ಸ್ಥೂಲಕಾಯ ಇರುವವರು ಮಾಡಲೇಬೇಕಾದ 10 ಆಸನಗಳು!

ಬೊಜ್ಜು ಆಧುನಿಕ ಸಮಸ್ಯೆ. ಮಿತ ಆಹಾರ, ವ್ಯಾಯಾಮಗಳ ನಂತರವೂ ಬೊಜ್ಜು ಕರಗದೇ ಇದ್ದಾಗ ಕಂಗಾಲಾಗುವವರೇ ಹೆಚ್ಚು. ವೈದ್ಯರಂತೂ ಕುಳಿತಲ್ಲೇ ಕುಳಿತಿರಬೇಡಿ ಅಂತೆಲ್ಲ ಹೇಳುತ್ತಿರುತ್ತಾರೆ. ಯೋಗ ಮಾಡಿ ಅನ್ನುತ್ತಾರೆ. ಮೊದಲೇ ಸ್ಥೂಲಕಾಲ. ಮೈ ಬಗ್ಗಿಸಿ ಯೋಗ ಮಾಡುವುದು ಹೇಗೆ? ಇಲ್ಲಿವೆ ಬೊಜ್ಜಿನವರೂ ಮಾಡಬಹುದಾದ ಸರಳವಾದ 10 ಆಸನಗಳು.

10 best yoga postures for weight loss

1. ತ್ರಿಕೋನಾಸನ

ಎರಡು ಕಾಲುಗನ್ನು ತ್ರಿಕೋನಾಕಾರದಲ್ಲಿ ಅಗಲಿಸಿ, ಮೈಯನ್ನು ಬಾಗಿಸಿಬೇಕು. ಒಂದು ಕೈಯನ್ನು ನೆಲಕ್ಕೆ ಚಾಚಿ ಇನ್ನೊಂದು ಕೈಯನ್ನು ಆಗಸಕ್ಕೆ ಎತ್ತಬೇಕು. ಈ ಆಸನ ಜೀರ್ಣ ಕ್ರಿಯೆಯನ್ನು ಉತ್ತಮಗೊಳಿಸುವುದರೊಂದಿಗೆ ಹೊಟ್ಟೆಬೊಜ್ಜನ್ನು ಕರಗಿಸುತ್ತದೆ. ಕೈ ಕಾಲುಗಳ ಸ್ನಾಯುಗಳಿಗೆ ಹೆಚ್ಚಿನ ಒತ್ತಡ ಬೀಳುವುದರಿಂದ ಅನಗತ್ಯ ಬೊಜ್ಜುಗಳು ಕರಗುತ್ತವೆ.

ಉಸಿರಾಟ ನಿಯಂತ್ರಣಕ್ಕೆ 4 ಅತ್ಯುತ್ತಮ ಪ್ರಾಣಾಯಾಮಗಳು!

2. ಅಧೋಮುಖ ಶವಾಸನ

ಕಾಲುಗಳನ್ನು ಜೋಡಿಸಿ, ಮಂಡಿ ಮಡಚದಂತೆ ದೇಹವನ್ನು ನೆಲಕ್ಕೆ ಬಾಗಿಸಬೇಕು. ಕೈಗಳನ್ನು ನೆಲಕ್ಕೆ ತಾಗಿಸಿ ದೇಹದ ಭಾರವನ್ನು ಕೈ ಮೇಲೆ ಬಿಡಬೇಡಕು. ಈ ಆಸನ ಕೈ, ಸೊಂಟ ಹಾಗೂ ತೊಡೆಯ ಸ್ನಾಯುಗಳನ್ನು ಗಟ್ಟಿಗೊಳಿಸುತ್ತದೆ. ರಟ್ಟೆ, ಭುಜಗಳಿಗೆ ಶಕ್ತಿ ಬರುವುದಲ್ಲದೇ, ತೊಡೆಯ ಸ್ನಾಯುಗಳು ಬಲವಾಗುತ್ತದೆ. ಬೆನ್ನು ನೋವಿಗೆ ರಾಮಬಾಣವಾಗಿರುವ ಈ ಆಸನದಿಂದ ಅಸ್ತಮದಿಂದ ಮುಕ್ತಿ ಪಡೆಯಬಹುದು.

10 best yoga postures for weight loss

3.ಸರ್ವಜ್ಞಾಸನ

ಮಲಗಿದ್ದಲಿ ನಿಮ್ಮ ದೇಹವನ್ನು ಲಂಬಕೋನದ ಆಕಾರದಲ್ಲಿ ಪೂರ್ಣವಾಗಿ ಮೇಲೆತ್ತಬೇಕು. ಕತ್ತು ಹಾಘೂ ಭುಜ ನೆಲದ ಮೇಲಿರಬೇಕು. ಸೊಂಟದ ಹಿಂದಿನ ಭಾಗಕ್ಕೆ ಕೈಗಳಿಂದ ಬಲ ನೀಡ ನೀಡಬೇಕು. ಕಾಲುಗಳು ನೇರವಾಗಿ ಆಕಾಶತ್ತ ಚಾಚಿರಬೇಕು. ಬೊಜ್ಜು ಕರುಗುವುದರ ಜತೆಗೆ ಥೈರಾಯ್ಡ್‌ ಮಟ್ಟವನ್ನು ಈ ಆಸನ ಸಮತೋಲನಗೊಳಿಸುತ್ತದೆ. ಉಸಿರಾಟದ ಕ್ರಿಯೆ ಸುಧಾರಿಸುವುದರೊಂದಿಗೆ, ಕಾಲುಗಳ ಸ್ನಾಯು ಬಲಗೊಳ್ಳುತ್ತದೆ. ಪಚನ ಕ್ರಿಯೆಯನ್ನು ಸುಲಭಗೊಳಿಸುವ ಸರ್ವಜ್ಞಾಸನ ಉತ್ತಮ ನಿದ್ದೆಗೂ ಸಹಕಾರಿ.

ಅಂತಾರಾಷ್ಟ್ರೀಯ ಯೋಗ ದಿನ: ಸದ್ಗುರು ಜಗ್ಗಿ ವಾಸುದೇವ್ ಸಂದೇಶವಿದು.!

4. ಸೇತು ಬಂಧ ಸರ್ವಜ್ಞಾಸನ

ಮಲಗಿದಲ್ಲಿಯೇ ಸೊಂಟವನ್ನು ಲಘು ಕೋನಾಕಾರದಲ್ಲಿ ಮೇಲಕ್ಕೆ ಎತ್ತಬೇಕು. ನೆಲ ಸ್ಪರ್ಶಿಸಿರುವ ಕೈಗಳು ನೇರವಾಗಿರಬೇಕು. ಕತ್ತು ಹಾಗೂ ಕಾಲಿಗೆ ದೇಹದ ಭಾರ ಬೀಳಬೇಕು. ದೇಹದ ತೂಕ ನಿಯಂತ್ರಣಕ್ಕೆ ಹೇಳಿ ಮಾಡಿಸಿದ ಆಸನ ಇದು. ಥೈರಾಯ್ಡ್‌ ಗ್ರಂಥಿಗಳಿಗೆ ಹೆಚ್ಚಿನ ಒತ್ತಡ ಬೀಳುವುದರಿಂದ ಚಯಾಪಚಯ ಕ್ರಿಯೆ ನಿಯಂತ್ರಿಸುವ ಹಾರ್ಮೋನ್ಗಳ ಉತ್ಪತಿ ಹೆಚ್ಚಳವಾಗುತ್ತದೆ. ತೊಡೆ ಸ್ನಾಯುಗಳು ಬಲಗೊಳ್ಳುವುದರೊಂದಿಗೆ ಜೀರ್ಣ ಕ್ರಿಯೆಯೂ ವೃದ್ಧಿಸುತ್ತದೆ.

10 best yoga postures for weight loss

5. ಪರಿವರ್ತ ಉಕ್ತಾಸನ

ಕುರ್ಚಿಯಲ್ಲಿ ಕುಳಿತಂತೆ ಮಂಡಿ ಬಾಗಿಸಿ ಕುಳಿತು, ಬಲ ಕಾಲಿನ ಮಂಡಿಗೆ ಎಡಗೈ ಮಂಡಿ ತಾಗಿಸಿ ನಮಸ್ಕಾರದ ಭಂಗಿಯಲ್ಲಿ ಎರಡೂ ಕೈಗಳನ್ನು ಜೋಡಿಸಬೇಕು. ಇದರಿಂದ ಕಾಲುಗಳ ಸ್ನಾಯು ಬಲಗೊಳ್ಳುತ್ತದೆ. ಜೀರ್ಣ ಕ್ರಿಯೆ ಉತ್ತಮಗೊಳಿಸುತ್ತದೆ. ನಿಯಮಿತವಾಗಿ ಮಾಡುವುದರಿಂದ ತೂಕ ಇಳಿಕೆಯಾಗುತ್ತದೆ.

ಧ್ಯಾನದಲ್ಲಿ 7 ವಿಧಾನ; ಮಾಡುವುದು ಹೇಗೆ?

6. ಧನುರಾಸನ

ಭೂಮಿಗೆ ಮುಖ ಮಾಡಿ, ಕಾಲುಗಳನ್ನು ಮೇಲಕ್ಕೆತ್ತಿ ಕೈಯಿಂದ ಹಿಡಿದುಕೊಳ್ಳಬೇಕು. ಹೊಟ್ಟೆಯ ಬೊಜ್ಜು ಶೀಘ್ರವಾಗಿ ಕರಗಿಸಲು ಈ ಆಸನ ಬಹಳ ಪರಿಣಾಮಕಾರಿ. ಬಿಲ್ಲಿನ ಭಂಗಿಯನ್ನು ಹೋಲುವ ಈ ಆಸನ ಜೀರ್ಣಕ್ರಿಯೆಯನ್ನು ಸುಧಾರಿಸುವ ಜತೆಗೆ, ತೊಡೆ ಸ್ನಾಯುವನ್ನು ಬಲಗೊಳಿಸುತ್ತದೆ. ಎದೆ ಮತ್ತು ಬೆನ್ನು ನೋವಿನಿಂದಲೂ ಮುಕ್ತ ಪಡೆಯಬಹುದು.

10 best yoga postures for weight loss

7. ಸೂರ್ಯ ನಮಸ್ಕಾರ

ನಿಂತಲ್ಲಿಯೇ ಹಿಂದಕ್ಕೆ ಭಾಗಿ, ಸೂರ್ಯನಿಗೆ ಕಣ್ಣು ನೆಟ್ಟು ನಮಸ್ಕರಿಸುವುದು ಸೂರ್ಯ ನಮಸ್ಕಾರದ ವಿಧಗಳಲ್ಲಿ ಒಂದು. ನಿಧಾನವಾಗಿ ಸ್ನಾಯುಗಳನ್ನು ವಿಸ್ತರಿಸುವ ಜತೆಗೆ , ರಕ್ತ ಸಂಚಾರ ಸುಗಮಗೊಳಿಸುತ್ತದೆ. ಸ್ನಾಯು ಹಾಗೂ ತೋಳುಗಳನ್ನು ಹಿಗ್ಗಿಸಲು, ಹೊಟ್ಟೆಬೊಜ್ಜು ಕರಗಿಸಲು ಈ ಆಸನ ಸಹಕಾರಿ. ಚಯಾಪಚಯ ಕ್ರಿಯೆಯನ್ನು ಸಮತೋಲನ ಗೊಳಿಸುವುದರೊಂದಿಗೆ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ.

8. ಬಾಲಾಸನ

ಮಂಡಿಯ ಕೆಲಗಿನ ಕಾಲುಗಳ ಮೇಲೆ ಕುಳಿತು ದೇಹವನ್ನು ಭಾಗಿಸಿ, ಎಡರೂ ಕೈಗಳ ಮದ್ಯೆ ತಲೆ ಬರುವಂತೆ ನೆಲಕ್ಕೆ ಮುಟ್ಟಿಸಬೇಕು. ನಿಮ್ಮ ಕೈ ಸುಲಭವಾಗಿ ಮಾಡಬಹುದಾಂತ ಆಸನ ಇದು.ಹೊಟ್ಟೆಬೊಜ್ಜು ನಿವಾರಣೆ,ಸ್ನಾಯು ಸೆಳೆತ ಹಾಗೂ ಸೊಂಟ ನೋವಿಗೆ ಇದರಿಂದ ಪರಿಹಾರ ಸಿಗುತ್ತದೆ. ತೊಡೆಯ ಸ್ನಾಯುಗಳು ಬಲಗೊಳ್ಳುತ್ತದೆ.

9. ಫಲಕಾಸನ

ಕಾಲುಗಳನ್ನು ಜೋಡಿಸಿ, ದೇಹವನ್ನು ಮೇಲೆತ್ತಿ ಕೈಗಳ ಸಹಾಯದಿಂದ ನಿಲ್ಲಬೇಕು. ಫಲಕಾಸನ ಅಥವಾ ‘ಪ್ಲಾಂಕ್‌’ನಲ್ಲಿ ಇಡೀ ದೇಹದ ಭಾರ ಕೈ ಮೇಲೆ ಬೀಳುವುದರಿಂದ ಕೈಗಳ ಸ್ನಾಯುಗಳು ಬಲಗೊಳ್ಳುತ್ತವೆ. ಬೆನ್ನುಮೂಳೆ, ಕಿಬ್ಬೊಟ್ಟೆಯ ಸ್ನಾಯುಗಳು ಬಲಗೊಳ್ಳುವುದರ ಜತೆಗೆ ಹೊಟ್ಟೆಯ ಬೊಜ್ಜಿಗೆ ಪರಿಣಾಮಕಾರಿಯಾಗಬಲ್ಲದು.

10. ವೀರಭದ್ರಾಸನ

ಬಲಗಾಲನ್ನು ಲಂಬಕೋನಾಕೃತಿಯಲ್ಲಿರಿಸಿ, ಎಡಗಾಲನ್ನು ಹಿಂದಕ್ಕೆ ಚಾಚಬೇಕಕು. ಬಳಿಕ ಸೂರ್ಯ ನಮಸ್ಕಾರದ ರೀತಿಯಲ್ಲಿ ದೇಹವನ್ನು ಭಾಗಿಸಿ ನಮಸ್ಕರಿಸಬೇಕು. ಇದು ಕಾಲಿನ ಸ್ನಾಯು ಬಲಗೊಳ್ಳಲು ಇದು ಸಹಕಾರಿ. ಒಂದು ಕಾಲಿನಲ್ಲಿ ನಿಂತು ಭಾಗುವುದರಿಂದ ಹೊಟ್ಟೆಯ ಮೇಲೆ ಭಾರ ಬೀಳುವುದರಿಂದ ಸ್ಥೂಲಕಾಯದಿಂದ ಮುಕ್ತಿ ಪಡೆಯಬಹುದು.

Latest Videos
Follow Us:
Download App:
  • android
  • ios