ಮತ್ತೆ ಕೊರೋನಾ ಕಾಟ, 134 ದಿನದ ಬಳಿಕ 10,000 ಗಡಿ ದಾಟಿದ ಸಕ್ರಿಯ ಕೋವಿಡ್‌ ಕೇಸ್‌

ಎರಡು ವರ್ಷಕ್ಕಿಂತಲೂ ಅಧಿಕ ಸಮಯಗಳ ಕಾಲ ಜನರನ್ನು ಕಂಗೆಡಿಸಿದ್ದ ಕೊರೋನಾ ಪ್ರಭಾವ ಮತ್ತೆ ಹೆಚ್ಚುತ್ತಿದೆ. ದಿನದಿಂದ ದಿನಕ್ಕೆ ಹೆಚ್ಚೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ನಿನ್ನೆ 1,805 ಹೊಸ ಕೋವಿಡ್‌ ಪ್ರಕರಣ ದಾಖಲಾಗಿವೆ. ಇದರ ಬೆನ್ನಲ್ಲೇ ಸಕ್ರಿಯ ಪ್ರಕರಣಗಳ ಸಂಖ್ಯೆ 10,300ಕ್ಕೆ ಏರಿಕೆಯಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Active covid cases crosses 10,000 after 134 days in India Vin

ನವದೆಹಲಿ: ದೇಶದಲ್ಲಿ ಮತ್ತೆ ಕೋವಿಡ್‌ ಸಾಂಕ್ರಾಮಿಕ ಹಾವಳಿ ಹೆಚ್ಚುತ್ತಿದ್ದು ಸೋಮವಾರ 1,805 ಹೊಸ ಕೋವಿಡ್‌ ಪ್ರಕರಣ ದಾಖಲಾಗಿವೆ. ಇದರ ಬೆನ್ನಲ್ಲೇ ಸಕ್ರಿಯ ಪ್ರಕರಣಗಳ ಸಂಖ್ಯೆ 10,300ಕ್ಕೆ ಏರಿಕೆಯಾಗಿದೆ. 134 ದಿನಗಳ ಬಳಿಕ ಕೋವಿಡ್‌ 10 ಸಾವಿರದ ಗಡಿ ದಾಟಿದೆ. ಇದೇ ವೇಳೆ ಚಂಡೀಗಢ, ಗುಜರಾತ್‌, ಹಿಮಾಚಲ ಪ್ರದೇಶ, ಉತ್ತರ ಪ್ರದೇಶಗಳಲ್ಲಿ ತಲಾ 1 ಹಾಗೂ ಕೇರಳದಲ್ಲಿ 2 ಸೇರಿ ಒಟ್ಟು 6 ಸೋಂಕಿತರು ಸಾವನ್ನಪ್ಪಿದ್ದಾರೆ. ದೈನಂದಿನ ಪಾಸಿಟಿವಿಟಿ 3.19ರಷ್ಟುಮತ್ತು ವಾರದ ಪಾಸಿಟಿವಿಟಿ ದರವು 1.39ರಷ್ಟುದಾಖಲಾಗಿವೆ. ಸೋಂಕಿತರ ಚೇತರಿಕೆ ಪ್ರಮಾಣವು 98.79ರಷ್ಟಿದ್ದು ಈವರೆಗೆ ದೇಶದಲ್ಲಿ ಒಟ್ಟು 4.47 ಕೋಟಿ ಜನರು ಕೋವಿಡ್‌ ಸೋಂಕಿಗೆ ತುತ್ತಾಗಿದ್ದಾರೆ. ಹಾಗೂ 220.65 ಕೋಟಿ ಡೋಸ್‌ ಕೋವಿಡ್‌ ಲಸಿಕೆಗಳ (Vaccine) ವಿತರಣೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ (Health ministry) ತಿಳಿಸಿದೆ.

ಕೋವಿಡ್‌ ಸನ್ನದ್ಧತೆ ಟೆಸ್ಟ್‌ಗೆ ಏ.10, 11ಕ್ಕೆ ದೇಶಾದ್ಯಂತ ಅಣಕು ಡ್ರಿಲ್‌
ಕೋವಿಡ್‌ ಪ್ರಕರಣಗಳು ಹಾಗೂ ಜ್ವರಪೀಡಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳ ಸನ್ನದ್ಧತೆಯನ್ನು ಪರೀಕ್ಷಿಸಲು ಏ.10 ಮತ್ತು 11ರಂದು ರಾಷ್ಟ್ರವ್ಯಾಪಿ ಅಣಕು ಕಾರ್ಯಾಚರಣೆ (Mock drill) ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಆಸ್ಪತ್ರೆಗಳಲ್ಲಿ ಔಷಧ, ಹಾಸಿಗೆ, ವೈದ್ಯಕೀಯ ಉಪಕರಣ ಹಾಗೂ ವೈದ್ಯಕೀಯ ಆಕ್ಸಿಜನ್‌ ಲಭ್ಯತೆ ಕುರಿತು ಪರಿಶೀಲನೆ ನಡೆಸಲಾಗುತ್ತದೆ. ಈ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ಭಾರತೀಯ ವೈದ್ಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಜಂಟಿ ಸಲಹಾವಳಿಯನ್ನು ಹೊರಡಿಸಿವೆ.

6 ತಿಂಗಳಲ್ಲಿ ಎಚ್‌3ಎನ್‌2 ವೈರಸ್ ಹೊಸ ಹೊಸ ರೂಪದಲ್ಲಿ ಪ್ರತ್ಯಕ್ಷ: ರೂಪಾಂತರದ ಕಾರಣದಿಂದ ಹೆಚ್ಚು ಮಾರಕ ಎಂದ ತಜ್ಞರು

ಮಾ.27ರಂದು ರಾಜ್ಯಗಳ ಜತೆ ವರ್ಚುವಲ್‌ ಸಭೆ ಆಯೋಜನೆಯಾಗಿದ್ದು, ಅಂದು ಅಣಕು ಕಾರ್ಯಾಚರಣೆಗೆ ಸಂಬಂಧಿಸಿದ ವಿವರಗಳನ್ನು ನೀಡಲಾಗುತ್ತದೆ ಎಂದು ಸಲಹಾವಳಿ ಹೇಳಿದೆ. ಕೆಲವು ರಾಜ್ಯಗಳಲ್ಲಿ ಕೋವಿಡ್‌ ಪರೀಕ್ಷೆ ಕುಸಿದಿದೆ. ಪ್ರತಿ 10 ಲಕ್ಷ ಜನರಿಗೆ 140 ಪರೀಕ್ಷೆಗಳು ನಡೆಯಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾನದಂಡ ನಿಗದಿಗೊಳಿಸಿದೆ. ಆದರೆ ಈಗ ನಡೆಯುತ್ತಿರುವ ಪರೀಕ್ಷೆಗಳ ಪ್ರಮಾಣ ಆ ಮಾನದಂಡಕ್ಕೆ ಅನುಗುಣವಾಗಿಲ್ಲ ಎಂದು ಸಲಹಾವಳಿಯಲ್ಲಿ ಸರ್ಕಾರ ಬೇಸರ ವ್ಯಕ್ತಪಡಿಸಿದೆ.

ನಾಯಿ ಮಾಂಸದಿಂದ ಹರಡಿತಾ ಕೊರೋನಾ? 
ಬರೋಬ್ಬರಿ ಎರಡು ವರ್ಷಗಳ ಕಾಲ ಕೊರೋನಾ ವೈರಸ್ ಎಂಬ ಮಹಾಮಾರಿ ಜಗತ್ತನ್ನೇ ತಲ್ಲಣಗೊಳಿಸಿತ್ತು. ಶರವೇಗದಲ್ಲಿ ಹರಡಿದ ವೈರಸ್ ಕೋಟ್ಯಾಂತರ ಮಂದಿಯ ಸಾವಿಗೆ ಕಾರಣವಾಯಿತು. ಅದೆಷ್ಟೋ ಮಂದಿ ಹಸಿವು. ಚಿಕಿತ್ಸೆಯಿಲ್ಲದೆ ಸತ್ತರು. ಇವತ್ತಿಗೂ ಕೋವಿಡ್ ಸೋಂಕಿನ ಪರಿಣಾಮಗಳು ಕಡಿಮೆಯಾಗಿಲ್ಲ. ಹೊಸ ಹೊಸ ರೂಪಾಂತರಗಳು ಜನರನ್ನು ಕಂಗೆಡಿಸುತ್ತಲೇ ಇವೆ. ಚೀನಾದ ವುಹಾನ್‌ನ ಲ್ಯಾಬ್‌ನಿಂದ ವೈರಸ್ ಸೋರಿಕೆಯಾಗಿದೆ ಎಂದು ಈ ಹಿಂದೆ ಹೇಳಲಾಗ್ತಿತ್ತು. ಸದ್ಯ ಅಂತರಾಷ್ಟ್ರೀಯ ತಜ್ಞರ ತಂಡ ಚೀನಾದ ವುಹಾನ್ ಪ್ರಾಂತದ ಸಮುದ್ರಖಾದ್ಯ ಮಾರುಕಟ್ಟೆಯಲ್ಲಿ ಅಕ್ರಮವಾಗಿ ಮಾರಾಟವಾಗುವ ಸೋಂಕಿತ ರಕೂನ್ ತಳಿಯ ನಾಯಿ ಮಾಂಸದಿಂದ ಕೋವಿಡ್ ಸೋಂಕು ಹರಡಿರುವ ಸಾಧ್ಯತೆಯಿದೆ ಎಂದು ವರದಿ ಮಾಡಿದೆ.

ಕೋವಿಡ್‌ ನಂತರ ಹೃದಯಸ್ತಂಭನದಿಂದ ದೇಶದಲ್ಲಿ ಸಾವು 15% ಹೆಚ್ಚಳ: ವೈದ್ಯರು

ರಕೂನ್‌ ಪ್ರಾಣಿಯ ಮಾಂಸದಲ್ಲಿ ಸಾರ್ಸ್‌-ಕೊವ್‌-2 ವೈರಸ್‌ ಪತ್ತೆ
ವುಹಾನ್‌ ಮಾರುಕಟ್ಟೆಯಿಂದ 2020ರ ಜನವರಿಯಲ್ಲಿ ಅನುವಂಶಿಕ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಹುವಾನನ್ ಸಮುದ್ರಖಾದ್ಯ ಮಾರುಕಟ್ಟೆ ಮತ್ತು ಸುತ್ತಲಿನ ಪ್ರದೇಶಗಳಿಂದ ತೆಗೆದ ಸ್ರಾವ(ಗಂಟಲುದ್ರವ ಇತ್ಯಾದಿ)ದ ಅನುವಂಶಿಕ ಡೇಟಾವನ್ನು ಅಧ್ಯಯನ ತಂಡ ಸಂಗ್ರಹಿಸಿದೆ. ಅದನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಇಲ್ಲಿ ಮಾರಾಟ ಮಾಡುತ್ತಿದ್ದ ರಕೂನ್‌ ಪ್ರಾಣಿಯ ಮಾಂಸದಲ್ಲಿ ಸಾರ್ಸ್‌-ಕೊವ್‌-2 ವೈರಸ್‌ ಪತ್ತೆಯಾಗಿದೆ ಎಂದು ಅಂತಾರಾಷ್ಟ್ರೀಯ ತಜ್ಞರ ತಂಡವು ತಿಳಿಸಿದೆ.

Latest Videos
Follow Us:
Download App:
  • android
  • ios