತದೆ. ನಂತ್ರ ನಿಧಾನವಾಗಿ ಸಣ್ಣಪುಟ್ಟ ಕೆಲಸ ಮಾಡಲು ಸಲಹೆ ನೀಡಲಾಗುತ್ತದೆ. ನೀವು ಈಗಷ್ಟೇ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ, 40 ರಿಂದ 60 ನಿಮಿಷಗಳಿಗಿಂತ ಹೆಚ್ಚು ಕಾಲ ಒಂದೇ ಕಡೆ ಕುಳಿತುಕೊಳ್ಳಬೇಡಿ. ಒಂದೇ ಕಡೆ ಕುಳಿತುಕೊಳ್ಳುವುದು ಅನಿವಾರ್ಯ ಎನ್ನುವವರು ನೀವಾಗಿದ್ದರೆ ನಿಮ್ಮ ಕಾಲನ್ನು ಇನ್ನೊಂದು ಕುರ್ಚಿಯ ಮೇಲೆ ಇಟ್ಟುಕೊಳ್ಳಲು ಪ್ರಯತ್ನಿಸಿ.
ವ್ಯಾಯಾಮದ ಸಹವಾಸ ಬೇಡ : ಮೊಣಕಾಲಿನ ಶಸ್ತ್ರಚಿಕಿತ್ಸೆ ನಂತ್ರ ವೈದ್ಯರ ಸಲಹೆಯಿಲ್ಲದೆ ವ್ಯಾಯಾಮ ಮಾಡಬೇಡಿ. ಮೊಣಕಾಲು ಸರಿಯಾಯ್ತು ಎನ್ನುವ ಉತ್ಸಾಹದಲ್ಲಿ ನೀವು ಮೊಣಕಾಲಿಗೆ ಸಂಬಂಧಿಸಿದ ವ್ಯಾಯಾಮಗಳನ್ನು ಮಾಡಿದ್ರೆ ಮೊಣಕಾಲಿನ ಮೇಲೆ ಒತ್ತಡ ಬಿದ್ದು, ಮಾಡಿದ ಶಸ್ತ್ರಚಿಕಿತ್ಸೆ ವ್ಯರ್ಥವಾಗುತ್ತದೆ.
ಈ ಕೆಲಸವನ್ನು ಮಾಡಬೇಡಿ : ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ನೀವು ಒಳಗಾಗಿದ್ದರೆ, ಮೊಣಕಾಲಿನ ಮೇಲೆ ಒತ್ತಡ ಬೀಳುವ ಯಾವುದೇ ಕೆಲಸವನ್ನು ಮಾಡಬೇಡಿ. ಫುಟ್ಬಾಲ್, ಬಾಸ್ಕೆಟ್‌ಬಾಲ್, ಹಾಕಿಯಂತಹ ಆಟಗಳನ್ನು ಆಡಬೇಡಿ. ಮೊಣಕಾಲಿನ ಶಸ್ತ್ರಚಿಕಿತ್ಸೆಯ ನಂತರ ವೈದ್ಯರ ಸಲಹೆ ಪಡೆದು ಸೈಕ್ಲಿಂಗ್ ಮಾಡಿ.