ನಿನ್ನೆ ಇಡೀ ಜಗತ್ತಿನಲ್ಲಿ ಯೋಗದ ಬಗ್ಗೆ ಮಾತುಕತೆ ಹಾಗೂ ಯೋಗಾಚರಣೆ. ಈ ನಡುವೆಯೇ ನಗ್ನ ಯೋಗ ಎಂಬುದು ಟ್ರೆಂಡ್‌ ಆಗ್ತಿದೆ, ಅದನ್ನು ಆಚರಿಸುವವರು ಹೆಚ್ಚಾಗುತ್ತಿದ್ದಾರೆ!  

ಆಕೆ ನ್ಯೂಯಾರ್ಕಿನ ನಗ್ನ ಯೋಗ ಅಲಿಯಾಸ್ ನ್ಯೂಡ್‌ ಯೋಗ ಪಂಥಧ ಶಿಷ್ಯೆ. ಸಮುದ್ರ ತೀರಕ್ಕೆ ಬಂದು ಮೈಮೇಲಿದ್ದ ದಿರಸುಗಳನ್ನೆಲ್ಲ ಕಿತ್ತು ಒಂದು ಬದಿಗಿಟ್ಟು, ಶವಾಸನ, ವೃಕ್ಷಾಸನ, ಶೀರ್ಷಾಸನ, ಸರ್ವಾಂಗಾಸನ ಇತ್ಯಾದಿಗಳನ್ನು ಮಾಡುತ್ತಾಳೆ. ಹಾದಿಹೋಕರು ಆಕೆಯನ್ನೇ ಬೆರಗುಗಣ್ಣುಗಳಿಂದ ನೋಡುತ್ತಾರೆ. ಫಾರಿನ್‌ನ ಬೀಚ್‌ಗಳಲ್ಲಿ ಬಿಳಿಯರು ವಿಟಿಮಿನ್ ಡಿ ಪಡೆಯಲು ನಗ್ನವಾಗಿ ಬಿಸಿಲಿಗೆ ಬಿದ್ದುಕೊಳ್ಳುವುದು ಸಾಮಾನ್ಯ. ಆದರೆ ಹಾಗೇ ಬಿಸಿಲಿನಲ್ಲಿ ಯೋಗ ಮಾಡುವವರು ಕಡಿಮೆ. ಹಾಗೆ ನಗ್ನ ಯೋಗ ಅಥವಾ ನ್ಯೂಡ್‌ ಯೋಗ ಎಂಬುದೊಂದು ಟ್ರೆಂಡ್‌. ನ್ಯೂಯಾರ್ಕಿನಲ್ಲಿ ಇದನ್ನು ಕಲಿಸುವ ಒಂದು ಸ್ಕೂಲ್ ಅಥವಾ ಪಂಥವೇ ಇದೆ. ಇಲ್ಲಿ ಹತ್ತಾರು ಮಂದಿ ಪ್ರತಿದಿನ ಸೇರಿ ಮುಕ್ತವಾಗಿ ಯೋಗಾಸನಗಳನ್ನು ಕಲಿಯುತ್ತಾರೆ.

ಇನ್‌ಸ್ಟಾಗ್ರಾಮ್‌ ಸಾಮಾಜಿಕ ಜಾಲತಾಣಕ್ಕೆ ನೀವು ಹೋದರೆ ಅಲ್ಲಿ ನ್ಯೂಡ್‌ ಯೋಗ ಗರ್ಲ್‌ ಎಂಬ ಅಕೌಂಟ್‌ ಒಂದು ಇದೆ. ಇದು ಒಬ್ಬಾಕೆ ನಗ್ನ ಯುವತಿ ಮಾಡುವ ಯೋಗ ಭಂಗಿಗಳಿಗೆ ಸಂಬಂಧಿಸಿದ ಅಕೌಂಟ್‌. ಈಕೆ ಯಾರೆಂಬುದು ಯಾರಿಗೂ ಗೊತ್ತಿಲ್ಲ. ಆದರೆ ಪಳಗಿದ ಮಾಡೆಲ್‌ ಎಂಬುದು ಗೊತ್ತಾಗುತ್ತದೆ. ಯಾವುದೇ ಯೋಗ ಗುರುವನ್ನೂ ನಾಚಿಸುವಂಥ ಕಠಿಣವಾದ ಯೋಗ ಭಂಗಿಗಳನ್ನು ಸಲೀಸಾಗಿ ಮಾಡುತ್ತಾಳೆ. ಹಾಗಂತ ಈಕೆಯ ದೇಹದ ಖಾಸಗಿ ಭಾಗಗಳು ಪ್ರದರ್ಶಿತವಾಗುತ್ತವೆ ಎಂದೇನಲ್ಲ. ಅವುಗಳು ಪೂರ್ತಿಯಾಗಿ ಕಾಣದಂತೆ ಮರೆಮಾಚುವ ಕಲೆ ಈ ಭಂಗಿಗಳಲ್ಲೆ ಆಕೆಗೆ ಸಿದ್ಧಿಸಿದೆ. ಈ ಭಂಗಿಗಳು ಯೋಗದ ಬಗ್ಗೆ ಆಕರ್ಷಣೆ ಉಂಟುಮಾಡುವಂತಿವೆ. ಈ ಹುಡುಗಿಯ ನಗ್ನ ದೇಹದ ಸುಪುಷ್ಟತೆ, ಥಳಥಳಿಸುವ ಆರೋಗ್ಯಕ್ಕೂ ನಾವು ಮೆಚ್ಚುಗೆ ಸೂಚಿಸುವಂತೆ ಇವೆ. ಈಕೆ ಇನ್‌ಸ್ಟಗ್ರಾಮ್‌ನಲ್ಲಿ ಈಗ ಎಲ್ಲರ ಹಾಟ್‌ ಫೇವರಿಟ್‌.

View post on Instagram

ಈಕೆ ಬರೆದುಕೊಂಡಿರುವುದು ಹೀಗೆ: ಯೋಗ ನನಗೆ ಅತಿ ಅಪರೂಪದ ಸ್ವಾತಂತ್ರ್ಯವನ್ನು ಕೊಡುತ್ತದೆ. ಎಲ್ಲ ಒತ್ತಡಗಳಿಂದ, ಬೇಡಿಕೆಗಳಿಂದ, ನಿಯಮಗಳಿಂದ, ಶಿಸ್ತುಗಳಿಂದ, ನಿರೀಕ್ಷೆಗಳಿಂದ ನನ್ನನ್ನು ಪಾರು ಮಾಡುತ್ತದೆ. ನಿತ್ಯವೂ ನಾನು ಯೋಗ ಮಾಡುವಾಗ ಆರೋಗ್ಯದ ಫೀಲ್‌ ಆಗುತ್ತದೆ. ನಾನು ವಿಶ್ವದೊಂದಿಗೆ ಒಂದಾದ ಹಾಗೆ ಅನಿಸುತ್ತದೆ.

ಸ್ಥೂಲಕಾಯ ಇರುವವರು ಮಾಡಲೇಬೇಕಾದ 10 ಆಸನಗಳು!

ನಾನು ಈ ಮೊದಲು ಸೋಲಿಗೆ, ಇನ್ನೊಬ್ಬರ ವ್ಯಂಗ್ಯಕ್ಕೆ, ನನ್ನ ವೈಫಲ್ಯಗಳಿಗೆ, ಸಿಹಿತಿಂಡಿಗೆ, ಬೊಜ್ಜಿಗೆ ಎಲ್ಲದಕ್ಕೂ ಹೆದರುತ್ತಿದ್ದೆ. ನಿರೀಕ್ಷೆಗಳನ್ನು ಈಡೇರಿಸಲಾಗದ ಭಯ ಕಾಡುತ್ತಿತ್ತು. ಅಪೂರ್ಣತೆ, ಶ್ರೇಷ್ಠತೆಯನ್ನು ಸಾದಿಸಲಾಗದ ಅಪೂರ್ಣತೆ ನನ್ನನ್ನು ಕಾಡುತ್ತಿತ್ತು. ಈಗ ಅದೆಲ್ಲವೂ ಮರೆಯಾಗಿವೆ. ನಾನು ಯೋಗ ಮಾಡಲು ಶುರು ಮಾಡಿದಾಗಿನಿಂದ, ನಾನು ಹೆಚ್ಚು ಹೆಚ್ಚು ಗಟ್ಟಿಯಾಗುತ್ತಿದ್ದೇನೆ. ಇನ್ನಷ್ಟು ಆರೋಗ್ಯಯುತವಾದಂತೆ, ಇನ್ನಷ್ಟು ಬಲಿಷ್ಠವಾದಂತೆ, ಮತ್ತಷ್ಟು ಶಾಂತಿ ಹಾಗೂ ವಿವೇವನ್ನು ಗಳಿಸಿದಂತೆ ನನಗೆ ಅನಿಸುತ್ತಿದೆ. ಒತ್ತಡಗಳು ಕಡಿಮೆಯಾಗಿವೆ. ಜೀವನವನ್ನು ಜೀವನದ ಸುಂದರ ಗಳಿಗೆಗಳನ್ನು ಹೆಚ್ಚು ಹೆಚ್ಚಾಗಿ ಗಳಿಸುತ್ತಿರುವಂತೆ ಭಾಸವಾಗುತ್ತಿದೆ. ಇದು ಯೋಗ ನನಗೆ ನೀಡಿದ ಕೊಡುಗೆ.

10 ನಿಮಿಷ ಸೂರ್ಯ ನಮಸ್ಕಾರದಿಂದ ಕೊರೋನಾ ಕಾಲದ ಟೆನ್ಷನ್‌ ಕಡಿಮೆ!

ನಗ್ನ ಯೋಗ ಹುಡುಗಿಯಿಂದ ಸ್ಫೂರ್ತಿ ಪಡೆದ ಇನ್ನೂ ಹಲವರು ಇದೇ ರೀತಿ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ನಗ್ನ ದೇಹದ ಯೋಗ ಭಂಗಿಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಎಲ್ಲವೂ ನಿಬ್ಬೆರಗುಗೊಳಿಸುವಂತೆಯೇ ಇವೆ. ಆದರೆ ಯಾವುದೂ ನ್ಯೂಡ್‌ ಯೋಗ ಗರ್ಲ್‌ನಷ್ಟು ಗ್ಲಾಮರಸ್‌ ಆಗಿಲ್ಲ.

ಉಸಿರಾಟ ನಿಯಂತ್ರಣಕ್ಕೆ 4 ಅತ್ಯುತ್ತಮ ಪ್ರಾಣಾಯಾಮಗಳು!