ನೆಲಮಂಗಲ: ಹೆರಿಗೆ ಮಾಡಲು ಬಿಡದೇ ಕೊಠಡಿಗೆ ಬೀಗ ಜಡಿದ ವೈದ್ಯೆ: ಅಮಾನವೀಯತೆ ಮೆರೆದ ಡಾ ಚಂದ್ರಕಲಾ

ತ್ಯಾಮಗೊಂಡ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಾ.ಚೌಡಯ್ಯ ಅವರು ಶಿವಗಂಗೆ ಮೂಲದ ಗರ್ಭಿಣಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲು ತಯಾರಿ ನಡೆಸಿದ್ದ ಸಂದರ್ಭದಲ್ಲಿ ರಜೆಯಲ್ಲಿದ್ದ ಅರವಳಿಕೆ ತಜ್ಞೆ ಡಾ.ಚಂದ್ರಕಲಾ ಕೊಠಡಿಗೆ ನುಗ್ಗಿ ನನ್ನ ಅನುಮತಿ ಪಡೆಯದೆ ಹೇಗೆ ಹೆರಿಗೆ ಮಾಡುತ್ತೀರಾ ಎಂದು ಗರ್ಭಿಣಿ ಮತ್ತು ವೈದ್ಯರನ್ನು ಹೊರಗೆ ಕಳುಹಿಸಿ ಶಸ್ತ್ರ ಚಿಕಿತ್ಸೆ ಕೊಠಡಿಗೆ ಬೀಗ ಹಾಕಿರುವ ಘಟನೆ ನಡೆದಿದೆ.

A doctor who does not allow a pregnant woman to deliver in tyamagondlu health centre at nelamangala rav

ದಾಬಸ್‌ಪೇಟೆ (ಏ.17) ತ್ಯಾಮಗೊಂಡ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಾ.ಚೌಡಯ್ಯ ಅವರು ಶಿವಗಂಗೆ ಮೂಲದ ಗರ್ಭಿಣಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲು ತಯಾರಿ ನಡೆಸಿದ್ದ ಸಂದರ್ಭದಲ್ಲಿ ರಜೆಯಲ್ಲಿದ್ದ ಅರವಳಿಕೆ ತಜ್ಞೆ ಡಾ.ಚಂದ್ರಕಲಾ ಕೊಠಡಿಗೆ ನುಗ್ಗಿ ನನ್ನ ಅನುಮತಿ ಪಡೆಯದೆ ಹೇಗೆ ಹೆರಿಗೆ ಮಾಡುತ್ತೀರಾ ಎಂದು ಗರ್ಭಿಣಿ ಮತ್ತು ವೈದ್ಯರನ್ನು ಹೊರಗೆ ಕಳುಹಿಸಿ ಶಸ್ತ್ರ ಚಿಕಿತ್ಸೆ ಕೊಠಡಿಗೆ ಬೀಗ ಹಾಕಿರುವ ಘಟನೆ ನಡೆದಿದೆ.

ಏ.11ರಿಂದ 17ರವರೆಗೂ ರಜೆ ಹಾಕಿದ್ದ ಡಾ.ಚಂದ್ರಕಲಾ(Dr Chandrakala) ಗುರುವಾರ ಮುಂಜಾನೆಯೇ ದಿಢೀರನೆ ಪ್ರತ್ಯಕ್ಷವಾಗಿ ಶಸ್ತ್ರಚಿಕಿತ್ಸೆ(Obstetric surgery) ನಡೆಸಲು ಅವಕಾಶ ಕೊಡದೇ, ಅಮಾನವೀಯವಾಗಿ ನಡೆದುಕೊಂಡಿದ್ದರೆ. ಸ್ಥಳದಲ್ಲಿಯೇ ಇದ್ದ ಗರ್ಬಿಣಿಯ ಪೋಷಕರು ಹಿರಿಯ ವೈದ್ಯಾಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಡಾ.ಚಂದ್ರಕಲಾ ನಡೆ ಬಗ್ಗೆ ದೂರು ಸಲ್ಲಿಸಿ, ಕ್ರಮ ಕೈಗೊಳ್ಳಲು ಆಗ್ರಹಿಸಿ, ಇಂತಹ ಮಾನವೀಯತೆ ಇಲ್ಲದ ವೈದ್ಯರನ್ನು ಅಮಾನತು ಮಾಡುವಂತೆ ಸಾರ್ವಜನಿಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗರ್ಭಿಣಿ ಸಾಯಿಸಿದ ಸರ್ಕಾರಿ ವೈದ್ಯರು: ತಾಯಿ ಸತ್ತರೂ ಮಗು ಬದುಕಿಸಿದ ಖಾಸಗಿ ವೈದ್ಯರು.!

ಘಟನೆ ಏನು: ಶಿವಗಂಗೆ ಮೂಲದ ಗರ್ಭಿಣಿಗೆ ಗುರುವಾರ ಮುಂಜಾನೆ 7 ಗಂಟೆ ಸುಮಾರಿಗೆ ಜಿಲ್ಲೆಯ ಪ್ರಸೂತಿ ತಜ್ಞರಾದ ಡಾ.ಚೌಡಯ್ಯ ಹೆರಿಗೆ ಮಾಡಿಸಲು ದಿನಾಂಕ ನಿಗಪಡಿಸಿದ್ದರು. ಅದರಂತೆ ಶಸ್ತ್ರಚಿಕಿತ್ಸೆಗೆ ಸಿಬ್ಬಂದಿ ತಯಾರಿ ನಡೆಸುತ್ತಿದ್ದ ವೇಳೆ ರಜೆಯಲ್ಲಿದ್ದ ಡಾ.ಚಂದ್ರಕಲಾ ಆಸ್ಪತ್ರೆಗೆ ಆಗಮಿಸಿ, ಬೇರೆ ಕಡೆಯಿಂದ ಅರವಳಿಕೆ ತಜ್ಞರನ್ನು ಕರೆಸುತ್ತಿದ್ದೀರಾ, ನನ್ನ ಗಮನಕ್ಕೆ ತರದೆ ಹೇಗೆ ಶಸ್ತ್ರ ಚಿಕಿತ್ಸೆ ಕೊಠಡಿಯನ್ನು ಬಳಸುತ್ತೀರಾ ಎಂದು ಗಲಾಟೆ ಮಾಡಿ ಶಸ್ತ್ರ ಚಿಕಿತ್ಸಾ ಕೊಠಡಿಗೆ ಬೀಗ ಹಾಕಿಕೊಂಡು ಆಸ್ಪತ್ರೆಯಿಂದ ತೆರಳಿದರು ಎಂದು ದೂರಿದ್ದಾರೆ.

ಸಾರ್ವಜನಿಕರ ಅಕ್ರೋಶ:

ಡಾ.ಚಂದ್ರಕಲಾ ರೋಗಿಗಳೊಂದಿಗೆ ಅಮಾನವೀಯವಾಗಿ ನಡೆದುಕೊಳ್ಳುವುದು ಇದೇ ಮೊದಲಲ್ಲ. ಮೇಲಿಂದ ಮೇಲೆ ಅವರು ಕರ್ತವ್ಯನಿರತರಾಗಿದ್ದ ವೇಳೆ ರೋಗಿಗಳು ಮತ್ತು ವೈದ್ಯೆ ನಡುವೆ ಜಗಳಗಳು ನಡೆಯುತ್ತಿರುತ್ತವೆ. ಆದರೆ ಒಬ್ಬ ಹೆಣ್ಣು ಮಗಳಾಗಿ ಒಂದು ಹೆಣ್ಣು ಹೆರಿಗೆ ನೋವಿನಿಂದ ನರಳುತ್ತಿದ್ದರೂ ಸ್ಪಂದಿಸದೆ ವಿಕೃತವಾಗಿ ನಡೆದುಕೊಂಡಿದ್ದು, ಆಕೆಯನ್ನು ಕರ್ತವ್ಯದಿಂದ ವಜಾಗೊಳಿಸಬೇಕೆಮದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಗರ್ಭಿಣಿ ಮಹಿಳೆಯನ್ನು ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಡಾ.ಚೌಡಯ್ಯನವರೇ 108 ವಾಹನದಲ್ಲಿ ಕಳಿಸಿಕೊಟ್ಟಿದ್ದು, ಶಸ್ತ್ರಚಿಕಿತ್ಸೆ ಮಾಡಿ ಹೆರಿಗೆ ಮಾಡಿಸಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.

ಗರ್ಭಿಣಿ ಜೀವ ಉಳಿಸಿ ಪಾಠ ಕಲಿತ ಉಬರ್ ಚಾಲಕ

ತ್ಯಾಮಗೊಂಡ್ಲು ಸಮುದಾಯ ಆರೋಗ್ಯ ಕೇಂದ್ರದ ನಡೆದ ಘಟನೆ ಬಗ್ಗೆ ಪೋಷಕರು ಮತ್ತು ವೈದ್ಯರು ದೂರು ನೀಡಿದ್ದಾರೆ. ತಾಲೂಕು ವೈದ್ಯಾಧಿಕಾರಿಗಳಿಗೆ ಘಟನೆಯ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದು, ವರದಿ ಬಂದ ಬಳಿಕ ವೈದ್ಯೆ ಲೋಪವೆಸಗಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು.

-ಡಾ.ವಿಜಯೇಂದ್ರ ಜಿಲ್ಲಾ ವೈದ್ಯಾಧಿಕಾರಿ

ಈ ಘಟನೆ ವೈದ್ಯ ಸಮೂಹಕ್ಕೆ ತಲೆ ತಗ್ಗಿಸುವಂತೆ ಮಾಡಿದೆ. ಡಾ.ಚಂದ್ರಕಲಾ ರಜೆ ಮೇಲೆ ಇದ್ದದ್ದರಿಂದ ಬದಲಿ ವ್ಯವಸ್ಥೆ ಮಾಡಿಕೊಂಡು ಶಸ್ತ್ರಚಿಕಿತ್ಸೆಗೆ ಡಾ.ಚೌಡಯ್ಯ ಹೋಗಿದ್ದರು. ರಜೆಯಲ್ಲಿದ್ದ ಡಾ.ಚಂದ್ರಕಲಾ ಈ ರೀತಿ ಮಾಡಿದ್ದು ಸರಿಯಲ್ಲ. ಜಿಲ್ಲಾ ವೈದ್ಯಾಧಿಕಾರಿಗಳು ತನಿಖೆಗೆ ಆದೇಶಿಸಿದ್ದು, ತನಿಖೆಯ ಬಳಿಕ ವರದಿ ನೀಡಲಾಗುವುದು.

-ಡಾ.ರಂಗನಾಥ್‌, ತಾಲೂಕು ಪ್ರಭಾರ ವೈದ್ಯಾಧಿಕಾರಿ

Latest Videos
Follow Us:
Download App:
  • android
  • ios