Asianet Suvarna News Asianet Suvarna News

ಗರ್ಭಿಣಿ ಸಾಯಿಸಿದ ಸರ್ಕಾರಿ ವೈದ್ಯರು: ತಾಯಿ ಸತ್ತರೂ ಮಗು ಬದುಕಿಸಿದ ಖಾಸಗಿ ವೈದ್ಯರು.!

ಬಂಗಾರಪೇಟೆ ತಾಲೂಕು ಆಸ್ಪತ್ರೆಗೆ ಹೆರಿಗೆಗೆಂದು ದಾಖಲಾದ ಮಹಿಳೆಗೆ ವೈದ್ಯರು ಸೂಕ್ತ ಚಿಕಿತ್ಸೆಯನ್ನು ನೀಡದೇ ನಿರ್ಲಕ್ಷ್ಯ ಮಾಡಿದ್ದರಿಂದ ಆಸ್ಪತ್ರೆಯಲ್ಲಿಯೇ ನರಳಿ- ನರಳಿ ಗರ್ಭಿಣಿ ಪ್ರಾಣ ಬಿಟ್ಟಿದ್ದಾಳೆ.

Government doctors did not given treatment to pregnant lady Mother death but baby live sat
Author
First Published Apr 2, 2023, 9:13 PM IST | Last Updated Apr 2, 2023, 9:14 PM IST

ಕೋಲಾರ (ಏ.02): ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾದ ಮಹಿಳೆಗೆ ವೈದ್ಯರು ಸೂಕ್ತ ಚಿಕಿತ್ಸೆಯನ್ನು ನೀಡದೇ ನಿರ್ಲಕ್ಷ್ಯ ಮಾಡಿದ್ದರಿಂದ ಆಸ್ಪತ್ರೆಯಲ್ಲಿಯೇ ನರಳಿ- ನರಳಿ ಗರ್ಭಿಣಿ ಪ್ರಾಣ ಬಿಟ್ಟಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಬಂಗಾರಪೇಟೆ ನಗರದ ವಿಜಯನಗರ ಬಡಾವಣೆಯ ನಿವಾಸಿ ಭಾರತಿ (26) ತನ್ನ ಎರಡನೇ ಹೆರಿಗೆಗೆ ಬಂದಿದ್ದ ಮಹಿಳೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿದ ಸಾವನ್ನಪ್ಪಿದ್ದಾಳೆ ಎಂದು ಪೋಷಕರು ಆರೋಪ ಮಾಡಿದ್ದಾರೆ. ಇನ್ನು ಆಸ್ಪತ್ರೆಗೆ ಮಹಿಳೆ ದಾಖಲಾದ ಬಳಿಕ ಮೊದಲು ಆರೈಕೆ ಮಾಡಿದ್ದಾರೆ, ನಂತರ ಹೆರಿಗೆ ನೋವು ಹೆಚ್ಚಾಗಿ ಬರಲೆಂದು ಇಂಜೆಕ್ಷನ್‌ ನೀಡಿದ್ದಾರೆ. ನಂತರ ಗರ್ಭಿಣಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅದರೊಂದಿಗೆ ಉಸಿರಾಟ ಸಮಸ್ಯೆಯೂ ಕಾಣಿಸಿಕೊಂಡಿದೆ. ಆದರೆ, ಇಂಜೆಕ್ಷನ್‌ ಕೊಟ್ಟು 45 ನಿಮಿಷ ಕಳೆದರೂ ಅಲ್ಲಿ ಆಯಾವೊಬ್ಬ ವೈದ್ಯರೂ ಕೂಡ ಆಕೆಗೆ ಚಿಕಿತ್ಸೆ ನೀಡಲು ಮುಂದಾಗದೇ ನಿರ್ಲಕ್ಷ್ಯ ಮಾಡಿದ್ದಾರೆ.

Bengaluru Accident: ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಭೀಕರ ಅಪಘಾತ: ಮಹಿಳೆ ತಲೆಮೇಲೆ ಹರಿದ ಲಾರಿ

ಖಾಸಗಿ ಆಸ್ಪತ್ರೆಗೆ ಹೋಗುವಂತೆ ಸೂಚನೆ: ಇನ್ನು ಗರ್ಭಿಣಿ ಭಾರತಿಗೆ ಇಂಜೆಕ್ಷನ್‌ ಕೊಟ್ಟ ಬಳಿಕ ಉಸಿರಾಟದ ಸಮಸ್ಯೆಯಿಂದ ಮುಕ್ಕಾಲು ಗಂಟೆ ನರಳಾಡಿದ್ದಾಳೆ. ನರಳಾಟ ಮಾಡುತ್ತಿದ್ದರೂ ಆಸ್ಪತ್ರೆಯ ಸಿಬ್ಬಂದಿಗಳಿಂದ ಚಿಕಿತ್ಸೆ ಸಿಗಲಿಲ್ಲ. ಇನ್ನು ಅವರ ಸ್ಥಿತಿ ಗಂಭೀರ ಹಂತಕ್ಕೆ ತಲುಪಿದ ನಂತರ ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಮಡು ಹೋಗುವಂತೆ ಸೂಚನೆ ನೀಡಿದ್ದಾರೆ. ಇನ್ನು ಜೀವಕ್ಕೆ ಅಪಾಯವಿದೆ ಎಂದಾಕ್ಷಣ ಕುಟುಂಬ ಸದಸ್ಯರು ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಮಡು ಹೋಗಲು ಮುಂದಾಗಿದ್ದಾರೆ. ಆದರೆ, ಮಾರ್ಗದ ಮಧ್ಯೆಯೇ ಮಹಿಳೆ ನರಳಾಟದಿಂದ ಸಾವನ್ನಪ್ಪಿದ್ದಾರೆ.

ಮಗುವನ್ನು ಉಳಿಸಿದ ವೈದ್ಯರು:  ಇನ್ನು ಗರ್ಭಿಣಿ ಭಾರತಿ ಅವರ ಜೀವ ದಾರಿಯ ಮಧ್ಯದಲ್ಲಿ ಹೋದರೂ ಸಾವು- ಬದುಕಿನ ನಡುವೆ ಹೋರಾಡುತ್ತಿದ್ದ ಹೊಟ್ಟೆಯಲ್ಲಿದ್ದ ಮಗುವನ್ನು ಬದುಕಿಸಿಕೊಳ್ಳುವಲ್ಲಿ ಖಾಸಗಿ ಆಸ್ಪತ್ರೆ ವೈದ್ಯರು ಯಶಸ್ವಿ ಆಗಿದ್ದಾರೆ. ಇನ್ನು ತಾಯಿ 9 ತಿಂಗಳು ಹೊತ್ತು ಸಾವಿನಂತಹ ಹೆರಿಗೆ ನೋವನ್ನು ಅನುಭವಿಸಿದರೂ ಮುದ್ದಾದ ಮಗುವಿನ ಮುಖವನ್ನು ನೋಡಲೂ ಆಗದಂತೆ ಕಣ್ಮುಚ್ಚಿಕೊಂಡಿದ್ದಾಳೆ. ಇನ್ನು ಮಗು ಕೂಡ ಅಳುತ್ತಿದ್ದು, ಹಾಲುಣಿಸಲು ತಾಯಿಗೆ ಜೀವವೇ ಇಲ್ಲದಂತಾಗಿದೆ. 

ಸರ್ಕಾರಿ ಆಸ್ಪತ್ರೆ ಮುಂಭಾಗ ಪ್ರತಿಭಟನೆ: ಇನ್ನು ಬಂಗಾರಪೇಟೆ ತಾಲೂಕಿನ ಸರ್ಕಾರಿ ಆಸ್ಪತ್ರೆಯ ಮುಂದೆ ಮೃತ ಗರ್ಭಿಣಿಯ ಪತಿ ಮಂಜುನಾಥ್ ಹಾಗೂ ಸಂಬಂಧಿಕರು ವೈದ್ಯರ ನಿರ್ಲಕ್ಷ್ಯವನ್ನು ಖಂಡಿಸಿ ಪ್ರತಿಭಟನೆ ಮಾಡಿದ್ದಾರೆ. ಕೂಡಲೇ ಈ ಬಗ್ಗೆ ನಿರ್ಲಕ್ಷ್ಯ ಮಾಡಿದ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇನ್ನು ಗಲಾಟೆ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಾರ್ವಜನಿಕರನ್ನು ಸಮಾಧಾನ ಮಾಡಲು ಮುಂದಾಗಿದ್ದಾರೆ. ನಂತರ ಆಸ್ಪತ್ರೆಯ ಗೇಟ್‌ ಮುಚ್ಚಿ ಸಾರ್ವಜನಿಕ ಆಸ್ಪತ್ರೆಗೆ ಹಾನಿ ಉಂಟಾಗುವುದನ್ನು ತಡೆದಿದ್ದಾರೆ.

ಕೇವಲ 5 ರೂ.ಗೆ ಬಾಲಕನ ಕೊಲೆ ಮಾಡಿದ ಆರೋಪಿ: ತಲೆ ಮೇಲೆ ಕಲ್ಲು ಎತ್ತಿಹಾಕಿ ಭೀಕರ ಹತ್ಯೆ

ಎರಡು ಮಕ್ಕಳು ಅನಾಥ: ಇನ್ನು ತಾನು ಸತ್ತರೂ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇನ್ನು ಮಗು ಆರೋಗ್ಯವಾಗಿದ್ದು, ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ. ಈ ಮೊದಲೇ ಭಾರತಿ ಮತ್ತು ಮಂಜುನಾಥ್‌ ದಂಪತಿಗೆ ಒಂದು ಮಗಿವಿತ್ತು. ಈಗ ಇಬ್ಬರು ಮಕ್ಕಳನ್ನು ಅನಾಥವನ್ನಾಗಿ ಮಾಡಿ ಭಾರತಿ ಸಾವನ್ನಪ್ಪಿದ್ದಾರೆ. ಇನ್ನು ವೈದ್ಯರ ನಿರ್ಲಕ್ಷ್ಯದಿಂದ ಅಮಾಯಕ ಗರ್ಭಿಣಿ ಜೀವ ಹೋಗಿದ್ದು, ಆಕೆಯ ಮಕ್ಕಳು ಹಾಗೂ ಆಕೆಯ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಘಟನೆ ಕುರಿತಂತೆ ಬಂಗಾರಪೇಟೆ ಪೊಲೀಸ್  ಠಾಣ ವ್ಯಾಪ್ತಿ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios