Childhood Obesity: ಐದು ವರ್ಷಕ್ಕೇ ಈಕೆ ತೂಕ 45KG: ಕಾರಣವೇನು ಗೊತ್ತಾ?
ಮಕ್ಕಳ ಕಡಿಮೆ ತಿಂದ್ರೂ ಸಮಸ್ಯೆ, ಹೆಚ್ಚಿಗೆ ತಿಂದ್ರೂ ಸಮಸ್ಯೆ. ಇವೆರಡಕ್ಕೂ ಅನಾರೋಗ್ಯ ಕಾರಣವಿರಬಹುದು. ಅತಿಯಾಗಿ ಸೇವನೆ ಮಾಡಿ ತೂಕ ಹೆಚ್ಚಿಸಿಕೊಂಡ ಹುಡುಗಿಯೊಬ್ಬಳು ಈಗ ಸುದ್ದಿಯಲ್ಲಿದ್ದಾಳೆ. ಆಕೆ ತೂಕ ನಿಯಂತ್ರಣಕ್ಕಾಗಿ ತಾಯಿ ಅಡುಗೆ ಮನೆ ಬಾಗಿಲು ಹಾಕಿದ್ದಾಳೆ.
ಮಕ್ಕಳಿಗೆ ಆಹಾರ ತಿನ್ನಿಸೋದೆ ದೊಡ್ಡ ಸಮಸ್ಯೆ. ಸ್ವಲ್ಪ ಆಹಾರ ಸೇವಿಸ್ತಿದ್ದಂತೆ ಹೊಟ್ಟೆ ತುಂಬ್ತು ಅಂತಾ ಓಡ್ತಾರೆ. ಹಾಗಾಗಿಯೇ ಅನೇಕ ಮಕ್ಕಳ ತೂಕ ಏರೋದೆ ಇಲ್ಲ. ಸಾಮಾನ್ಯವಾಗಿ ಐದು ವರ್ಷದ ಮಕ್ಕಳ ತೂಕ 25 ಕೆ.ಜಿ ಒಳಗಿರಬೇಕು. ಇದು ಅವ್ರ ಆರೋಗ್ಯಕ್ಕೂ ಒಳ್ಳೆಯದು. ಆದ್ರೆ ಇಲ್ಲೊಬ್ಬ ಹುಡುಗಿ 45 ಕೆ.ಜಿ ತೂಕ ಹೊಂದಿದ್ದಾಳೆ. ಆಕೆ ವಯಸ್ಸು ಬರೀ 5 ವರ್ಷ. ಅತಿ ಹೆಚ್ಚು ಆಹಾರ ಸೇವನೆ ಮಾಡುವ ಆಕೆ ಅಭ್ಯಾಸವೇ ತೂಕ ವಿಪರೀತವಾಗಿ ಹೆಚ್ಚಾಗಲು ಕಾರಣವಾಗಿದೆ. ಮಗಳು ತಿನ್ನೋದನ್ನು ಕಡಿಮೆ ಮಾಡ್ಲಿ ಎನ್ನುವ ಕಾರಣಕ್ಕೆ ತಾಯಿ (Mother) ಅಡುಗೆ ಮನೆ ಬೀಗ ಹಾಕಿದ್ದಾಳೆ. ಆಕೆ ತೂಕ (Weight) ಹೆಚ್ಚಾಗಲು ಕಾರಣವೇನು ಎಂಬುದನ್ನು ವೈದ್ಯರು ಹೇಳಿದ್ದಾರೆ. ಯಾರು ಆ ಹುಡುಗಿ, ಸಮಸ್ಯೆ ಏನು ಅನ್ನೋದನ್ನು ನಾವಿಂದು ಹೇಳ್ತೆವೆ.
ಐದು ವರ್ಷದಲ್ಲಿ 45 ಕೆ.ಜಿ ತೂಕದ ಹುಡುಗಿ ಯಾರು? : ವರದಿ ಪ್ರಕಾರ ಬ್ರಿಟನ್ (Britain) ನಿವಾಸಿ 25 ವರ್ಷದ ಡಾಲಿ ವಿಲಿಯಮ್ಸ್ ಮಗಳು ಹಾರ್ಲೋ, 45 ಕೆ.ಜಿ ತೂಕವಿರುವ ಐದು ವರ್ಷದ ಬಾಲೆ. ಆಕೆ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಆಕೆ ಪ್ರೇಡರ್ ವಿಲ್ಲಿ ಸಿಂಡ್ರೋಮ್ (Prader Willi Syndrome) ಗೆ ತುತ್ತಾಗಿದ್ದಾಳೆ. ಹಾರ್ಲೋಗೆ ಸದಾ ಹಸಿವಾಗ್ತಿರುತ್ತದೆ. ಹಸಿವನ್ನು ತಡೆದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಒಂದಾದ್ಮೆಲೆ ಒಂದನ್ನು ತಿನ್ನುತ್ತಿರುತ್ತಾಳೆ. ಮಗಳ ಹಸಿವನ್ನು ನಿಯಂತ್ರಿಸಲು ಡಾಲಿಗೆ ಸಾಧ್ಯವಾಗ್ತಿಲ್ಲ. ಹಾಗಾಗಿ ಅಡುಗೆ ಮನೆಗೆ ಬೀಗ ಹಾಕಿದ್ದಾಳೆ. ಮುಂದಿನ ದಿನಗಳಲ್ಲಿ ಬೇರೆ ಉಪಾಯ ಮಾಡ್ಬೇಕು ಎನ್ನುತ್ತಾಳೆ ಡಾಲಿ. ಆಕೆ ದೊಡ್ಡವಳಾಗ್ತಿದ್ದಂತೆ ಆಕೆ ಆಹಾರ ಸೇವನೆ ಇನ್ನಷ್ಟು ಹೆಚ್ಚಾಗುತ್ತೆ ಎನ್ನುತ್ತಾಳೆ ತಾಯಿ ಡಾಲಿ. ಹಾರ್ಲೋ 6 ತಿಂಗಳಿನಲ್ಲಿದ್ದಾಗ ಆಕೆಗೆ ಈ ಸಮಸ್ಯೆಯಿರೋದು ಪತ್ತೆಯಾಗಿತ್ತಂತೆ.
Health Tips: ವರ್ಷಕ್ಕೊಮ್ಮೆ ಈ ಪರೀಕ್ಷೆ ಮಾಡಿಸ್ಕೊಳ್ಳಿ, ಆರೋಗ್ಯಕರ ಜೀವನ ನಡೆಸಿ
ಹಾರ್ಲೋ ಖಾಯಿಲೆ ಬಗ್ಗೆ ವೈದ್ಯರು ಹೇಳೋದೇನು?: ಹಾರ್ಲೋ ದೇಹದಲ್ಲಿ Chromosome 15 ಇಲ್ಲ. ಇದು ನಮ್ಮ ದೇಹದಲ್ಲಿ ಹಸಿವನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ. ಈ ಅಪರೂಪದ ಖಾಯಿಲೆಯಿಂದಾಗಿ ಹಾರ್ಲೋ ಹೊಟ್ಟೆ ತುಂಬೋದೇ ಇಲ್ಲ. ಆಕೆ ಎಷ್ಟೇ ತಿಂದ್ರೂ ಹಸಿವು ಕಡಿಮೆಯಾಗೋದಿಲ್ಲ ಎನ್ನುತ್ತಾರೆ ವೈದ್ಯರು. ಇದೊಂದು ಅಪರೂಪದ ಆನುವಂಶಿಕ ಖಾಯಿಲೆ. ಬ್ರಿಟನ್ ನಲ್ಲಿ ಜನಿಸುವ 15 ಸಾವಿರ ಮಕ್ಕಳಲ್ಲಿ ಒಬ್ಬರಿಗೆ ಈ ಖಾಯಿಲೆ ಕಾಣಿಸಿಕೊಳ್ತಿದೆ. ವಿಶೇಷವೆಂದ್ರೆ ಈ ರೋಗಕ್ಕೆ ಈವರೆಗೂ ಯಾವುದೇ ಔಷಧಿಯನ್ನು ಪತ್ತೆ ಮಾಡಲಾಗಿಲ್ಲ. ಸ್ವಯಂ ನಿಯಂತ್ರಣ ಇಲ್ಲಿ ಮುಖ್ಯವಾಗುತ್ತದೆ ಎನ್ನುತ್ತಾರೆ ವೈದ್ಯರು.
ಪೀಡಿಯಾಟ್ರಿಕ್ಸ್ ಜರ್ನಲ್ ನಲ್ಲಿ ಇತ್ತೀಚೆಗೆ ಸಂಶೋಧನಾ ಪ್ರಬಂಧವೊಂದು ಪ್ರಕಟವಾಗಿತ್ತು. ಈ ಪ್ರಬಂಧದ ಪ್ರಕಾರ, ಬ್ರಿಟನ್ ನಲ್ಲಿ ಈ ರೋಗದಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಇದ್ರಲ್ಲಿ 6ರಿಂದ 11 ವರ್ಷದ ಮಕ್ಕಳು ಹೆಚ್ಚಿದ್ದಾರೆ ಎಂಬುದು ಪತ್ತೆಯಾಗಿದೆ. ಕೆಟ್ಟ ಜೀವನ ಶೈಲಿ ಹಾಗೂ ಆಹಾರ ಪದ್ಧತಿ ಇದಕ್ಕೆ ಕಾರಣ ಎನ್ನಲಾಗ್ತಿದೆ. ಅಮೆರಿಕಾದಲ್ಲಿ 8 ಸಾವಿರದಿಂದ 25 ಸಾವಿರ ಮಕ್ಕಳಲ್ಲಿ ಒಬ್ಬರಿಗೆ ಪ್ರೇಡರ್ ವಿಲ್ಲಿ ಸಿಂಡ್ರೋಮ ಕಾಣಿಸಿಕೊಳ್ತಿದೆ.
ಚಳಿಗಾಲದಲ್ಲಿ ಮಂಡಿನೋವು, ಕೀಲುನೋವಿಂದ ಪಾರಾಗೋದು ಹೇಗೆ?
ಆರಂಭದಲ್ಲಿಯೇ ಈ ರೋಗ ಪತ್ತೆಯಾಗುವ ಕಾರಣ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬಹುದು. ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಪೂರೈಕೆ ಮತ್ತು ಹಾರ್ಮೋನ್ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಈ ಖಾಯಿಲೆ ಮಕ್ಕಳ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಸಾರ್ವಜನಿಕ ಪ್ರದೇಶದಲ್ಲಿ ಮಕ್ಕಳು ಮುಜುಗರಕ್ಕೊಳಗಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಮಕ್ಕಳಿಗೆ ಆತ್ಮವಿಶ್ವಾಸ ತುಂಬುವ ಅವಶ್ಯಕತೆಯಿರುತ್ತದೆ. ಮಕ್ಕಳ ಒತ್ತಡ ಕಡಿಮೆ ಮಾಡಬೇಕು. ಕಟ್ಟುನಿಟ್ಟಾದ ದಿನಚರಿ ಪಾಲನೆ ಮಾಡಬೇಕಾಗುತ್ತದೆ.