6 ತಿಂಗಳಲ್ಲಿ ಎಚ್‌3ಎನ್‌2 ಹೊಸ ಹೊಸ ಅವತಾರ ಕಾಣುತ್ತಿದ್ದು, ಅರ್ಧ ವರ್ಷದಲ್ಲಿ ವೈರಸ್‌ ಸಾಕಷ್ಟು ಮಾದರಿ ಬದಲಿಸಿದ್ದು, ಲಾಕ್‌ಡೌನ್‌ನಿಂದ ಜನರ ರೋಗನಿರೋಧಕ ಶಕ್ತಿಯೂ ಕುಂಠಿತವಾಗಿದೆ. ಇದರಿಂದ ಶ್ವಾಸಕೋಶದ ಸೋಂಕು, ಉಸಿರಾಟ ಸಮಸ್ಯೆಗೆ ನಾಂದಿ ಹಾಡುತ್ತದೆ. 

ನವದೆಹಲಿ (ಮಾರ್ಚ್ 12, 2023): ‘ದೇಶದಲ್ಲಿ ಮೊದಲ ಬಾರಿ 2 ಸಾವಿಗೆ ಕಾರಣವಾಗಿರವ ಎಚ್‌3ಎನ್‌2 ಇನ್‌ಫ್ಲುಯೆಂಜಾ, ಗಮನಾರ್ಹ ವೈದ್ಯಕೀಯ ಸಮಸ್ಯೆ ಉಂಟು ಮಾಡುತ್ತಿದೆ. ವಿಶೇಷವಾಗಿ ಶ್ವಾಸಕೋಶದ ಸೋಂಕು ಉಂಟು ಮಾಡುತ್ತಿದೆ. ಕಳೆದ 6 ತಿಂಗಳಲ್ಲಿ ತನ್ನ ಮಾದರಿಯನ್ನು ಅದು ಅನಿರೀಕ್ಷಿತವಾಗಿ ಹಾಗೂ ಗಮನಾರ್ಹವಾಗಿ ಬದಲಾಯಿಸಿದೆ. ಇದಲ್ಲದೆ ಕೋವಿಡ್‌ ಲಾಕ್‌ಡೌನ್‌ ಕಾರಣ ಜನರ ರೋಗನಿರೋಧಕ ಶಕ್ತಿಯೂ ಕುಸಿದಿದೆ. ಇದು ಎಚ್‌3ಎನ್‌2 ಹಾವಳಿ ದಿಢೀರ್‌ ಏರಿಕೆಗೆ ಕಾರಣ ಇರಬಹುದು’ ಎಂದು ತಜ್ಞರು ಎಚ್ಚರಿಸಿದ್ದಾರೆ.

Add Asianetnews Kannada as a Preferred SourcegooglePreferred

ಕರ್ನಾಟಕ (Karnataka) ಹಾಗೂ ಹಾಸನದಲ್ಲಿ (Haasan) ಈ ಎಚ್‌3ಎನ್‌2 ವೈರಸ್‌ (H3N2 Virus) ಸಾವಿಗೆ ನಾಂದಿ ಹಾಡಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ತಜ್ಞ ಡಾ. ಧೀರೇನ್‌ ಗುಪ್ತಾ, ‘ಕಳೆದ 6 ತಿಂಗಳ ಅವಧಿಯಲ್ಲಿ ವೈರಸ್‌ನ ಮಾದರಿಯು ಗಮನಾರ್ಹವಾಗಿ ಮತ್ತು ಅನಿರೀಕ್ಷಿತವಾಗಿ ಬದಲಾಗಿದೆ. ಸಾಮಾನ್ಯವಾಗಿ, ಇನ್‌ಫ್ಲುಯೆಂಜಾವನ್ನು (Influenza) ಆಸ್ಪತ್ರೆಗೆ ಕಾರಣವಾಗುವ ನಂ.1 ವೈರಸ್‌ ಎಂದು ನಾವು ನಿರೀಕ್ಷಿಸುತ್ತೇವೆ. ಈ ಬಾರಿ ಎಚ್‌3ಎನ್‌2 ಎಂಬ ವೈರಸ್‌ ಉಪತಳಿಯು ಬಹಳಷ್ಟು ಉಸಿರಾಟದ ಸೋಂಕುಗಳಿಗೆ ಕಾರಣವಾಗಿದೆ’ ಎಂದರು.

ಇದನ್ನು ಓದಿ: ಎಚ್‌3ಎನ್‌2 ಕೂಡ ಕೋವಿಡ್‌ ರೀತಿಯಲ್ಲೇ ಹಬ್ಬುತ್ತೆ: ತಜ್ಞರ ಎಚ್ಚರಿಕೆ

ಎಚ್‌3ಎನ್‌2 ವೈರಸ್‌ ಸಾಮಾನ್ಯವಾಗಿ ಹಂದಿಗಳಲ್ಲಿ (Pigs) ಕಾಣಿಸಿಕೊಳ್ಳುತ್ತದೆ. ಈಗ ಮಾನವರಿಗೂ ಇದು ವ್ಯಾಪಿಸಿದೆ. ಈ ವೈರಸ್‌ಗಳು ಜನರಿಗೆ ಸೋಂಕು ತಗುಲಿಸಿದಾಗ ಅವುಗಳನ್ನು ವೇರಿಯಂಟ್‌ ವೈರಸ್‌ಗಳು ಎಂದು ಕರೆಯಲಾಗುತ್ತದೆ. ‘ಆದರೆ ಇದು ಕೋವಿಡ್‌ನಷ್ಟು (COVID) ಅಪಾಯಕಾರಿ ಆಗಲಾದರು ಎಂಬುದು ನಮ್ಮ ಭಾವನೆ. ಏಕೆಂದರೆ ಒಟ್ಟಾರೆ ಎಚ್‌3ಎನ್‌2 ಸೋಂಕಿತರಲ್ಲಿ ಆಸ್ಪತ್ರೆಗೆ ಒಟ್ಟು ದಾಖಲಾದವರು ಕೇವಲ ಶೇ. 5 ರಷ್ಟು ಮಾತ್ರ. ಆದರೂ ವೃದ್ಧರು, ಪೂರ್ವರೋಗಪೀಡಿತರಿಗೆ ಈ ಸೋಂಕಿನ ಬಗ್ಗೆ ಎಚ್ಚರದಿಂದ ಇರಬೇಕು, ಕೋವಿಡ್‌ ಕಾಲದಲ್ಲಿ ಯಾವ ಮುನ್ನೆಚ್ಚರಿಕೆ ಕೈಗೊಳ್ಳಲಾಗಿತ್ತೋ ಆ ಕ್ರಮ ಜರಿಗಿಸಬೇಕು’ ಎಂದು ತಜ್ಞರು ಅಭಯ ನೀಡಿದರು.

ಹಿಂದೆ ಲಾಕ್‌ಡೌನ್‌ ಹಾಕಿದ್ದು ಹಾಗೂ ನಿರಂತರ ಮಾಸ್ಕ್ ಧರಿಸಿದ್ದು- ಈ ಎರಡೂ ಮುನ್ನೆಚ್ಚರಿಕೆಗಳ ಕಾರಣ ವೈರಸ್‌ಗಳು ಆಗ ಮುನುಷ್ಯರಿಗೆ ತಗುಲಿರಲಿಲ್ಲ. ಮನೆಯಿಂದ ಹೊರಬೀಳದೇ ವೈರಸ್‌ಗಳಿಗೆ ಎಕ್ಸ್‌ಪೋಸ್‌ ಆಗದ ಕಾರಣ ಮನುಷ್ಯನ ರೋಗನಿರೋಧಕ ಶಕ್ತಿ ಕೂಡ ಕುಂದಿದೆ. ಇದೂ ಕೂಡ ಈಗ ಎಚ್‌3ಎನ್‌2 ಹಾವಳಿ ದಿಢೀರ್‌ ಹೆಚ್ಚಾಗಲು ಕಾರಣ ಇರಬಹುದು ಎಂದರು.

ಇದನ್ನೂ ಓದಿ: H3N2 ವೃದ್ಧರು, ಮಕ್ಕಳಿಗೆ ಹೆಚ್ಚು ಅಪಾಯಕಾರಿ, ಸಾವಿನ ಪ್ರಮಾಣ ಕಡಿಮೆ, ಆದರೆ ನಿರ್ಲಕ್ಷ್ಯ ಬೇಡ